Selfie Suicide: ಹುಡುಗಿ ಕೈಕೊಟ್ಟಳು ಅಂತ ವಿಷ ಕುಡಿದ ಯುವಕ! ಸೆಲ್ಫಿ ವಿಡಿಯೋ ಮಾಡಿ ಸೂಸೈಡ್‌

ದಿಲೀಪ್ ಬೆಂಗಳೂರಿನಿಂದ ಆನವಟ್ಟಿಯ ತಲ್ಲೂರು ಗ್ರಾಮಕ್ಕೆ ಬಂದಿದ್ದಾನೆ. ಅಷ್ಟರೊಳಗೆ ತನ್ನ ಪ್ರಿಯತಮೆಯ ವಿವಾಹವಾಗಿರುವುದು ಅವನಿಗೆ ತಿಳಿಯುತ್ತದೆ.  ಇದರಿಂದ ಮನನೊಂದು ದಿಲೀಪ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ. 

ಆತ್ಮಹತ್ಯೆ ಮಾಡಿಕೊಂಡ ದಿಲೀಪ್

ಆತ್ಮಹತ್ಯೆ ಮಾಡಿಕೊಂಡ ದಿಲೀಪ್

  • Share this:
ಶಿವಮೊಗ್ಗ: ಪರಸ್ಪರ ಪ್ರೀತಿಸಿ (Love), ಪೋಷಕರ ಒತ್ತಡಕ್ಕೆ ಮಣಿದು ಕಳೆದೊಂದು ತಿಂಗಳ ಹಿಂದೆ ತವರಿಗೆ ಮರಳಿದ್ದ ಯುವತಿ (Girl), ಪ್ರಿಯಕರನಿಂದ (Lover) ಅಂತರ ಕಾಯ್ದುಕೊಂಡಿದ ಹಿನ್ನೆಲೆಯಲ್ಲಿ ಮನನೊಂದ ಯುವಕನೋರ್ವ (Boy) ಸೆಲ್ಫಿ ವಿಡಿಯೋ (Selfie Video) ಮಾಡಿಟ್ಟು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ಇಂಥದ್ದೊಂದು ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಸೊರಬ (Soraba) ತಾಲೂಕಿನಲ್ಲಿ ನಡೆದಿದೆ. ಬೆಂಗಳೂರಿನ (Bengaluru) ಗಾರ್ಮೆಂಟ್ಸ್‌ವೊಂದರಲ್ಲಿ (Garments) ಅಸಿಸ್ಟೆಂಟ್ ಕ್ವಾಲಿಟಿ ಮ್ಯಾನೇಜರ್ (Assistant Quality Manager) ಆಗಿ ಕೆಲಸ (Work) ಮಾಡಿಕೊಂಡಿದ್ದ 26 ವರ್ಷದ ದಿಲೀಪ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ದಿಲೀಪ್ ಬೆಂಗಳೂರಿನಿಂದ ಆನವಟ್ಟಿಯ ತಲ್ಲೂರು ಗ್ರಾಮಕ್ಕೆ ಬಂದಿದ್ದಾನೆ. ಅಷ್ಟರೊಳಗೆ ತನ್ನ ಪ್ರಿಯತಮೆಯ ವಿವಾಹವಾಗಿರುವುದು (Marriage) ಅವನಿಗೆ ತಿಳಿಯುತ್ತದೆ.  ಇದರಿಂದ ಮನನೊಂದು ದಿಲೀಪ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ. ಯುವತಿ ವಾಸವಿರುವ ಸೊರಬ ತಾಲ್ಲೂಕಿನ ಬೆಟ್ಟದಕೂರ್ಲಿ ಗ್ರಾಮಕ್ಕೆ ತೆರಳಿ, ಅಲ್ಲಿನ ಕೆರೆ ಏರಿ ಮೇಲೆ ವಿಷ (Poison) ಕುಡಿದು ಒದ್ದಾಡತೊಡಗಿದ್ದಾನೆ. ಬಳಿಕ ಆಸ್ಪತ್ರೆಗೆ (Hospital) ಸೇರಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಪರಸ್ಪರ ಪ್ರೀತಿಸಿ ದೂರವಾಗಿದ್ದ ಪ್ರೇಮಿಗಳು

ದಿಲೀಪ್ (26) ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆಯವನಾಗಿದ್ದು, ಅದೇ ಗಾರ್ಮೆಟ್ಸ್‌ನಲ್ಲಿ ಸ್ಯಾಂಪಲ್ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆಟ್ಟದ ಕೂರ್ಲಿಯ ಯುವತಿಯೊಂದಿಗೆ ಪರಸ್ಪರ ಪರಿಚಯವಾಗಿ ಬಳಿಕ ಅದು ಪ್ರೀತಿ-ಪ್ರೇಮಕ್ಕೆ ತಿರುಗುತ್ತಂತೆ. ದಿಲೀಪ್ ಮತ್ತು ಯುವತಿ (26) ಇಬ್ಬರೂ ಅನ್ಯೋನ್ಯವಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ದಿಲೀಪ್ ಮನೆಯಲ್ಲಿ ಪೋಷಕರು ಈ ಸಂಬಂಧವನ್ನು ಒಪ್ಪದ ಕಾರಣ, ಜನವರಿ 2, 2024 ರಂದು ದಿಲೀಪ್ ತನ್ನ ಪ್ರೇಯಸಿಗಾಗಿ ಪೋಷಕರೊಂದಿಗೆ ಸಂಬಂಧವನ್ನೇ ಕಡಿದುಕೊಂಡು ಬಂದಿದ್ದನಂತೆ.

ದಿಲೀಪ್‌ನಿಂದ ಅಂತರ ಕಾಯ್ದುಕೊಂಡ ಯುವತಿ

ಹೀಗೆ ಪ್ರಾಣಕ್ಕಿಂತ ಹೆಚ್ಚಾಗಿ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ತನ್ನ ಪ್ರೇಯಸಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಿರಲಿ ಎಂದು ದಿಲೀಪ್ ಹಗಲೂ ರಾತ್ರಿಯೆನ್ನದೆ ಕೆಲಸ ಮಾಡಿ ಕೈತುಂಬಾ ಹಣ ಸಂಪಾದಿಸುತ್ತಿದ್ದನಂತೆ. ಆದರೆ, ನಂತರದ ದಿನಗಳಲ್ಲಿ ಯುವತಿಗೆ ಏನಾಯಿತೋ ಗೊತ್ತಿಲ್ಲ ತಾಯಿಗೆ ಅನಾರೋಗ್ಯದ ನೆಪ ಹೇಳಿ ಬೆಂಗಳೂರಿನಿಂದ ತವರಿಗೆ ಬಂದಿದ್ದಾಳೆ.  ಅಲ್ಲದೆ, ದಿಲೀಪ್ ನೊಂದಿಗೆ ಅಂತರ ಕಾಯ್ದುಕೊಂಡಿದ್ದಳಂತೆ.

ಇದನ್ನೂ ಓದಿ: Couple Reunited: ಯೌವ್ವನದಲ್ಲಿ ವಿಚ್ಛೇದನ, 52 ವರ್ಷಗಳ ಬಳಿಕ ದಂಪತಿಯನ್ನು ಒಂದು ಮಾಡಿದ ಕೋರ್ಟ್

ಆತ್ಮಹತ್ಯೆಗೆ ನಿರ್ಧರಿಸಿದ ದಿಲೀಪ್

ಯುವತಿಗೆ ಅದೇ ಊರಿನ ಬೇರೊಬ್ಬನೊಂದಿಗೆ ಮೇ 20 ರಂದು ಮದುವೆಯಾಗಿರುವ ವಿಷಯ ತಿಳಿದ ದಿಲೀಪ್ ಬೆಂಗಳೂರಿನಿಂದ ಆನವಟ್ಟಿಯ ತಲ್ಲೂರು ಗ್ರಾಮಕ್ಕೆ ಬಂದಿದ್ದಾನೆ. ಅಷ್ಟರೊಳಗೆ ತನ್ನ ಪ್ರಿಯತಮೆಯ ವಿವಾಹವಾಗಿರುವುದು ಅವನಿಗೆ ತಿಳಿಯುತ್ತದೆ.  ಇದರಿಂದ ಮನನೊಂದು ದಿಲೀಪ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ.

ಆಸ್ಪತ್ರೆಗೆ ಸೇರಿಸಿದ್ರೂ ಚಿಕಿತ್ಸೆ ಫಲಿಸದೇ ಸಾವು

ಯುವತಿ ವಾಸವಿರುವ ಸೊರಬ ತಾಲ್ಲೂಕಿನ ಬೆಟ್ಟದಕೂರ್ಲಿ ಗ್ರಾಮಕ್ಕೆ ತೆರಳಿ, ಅಲ್ಲಿನ ಕೆರೆ ಏರಿ ಮೇಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲಿನ ಸ್ಥಳಿಯರು ಆಕಸ್ಮಿಕವಾಗಿ ದಿಲೀಪ್ ಬಿದ್ದಿರುವುದನ್ನು ನೋಡಿದ್ದಾರೆ. ಪಕ್ಕದ ವಿಷದ ಬಾಟಲಿಯನ್ನು ನೋಡಿ ತಕ್ಷಣ ದಿಲೀಪ್‌ನನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಆತ ಬದುಕುಳಿಯಲಿಲ್ಲ.

ಇದನ್ನೂ ಓದಿ: Corona: ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ ಕೊರೊನಾ! ಮಾಸ್ಕ್​ ಹಾಕದಿದ್ರೆ ಮತ್ತೆ ಬೀಳುತ್ತೆ ದಂಡ?

ವೈರಲ್ ಆದ ಸೆಲ್ಫಿ ವಿಡಿಯೋ

ಸದ್ಯ ಯುವಕ ರೆಕಾರ್ಡ್ ಮಾಡಿರುವ ಸೆಲ್ಫಿ ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ವರದಿ: ವಿನಯ್ ಕುಮಾರ್ ಟಿ.ಆರ್‌.)
Published by:Annappa Achari
First published: