• Home
  • »
  • News
  • »
  • state
  • »
  • Live in Relationship: ಸಹಜೀವನದ ಸಹವಾಸ ಸಾಕಪ್ಪಾ ಸಾಕು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲೇ ಜಾಸ್ತಿಯಾಗ್ತಿದೆ ವಂಚನೆ!

Live in Relationship: ಸಹಜೀವನದ ಸಹವಾಸ ಸಾಕಪ್ಪಾ ಸಾಕು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲೇ ಜಾಸ್ತಿಯಾಗ್ತಿದೆ ವಂಚನೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಲಿವ್ ಇನ್ ರಿಲೇಷನ್ ಪ್ರಕರಣಗಳಲ್ಲಿ ಹೆಚ್ಚಾಗಿ ಸೋಷಿಯಲ್ ಮೀಡಿಯಾ ಮೂಲಕ ಪ್ರೀತಿ-ಪ್ರೇಮ ಶುರುವಾಗುತ್ತೆ. ಆನಂತರ ಮದುವೆ ಆಗದೆ ಸಹ ಜೀವನ ನಡೆಸ್ತಾರೆ. ಸಹ ಜೀವನ ನಡೆಸಿದ ಮೂರ್ನಾಲ್ಕು ವರುಷಕ್ಕೆ ಸಂಬಂಧ ಮುರಿದುಬಿದ್ದು ದುಃಖಾಂತ್ಯವಾಗುತ್ತಿವೆ!

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ಲಿವ್ ಇನ್ ರಿಲೇಷನ್ (live-in relationships) ಪ್ರಮಾಣ ಹೆಚ್ಚಾಗ್ತಿದೆ. ಕೊರೋನಾ (Corona) ನಂತರ ಇದರ‌ ಪ್ರಮಾಣ ಇನ್ನಷ್ಟು ಹೆಚ್ಚಳವಾಗಿದೆ. ಆದ್ರೆ ಈ ಲಿವ್ ಇನ್ ರಿಲೇಷನ್ ಶಿಪ್ ವಂಚನೆ, ಮೋಸದಲ್ಲಿ ಕೊನೆಯಾಗ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ. ಇಂಥ ಮಹಾನಗರದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ (Western culture) ಸಾಕಷ್ಟು ಪ್ರಭಾವ ಬೀರುತ್ತಿದೆ. ಇದರ ಪರಿಣಾಮ ಬೆಂಗಳೂರಿನಲ್ಲಿ ಕೋರೊನಾ ನಂತರ ಲಿವ್ ಇನ್ ರಿಲೇಷನ್ ಶಿಪ್ ಇರುವ ಜೋಡಿಗಳ ಪ್ರಮಾಣ ಹೆಚ್ಚಾಗ್ತಿದೆ.  ಕಳೆದ ಮೂರು ವರುಷಕ್ಕೆ ಹೋಲಿಸಿದರೆ ಈ ವರುಷ ಲಿವ್ ಇನ್ ರಿಲೇಷನ್ ಕೇಸಸ್ ಹೆಚ್ಚಳವಾಗಿದೆ.


ಲಿವ್ ಇನ್‌ ರಿಲೇಷನ್‌ಶಿಪ್‌ನಲ್ಲಿ ವಂಚನೆ


ಆರಂಭದಲ್ಲಿ ಈ ಸಂಬಂಧದಲ್ಲಿ ಹುಡುಗ, ಹುಡುಗಿ ತುಂಬ ಚೆನ್ನಾಗಿರ್ತಾರೆ. ಆದ್ರೆ ಹೆಣ್ಮಕ್ಕಳು ಆನಂತರ ವಂಚನೆ,‌ ಮೋಸಕ್ಕೆ ಒಳಗಾಗ್ತಿದಾರೆ. ಈ ಕುರಿತು ಮಹಿಳಾ ಆಯೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೂರು ಬರ್ತಿವೆ ಅಂತಾರೆ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು.


ಸೋಶಿಯಲ್ ಮೀಡಿಯಾ ಮೂಲಕ ಪರಿಚಯ


ಈ ಲಿವ್ ಇನ್ ರಿಲೇಷನ್ ಪ್ರಕರಣಗಳಲ್ಲಿ ಹೆಚ್ಚಾಗಿ ಸೋಷಿಯಲ್ ಮೀಡಿಯಾ ಮೂಲಕ ಪ್ರೀತಿ-ಪ್ರೇಮ ಶುರುವಾಗುತ್ತೆ. ಆನಂತರ ಮದುವೆ ಆಗದೆ ಸಹ ಜೀವನ ನಡೆಸ್ತಾರೆ. ಸಹ ಜೀವನ ನಡೆಸಿದ ಮೂರ್ನಾಲ್ಕು ವರುಷಕ್ಕೆ ಪ್ರಕರಣಗಳು ಮುರಿದುಬಿದ್ದು ದುಃಖಾಂತ್ಯವಾಗುತ್ತಿವೆ.


ಇದನ್ನೂ ಓದಿ: Girl's Death: ಒಬ್ಬಳಿಗೆ ಪ್ರಿಯತಮ ಕೈಕೊಟ್ಟಿದ್ದಕ್ಕೆ ವಿಷ ಕುಡಿದ ಮೂವರು ಬಾಲಕಿಯರು! ದುಡುಕಿನ ನಿರ್ಧಾರಕ್ಕೆ ಇಬ್ಬರು ಬಲಿ


106 ಪ್ರೇಮ ವಂಚನೆ ಪ್ರಕರಣ


ಕಳೆದ ಮೂರು ವರುಷದಲ್ಲಿ 106 ಪ್ರೇಮ, ಸೈಬರ್ ಪ್ರಕರಣ ದಾಖಲಾಗಿವೆ. ಇದರಲ್ಲಿ 70ಕ್ಕಿಂತಲೂ ಹೆಚ್ಚು ಲಿವಿಂಗ್ ಟು ಗೆದರ್ ಪ್ರಕರಣಗಳೇ ಹೆಚ್ಚು ಇವೆ. ಇದರಲ್ಲಿ 26 ಕೇಸ್ ಇತ್ಯರ್ಥ, ಉಳಿದ 80 ಕೇಸ್ ಇನ್ನೂ ಬಗೆಹರಿಯಬೇಕಿದೆ. ಇನ್ನು ಕಚೇರಿ ಸ್ಥಳದಲ್ಲಿ ಯುವತಿಯರಿಗೆ ಕಿರುಕುಳ ತಪ್ಪುತ್ತಿಲ್ಲ. 252 ಕೇಸ್ ನಲ್ಲಿ 48 ಕೇಸ್ ಇತ್ಯರ್ಥ, 204 ಕೇಸ್ ಚಾಲ್ತಿಯಲ್ಲಿವೆ. ಸೈಬರ್ ಕ್ರೈಂ ಕೇಸ್ 21 ಇದರಲ್ಲಿ 4 ಕೇಸ್ ಇತ್ಯರ್ಥ, 17 ಕೇಸ್ ಚಾಲ್ತಿಯಲ್ಲಿವೆ.


ಅಸ್ಸಾ ವ್ಯಕ್ತಿ ಜೊತೆ ಬೆಂಗಳೂರು ಹುಡುಗಿ ಸಹಜೀವನ


ಟೆಕ್ಕಿಗಳಿಬ್ಬರು ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಅಸ್ಸಾಂ ಮೂಲದ ವ್ಯಕ್ತಿಗೆ ಬೆಂಗಳೂರಿನಲ್ಲಿ ಕೆಲಸ‌ ಮಾಡುವ ಯುವತಿ ಜೊತೆ ಲವ್ ಆಗಿತ್ತು. 4 ವರುಷ ಬೆಂಗಳೂರಿನಲ್ಲಿ ಲಿವ್ ಇನ್ ರಿಲೇಷನ್ ಶಿಪ್‌ನಲ್ಲಿ ಇದ್ದ ಜೋಡಿ ಚೆನ್ನಾಗಿಯೇ ಇತ್ತು. ಬಳಿಕ  ತಂದೆಗೆ ಹುಷಾರಿಲ್ಲ ಎಂದು ಯುವತಿಯ 15 ಲಕ್ಷ ಹಣ, ಒಡವೆ ಪಡೆದು ಯುವಕ ಪರಾರಿಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನಂತೆ.


3 ವರ್ಷಕ್ಕೆ ಸಾಕಾಯ್ತು ಪ್ರೀತಿ!


ಯುವ ಜೋಡಿಯೊಂದಕ್ಕೆ ಕಚೇರಿಯಲ್ಲೇ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ಬದಲಾಗಿ ಲಿವ್ ಇನ್ ರಿಲೇಷನ್ ಶುರುವಾಯ್ತು. ಇದಾದ ಮೂರು ವರುಷಕ್ಕೆ ಯುವಕನಿಂದ ಕಿರುಕುಳ ಶುರುವಾಯ್ತು. ಆತನ  ದಬ್ಬಾಳಿಕೆಯಿಂದ ನೊಂದ ಯುವತಿ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.


ಇದನ್ನೂ ಓದಿ: Crime News: ಗಂಡನ ಕೊಲೆ ಮಾಡಿಸಿದ್ದ ಹೆಂಡತಿಗಿದ್ದರು ಬಾಯ್‌ ಫ್ರೆಂಡ್ಸ್! ಪತಿ ಮರ್ಮಾಂಗ ಕತ್ತರಿಸಿದವಳ ಹಿಸ್ಟರಿಯೇ ಭಯಾನಕ!


ವಂಚನೆ ಬಳಿಕ ಮಹಿಳಾ ಆಯೋಗಕ್ಕೆ ದೂರು
ಕಳೆದೆರಡು ವರುಷಕ್ಕೆ ಹೋಲಿಸಿದಲ್ಲಿ ಈ ವರುಷ ವರುಷ ಲಿವ್ ಇನ್ ರಿಲೇಷನ್ ಕೇಸಸ್ ಹೆಚ್ಚು. ವಂಚನೆಗೊಳಗಾದ ನಂತರ ಹೆಣ್ಮಕ್ಕಳು ಆಯೋಗಕ್ಕೆ ದೂರು ಕೊಟ್ಡಿದ್ದಾರೆ. ಆದ್ರೆ ಮದುವೆಯಾದ ಮೇಲೆ ಕಾನೂನಿಗೂ, ಸಹಜೀವನದಲ್ಲಿರುವ ಕಾನೂನು ಬಗ್ಗೆ ತಿಳಿದ ನಂತರ ವಂಚನೆಗೊಳಗಾದ ಯುವತಿಯರು ಜಾಗೃತರಾಗ್ತಿದಾರೆ.

Published by:Annappa Achari
First published: