ಕುಮಟಾ, ಉತ್ತರ ಕನ್ನಡ: ಜಿಲ್ಲೆಯ ಕುಮಟಾ (Kumta) ತಾಲೂಕಿನ ಕಲ್ಲಬ್ಬೆ ಗ್ರಾಮ ಪಂಚಾಯ್ತಿ (Kallabbe Grama Panchayti)_ ವ್ಯಾಪ್ತಿಯ ಬೋಗ್ರಿಬೈಲ್ ನಲ್ಲಿ ಗ್ರಾಮಸ್ಥರ ಓಡಾಟಕ್ಕೆ ನಿರ್ಮಾಣವಾದ ಸೇತುವೆ (Bridge) ಜನರು ಬಳಸದೇ ಹಾಳುಗುತ್ತಿದೆ. ಸೇತುವೆಗೆ ಸಂಪರ್ಕ ರಸ್ತೆ ನಿರ್ಮಾಣವಾಗದೆ ಸಾರ್ವಜನಿಕರ ಉಪಯೋಗಕ್ಕೆ (Use) ಬಾರದೆ ನಿರ್ಮಾಣವಾಗಿಯೂ ಯಾವುದೆ ಪ್ರಯೋಜನ ಬಂದಿಲ್ಲ.. ಗ್ರಾಮಸ್ಥರು ಓಡಾಟಕ್ಕೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದುರಂತವೆಂದ್ರೆ ಸೇತುವೆ ನಿರ್ಮಾಣ ಕಾಮಗಾರಿಯಿಂದಾಗಿ ಮಳೆಗಾಲದ (Rainy Season) ಅವಧಿಯಲ್ಲಿ ಗ್ರಾಮಕ್ಕೆ (Village) ನೆರೆಯ (Flood) ಆತಂಕ ಎದುರಾಗುವಂತಾಗಿದ್ದು ಸೇತುವೆ ಪೂರ್ಣಗೊಳಿಸುವಂತೆ ಜನರು ಆಗ್ರಹಿಸುತ್ತಿದ್ದಾರೆ.
ಅಬ್ಬ ಸೇತುವೆ ಏರಲು ಅಡಕೆ ದಬ್ಬೆ ಹಾಕಿ ಮೆಟ್ಟಿಲು ನಿರ್ಮಾಣ!
ಇಂತಹದ್ದೊಂದು ದಯನೀಯ ಪರಿಸ್ಥಿತಿ ಇರೋದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನ ಬೊಗ್ರಿಬೈಲ್ ಗ್ರಾಮದಲ್ಲಿ. ಈ ಗ್ರಾಮದ ಜನರು ನದಿ ದಾಟಲು ದೋಣಿಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಇದ್ದ ಹಿನ್ನಲೆ ಕಳೆದ ಬಾರಿ ಸಿದ್ದರಾಮಯ್ಯ ನವರ ಕಾಂಗ್ರೆಸ್ ಸರಕಾರ ಶಾಶ್ವತ ಸೇತುವೆಯನ್ನ ಮಂಜೂರು ಮಾಡಿತ್ತು. ಆದ್ರೆ ಸೇತುವೆ ಕಾಮಗಾರಿ ಪ್ರಾರಂಭವಾಗಿ ನಾಲ್ಕು ವರ್ಷಗಳೇ ಕಳೆದರೂ ಇದುವರೆಗೂ ಸಹ ಪೂರ್ಣಗೊಳ್ಳದಿರೋದು ಗ್ರಾಮಸ್ಥರಿಗೆ ಸಂಕಷ್ಟ ತಂದೊಡ್ಡಿದೆ.
ಸೇತುವೆಗೆ ನಿರ್ಮಾಣವಾಗಿಲ್ಲ ಸಂಪರ್ಕ ರಸ್ತೆ
ಬೊಗ್ರಿಬೈಲ್ ಗ್ರಾಮದಲ್ಲಿ ಹರಿಯುವ ಅಘನಾಶಿನಿ ನದಿಗೆ ಅಡ್ಡಲಾಗಿ 19.18 ಕೋಟಿ ವೆಚ್ಛದಲ್ಲಿ ಶಾಶ್ವತ ಸೇತುವೆಯನ್ನ ಸರ್ಕಾರ ಮಂಜೂರು ಮಾಡಿತ್ತು. ಸೇತುವೆಯ ಗುತ್ತಿಗೆ ಪಡೆದಿದ್ದ ಡಿಆರ್‌ಎನ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿ 2018ರ ಮಾರ್ಚ್ 19 ರಂದು ಸೇತುವೆ ಕಾಮಗಾರಿಯನ್ನ ಪ್ರಾರಂಭಿಸಿದ್ದು ಸೇತುವೆಯೇನೋ ಪೂರ್ಣಗೊಂಡಿದೆ. ಆದ್ರೆ ಸೇತುವೆಯ ಎರಡೂ ಕಡೆ ಸಂಪರ್ಕ ರಸ್ತೆಯನ್ನೇ ನಿರ್ಮಿಸಿಲ್ಲ.
ಇದನ್ನೂ ಓದಿ: Target Bengaluru: 'ಉಗ್ರರ ರಾಜಧಾನಿ' ಆಗಲಿದೆಯಾ ಬೆಂಗಳೂರು? NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ
ಅಡಿಕೆ ಮರದ ಏಣಿ ನಿರ್ಮಿಸಿಕೊಂಡ ಗ್ರಾಮಸ್ಥರು
ಕಾಮಗಾರಿ ಸ್ಥಗಿತಗೊಳಿಸಿ ವರ್ಷಗಳೇ ಕಳೆದಿದೆ. ಈ ಹಿನ್ನಲೆ ನದಿ ದಾಟಲು ಗ್ರಾಮಸ್ಥರೇ ಅಡಿಕೆ ಮರದ ಏಣಿ ಮಾಡಿ ಸೇತುವೆಯ ಎರಡೂ ಬದಿಗೆ ಸಂಪರ್ಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದ್ರೆ ಸೇತುವೆ ನಿರ್ಮಾಣ ವೇಳೆ ನದಿಗೆ ಅಡ್ಡ ಹಾಕಲಾಗಿದ್ದ ಕಲ್ಲು ಮಣ್ಣಿನಿಂದಾಗಿ ಮಳೆಗಾಲದಲ್ಲಿ ಗ್ರಾಮಕ್ಕೆ ನೆರೆ ಪ್ರವಾಹ ಉಂಟಾಗುವ ಪರಿಸ್ಥಿತಿಯಿದ್ದು ಅಪೂರ್ಣ ಸೇತುವೆಯಿಂದಾಗಿ ಗ್ರಾಮಸ್ಥರು ಸಂಕಷ್ಟ ಅನುಭವಿಸುವಂತಾಗಿದೆ.
ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ...
ಇನ್ನು ಕಲ್ಲಬ್ಬೆ ಪಂಚಾಯತ್ ವ್ಯಾಪ್ತಿಯ ಬೊಗ್ರಿಬೈಲ್ ಹಾಗೂ ಉಪ್ಪಿನಪಟ್ಟಣ ಗ್ರಾಮದ ನಡುವೆ ಹರಿಯುವ ಅಘನಾಶಿನಿ ನದಿ ದಾಟಲು ಹಿಂದಿನಿಂದಲೂ ಗ್ರಾಮಸ್ಥರು ದೋಣಿಯನ್ನ ಬಳಸುತ್ತಿದ್ದರು. ಆದ್ರೆ ಮಳೆಗಾಲದಲ್ಲಿ ನದಿ ಉಕ್ಕಿಹರಿಯುವುದರಿಂದ ಮಳೆಗಾಲದಲ್ಲಿ ಓಡಾಡಲು ಅನುಕೂಲವಾಗಲಿ ಎಂದು ಸೇತುವೆಗೆ ಬೇಡಿಕೆಯಿಡಲಾಗಿತ್ತು.
ಸೇತುವೆಯಿಂದಾಗಿ ಮಳೆಗಾಲದಲ್ಲಿ ಪ್ರವಾಹದ ಆತಂಕ
ಆದ್ರೆ ಇದೀಗ ಅಪೂರ್ಣಗೊಂಡು ನಿಂತಿರುವ ಸೇತುವೆ ಮೇಲೆ ಮಳೆಗಾಲದಲ್ಲಿ ಓಡಾಟ ಸಾಧ್ಯವಿಲ್ಲವಾಗಿದ್ದು ಸೇತುವೆಗೆ ಹಾಕಲಾದ ಕಲ್ಲುಮಣ್ಣಿನಿಂದಾಗಿ ಕಳೆದ ಬಾರಿ ಪ್ರವಾಹ ಸಹ ಎದುರಾಗಿ ನದಿಪಾತ್ರದ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿತ್ತು. ಹೀಗಾಗಿ ಆದಷ್ಟು ಶೀಘ್ರದಲ್ಲಿ ಸೇತುವೆಗೆ ಸಂಪರ್ಕ ರಸ್ತೆಯನ್ನ ನಿರ್ಮಿಸಿಕೊಡಿ ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.
ಇದನ್ನೂ ಓದಿ: Kodagu Rains: ಕೊಡಗಿನಲ್ಲಿ ಈ ವರ್ಷವೂ ಪ್ರವಾಹ, ಭೂಕುಸಿತ ಸಾಧ್ಯತೆ, ಅಪಾಯದಲ್ಲಿ 44 ಗ್ರಾಮ
ಆತಂಕದಲ್ಲೇ ಕಾಲ ಕಳೆಯಬೇಕು ಇಲ್ಲಿನ ಗ್ರಾಮಸ್ಥರು
ಒಟ್ಟಾರೇ ಗುತ್ತಿಗೆದಾರರ ನಿರ್ಲಕ್ಷ್ಯವೋ, ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯೋ ಗ್ರಾಮದಲ್ಲಿ ನಿರ್ಮಾಣವಾಗಿರುವ ಸೇತುವೆ ಮಾತ್ರ ಪೂರ್ಣಗೊಳ್ಳದಿರೋದು ನಿಜಕ್ಕೂ ದುರಂತವೇ. ಇನ್ನೇನು ಮಳೆಗಾಲ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಗ್ರಾಮಸ್ಥರಿಗೆ ನೆರೆ ಆತಂಕ ಎದುರಾಗಿರೋದಂತೂ ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ