ಔರಾದ್ಕರ್ ವರದಿ ಜಾರಿ ಸಂಬಂಧದ ಗೊಂದಲ ಇನ್ನೆರಡು ದಿನದಲ್ಲಿ ಬಗೆಹರಿಯಲಿದೆ; ಪೊಲೀಸ್ ಇಲಾಖೆ ಸ್ಪಷ್ಟನೆ

ಪೊಲೀಸ್ ಇಲಾಖೆಯ ಹುದ್ದೆಗಳ ಅನುಸಾರ ಆಗಸ್ಟ್​ದಿಂದ ​ 1ರಿಂದ ಅನ್ವಯವಾಗುವಂತೆ  ಸಂಬಳ ಹೆಚ್ಚಿಸಿ ಸರ್ಕಾರ ಸೆ.13ರಂದು ಆದೇಶ ಹೊರಡಿಸಿತ್ತು. ಪರಿಷ್ಕೃತ ವೇತನವನ್ನು ಈ ತಿಂಗಳಿನ ಸಂಬಳದಲ್ಲಿ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿತ್ತು. ಏತನ್ಮಡುವೆ ವೇತನ ಪರಿಷ್ಕರಣೆ ಸಂಬಂಧ ಕೆಲವೊಂದು ಗೊಂದಲಗಳು ಏರ್ಪಟ್ಟಿದ್ದವು.

HR Ramesh | news18-kannada
Updated:September 17, 2019, 10:45 PM IST
ಔರಾದ್ಕರ್ ವರದಿ ಜಾರಿ ಸಂಬಂಧದ ಗೊಂದಲ ಇನ್ನೆರಡು ದಿನದಲ್ಲಿ ಬಗೆಹರಿಯಲಿದೆ; ಪೊಲೀಸ್ ಇಲಾಖೆ ಸ್ಪಷ್ಟನೆ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು: ಕಳೆದ ಮೂರು ದಿನಗಳ ಹಿಂದೆಯಷ್ಟೇ ಔರಾದ್ಕರ್ ವರದಿಯಂತೆ  ಪೊಲೀಸರ ವೇತನ ಹೆಚ್ಚಳಗೊಳಿಸಿ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ, ಸರ್ಕಾರದ ಮುಂದಿನ ಆದೇಶ ಬರುವವರೆಗೂ ಪೊಲೀಸರ ವೇತನ ಯಥಾಪ್ರಕಾರ ಮುಂದುವರೆಯಲಿದೆ ಎಂದು ಇಂದು ಡಿಜಿ ಐಜಿಪಿ ಕಚೇರಿಯ ಎಡಿಜಿಪಿ ಆಡಳಿತ ವಿಭಾಗದಿಂದ ಸುತ್ತೋಲೆ ಹೊರಡಿಸಿದ್ದರಿಂದ ವರದಿ ಜಾರಿ ಸಂಬಂಧ ಭಾರೀ ಗೊಂದಲ ಸೃಷ್ಟಿಯಾಗಿತ್ತು. ಈ ಸಂಬಂಧ ಇಂದು ಪೊಲೀಸ್​ ಇಲಾಖೆ ಸ್ಪಷ್ಟನೆ ನೀಡಿದೆ.

ಔರಾದ್ಕರ್ ವರದಿ ಪ್ರಕಾರ ವೇತನ ಪರಿಷ್ಕರಣೆಯಲ್ಲಿ ಉಂಟಾಗಿದ್ದ ಗೊಂದಲ ಒಂದು ಅಥವಾ ಎರಡು ದಿನದಲ್ಲಿ ಬಗೆಹರಿಯಲಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ರವಾನಿಸಲಾಗಿದೆ. ಹೊಸ ವೇತನ ಪರಿಷ್ಕರಣೆ ಸಂಬಂಧ ಹಣಕಾಸು ಇಲಾಖೆ ಮಾನವ ಸಂಪನ್ಮೂಲ ನಿರ್ವಹಣಾ ಸಂಸ್ಥೆಯ ಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದೆ ಎಂದು ರಾಜ್ಯ ಪೊಲೀಸ್​ ಇಲಾಖೆ ಸ್ಪಷ್ಟನೆ ನೀಡಿದೆ.

ಪೊಲೀಸ್ ಇಲಾಖೆಯ ಹುದ್ದೆಗಳ ಅನುಸಾರ ಆಗಸ್ಟ್​ದಿಂದ ​ 1ರಿಂದ ಅನ್ವಯವಾಗುವಂತೆ  ಸಂಬಳ ಹೆಚ್ಚಿಸಿ ಸರ್ಕಾರ ಸೆ.13ರಂದು ಆದೇಶ ಹೊರಡಿಸಿತ್ತು. ಪರಿಷ್ಕೃತ ವೇತನವನ್ನು ಈ ತಿಂಗಳಿನ ಸಂಬಳದಲ್ಲಿ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿತ್ತು. ಏತನ್ಮಡುವೆ ವೇತನ ಪರಿಷ್ಕರಣೆ ಸಂಬಂಧ ಕೆಲವೊಂದು ಗೊಂದಲಗಳು ಏರ್ಪಟ್ಟಿದ್ದವು.

ಇದನ್ನು ಓದಿ: ಔರಾದ್ಕರ್​ ವರದಿ ಜಾರಿಯಲ್ಲಿ ಕಣ್ಣಾಮುಚ್ಚಾಲೆ; ಆ.​ 1ರಿಂದ ಪೊಲೀಸರ ವೇತನ ಹೆಚ್ಚಳ ಅನುಮಾನ

ಯಾರಿಗೆ ಎಷ್ಟು ಸಂಬಳ ಹೆಚ್ಚಳ?

ಕಾನ್​ಸ್ಟೇಬಲ್​/ ರಿಸರ್ವ್​ ಕಾನ್​ಸ್ಟೇಬಲ್​ - 23,500 ದಿಂದ 47,650 ರೂ.

ಹೆಡ್​ಕಾನ್​ಸ್ಟೇಬಲ್​-  27650 ದಿಂದ 52,650 ರೂ.ಸಹಾಯಕ ಸಬ್ ಇನ್ಸ್‌ಪೆಕ್ಟರ್ - 30,350 ದಿಂದ 58,250 ರೂ.

ಪೊಲೀಸ್ ಇನ್ಸ್ ಪೆಕ್ಟರ್ - 43,100 ದಿಂದ 83,900 ರೂ.

ಎಸ್.ಪಿ (ಐಪಿಎಸ್ ಅಲ್ಲದವರು )-  70,850 ದಿಂದ 1,07,100 ರೂ.

First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading