• Home
  • »
  • News
  • »
  • state
  • »
  • Conductor Death: ಚೆಕ್ಕಿಂಗ್​ ಇನ್ಸ್​ಪೆಕ್ಟರ್​ ಕಂಡು ಕಂಡಕ್ಟರ್​ಗೆ ಹಾರ್ಟ್​ ಅಟ್ಯಾಕ್; ಬಸ್‌ನಲ್ಲೇ ಹೋಯ್ತು ಪ್ರಾಣ!

Conductor Death: ಚೆಕ್ಕಿಂಗ್​ ಇನ್ಸ್​ಪೆಕ್ಟರ್​ ಕಂಡು ಕಂಡಕ್ಟರ್​ಗೆ ಹಾರ್ಟ್​ ಅಟ್ಯಾಕ್; ಬಸ್‌ನಲ್ಲೇ ಹೋಯ್ತು ಪ್ರಾಣ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚೆಕ್ಕಿಂಗ್​ ಇನ್ಸ್​ಪೆಕ್ಟರ್​ ಕಂಡು ಗಾಬರಿಯಾದ ಮಹೇಶ್ವರ್ ಹೂಗಾರ್​ ಅವರಿಗೆ ಹೃದಯಾಘಾತವಾಗಿದೆ. ಕಂಡಕ್ಟರ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ (ನ.01): ಕರ್ತವ್ಯ ನಿರತ ಕಂಡಕ್ಟರ್ (Conductor)​ ಹೃದಯಾಘಾತದಲ್ಲಿ (Heart attack) ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆಯಲಾಗಿದೆ. ಮಹೇಶ್ವರ್​ ಹೂಗಾರ್ (Mahesh Hoogar)​ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಸ್ಸಿಗೆ ಚೆಕ್ಕಿಂಗ್ ಇನ್ಸ್​ಪೆಕ್ಟರ್ ಹತ್ತಿದ್ದಾರೆ. ಚೆಕ್ಕಿಂಗ್​ ಇನ್ಸ್​ಪೆಕ್ಟರ್​ ಕಂಡು ಗಾಬರಿಯಾದ ಮಹೇಶ್ವರ್ ಹೂಗಾರ್​ ಅವರಿಗೆ ಹೃದಯಾಘಾತವಾಗಿದೆ. ಕಂಡಕ್ಟರ್​​ಗೆ ಹಾರ್ಟ್​ ಅಟ್ಯಾಕ್​ ಆಗುತ್ತಿದ್ದಂತೆ ಚೆಕ್ಕಿಂಗ್​ ಇನ್ಸ್​ಪೆಕ್ಟರ್ (Checking Inspector)​ ಸ್ಥಳದಿಂದ ಕಾಲ್ಕಿತ್ತಿದ್ದಾರೆ. 


ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ


ಹಾಸ್ಟೆಲ್‍ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ನಡೆದಿದೆ. ಮಹಮ್ಮದ್ ಕೈಫ್ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಹಮ್ಮದ್ ಕೈಫ್ ಕೆಲ್ಲೂರು ಗ್ರಾಮದ ಮಹಮ್ಮದ್ ಷರೀಪ್ ಎಂಬುವರ ಪುತ್ರನಾಗಿದ್ದು, ಈತ 9ನೇ ತರಗತಿಯಲ್ಲಿ ಓದುತ್ತಿದ್ದ.


The conductor had a heart attack in the bus and died on the spot
ಸಾಂದರ್ಭಿಕ ಚಿತ್ರ


ಮಹಮದ್ ಕೈಫ್ ಹಲವಾರು ಬಾರಿ ಹಾಸ್ಟೆಲ್‍ನಿಂದ ಮನೆಗೆ ವಾಪಸ್ ಬಂದಿದ್ದ. ಆದರೂ ಆತನ ಪೋಷಕರು ಮಗನನ್ನು ಪುನಃ ಹಾಸ್ಟೆಲ್‍ಗೆ ಬಿಟ್ಟು ಬಂದಿದ್ದರು ಎನ್ನಲಾಗ್ತಿದೆ. ಸೋಮವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


3 ಕುಖ್ಯಾತ ಬೈಕ್ ಕಳ್ಳರ ಬಂಧನ


ಬೆಂಗಳೂರಿನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದು ಓರ್ವ ರೌಡಿಶೀಟರ್ ಸೇರಿದಂತೆ ಒಟ್ಟು 3 ಕುಖ್ಯಾತ ಬೈಕ್ ಕಳ್ಳರನ್ನು ವಿದ್ಯಾರಣ್ಯಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೌಡಿಶೀಟರ್ ಶಾಹಿಲ್ ಪಾಷಾ, ನಿಸಾರ್ ಹಾಗೂ ತೌಸಿಫ್ ಬಂಧಿತ ಆರೋಪಿಗಳಾಗಿದ್ದು, ಇವರ ಬಂಧನದಿಂದ 18 ಬೈಕ್ ಕಳವು ಪ್ರಕರಣಗಳು ಪತ್ತೆಯಾದಂತಾಗಿದೆ. ಆರೋಪಿಗಳಿಂದ 15 ಲಕ್ಷ ಮೌಲ್ಯದ ವಿವಿಧ ಮಾಡೆಲ್ ನ 23 ಬೈಕ್ ವಶಕ್ಕೆ ಪಡೆಯಲಾಗಿದೆ.


ಇದನ್ನೂ ಓದಿ: Raju Gowda: ಸಿದ್ದರಾಮಯ್ಯಗೆ ಶ್ರೀರಾಮುಲು ಮೇಲೆ ಲವ್ ಆಗಿದೆ; ಶಾಸಕ ರಾಜುಗೌಡ


ವಿದ್ಯಾರಣ್ಯಪುರ, ಯಲಹಂಕ ನ್ಯೂಟೌನ್, ಕೊಡಿಗೇಹಳ್ಳಿ, ಯಶವಂತಪುರ, ಜೆ.ಸಿ,ನಗರ, ಹೆಣ್ಣೂರು, ಬಾಗಲಗುಂಟೆ ಶೇಷಾದ್ರಿಪುರಂ, ವಿಜಯನಗರ, ಬಸಶಂಕರಿ, ರಾಜಾಜಿನಗರ ಹಾಗೂ ನೆಲಮಂಗಲ ಗ್ರಾಮಾಂತರ ಪ್ರದೇಶದಲ್ಲಿ ಬೈಕ್​ಗಳನ್ನು ಕಳವು ಮಡಿದ್ದಾರೆ. ನಂತರ ಅವುಗಳನ್ನು ಮಾಡಿಪೈ ಮಾಡಿ ವ್ಹೀಲಿಂಗ್ ಮಾಡುತ್ತಿದ್ದರು. ಬಳಿಕ ಕಡಿಮೆ ಬೆಲೆಗೆ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದರು.


ತೂಗು ಸೇತುವೆ ಮೇಲೆ ಪ್ರವಾಸಿಗರು ಹುಚ್ಚಾಟ


ಕಾರವಾರ (ನ.01): ಗುಜರಾತ್​ನ ಮೊರ್ಬಿ (Morbi In Gujarat) ದುರಂತದ ಬಳಿಕವೂ ಜನರು  ಎಚ್ಚೆತ್ತುಕೊಂಡಿಲ್ಲ, ಉತ್ತರ ಕನ್ನಡ ಜಿಲ್ಲೆಯಲ್ಲಿ ತೂಗು ಸೇತುವೆ (Hanging Bridge) ಮೇಲೆ ಕಾರು ಚಲಾಯಿಸಿ ಪ್ರವಾಸಿಗರು (Tourists) ದರ್ಪ ತೋರಿದ್ದಾರೆ. ಯಲ್ಲಾಪುರದ ಶಿವಪುರ (Shivapura) ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆಯಲ್ಲಿ ಇಂತಹ ಘಟನೆ ನಡೆದಿದೆ. ಪ್ರಾಣವನ್ನು ಪಣಕ್ಕಿಟ್ಟುಕೊಂಡು ತೂಗು ಸೇತುವೆ ಮೇಲೆಯೇ ಕಾರು ಚಲಾಯಿಸಿ ಪ್ರವಾಸಿಗರು ಪುಂಡಾಟ ತೋರಿದ್ದಾರೆ.


ಇದನ್ನೂ ಓದಿ: Veerendra Heggade: ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸುಳ್ಳು ವದಂತಿ; ಮೆರವಣಿಗೆಯಲ್ಲಿ ಬಂದು ಕೋರ್ಟ್​ ಮುಂದೆ ಶರಣಾದ ವ್ಯಕ್ತಿ


ಸೇತುವೆ ನೋಡಲು ಬಂದ ಪ್ರವಾಸಿಗರು ಹುಚ್ಚಾಟ ತೋರಿದ್ದಾರೆ.  ಮಹಾರಾಷ್ಟ್ರ ನೋಂದಣಿ ಹೊಂದಿರುವ ಕಾರು ಇದಾಗಿದ್ದು, ಪ್ರವಾಸಿಗರು ಪುಂಡಾಟ ಮೆರೆದಿದ್ದಾರೆ. ತೂಗು ಸೇತುವೆ ಮೇಲೆ ಕಾರು ಚಲಾಯಿಸಿದ್ದನ್ನು ನೋಡಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ವಿರೋಧ ತೋರಿಸಿದ್ರೂ ಅನುಚಿತವಾಗಿ ವರ್ತಿಸಿದ್ದಾರೆ.

Published by:ಪಾವನ ಎಚ್ ಎಸ್
First published: