ಕೋಲಾರ: ಇಂದು ನಾಮಪತ್ರ ಸಲ್ಲಿಕೆಗೆ (Nominataion) ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ನಾಮಿನೇಷನ್ ಮಾಡಲು ಮುಂದಾಗುತ್ತಿದ್ದಾರೆ. ಕಾಂಗ್ರೆಸ್ (Congress) ಟಿಕೆಟ್ ಸಿಗದ ಹಿನ್ನೆಲೆ ಮೊಯಿದ್ದಿನ್ ಬಾವಾ, ಗುರುಚರಣ್ ಸೇರಿದಂತೆ ಹಲವರು ಪಕ್ಷ ತೊರೆದಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಕ್ಕರೂ ನಾಮಪತ್ರ ಸಲ್ಲಿಕೆ ಮಾಡಲು ಕೊತ್ತೂರು ಮಂಜುನಾಥ್ (Kothur G. Manjunath ಹಿಂದೇಟು ಹಾಕುತ್ತಿದ್ದಾರೆ. ಕೊನೆ ದಿನ ಕೊತ್ತೂರು ಮಂಜುನಾಥ್ ಹಠ ಹಿಡಿದ ಕಾರಣ ಕಾಂಗ್ರೆಸ್ ಅಂಗಳದಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಕೋಲಾರದಿಂದ (Kolar Congress Candidate) ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಹಿಂದೆ ಸರಿದರು.
ಕೊತ್ತರು ಮಂಜುನಾಥ್ ಹಠ ಏಕೆ?
ಕೋಲಾರದ ಕಾಂಗ್ರೆಸ್ ಅಭ್ಯರ್ಥಿಯಾಗಿರು ಕೊತ್ತೂರು ಮಂಜುನಾಥ್, ಮುಳಬಾಗಿಲು ಕ್ಷೇತ್ರದ ಟಿಕೆಟ್ ತಮ್ಮ ಆಪ್ತರಾದ ಆದಿನಾರಾಯಣ, ಮಂಜುಶ್ರೀ ಹೆಸರು ಶಿಫಾರಸ್ಸು ಮಾಡಿದ್ದರು.
ಆದ್ರೆ ನಿನ್ನೆ ಬಿಡುಗಡೆಯಾದ ಪಟ್ಟಿಯಲ್ಲಿ ಡಾ.ಮುದ್ದು ಗಂಗಾಧರ್ ಎಂಬವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆ ಅಸಮಧಾನಗೊಂಡಿರುವ ಕೊತ್ತೂರು ಮಂಜುನಾಥ್ ನಾಮಪತ್ರ ಸಲ್ಲಿಕೆ ಮಾಡಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿಕೊಂಡಿರುವ ಕೊತ್ತೂರು ಮಂಜುನಾಥ್ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದರು. ಸಿದ್ದರಾಮಯ್ಯ ಕ್ಷೇತ್ರದಿಂದ ಹಿಂದೆ ಸರಿದ ಕಾರಣ ದಿಢೀರ್ ಅಂತ ಕೊತ್ತೂರು ಮಂಜುನಾಥ್ ಹೆಸರನ್ನು ಘೋಷಣೆ ಮಾಡಲಾಗಿತ್ತು.
ಇದನ್ನೂ ಓದಿ: Preetham J Gowda: ಜೆಡಿಎಸ್‌ಗೆ ಟಕ್ಕರ್ ಹೊಡೆದು ಮತ್ತೊಮ್ಮೆ ಎಂಎಲ್‌ಎ ಆಗುವ ನಿರೀಕ್ಷೆಯಲ್ಲಿದ್ದಾರೆ ಪ್ರೀತಂ ಜೆ ಗೌಡ!
ಅಭ್ಯರ್ಥಿ ಬದಲಾವಣೆ ಸಾಧ್ಯತೆ
ಯಾವುದೇ ತಯಾರಿಲ್ಲದೇ ಚುನಾವಣೆ ಎದುರಿಸೋದು ಕಷ್ಟ ಎಂದು ಕೊತ್ತೂರು ಮಂಜುನಾಥ್ ಬೇಸರ ಹೊರ ಹಾಕಿದ್ದರು. ಇದೀಗ ಆಪ್ತರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ. ಮುಳಬಾಗಿಲು ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸುವ ಸಾಧ್ಯತೆಗಳಿವೆ ಎಂಬ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ