ಬೆಂಗಳೂರು: ಭಾನುವಾರ ಸುರಿದ ಮಳೆ (Bengaluru) ಎರಡನೇ ಬಲಿ ಪಡೆದುಕೊಂಡಿದೆ. ಭಾನುವಾರ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದೆ. 27 ವರ್ಷದ ಲೋಕೇಶ್ ಮೃತ ಯುವಕ. ಜೋರು ಮಳೆ ವೇಳೆ ಕೆಪಿ ಅಗ್ರಹಾರದ (KP Agrahara) ರಾಜಕಾಲುವೆಯಲ್ಲಿ ಲೋಕೇಶ್ ಕೊಚ್ಚಿ ಹೋಗಿದ್ದರು. ಇಂದು ಬ್ಯಾಟರಾಯನಪುರದ ರಾಜಕಾಲುವೆ ಬಳಿ ಲೋಕೇಶ್ ಮೃತದೇಹ ಪತ್ತೆಯಾಗಿದೆ. ಮಳೆ ಹಿನ್ನೆಲೆ ನೀರಿನ ಆಳ ಎಷ್ಟಿದೆ ಅಂತ ನೋಡಲು ಲೋಕೇಶ್ ಹೋಗಿದ್ದರು. ಈ ವೇಳೆ ಅಲ್ಲಿ ಅಪಾಯವಿದೆ ಬೇಡ ಎಂದು ಹೇಳಿದರೂ ಯಾರ ಮಾತನ್ನು ಸಹ ಲೆಕ್ಕಿಸದೇ ಲೋಕೇಶ್ ನೀರಿಗೆ ಇಳಿದಿದ್ದರು. ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿದ ಅಮಲಿನಲ್ಲಿ ಹೋಗಿ ಬಿದ್ದಿರುವ ಶಂಕೆ?
ನಿನ್ನೆ ಸಂಜೆ ರಾಜಕಾಲುವೆ ಅಕ್ಕಪಕ್ಕದ ಬಿಲ್ಡಿಂಗ್ ನವರು ಹೋಗಬೇಡ ಅಂದಿದ್ದಾರೆ. ಆದ್ರೂ ಅವರ ಮಾತು ಕೇಳದೆ ನೀರಿನ ಆಳ ನೋಡ್ತೀನಿ ಅಂತ ಹೋಗಿದ್ದಾನೆ. ಈ ವೇಳೆ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದಾನೆ. ಈ ಸಮಯದಲ್ಲಿ ಲೋಕೇಶ್ ಪಾನಮತ್ತನಾಗಿದ್ದರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದ ಕೆ.ಆರ್.ವೃತ್ತದ ಅಂಡರ್ ಪಾಸ್ನಲ್ಲಿ ಮಳೆನೀರಿಗೆ ಸಿಲುಕಿ 22 ವರ್ಷದ ಯುವತಿ ಸಾವನ್ನಪ್ಪಿದ್ದಾರೆ.
ಮೃತ ಭಾನು ರೇಖಾ ಇನ್ಫೋಸಿಸ್ ಉದ್ಯೋಗಿ ಆಗಿದ್ದು, ವೀಕೆಂಡ್ ಹಿನ್ನಲೆ ಕುಟುಂಬಸ್ಥರ ಜೊತೆ ಸುತ್ತಾಡಲು ಹೋಗಿದ್ರು. ಏಕಾಏಕಿ ಬಂದ ಮಳೆಗೆ ಯುವತಿ ಸೇರಿ 6 ಮಂದಿ ಕುಟುಂಬಸ್ಥರು ಮಳೆಯಲ್ಲಿ ಅಂಡರ್ಪಾಸ್ನಲ್ಲಿ ಸಿಲುಕಿದ್ರು.
ಇದನ್ನೂ ಓದಿ: Underpass Tragedy: ಮೃತ ಟೆಕ್ಕಿ ಅಣ್ಣನಿಂದ ದೂರು; ಯಾರೆಲ್ಲಾ ವಿರುದ್ಧ FIR ದಾಖಲು?
ತಕ್ಷಣ ಆರು ಮಂದಿಯನ್ನ ರಕ್ಷಿಸಲಾಗಿದ್ದು, ಯುವತಿ ಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆಗೆಂದು ಯುವತಿಯನ್ನ ಆಸ್ಪತ್ರೆಗೆ ಸೇರಿಸಲಾಯ್ತು.. ಆದ್ರೆ ದುರಾದೃಷ್ಟವಶಾತ್ ಯುವತಿ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ