• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mandya: ಬಲಿಗೆ ತಂದಿದ್ದ ಹುಂಜ ಎಸ್ಕೇಪ್! ಮರಹತ್ತಿ ಕುಳಿತ ಕೋಳಿಯನ್ನ ಹುಡುಕಿ ಹುಡುಕಿ ಸುಸ್ತು

Mandya: ಬಲಿಗೆ ತಂದಿದ್ದ ಹುಂಜ ಎಸ್ಕೇಪ್! ಮರಹತ್ತಿ ಕುಳಿತ ಕೋಳಿಯನ್ನ ಹುಡುಕಿ ಹುಡುಕಿ ಸುಸ್ತು

ಮರವೇರಿ ಕುಳಿತ ಹುಂಜ

ಮರವೇರಿ ಕುಳಿತ ಹುಂಜ

ಗ್ರಾಮ ದೇವತೆ ಹಬ್ಬದಲ್ಲಿ (Festival) ಭಕ್ತರನ್ನ (Devotees) ಯಾಮಾರಿಸಿದ ಹರಕೆ ಹುಂಜವೊಂದು (Cock), ಭಕ್ತರ ಕೈಯಿಂದ ಹಾರಿ ಮರವೇರಿ ಕುಳಿತ ಘಟನೆ ನಡೆದಿದೆ. ಬಲಿ ಕೊಡಲು ತಂದಿದ್ದ ಹುಂಜ ಕೈ ತಪ್ಪಿದ್ದಕ್ಕೆ ಭಕ್ತೆ ಕಂಗಾಲಾಗಿದ್ದು, 4ರಿಂದ 5 ತಾಸಿನ ಬಳಿಕ  ಹುಂಜ ಕೆಳಗಿಳಿದು, ಕೊನೆಗೂ ಅದನ್ನು ಬಲಿಕೊಟ್ಟ ಭಕ್ತರು,  ನಿಟ್ಟುಸಿರು ಬಿಟ್ಟಿದ್ದಾರೆ.

ಮುಂದೆ ಓದಿ ...
  • Share this:

ಮಂಡ್ಯ: ಗ್ರಾಮ ದೇವತೆ ಹಬ್ಬದಲ್ಲಿ (Festival) ಭಕ್ತರನ್ನ (Devotees) ಯಾಮಾರಿಸಿದ ಹರಕೆ ಹುಂಜವೊಂದು (Cock), ಭಕ್ತರ ಕೈಯಿಂದ ಹಾರಿ ಮರವೇರಿ ಕುಳಿತ ಘಟನೆ ನಡೆದಿದೆ. ಬಲಿ ಕೊಡಲು ತಂದಿದ್ದ ಹುಂಜ ಕೈ ತಪ್ಪಿದ್ದಕ್ಕೆ ಭಕ್ತೆ ಕಂಗಾಲಾಗಿದ್ದು, 4ರಿಂದ 5 ತಾಸಿನ ಬಳಿಕ  ಹುಂಜ ಕೆಳಗಿಳಿದು, ಕೊನೆಗೂ ಅದನ್ನು ಬಲಿಕೊಟ್ಟ ಭಕ್ತರು,  ನಿಟ್ಟುಸಿರು ಬಿಟ್ಟಿದ್ದಾರೆ. ಬೇಸಿಗೆ ವೇಳೆ ಹಳ್ಳಿಗಳಲ್ಲಿ ಗ್ರಾಮದೇವತೆ ಹಬ್ಬ ಸರ್ವೇಸಾಮಾನ್ಯ. ತಮ್ಮೂರಿನ ದೇವರಿಗೆ ವರ್ಷಕೊಮ್ಮೆ ಭಕ್ತಿಪೂರ್ವಕ ಪೂಜೆ ಸಲ್ಲಿಸುವುದು ಗ್ರಾಮಸ್ಥರ ಸಂಪ್ರದಾಯ. ಹಬ್ಬದ ಸಂದರ್ಭದಲ್ಲಿ ಕೋಳಿ ಕುರಿ ಬಲಿಕೊಡುವುದು ಕೂಡ ಬಹುತೇಕ ಹಳ್ಳಿಗಳಲ್ಲಿ (Village) ಚಾಲ್ತಿಯಲ್ಲಿರುವ ಸಂಪ್ರದಾಯ. ಈಗ ಎಲ್ಲಾ ಊರೂಗಳಲ್ಲೂ ಕೂಡ ಹಬ್ಬ, ಜಾತ್ರೆ (Jatre) ಒಂದರ ಹಿಂದೆ ಒಂದರಂತೆ ನಡೆಯುತ್ತದೆ. ಅದೇ ರೀತಿ ಮಂಡ್ಯದ (Mandya) ಗಾಂಧಿನಗರದಲ್ಲೂ ಕೂಡ ಬಿಸಿಲು ಮಾರಮ್ಮನ ಹಬ್ಬದ ವೇಳೆ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ದೇವಿಗೆ ಬಲಿ ಕೊಡಲು ತಂದಿದ್ದ ಹುಂಜವೊಂದು ಭಕ್ತೆ ಕೈಯಿಂದ ತಪ್ಪಿಸಿಕೊಂಡು ಮರವೇರಿ ಕುಳಿತ ಘಟನೆ ನಡೆದಿದೆ.


 ಮಂಡ್ಯದಲ್ಲಿ ನಡೆಯಿತು ವಿಚಿತ್ರ ಘಟನೆ


ಗ್ರಾಮ ದೇವತೆ ಹಬ್ಬದಲ್ಲಿ (Festival) ಭಕ್ತರನ್ನ (Devotees) ಯಾಮಾರಿಸಿದ ಹರಕೆ ಹುಂಜವೊಂದು (Cock), ಭಕ್ತರ ಕೈಯಿಂದ ಹಾರಿ ಮರವೇರಿ ಕುಳಿತ ಘಟನೆ ನಡೆದಿದೆ. ಬಲಿ ಕೊಡಲು ತಂದಿದ್ದ ಹುಂಜ ಕೈ ತಪ್ಪಿದ್ದಕ್ಕೆ ಭಕ್ತೆ ಕಂಗಾಲಾಗಿದ್ದು, 4ರಿಂದ 5 ತಾಸಿನ ಬಳಿಕ  ಹುಂಜ ಕೆಳಗಿಳಿದು, ಕೊನೆಗೂ ಅದನ್ನು ಬಲಿಕೊಟ್ಟ ಭಕ್ತರು,  ನಿಟ್ಟುಸಿರು ಬಿಟ್ಟಿದ್ದಾರೆ.


 ಭಕ್ತೆ ಕೈಯಿಂದ ಹಾರಿ ಮರವೇರಿದ ಹುಂಜ


 ಮಂಗಳವಾರ ಮಂಡ್ಯದ ಗಾಂಧಿನಗರದಲ್ಲಿ ಶ್ರೀ ಬಿಸಲು ಮಾರಮ್ಮನ ಹಬ್ಬ ವಿಜೃಂಭಣೆಯಿಂದ ನಡೆಯಿತು. ಸೋಮವಾರ ರಾತ್ರಿ ಹೂಹೊಂಬಾಳೆ ನೆರವೇರಿಸಿದ್ದ ಗ್ರಾಮಸ್ಥರು. ಮಂಗಳವಾರ ಮಧ್ಯಾಹ್ನ ಬಿಸಿಲು ಮಾರಮ್ಮ ದೇವಿಗೆ ಕೋಳಿ ಬಲಿ ಕೊಟ್ಟು ಭಕ್ತಿ ಸಮರ್ಪಿಸಲು ಮುಂದಾಗಿದ್ದರು. ಈ ವೇಳೆ ಗ್ರಾಮದ ರತ್ನಮ್ಮ ಎಂಬುವರು ತಂದಿದ್ದ ಹುಂಜವೊಂದು ಅವರ ಕೈಯಿಂದ ಹಾರಿಹೋಗಿತ್ತು. ಹೀಗೆ ರತ್ನಮ್ಮ ಕೈತಪ್ಪಿದ್ದ ಹುಂಜ ದೇವಾಲಯ ಮುಂಭಾಗವೇ ಇದ್ದ ಮರವೇರಿ ಕುಳಿತಿದೆ.


ಇದನ್ನೂ ಓದಿ: Kolluru Mookambika Temple: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ 1.53 ಕೋಟಿ ದೇಣಿಗೆ ಸಂಗ್ರಹ


ಹುಂಜ ಹಿಡಿಯಲಾಗದೇ ಭಕ್ತರು ಕಂಗಾಲು


ನೆರೆದಿದ್ದ ಭಕ್ತರೆಲ್ಲರು ಹುಂಜ ಹಿಡಿಯಲು ಪ್ರಯತ್ನಿಸಿದ್ರು ಕೂಡ ಮರದ ರಂಬೆ ರೆಂಬೆಗೆ ಹಾರಿ ಕಿರಿಕ್ ಹುಂಜ  ಜಾಗ ಬದಲಾಯಿಸಿದೆ. ಅಲ್ಲಿಂದ‌ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಡ್ಡಾಡುತ್ತಿದ್ದ ಹುಂಜ ಇಳಿಸಲು ಭಕ್ತರು ಹರಸಾಹಸ ಪಟ್ಟಿದ್ದಾರೆ. ಸತತ ಮೂರರಿಂದ ನಾಲ್ಕು ತಾಸು ಕೆಳಗೆ ಇಳಿಯದೆ ಸತಾಯಿಸಿದ ಹುಂಜ ಕಡಗೇ ಮರದಿಂದ ಕೆಳಗಿಳಿದಿದೆ. ಬಳಿಕ ಹುಂಜ ಹಿಡಿದು ಬಿಸಿಲು ಮಾರಮ್ಮ ದೇವಿಗೆ ಬಲಿ ಕೊಟ್ಟ ಭಕ್ತೆ ರತ್ನಮ್ಮ ನಿಟ್ಟುಸಿರು ಬಿಟ್ಟರು.


ಬಿಸಿಲು ಮಾರಮ್ಮ ಹಬ್ಬ ಹಿನ್ನೆಲೆ, ವಿಜೃಂಭಿಸಿದ ಗಾಂಧಿನಗರ


ಶ್ರೀ ಬಿಸಲು ಮಾರಮ್ಮನ ಹಬ್ಬ ಹಿನ್ನೆಲೆ ಮಂಡ್ಯದ ಗಾಂಧಿನಗರದಲ್ಲಿ ಸಂಭ್ರಮ ಮನೆ ಮಾಡಿತ್ತು.‌ ನಗರದೆಲ್ಲೆಡೆ ಅಳವಡಿಸಲಾಗಿದ್ದ ವಿದ್ಯುತ್ ದೀಪಾಲಂಕಾರ ಹಬ್ಬದ ಕಳೆ ಹೆಚ್ಚಿಸಿತ್ತು. ಸೋಮವಾರ ರಾತ್ರಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಹೂಹೊಂಬಾಳೆ ನೆರವೇರಿಸಿದ ಗ್ರಾಮಸ್ಥರು.


ಇದನ್ನೂ ಓದಿ: Mysore Zoo: ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ


ಮಾರನೇ ದಿನ ಬೆಳಿಗ್ಗೆ ದೇವಿಗೆ ತಂಬಿಟ್ಟು ಆರತಿ ಮಾಡಿ ಕೋಳಿ ಬಲಿ ಕೊಡುವ ಮೂಲಕ ಭಕ್ತಿ ಸಮರ್ಪಿಸಿದರು. ದೇವಿಯ ಮೆರವಣಿಗೆ ವೇಳೆ ಗ್ರಾಮದ ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಸಿದರು.


(ವರದಿ: ಸುನೀಲ್ ಗೌಡ, ಮಂಡ್ಯ)

Published by:Annappa Achari
First published: