ಸಿಡಿ ಪ್ರಕರಣ ಬಯಲಾದ 24 ಗಂಟೆಯೊಳಗೆ ನೈತಿಕವಾಗಿ ರಾಜೀನಾಮೆ ಪಡೆಯುವುದು ಬಿಜೆಪಿ ಮಾತ್ರ; ಅರುಣ್ ಸಿಂಗ್

ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅರುಣ್ ಸಿಂಗ್, ಯತ್ನಾಳ್ ಹೇಳಿಕೆಗಳನ್ನು ನಾನಾಗಲೀ, ನಮ್ಮ ಕಾರ್ಯಕರ್ತರಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಯತ್ನಾಳ್ ಹೇಳಿಕೆಗಳ ಬಗ್ಗೆ ಮಾತಾಡೋದನ್ನು ನೀವು ಬಿಡಿ. ಯತ್ನಾಳ್ ಮಾತ್ರ ಈ ತರಹದ ಹೇಳಿಕೆಗಳನ್ನು ನಿಲ್ಲಿಸಲ್ಲ. ಅವರು ಮಾತಾಡುತ್ತಲೇ ಇರ್ತಾರೆ  ಎಂದು ವ್ಯಂಗ್ಯವಾಡಿದರು. ಯತ್ನಾಳ್ ಗೆ ಪಕ್ಷದಲ್ಲಿ ಕೆಲವರ ಬೆಂಬಲ ಇದೆಯಾ? ಎಂಬ ಪ್ರಶ್ನೆಗೆ ಇರಬಹುದು ಎಂದು ಅರುಣ್ ಸಿಂಗ್ ಪ್ರತಿಕ್ರಿಯಿಸಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

 • Share this:
  ಬೆಂಗಳೂರು:  ಸಿಡಿ ಪ್ರಕರಣ ಬಯಲಾದ 24 ಗಂಟೆಯೊಳಗೆ ಬಿಜೆಪಿಯಲ್ಲಿ ನೈತಿಕವಾಗಿ ರಾಜೀನಾಮೆ ಪಡೆಯಲಾಗುತ್ತೆ. ಆರೋಪ ಬಂದಾಗ ನೈತಿಕವಾಗಿ ಸ್ವತಃ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಕಾಂಗ್ರೆಸ್ ಆಗ್ರಹಿಸದಿದ್ದರೂ ರಮೇಶ್ ಜಾರಕಿಹೊಳಿ ನೈತಿಕವಾಗಿ ರಾಜೀನಾಮೆ ಕೊಟ್ಟಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಆದರೆ‌ ಕಾಂಗ್ರೆಸ್ ಈ ವಿಚಾರದಲ್ಲಿ ಗೊಂದಲ‌ ಸೃಷ್ಟಿಸುತ್ತಿದೆ. ಕಾಂಗ್ರೆಸ್ ಜನತೆಗೆ ಸುಳ್ಳು ಮಾಹಿತಿ‌ ಕೊಡುತ್ತಿದೆ. ಕಾಂಗ್ರೆಸ್ ಷಡ್ಯಂತ್ರ ಹೆಣೆಯೋದು, ಸುಳ್ಳು ಹೇಳೋದು, ಭ್ರಷ್ಟಾಚಾರ ನಡೆಸುವುದರಲ್ಲಿ ತೊಡಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

  ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಅರುಣ್ ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿಡಿ ಪ್ರಕರಣದಲ್ಲಿ ಆರೋಪ ಕೇಳಿಬಂದ ಕೂಡಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಲಾಯ್ತು. ಆರೋಪ ಬಂದ ತಕ್ಷಣ ಈ ತರ ರಾಜೀನಾಮೆ ಬಿಜೆಪಿಯಲ್ಲಿ ಮಾತ್ರ ಪಡೆಯೋದು. ಕಾಂಗ್ರೆಸ್ ನಲ್ಲಿ ಇಂಥ ಸನ್ನಿವೇಶ ಇರಲ್ಲ. ಆದರೆ ಕಾಂಗ್ರೆಸ್ ರಾಜಕೀಯವಾಗಿ ಸಿಡಿ ಪ್ರಕರಣ ಬಳಸಿಕೊಳ್ಳುತ್ತಿದೆ. ಸಿಡಿ ಕುರಿತು ಕೈ ನಾಯಕರು ಕೂಡ ಸುಳ್ಳು ಹೇಳ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.

  ಆರು ಸಚಿವರು ಕೋರ್ಟ್ ಗೆ ಅರ್ಜಿ ಹಾಕಿ ತಡೆ ತಂದ ವಿಚಾರವಾಗಿ ಪ್ರತಿಕ್ರಿಯಿಸಿದ ಅರುಣ್ ಸಿಂಗ್ ಅವರು, ಆರು ಸಚಿವರು ಕೋರ್ಟ್ ಗೆ ಹೋಗಿರೋದು ತಮ್ಮ ವಿರುದ್ಧ ತೇಜೋವಧೆ ಮಾಡ್ತಾರೆ ಅಂತ. ಇದರ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಪ್ರಶ್ನೆ ಉದ್ಭವಿಸಲ್ಲ. ಅವರ ವಿರುದ್ಧ ಷಡ್ಯಂತ್ರ ತಡೆಯಲು ಕೋರ್ಟ್ ಗೆ ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

  ಇದನ್ನು ಓದಿ: ಬೆಳಗಾವಿ ಲೋಕಸಭಾ, ಎರಡು ವಿಧಾನಸಭೆ ಸೇರಿ ಮೂರು ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿ

  ಒಂದು ಲೋಕಸಭೆ ಸೇರಿ ಮೂರು ಉಪಚುನಾವಣೆಗಳಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಅರುಣ್ ಸಿಂಗ್ ಅವರು, ಉಪಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಾಳೆ ಚರ್ಚೆ ಮಾಡಲಾಗುವುದು. ರಾಜ್ಯ ಬಿಜೆಪಿ ಘಟಕದ ಜೊತೆ ನಾಳೆ ಚರ್ಚೆ ಮಾಡುತ್ತೇವೆ. ಚರ್ಚೆಯ ಬಳಿಕ ಪಟ್ಟಿಯನ್ನು ಕೇಂದ್ರ ಬಿಜೆಪಿ ಚುನಾವಣಾ ಸಮಿತಿಗೆ ಕಳಿಸಿಕೊಡಲಾಗುತ್ತೆ. ಕೇಂದ್ರದ ಸಮಿತಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲಿದೆ ಎಂದು ಮಾಹಿತಿ ನೀಡಿದರು.

  ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅರುಣ್ ಸಿಂಗ್, ಯತ್ನಾಳ್ ಹೇಳಿಕೆಗಳನ್ನು ನಾನಾಗಲೀ, ನಮ್ಮ ಕಾರ್ಯಕರ್ತರಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. ಯತ್ನಾಳ್ ಹೇಳಿಕೆಗಳ ಬಗ್ಗೆ ಮಾತಾಡೋದನ್ನು ನೀವು ಬಿಡಿ. ಯತ್ನಾಳ್ ಮಾತ್ರ ಈ ತರಹದ ಹೇಳಿಕೆಗಳನ್ನು ನಿಲ್ಲಿಸಲ್ಲ. ಅವರು ಮಾತಾಡುತ್ತಲೇ ಇರ್ತಾರೆ  ಎಂದು ವ್ಯಂಗ್ಯವಾಡಿದರು. ಯತ್ನಾಳ್ ಗೆ ಪಕ್ಷದಲ್ಲಿ ಕೆಲವರ ಬೆಂಬಲ ಇದೆಯಾ? ಎಂಬ ಪ್ರಶ್ನೆಗೆ ಇರಬಹುದು ಎಂದು ಅರುಣ್ ಸಿಂಗ್ ಪ್ರತಿಕ್ರಿಯಿಸಿದರು.

  ಬಿಜೆಪಿ ಸಂಸದರಾಗಿ ಕೇಂದ್ರದಲ್ಲಿ ಮಂತ್ರಿಯಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ತೆರವಾಗಿದೆ. ಇದೀಗ ಆ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ನಾರಾಯಣರಾವ್ ಅವರ ನಿಧನದಿಂದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ತೆರವಾಗಿದೆ. ಇದೀಗ ಆ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಉಳಿದಂತೆ ಸಮ್ಮಿಶ್ರ ಸರ್ಕಾರದ ವೇಳೆ ಕಾಂಗ್ರೆಸ್ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮಸ್ಕಿ ವಿಧಾನಸಭೆ ಕ್ಷೇತ್ರ ತೆರವಾಗಿತ್ತು. ಇದೀಗ ಈ ಮೂರು ಕ್ಷೇತ್ರಗಳಿಗೆ ಏಪ್ರಿಲ್ 17ರಂದು ಮತದಾನ ನಡೆಯಲಿದ್ದು, ಮೇ 02ರಂದು ಫಲಿತಾಂಶ ಪ್ರಕಟವಾಗಲಿದೆ.
  Published by:HR Ramesh
  First published: