Power Cut: ಒಂದಿನ ಅಲ್ಲಾ, ಎರಡು ದಿನ ಅಲ್ಲ, 3 ತಿಂಗಳಿಂದ ಈ ಗ್ರಾಮದಲ್ಲಿ ಕರೆಂಟ್ ಇಲ್ಲ!

ಅದು ಗಡಿನಾಡಿನಲ್ಲಿ ವಿದ್ಯುತ್ ಇಲ್ಲದೇ ಪರದಾಡುತ್ತಿರುವ ಗ್ರಾಮ! ಕಳೆದ ಎರಡ್ಮೂರ ತಿಂಗಳುಗಳಿಂದ ಕತ್ತಲಲ್ಲಿ ಕಾಲ ಕಳೆಯುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು! ಹಾಗಾದ್ರೆ ಈ ಗ್ರಾಮ ಯಾವುದು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೀದರ್: ಅದು ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಗ್ರಾಮ. ಆ ಗ್ರಾಮದಲ್ಲಿನ (Village) ಜನ್ರ ಕಷ್ಟ ಹೇಳತಿರದಾಗಿದೆ. ಸ್ವಾಮಿ ಕರೆಂಟಿಗಾಗಿ (Power) ಎಲ್ಲವನ್ನು ತ್ಯಾಗ ಮಾಡಲಾಗುತ್ತಿದೆ. ಅಲೆದಲೆದು ಬದುಕು ಮುಗಿಯುತ್ತಿದೆ ಹೊರತು, ಗ್ರಾಮಕ್ಕೆ ವಿದ್ಯುತ್‌ ಬರುತ್ತಿಲ್ಲ. ಆ ಗ್ರಾಮಕ್ಕೆ ಮೂಲ ಭೂತ ಸೌಕರ್ಯದಿಂದ ತಡಕಾಡುತ್ತಿರುವ ಅಲ್ಲಿನ ಕುಟುಂಬಗಳಿಗೆ (Family) ಬದುಕುವುದೇ ದೊಡ್ಡ ಸಾಹಸವಾಗಿದೆ. ಇತ್ತ ಬದುಕಲು ಆಗುತ್ತಿಲ್ಲ, ಅತ್ತ ಗ್ರಾಮವನ್ನು ಬಿಟ್ಟು ಹೋಗಲೂ ಆಗುತ್ತಿಲ್ಲ. ಬೆಳಕಿಲ್ಲದೇ (Light) ಕತ್ತಲಿನಲ್ಲೇ ಬದುಕುವ ಅನಿವಾರ್ಯತೆ ಬಂದೊದಗಿದೆ. ಈ ಎಲ್ಲ ದೃಶಗಳು ಕಂಡು ಬರೋದು ಬೀದರ್‌ (Bidar) ಜಿಲ್ಲೆಯ ಬಾಲ್ಕಿ ತಾಲೂಕಿನ ನೆಳಗಿ ಗ್ರಾಮದಲ್ಲಿ.

  2-3 ತಿಂಗಳಿಂದ ಕತ್ತಲೆಯಲ್ಲೇ ಬದುಕು

  ಕಳೆದ ಎರಡ್ಮೂರು ತಿಂಗಳುಗಳಿಂದ ಕತ್ತಲಲ್ಲಿ ಕಾಲ ಕಳೆಯುತ್ತಿರುವ ಗ್ರಾಮಸ್ಥರು, ವಿದ್ಯುತ್ ಇಲ್ಲದೆ ಪ್ರತಿನಿತ್ಯವೂ ನರಕ ಯಾತನೆ ಅನುಭವಿಸುತ್ತಿದ್ದಾರೆ. ಹಲವಾರು ಕುಟುಂಬಗಳು ಕರೆಂಟ್ ಇಲ್ಲದೆ ಜೀವನ ಮಾಡುವುದು ಕಷ್ಟಕರವೆಂದು ಕಣ್ಣೀರು ಹಾಕುತ್ತಿವೆ. ಗ್ರಾಮದ ಮಹಿಳೆಯರು ಗ್ರಾಮದಲ್ಲಿ ವಿದ್ಯುತ್ ಇಲ್ಲದೆ  ಮಕ್ಕಳ ವಿದ್ಯಾಬ್ಯಾಸಕ್ಕೂ ತೊಂದರೆಯಾಗುತ್ತಿದೆ. ಕರೆಂಟ್ ಇಲ್ಲದೆ ಕುಡಿಯುವ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಕ್ಯಾಂಡಲ್ ಹಚ್ಚಿ ಜೀವನ ಮಾಡುವಂತಹ ಸ್ಥಿತಿ ಬಂದೊದಗಿದೆ ಅಂತ ಹೇಳುತ್ತಿದ್ದಾರೆ.

  ವಿದ್ಯುತ್‌ ಇಲ್ಲದೇ ತೊಂದರೆ


  ರಾತ್ರಿಯಲ್ಲಿ ಬದುಕು ಇನ್ನೂ ಕಷ್ಟ

  ಕತ್ತಲು ಆದ್ರೆ ಸಾಕು ವಿಷ ಜಂತು ಗ್ರಾಮದೊಳಗೆ ಬರಲು ಪ್ರಾರಂಭಿಸುತ್ತ.ವೆ ಕತ್ತಲಲ್ಲಿ ಬರುವ ವಿಷ ಜಂತು ಗಳಿಂದ ಸಾಕಷ್ಟು ಭಯವಾಗುತ್ತದೆಂದು ಗ್ರಾಮದ ಮಹಿಳೆಯರು ಅಳಲು. ಸುಮಾರು 50 ರಿಂದ 60 ವರ್ಷಗಳ ವರೆಗೆ  ಇದೆ ಸ್ಥಳಗಳಲ್ಲಿ ಜೀವನ ನಡೆಸುತ್ತಾ ಬಂದಿದ್ದು ಈಗ ಕರೆಂಟ್ ಎಕಾಏಕಿ ಕಟ್ ಮಾಡಿ ನಮಗೆ ಕತ್ತಲಲ್ಲಿ ಬದುಕುವಂತೆ ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ರು.

  ಗ್ರಾಮದಲ್ಲಿಲ್ಲ ವಿದ್ಯುತ್


  ಇದನ್ನೂ ಓದಿ: Bidnal: ಈ ಹಳ್ಳಿಯಲ್ಲಿರುವ ಸ್ವತಂತ್ರ ವೃಕ್ಷದ ಮಹತ್ವವೇನು? ಸ್ವಾತಂತ್ರ್ಯೋತ್ಸವದಂದು ಇಲ್ಲಿ ಹಬ್ಬದ ಸಂಭ್ರಮವೇಕೆ?

  ಜನನಾಯಕರು, ಅಧಿಕಾರಿಗಳ ವಿರುದ್ಧ ಆಕ್ರೋಶ

  ಇನ್ನು ಇಲ್ಲಿಂದ ನಾವು  ಎಲ್ಲಿಗೆ ಹೋಗಬೇಕು ನಮ್ಮ ಜಮೀನುಗಳು ಇಲ್ಲಿಯೇ ಇವೆ  ಬದುಕಿದ್ರೆ ಇಲ್ಲಿಯೇ ಬದುಕುತ್ತವೆಂದು ಪಟ್ಟು ಹಿಡಿದ ಗ್ರಾಮದ ಮಹಿಳೆಯರು, ನಮ್ಮ ಕತ್ತಲಲ್ಲಿನ ಬದುಕಿಗೆ ಜನ ಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಯಾರು ಕೂಡಾ  ಇತ್ತ ತಿರುಗಿಯು ನೋಡುತ್ತಿಲ್ಲ ನಮ್ಮ ಮಕ್ಕಳು ವಿದ್ಯಾಬ್ಯಾಸ  ಮಾಡಬೇಕೆಂದರೆ ಅದು ಹಗಲೊತ್ತಿನಲ್ಲಿ ವಿದ್ಯಾಬ್ಯಾಸ ಮಾಡಬೇಕು ಮನೆ ಮನೆಗೆ ವಿದ್ಯುತ್ ಮೀಟರ್ ಗಳನ್ನು ಅಳವಡಿಸಲಾಗಿದೆ ಆದ್ರೂ ಕೂಡ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಸಮರ್ಪಕವಾಗಿ ವಿದ್ಯುತ್ ಬಿಲ್ಲುಗಳನ್ನು ಕಟ್ಟಲಾಗುತ್ತದೆ ಹೀಗಿದ್ದರೂ ಕೂಡ ಅಧಿಕಾರಿಗಳು ಕರೆಂಟ್ ಕಟ್ಟ ಮಾಡಿದ್ದು ಎಷ್ಟು ಸರಿ..? ಅಂತ ಪ್ರಶ್ನಿಸ್ತಾರೆ.

  ಮಹಿಳೆಯರಿಗೆ ಸಂಕಷ್ಟ


  ಅಧಿಕಾರಿಗಳ ನಿರ್ಲಕ್ಷ್ಯ

  ಸುಮಾರು 120 ಜನ್ರು ಇರುವ ಈ ಸಣ್ಣ ಗ್ರಾಮದಲ್ಲಿ ಸಣ್ಣ ಪುಟ್ಟ ಮಕ್ಕಳು  ವೃದ್ಧರು ಇರುವ ಗ್ರಾಮದಲ್ಲಿ ಕತ್ತಲಲ್ಲಿ ಜೀವನ ಮಾಡುವುದು ದುಸ್ತರವಾಗಿದೆಂದು ಅಳಲು ತೊಡಿಕೊಂಡಿದ್ದಾರೆ. ನಮಗೆ ಕರೆಂಟ್ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಕಣ್ಣೀರು ಹಾಕಿದ್ದಾರೆ. ಹಲವಾರು ಬಾರಿ ಆಡಳಿತ ವರ್ಗದ ಗಮನಕ್ಕೆ ತಂದ್ರೂ ಕೂಡಾ ಇಲ್ಲಿ ಯಾವುದೆ ರೀತಿಯಲ್ಲಿ ಪ್ರಯೋಜನ ಆಗಿಲ್ಲ.

  ಇದನ್ನೂ ಓದಿ: Bengaluru To Mangaluru: ಬೆಂಗಳೂರು-ಮಂಗಳೂರು ಪ್ರಯಾಣಿಕರಿಗೆ ಸಿಹಿಸುದ್ದಿ!

  ನಮ್ಮ ಬದುಕು ದಿನದಿಂದ ದಿನಕ್ಕೆ ಅಂಧಕಾರದಲ್ಲಿ ಮುಳುಗುತ್ತಿದೆ. ಆದರೂ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಅಧಿಕಾರಿಗಳು ಗಾಢನಿದ್ರೆಯಲ್ಲಿದ್ದಾರೆ. ಹೀಗಾಗಿ ಬಡವರ ಕೂಗೂ ಅಧಿಕಾರಿಗಳಿಗೆ ಹಾಗೂ ಆಡಳಿತ ವರ್ಗಕ್ಕೆ ಕೇಳುತ್ತಿಲ್ಲ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ನಮ್ಮ ಸಮಸ್ಯೆ ಬಗೆಹರಿಸುಬೇಕು ಅಂತ ಜನ ಆಗ್ರಹಿಸಿದ್ದಾರೆ.

  (ವರದಿ: ಚಮನ್‌ ಹೊಸಮನಿ, ನ್ಯೂಸ್‌ 18 ಕನ್ನಡ, ಬೀದರ್)
  Published by:Annappa Achari
  First published: