Lok Sabha Election Result 2019: ಕೇಂದ್ರ ನಾಯಕರು ನಮ್ಮ ಮಾತನ್ನು ಪರಿಗಣಿಸಲಿಲ್ಲ: ಸಚಿವ ದೇಶಪಾಂಡೆ ಬೇಸರ

ಈ ಫಲಿತಾಂಶದಿಂದ ಮೈತ್ರಿ ಸರ್ಕಾರದ ಮೇಲೆ ಯಾವ ರೀತಿಯ ಪರಿಣಾಮ ಆಗುತ್ತದೆ ಎಂಬುದನ್ನು ನೋಡಬೇಕು. ಯಾರಿಗೆ ಯಾವ ಕ್ಷೇತ್ರ ನೀಡಬೇಕು ಎಂಬುದನ್ನು ನಾವು ಸರಿಯಾಗಿ ತೀರ್ಮಾನಿಸಬೇಕಿತ್ತು. ಉತ್ತರ ಕನ್ನಡ ಜೆಡಿಎಸ್​​ಗೆ ಬೇಡಿ, ಇಲ್ಲಿ ಅವರ ಅಸ್ತಿತ್ವ ಇಲ್ಲ ಎಂದು ಹೇಳಿದ್ದರೂ ಯಾರೂ ಕೇಳಲಿಲ್ಲ ಎಂದು ಹೇಳಿದರು.

G Hareeshkumar | news18
Updated:May 23, 2019, 7:39 PM IST
Lok Sabha Election Result 2019: ಕೇಂದ್ರ ನಾಯಕರು ನಮ್ಮ ಮಾತನ್ನು ಪರಿಗಣಿಸಲಿಲ್ಲ: ಸಚಿವ ದೇಶಪಾಂಡೆ ಬೇಸರ
ಸಚಿವ ಆರ್​.ವಿ. ದೇಶಪಾಂಡೆ
G Hareeshkumar | news18
Updated: May 23, 2019, 7:39 PM IST
ಬೆಂಗಳೂರು(ಮೇ 23): ಉತ್ತರ ಕನ್ನಡ ಲೋಕಸಭಾ ಚುನಾವಣೆಯಲ್ಲಿ 6ನೇ ಬಾರಿಗೆ ಅನಂತ್​ಕುಮಾರ್​ ಹೆಗಡೆ ಗೆಲುವು ಸಾಧಿಸಿದ್ದಾರೆ. 7.69 ಲಕ್ಷ ಮತಗಳನ್ನು ಅವರು ಪಡೆದರೆ ಮೈತ್ರಿ ಅಭ್ಯರ್ಥಿ ಆನಂದ್​ ಅಸ್ನೋಟಿಕರ್​ 3 ಲಕ್ಷ ಮತ ಪಡೆದಿದ್ದಾರೆ. ಈ ಮೂಲಕ 4.68 ಲಕ್ಷ ಅಂತರದ ಬೃಹತ್​ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಕೇವಲ 1.40 ಲಕ್ಷ ಮತಗಳಿಂದ ಅವರು ಗೆದ್ದಿದ್ದರು. ಮೈತ್ರಿಪಕ್ಷಗಳ ಪ್ರಯತ್ನ ಎಲ್ಲಿ ವಿಫಲವಾಯಿತು ಎಂದು ಕಾಂಗ್ರೆಸ್​ನ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದರು.

ನಾವು ಮುಖಂಡರು ಒಂದಾಗಿ ಮೈತ್ರಿ ಮಾಡಿಕೊಳ್ಳಬಹುದು. ಆದರೆ, ಬೂತ್​ ಮಟ್ಟದ ಕಾರ್ಯಕರ್ತರು ಒಂದಾಗುವುದಿಲ್ಲ. ಉತ್ತರ ಕನ್ನಡದ ಹಲವು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದೆವು. ಆದರೆ, ಕೇಂದ್ರ ನಾಯಕರು ನಮ್ಮ ಮಾತನ್ನು ಪರಿಗಣಿಸಲಿಲ್ಲ ಎಂದು ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.

ಈ ಫಲಿತಾಂಶದಿಂದ ಮೈತ್ರಿ ಸರ್ಕಾರದ ಮೇಲೆ ಯಾವ ರೀತಿಯ ಪರಿಣಾಮ ಆಗುತ್ತದೆ ಎಂಬುದನ್ನು ನೋಡಬೇಕು. ಯಾರಿಗೆ ಯಾವ ಕ್ಷೇತ್ರ ನೀಡಬೇಕು ಎಂಬುದನ್ನು ನಾವು ಸರಿಯಾಗಿ ತೀರ್ಮಾನಿಸಬೇಕಿತ್ತು. ಉತ್ತರ ಕನ್ನಡ ಜೆಡಿಎಸ್​​ಗೆ ಕೊಡುವುದು ಬೇಡ. ಇಲ್ಲಿ ಅವರ ಅಸ್ತಿತ್ವ ಇಲ್ಲ ಎಂದು ಹೇಳಿದ್ದರೂ ಯಾರೂ ನಮ್ಮ ಮಾತು ಕೇಳಲಿಲ್ಲ ಎಂದು ದೇಶಪಾಂಡೆ ವಿಷಾದಿಸಿದರು.

ಇದನ್ನೂ ಓದಿ :   Lok Sabha Election Result 2019: ಗೌಡರ ಭದ್ರಕೋಟೆಯನ್ನೇ ಭೇದಿಸಿದ ಸುಮಲತಾ; ಮೊದಲ ಬಾರಿ ಸಂಸತ್​ ಪ್ರವೇಶಿಸಲಿರುವ ಅಂಬಿ​ ಮಡದಿ

ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲಿಲ್ಲದ ಸರದಾರ. ಅವರೇ ಸೋತಿದ್ದಾರೆ ಎಂದರೆ ನೋವಾಗುತ್ತದೆ. ತುಮಕೂರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೋತಿದ್ದಕ್ಕೂ ಬೇಸರವಿದೆ. ಮೈತ್ರಿ ಬಗ್ಗೆ ರಾಜ್ಯ ಮಟ್ಟದ, ರಾಷ್ಟ್ರ ಮಟ್ಟದ ನಾಯಕರು ತೀರ್ಮಾನ ಮಾಡಬೇಕು ಎಂದರು.

ಮೋದಿಗೆ ಅಭಿನಂದನೆ

ನರೇಂದ್ರ ಮೋದಿಯವರಿಗೆ ಅಭಿನಂದನೆ. ದೇಶದ ಜನರು ಮತ್ತೊಮ್ಮೆ ಅವರಿಗೆ 5 ವರ್ಷಗಳ ಅಧಿಕಾರ ಕೊಟ್ಟಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜ್ವಲಂತವಾಗಿದೆ. ರೈತರು ಕಷ್ಟದಲ್ಲಿದ್ದಾರೆ. ಉತ್ಪಾದನಾ ಕ್ಷೇತ್ರ ಹಾಳಾಗಿದೆ ಈ ಬಗ್ಗೆ ಮೋದಿ ಗಮನ ಹರಿಸಬೇಕು ಎಂದು ದೇಶಪಾಂಡೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರು.
Loading...

ಜನರ ತೀರ್ಪನ್ನು ಒಪ್ಪಿಕೊಂಡಿದ್ದೇವೆ - ಎಂ ಬಿ ಪಾಟೀಲ

ಚುನಾವಣೆಯಲ್ಲಿ ಗೆಲುವಿಗೆ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಗೆ ಗೃಹ ಸಚಿವ ಎಂ.ಬಿ. ಪಾಟೀಲ ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಲೋಕಸಭೆಯ ಚುನಾವಣೆಯಲ್ಲಿ ಜಯ ಗಳಿಸಿದ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು ಜನರ ಆದೇಶವನ್ನು ವಿನಮ್ರತೆಯಿಂದ ಒಪ್ಪಿಕೊಂಡು ಗೌರವಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಸೋಲು ಗೆಲುವು ಸ್ಥಿತಪ್ರಜ್ಞರಾಗಿ ಸ್ವೀಕರಿಸಿದ್ದೇವೆ : ವೈಎಸ್​ವಿ ದತ್ತಾ

ಈ ಸೋಲನ್ನ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಮೈತ್ರಿ ಪಕ್ಷಗಳು ವಿಶ್ವಾಸಾರ್ಹ ಕೆಲಸ ಮಾಡಿದ್ದಾರೆ. ಬಿಜೆಪಿಯೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ಮತದಾರ ಮತ ನೀಡಿದ್ದಾನೆ. ಮೈತ್ರಿ ಸರ್ಕಾರದ ಹಿನ್ನಡೆ ಇದಾಗಿದೆ. ಸೋಲು ಮತ್ತು ಗೆಲುವನ್ನು ಸ್ಥಿತ ಪ್ರಜ್ಞವಾಗಿ ಸ್ವೀಕರಿಸಿದ್ದೇವೆ. ಸೋಲಿನಿಂದ ಕುಗ್ಗುವಂತಹ ಪ್ರಮೇಯವೇ ಇಲ್ಲ. ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಶುರು ಮಾಡಿದ್ದೇವೆ ಎಂದು  ವೈಎಸ್​ವಿ ದತ್ತಾ ಹೇಳಿದ್ದಾರೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್ಚಾಟ್ ನಲ್ಲೂ ಹಿಂಬಾಲಿಸಿ'
First published:May 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...