Tragedy Friendship: ಸ್ನೇಹಿತರಿಂದ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟಿಸಿಕೊಂಡ ಮರುದಿನವೇ ಕಣ್ಮುಚ್ಚಿದ ಬಾಲಕ!

ಬಾಲಕನಿಗೆ ಫ್ರೆಂಡ್ ಶಿಪ್‌ ಡೇಗೂ ಮುನ್ನಾ ದಿನ ಆತನ ಸ್ನೇಹಿತರು ಶಾಲೆಯ ಆವರಣದಲ್ಲಿ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿದ್ದರು. ಅದಾದ ಮರುದಿನವೇ ಆತ ಕೊನೆಯುಸಿರೆಳೆದಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಪ್ಪಳ: ಸ್ನೇಹ (Friendship) ಮಧುರ ಅಂತಾರೆ. ಸ್ನೇಹಕ್ಕಾಗಿ ಪ್ರಾಣವನ್ನೇ (Live) ಕೊಡುವ ಸ್ನೇಹಿತರೂ (Friends) ಇದ್ದಾರೆ. ಆದ್ರೆ ಇಲ್ಲೊಬ್ಬ ಪುಟ್ಟ ಬಾಲಕ (Small Boy) ಸ್ನೇಹಿತರ ದಿನಾಚರಣೆ (Friendship) ನಡೆದ ಮರುದಿನವೇ ಇಹಲೋಕ ತ್ಯಜಿಸಿದ್ದಾನೆ. ಕೊಪ್ಪಳ (Koppal) ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ನಡೆದಿದೆ. ಫ್ರೆಂಡ್‌ ಶಿಪ್ ಡೇ ದಿನ ಆ ಹುಡುಗ ಸ್ನೇಹಿತರಿಂದ ಫ್ರೆಂಡ್ ಶಿಪ್ ಬ್ಯಾಂಡ್ (Friendship Band) ಕಟ್ಟಿಸಿಕೊಂಡಿದ್ದ. ಅದರ ಮರುದಿನವೇ ಆತ ಕೊನೆಯುಸಿರು (Died) ಎಳೆದಿದ್ದಾನೆ. ಬದುಕಿ ಬಾಳ ಬೇಕಿದ್ದ ಪುಟ್ಟ ಮಗನನ್ನು ಕಳೆದುಕೊಂಡು ತಂದೆ, ತಾಯಿ, ಕಣ್ಣೀರಿಟ್ಟಿದ್ದಾರೆ. ಅತ್ತ ಪುಟ್ಟ ಗೆಳೆಯ ಗೆಳತಿಯರೂ ಕೂಡ ಕಂಬನಿ ಮಿಡಿದಿದ್ದಾರೆ. 

 ಕೊಪ್ಪಳದಲ್ಲಿ ನಡೆಯಿತು ದುರಂತ

ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಇಂತದ್ದೊಂದು ದುರಂತ ನಡೆದು ಹೋಗಿದೆ. ಇಲ್ಲಿನ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದ ಸುಹಾಸ್ ಸೌದ್ರಿ ಎಂಬ ಬಾಲಕನೇ ಫ್ರೆಂಡ್ ಶಿಪ್ ಡೇ ಮರುದಿನ ಸಾವನ್ನಪ್ಪಿದ ಬಾಲಕ. ಈತನಿಗೆ ಫ್ರೆಂಡ್ ಶಿಪ್‌ ಡೇಗೂ ಮುನ್ನಾ ದಿನ ಆತನ ಸ್ನೇಹಿತರು ಶಾಲೆಯ ಆವರಣದಲ್ಲಿ ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿದ್ದರು. ಅದಾದ ಮರುದಿನವೇ ಆತ ಕೊನೆಯುಸಿರೆಳೆದಿದ್ದಾನೆ.

ತೀವ್ರ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕ

ಬಾಲಕ ಸುಹಾಸ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ. ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಆತನನ್ನು ಉಳಿಸಿಕೊಳ್ಳುವುದು ಸಾಧ್ಯವೇ ಇಲ್ಲ ಅಂತ ವೈದ್ಯರು ಕೈಚೆಲ್ಲಿದ್ದರು. ಮನೆಯವರೂ ಅಷ್ಟೇ ಎಲ್ಲಾ ಪ್ರಯತ್ನಗಳನ್ನು ಮಾಡಿ ಹತಾಶರಾಗಿ ಕುಳಿತಿದ್ದರು.

ಇದನ್ನೂ ಓದಿ: Breaking News: ಕನ್ನಡ ಕಿರುತೆರೆ ನಟ ಚಂದನ್‌ಗೆ ಕಪಾಳಮೋಕ್ಷ! ತೆಲುಗು ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ಕಿರಿಕ್

ಶಾಲೆ ಮತ್ತು ಸ್ನೇಹಿತರನ್ನು ನೋಡಬೇಕು ಎಂದಿದ್ದ ಬಾಲಕ

ಕಿಡ್ನಿ ವೈಫಲ್ಯದಿಂದ ಇನ್ನೇನು ಸಾವು ಸಮೀಪಿಸುತ್ತಿದೆ ಎನ್ನುವಾಗ ಬಾಲಕ ಸುಹಾಸ್ ಮನೆಯವರ ಬಳಿ ತನ್ನ ಆಸೆ ಹೇಳಿಕೊಂಡಿದ್ದಾನೆ. ಅದೇನಪ್ಪಾ ಅಂದ್ರೆ ಕೊನೆಯದಾಗಿ ತಾನು ನನ್ನ ಸ್ನೇಹಿತರು ಹಾಗೂ ತಾನು ಕಲಿತ ಶಾಲೆಯನ್ನು ನೋಡಬೇಕು ಅಂತ ಹೇಳಿದ್ದಾನೆ.

ಶಾಲೆಗೆ ಕರೆದುಕೊಂಡು ಬಂದಿದ್ದ ಪಾಲಕರು

ಸುಹಾಸ್​ ಸೌದ್ರಿಗೆ ಬಾಲ್ಯದಿಂದಲೂ ಕಿಡ್ನಿ ಸಮಸ್ಯೆ ಇತ್ತು. ಕಳೆದ ಒಂದು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದನು. ಇನ್ನೇನು ತನ್ನ ಅಂತಿಮ ಕಾಲ ಹತ್ತಿರ ಬಂದಿದೆ ಎಂದು ಆತನಿಗೆ ಅನ್ನಿಸಿತ್ತೋ ಏನೋ, ತೀವ್ರ ಅನಾರೋಗ್ಯದ ನಡುವೆಯೂ ಶಾಲೆ, ಶಿಕ್ಷಕರು, ಸ್ನೇಹಿತರನ್ನು ನೆನೆಪಿಸಿಕೊಂಡಿದ್ದ ಸುಹಾಸ್. ಇದೇ ಕಾರಣಕ್ಕೆ ಆತನನ್ನು ಜುಲೈ 30ರಂದು ಶಾಲೆಗೆ ಕರೆದುಕೊಂಡು ಬಂದಿದ್ದರು ಪಾಲಕರು.

ಫ್ರೆಂಡ್ ಶಿಪ್ ಬೆಲ್ಟ್ ಕಟ್ಟಿ ಅಂತಿಮ ವಿದಾಯ ಹೇಳಿದ್ದ ಸ್ನೇಹಿತರು

ಬಾಲಕ ಶಾಲೆಗೆ ಬರುತ್ತಿದ್ದಂತೆ ಶಾಲೆ ಹಾಗೂ ಸ್ನೇಹಿತರನ್ನು ನೋಡಿ ಕಣ್ತುಂಬಿಕೊಂಡಿದ್ದಾನೆ. ಈ ವೇಳೆ ಶಾಲಾ ಆವರಣದಲ್ಲಿ ಕಾರಿನಲ್ಲಿಯೇ ಮಲಗಿ ಎಲ್ಲವನ್ನೂ ನೋಡಿದ್ದಾನೆ. ಈ ವೇಳೆ ಸುಹಾಸ್​ ಬಳಿ ಬಂದ ಸ್ನೇಹಿತರು ನಾ ಮುಂದು ತಾ ಮುಂದು ಅಂತ ಆತನಿಗೆ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟಿದ್ದಾರೆ. ಬಳಿಕ ಕಣ್ಣೀರಿಡುತ್ತಾ ಅಂತಿಮ ವಿದಾಯ ಹೇಳಿದ್ದಾರೆ.

ಇದನ್ನೂ ಓದಿ: Chandan Kumar: ತೆಲುಗು ಶೂಟಿಂಗ್ ಸೆಟ್‌ನಲ್ಲಿ ಕಿರಿಕ್ ಆಗಿದ್ದೇಕೆ? ಗಲಾಟೆ ಬಗ್ಗೆ ಚಂದನ್ ಕುಮಾರ್ ರಿಯಾಕ್ಷನ್

ಮರುದಿನ ಪ್ರಾಣ ಬಿಟ್ಟ ಬಾಲಕ ಸುಹಾಸ್

ಇನ್ನು ತೀವ್ರ ಅನಾರೋಗ್ಯವಾಗಿ ಫ್ರೆಂಡ್‌ ಶಿಪ್ ಡೇ ಮರುದಿನವೇ ಬಾಲಕ ಸುಹಾಸ್ ಕೊನೆಯುಸಿರು ಎಳೆದಿದ್ದಾನೆ. ಬದುಕಿ ಬಾಳ ಬೇಕಿದ್ದ ಪುಟ್ಟ ಮಗನನ್ನು ಕಳೆದುಕೊಂಡು ತಂದೆ, ತಾಯಿ, ಪೋಷಕರು, ಕುಟುಂಬಸ್ಥರು, ಸಂಬಂಧಿಕರೆಲ್ಲ ಕಣ್ಣೀರಿಟ್ಟಿದ್ದಾರೆ. ಅತ್ತ ಶಾಲೆಯಲ್ಲೂ ವಿದ್ಯಾರ್ಥಿಗಳು, ಶಿಕ್ಷಕರು ಮೃತ ಬಾಲಕ ಸುಹಾಸ್‌ ಸಾವಿಗೆ ಕಂಬನಿ ಮಿಡಿದಿದ್ದಾರೆ.
Published by:Annappa Achari
First published: