ಬೆಂಗಳೂರು (ಮಾ.29): ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದೆ. ವಿಧಾನಪರಿಷತ್ನಲ್ಲಿ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, (B.K Hariprasadh) ಮಕ್ಕಳ ಸ್ಕಾಲರ್ ಶಿಪ್ (Scholarship) ವಿಚಾರವಾಗಿ ವಿಷಯ ಪ್ರಸ್ತಾಪಿಸಿದ್ರು. ಮಕ್ಕಳಿಗೆ ಸರ್ಕಾರ ನೀಡುತ್ತಿರೋ ಸ್ಕಾಲರ್ ಶಿಪ್ ನಿಲ್ಲಿಸುವ ಬಗ್ಗೆ ಬಿ.ಕೆ ಹರಿಪ್ರಸಾದ್ ಬಸವರಾಜ್ ಬೊಮ್ಮಾಯಿ (Basavaraj Bommai) ಅವ್ರನ್ನು ಪ್ರಶ್ನೆ ಮಾಡಿದ್ರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಲಾ ಮಕ್ಕಳ ಸ್ಕಾಲರ್ ಶಿಪ್, ಹೈಯರ್ ಎಜುಕೇಶನ್ ನಿಲ್ಲಿಸುವ ಕೆಲ ಪ್ರಯತ್ನ ಈ ಹಿಂದೆ ಆಗಿತ್ತು. ಆದರೆ ಯಾವುದನ್ನೂ ಕೂಡ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದರಲ್ಲೂ ಯಾವುದೇ ಅಲ್ಪಸಂಖ್ಯಾತ ಮಕ್ಕಳ ಸ್ಕಾಲರ್ಶಿಪ್ ನಿಲ್ಲಿಸೋದಿಲ್ಲ, ಶಾದಿ ಮಹಲ್ (Shaadi Mahal) ಮಾತ್ರ ನಿಲ್ಲಿಸುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
‘ಮಕ್ಕಳ ಸ್ಕಾಲರ್ ಶಿಪ್ ದಯವಿಟ್ಟು ನಿಲ್ಲಿಸಬೇಡಿ’
ಮುಖ್ಯಮಂತ್ರಿಗಳೆ, ಅಲ್ಪ ಸಂಖ್ಯಾತ ಮಕ್ಕಳಿಗೆ ಸ್ಕಾಲರ್ ಶಿಪ್ ನಿಲ್ಲಿಸಲಾಗ್ತಿದೆ. ಹಿಜಾಬ್ ವಿಚಾರ ನೀವು ಏನಾದ್ರೂ ಮಾಡಿಕೊಳ್ಳಿ, ಅದರೆ ಸ್ಕಾಲರ್ ಶಿಪ್ ದಯವಿಟ್ಟು ನಿಲ್ಲಿಸಬೇಡಿ ಎಂದು ವಿಧಾನಪರಿಷತ್ನಲ್ಲಿ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಸಿಎಂ ಬೊಮ್ಮಾಯಿ ಗಮನಕ್ಕೆ ತಂದರು. ಅದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ ಶಾಲಾ ಮಕ್ಕಳ ಸ್ಕಾಲರ್ ಶಿಪ್, ಹೈಯರ್ ಎಜುಕೇಶನ್ ನಿಲ್ಲಿಸುವ ಕೆಲ ಪ್ರಯತ್ನ ಆಗಿತ್ತು. ಆದರೆ ಯಾವುದನ್ನೂ ಕೂಡ ನಿಲ್ಲಿಸುವುದಿಲ್ಲ. ಮಕ್ಕಳ ಸ್ಕಾಲರ್ ಶಿಪ್ ಗೆಂದೇ 100 ಕೋಟಿ ರೂಪಾಯಿ ಅನುದಾನವನ್ನೂ ಮಂಜೂರು ಮಾಡ್ತೇನೆ.
ಯಾವುದೇ ಅಲ್ಪಸಂಖ್ಯಾತ ಮಕ್ಕಳ ಸ್ಕಾಲರ್ ಶಿಪ್ ನಿಲ್ಲಿಸೋದಿಲ್ಲ. ಮಕ್ಕಳ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡದೇ ಅವರಿಗೆ ಸ್ಕಾಲರ್ ಶಿಪ್ ಒದಗಿಸುತ್ತೇವೆ. ಶಾದಿ ಮಹಲ್ ಮಾತ್ರ ನಿಲ್ಲಿಸುತ್ತೇವೆ, ಅದನ್ನು ಬಿಟ್ಟು ಅಲ್ಪಸಂಖ್ಯಾತರ ಯಾವುದೇ ಯೋಜನೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಮರ್ಷಿಯಲ್ ಟ್ಯಾಕ್ಸ್ನಲ್ಲಿ ಹೆಚ್ಚು ಸಂಗ್ರಹ ಮಾಡಿದ್ದೇವೆ
ನಾನ್ ಟ್ಯಾಕ್ಸ್ ರೆವಿನ್ಯೂ 6000 ಕೋಟಿ ಸಂಗ್ರಹ ಆಗುತ್ತಿದೆ. 26 ಸಾವಿರ ಕೋಟಿ ಪೂರಕ ಅಂದಾಜು ಮಂಡಿಸಿದ್ದೇವೆ. ದೇವರಾಜ ಅರಸು ನಿಮಗಕ್ಕೆ ₹200 ಕೋಟಿ ನೀಡಿದ್ದೇವೆ. ನೀರಾವರಿ ಯೋಜನೆಗೆ 3000 ಕೋಟಿ ಹೆಚ್ಚುವರಿ ನೀಡಿದ್ದೇವೆ. ಆರ್ಥಿಕ ಶಿಸ್ತು ಕಾಯ್ದು ಅವಶ್ಯಕ ಖರ್ಚು ಕಡಿಮೆ ಮಾಡಿದ್ದೇವೆ. ಬರುವ ವರ್ಷ ಕೊವಿಡ್ ಫ್ರೀ ವರ್ಷ ಆಗಬಹುದೆಂಬ ನಿರೀಕ್ಷೆಯಿದೆ ಎಂದು ವಿಧಾನಪರಿಷತ್ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಮಾ.31ರಂದು ರಾಜ್ಯಕ್ಕೆ ರಾಹುಲ್ ಗಾಂಧಿ, ನವೆಂಬರ್ 27ಕ್ಕೆ ವಿಧಾನಸಭೆ ಚುನಾವಣೆನಾ?: DK Shivakumar ಹೇಳಿದ್ದೇನು?
ಹೊರಟ್ಟಿ ವಿರುದ್ಧ ಕೇಸ್, 48 ಗಂಟೆಯೊಳಗೆ ಕ್ರಮ
ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮೇಲೆ ಕೇಸ್ ವಿಚಾರವಾಗಿ ವಿಧಾನ ಪರಿಷತ್ ಸದಸ್ಯರು ಸಿಎಂ ಬಸವರಾಜ್ ಬೊಮ್ಮಾಯಿ ಮುಂದೆ ವಿಷಯ ಪ್ರಸ್ತಾಪಿಸಿದ್ರು. ಸಭಾಪತಿ ವಿರುದ್ಧ FIR ದಾಖಲಾಗಿರುವ ಬಗ್ಗೆ ಪ್ರಶ್ನಿಸಿದ್ರು ಈ ಬಗ್ಗೆ ಉತ್ತರಿಸಿ ಸಿಎಂ ಬಸವರಾಜ್ ಬೊಮ್ಮಾಯಿ 48 ಗಂಟೆಯೊಳಗೆ ಕ್ರಮ ತೆಗೆದುಕೊಳ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Mysore: ಮೊಹಮ್ಮದ್ ನಲಪಾಡ್ಗೆ ಸೇರಿದ ಹೋಟೆಲ್ನಲ್ಲಿ ಮಹಿಳೆ ಮೇಲೆ ಹಲ್ಲೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮೀಟಿಂಗ್ ಕರೆದು ಸಮಸ್ಯೆ ಬಗೆಹರಿಸುವೆ
ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಪ್ರಥಮ ಮಾನ್ಯತೆ ಹಾಗೂ ನವೀಕರಣ ನಿಯಮ ಸರಳೀಕತಣ ಕುರಿತು ಸದಸ್ಯರು ಪ್ರಸ್ತಾಪಿಸಿದ್ರು. ಇದಕ್ಕೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ ಸುತ್ತೋಲೆ ಕೊಡಲಾಗಿದೆ, ಮಕ್ಕಳಿರೋದ್ರಿಂದ ಸುರಕ್ಷತೆ ದೃಷ್ಟಿಯಿಂದ ಮಾಡಲಾಗಿದೆ. ನಾವು ಒಂದೊಷ್ಟು ರೂಲ್ಸ್ ಮಾಡಬೇಕು ಫೈರ್ ಸೇಫ್ಟಿ ರೂಲ್ಸ್ ಅನ್ನು ಆ ಇಲಾಖೆಯೇ ಫಿಕ್ಸ್ ಮಾಡಲಿ PWD, fire, ಶಿಕ್ಷಣ ಇಲಾಖೆಯವರ ಜೊತೆ ಒಂದು ಮೀಟಿಂಗ್ ಮಾಡ್ತೀವಿ. ಒಂ ಆದೇಶ ಕೂಡ ಪಾಲನೆ ಆಗಬೇಕು ಒಂದು ಮೀಟಿಂಗ್ ನಲ್ಲಿ ಎಲ್ಲರನ್ನು ಕರೆದು ಇದನ್ನು ಬಗೆಹರಿಸುತ್ತೇವೆ ಎಂದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ