Twitter Campaign: ಪರಿಷ್ಕೃತ ಶಾಲಾ ಪಠ್ಯ-ಪುಸ್ತಕ ವಿರೋಧಿಸಿ ಟ್ವಿಟರ್‌ನಲ್ಲಿ ಇಂದು ಸಂಜೆ ಅಭಿಯಾನ

ಪಠ್ಯ ಪುಸ್ತಕ ಪರಿಷ್ಕರಣೆ ಖಂಡಿಸಿ ಇಂದು ಟ್ವಿಟರ್‌ನಲ್ಲಿ ಅಭಿಯಾನ ಕೈಗೊಳ್ಳಲಾಗಿದೆ. ಪ್ರಗತಿಪರ ಚಿಂತಕರು, ಹೋರಾಟಗಾರು ಇಂದು ಸಂಜೆ 5 ಗಂಟೆಗೆ ಟ್ವಿಟರ್ ಅಭಿಯಾನ ಕೈಗೊಳ್ಳಲಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ವಿವಾದ (Text Book Controversy) ಜೋರಾಗುತ್ತಿದೆ. ಪಠ್ಯ ಪುಸ್ತಕ ಮರು ಪರಿಷ್ಕರಣೆ (Revised) ಅಸಮರ್ಪಕವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯ ಪುಸ್ತಕ ಜಾರಿಗೆ ತರಬಾರದು ಅಂತ ಆಗ್ರಹಿಸಿ ನಾಡಿನ ಹಲವು ಸಾಹಿತಿಗಳು, ಪ್ರಗತಿಪರ ಚಿಂತಕರು ರಾಜ್ಯ ಸರ್ಕಾರಕ್ಕೆ (State Government) ನಿನ್ನೆ ಪತ್ರ (Letter) ಬರೆದಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲೂ (Social Media) ಅಭಿಯಾನ (Campaign) ಕೈಗೊಳ್ಳಲಾಗಿದೆ. ಇಂದು ಸಂಜೆ 5 ಗಂಟೆಗೆ ಟ್ವಿಟರ್‌ನಲ್ಲಿ (Twitter) #RejectBrahminTextBokks ಎಂಬ ಹ್ಯಾಶ್ ಟ್ಯಾಗ್ ನಡಿ ಅಭಿಯಾನ ಕೈಗೊಳ್ಳಲು ಪ್ರಗತಿಪರ ಚಿಂತಕರು, ಹೋರಾಟಗಾರು ನಿರ್ಧರಿಸಿದ್ದಾರೆ.

ಪರಿಷ್ಕೃತ ಪಠ್ಯ ಪುಸ್ತಕ ವಿರೋಧಿಸಿ ಇಂದು ಅಭಿಯಾನ

ಪಠ್ಯ ಪುಸ್ತಕ ಪರಿಷ್ಕರಣೆ ಖಂಡಿಸಿ ಇಂದು ಟ್ವಿಟರ್‌ನಲ್ಲಿ ಅಭಿಯಾನ ಕೈಗೊಳ್ಳಲಾಗಿದೆ. ಪ್ರಗತಿಪರ ಚಿಂತಕರು, ಹೋರಾಟಗಾರು ಇಂದು ಸಂಜೆ 5 ಗಂಟೆಗೆ ಟ್ವಿಟರ್ ಅಭಿಯಾನ ಕೈಗೊಳ್ಳಲಿದ್ದಾರೆ. ಪಠ್ಯದಲ್ಲಿ ಒಂದು ಜಾತಿಯ ಲೇಖಕರ ವಿಜೃಂಭಣೆ, ಕೇಸರೀಕರಣ ಆಗಿದೆ ಅಂತ ಆರೋಪಿಸಿ, #RejectBrahminTextBokks ಎಂಬ ಹ್ಯಾಶ್ ಟ್ಯಾಗ್ ನಡಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.

ನಿನ್ನೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಸಾಹಿತಿಗಳು

ಪಠ್ಯಪುಸ್ತಕ ಮರು ಪರಿಷ್ಕರಣೆ ಜಾರಿಯಾಗಬಾರದು ಅಂತ ಆಗ್ರಹಿಸಿ ಸುಮಾರು 71ಕ್ಕೂ ಹೆಚ್ಚು ಸಾಹಿತಿಗಳು ರಾಜ್ಯ ಸರ್ಕಾರಕ್ಕೆ ನಿನ್ನೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಕೆ.ಮರುಳಸಿದ್ದಪ್ಪ, ವಿಜಯಾ, ರಾಜೇಂದ್ರ ಚೆನ್ನಿ, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಟಿ.ಆರ್.ಚಂದ್ರಶೇಖರ್, ಹಿ.ಶಿ. ರಾಮಚಂದ್ರೇಗೌಡ, ವಿ.ಪಿ. ನಿರಂಜನಾರಾಧ್ಯ, ಕಾಳೇಗೌಡ ನಾಗವಾರ, ಕುಂ.ವೀರಭದ್ರಪ್ಪ, ರಹಮತ್ ತರಿಕೆರೆ, ವಸಂತ ಬನ್ನಾಡಿ ಸೇರಿದಂತೆ 71 ಮಂದಿ ಒಪ್ಪಿಗೆ ಸೂಚಿಸಿದ್ದರು.

ಇದನ್ನೂ ಓದಿ: Text Book Controversy: "ಮಕ್ಕಳಿಗೆ ಗೋಡ್ಸೆ ಬಗ್ಗೆಯೂ ಪಾಠ ಬರಬಹುದು"! ಪರಿಷ್ಕೃತ ಪಠ್ಯ ವಿರೋಧಿಸಿ ಸರ್ಕಾರಕ್ಕೆ ಸಾಹಿತಿಗಳಿಂದ ಪತ್ರ

ಪತ್ರದಲ್ಲಿ ಸಾಹಿತಿಗಳ ಆರೋಪವೇನಾಗಿತ್ತು?

ಕನ್ನಡ ನಾಡಿನ ಅಸ್ಮಿತೆ, ಕನ್ನಡ ಭಾಷೆಯ ಘನತೆಗಳನ್ನು ಗಾಳಿಗೆ ತೂರುವ ರೋಹಿತ್ ಚಕ್ರತೀರ್ಥರವರ ಸಮಿತಿ, ಅದಕ್ಕೆ ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಲ್ಲೊಬ್ಬರಾದ ಹಡಗೇವಾರ್‌ರವರ 'ನಿಜವಾದ ಆದರ್ಶ ಪುರುಷ ಯಾರಾಗಬೇಕು', ಬನ್ನಂಜೆ ಗೋವಿಂದಾಚಾರ್ಯರವರ 'ಶುಕನಾಸನ ಉಪದೇಶ' ಶತಾವಧಾನಿ ಗಣೇಶ್ ರವರ 'ಶ್ರೇಷ್ಠ ಭಾರತೀಯ ಚಿಂತನೆಗಳು, ಶಿವಾನಂದ ಕಳವೆಯವರ 'ಸ್ವದೇಶಿ ಸೂತ್ರದ ಸರಳ ಹಬ್ಬ' ಪಠ್ಯಗಳನ್ನು ಸೇರಿಸಲಾಗಿದೆ. ಯಾವ ಕಾರಣಕ್ಕೆ ಕನ್ನಡದ ಪ್ರಮುಖ ಲೇಖಕ, ಲೇಖಕಿಯರ ಪಠ್ಯಗಳನ್ನು ಕೈ ಬಿಟ್ಟಿದ್ದಾರೆ ಎನ್ನುವುದಕ್ಕೆ ಯಾವುದೇ ಕಾರಣಗಳನ್ನು ಕೊಟ್ಟಿಲ್ಲ ಅಂತ ಪತ್ರದಲ್ಲಿ ಆರೋಪಿಸಿದ್ದರು.

ಪರಿಷ್ಕೃತ ಪಠ್ಯಕ್ಕೆ ಹೊಸ ಪಾಠಗಳ ಸೇರ್ಪಡೆ

ಇನ್ನು ವಿವಾದದ ನಡುವೆಯೇ ಪರಿಷ್ಕೃತ ಪಠ್ಯ ಪುಸ್ತಕಕ್ಕೆ ಹೊಸ ಪಾಠಗಳನ್ನು ಸೇರ್ಪಡೆ ಮಾಡಲಾಗಿದೆ. ಸಾಮಾಜಿಕ ಹೋರಾಟಗಾರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ‘ತಾಯಿ ಭಾರತಿಯ ಅಮರಪುತ್ರರು’ ಪಾಠ ಸೇರ್ಪಡೆ ಮಾಡಲಾಗಿದೆ. 10ನೇ ತರಗತಿಯ ಕನ್ನಡ ಪಠ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಠ ಸೇರ್ಪಡೆ ಮಾಡಲಾಗಿದೆ.

ಚಕ್ರವರ್ತಿ ಸೂಲಿಬೆಲೆ ಪಾಠ ಸೇರ್ಪಡೆಗೆ ವಿರೋಧ

ಇನ್ನು ಪಠ್ಯಪೂರಕ ಅಧ್ಯಯನಕ್ಕೆ ಭಗತ್ ಸಿಂಗ್ ಪಾಠದ ಜೊತೆ ಚಕ್ರವರ್ತಿ ಸೂಲಿಬೆಲೆ ಪಾಠವನ್ನೂ ಶಿಕ್ಷಣ ಇಲಾಖೆ ಸೇರಿಸಿದೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಚಕ್ರವರ್ತಿ ಸೂಲಿಬೆಲೆಯವರ ಅಧ್ಯಯನ ದಕ್ಷತೆ ಬಗ್ಗೆ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಗತಿಪರರು, ಹಲವು ಸಾಹಿತಿಗಳು ತೀಕ್ಷ್ಮವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Explained: ವಿದ್ಯಾರ್ಥಿಗಳೇ, ಉತ್ತಮ ಕಾಲೇಜು, ಯುನಿವರ್ಸಿಟಿ ಆಯ್ಕೆ ಮಾಡೋದು ಹೇಗೆ ಎಂದು ತಿಳಿಯಿರಿ

ಪಠ್ಯಪುಸ್ತಕ  ಸಮಿತಿ ಹೇಳುವುದೇನು

ವಿವಾದ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪಠ್ಯಪುಸ್ತಕಗಳಲ್ಲಿ ಸಾಕಷ್ಟು ಸುಳ್ಳುಗಳಿರುವುದರಿಂದ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಅವಶ್ಯಕತೆಯಿತ್ತು. 2017 ರಲ್ಲಿ ಬರಗೂರು ರಾಮಚಂದ್ರಪ್ಪ ಅವರು ಪಠ್ಯಪುಸ್ತಕ ಸಮಿತಿಯ ಮುಖ್ಯಸ್ಥರಾಗಿದ್ದಾಗ ಈ ತಪ್ಪುಗಳ ಸೇರ್ಪಡೆಗೊಳಿಸಲಾಗಿತ್ತು. ಇದಕ್ಕೂ ಮೊದಲು ಪಠ್ಯಪುಸ್ತಕಗಳಲ್ಲಿ ಸಮತೋಲಿತ ವಿಷಯಗಳಿದ್ದವು ಅಂತ ಹೇಳಿದ್ದಾರೆ.
Published by:Annappa Achari
First published: