Santosh Patil Case: ಇನ್ನೆರಡು ದಿನದಲ್ಲಿ ರಾಜೀನಾಮೆ ನೀಡುವಂತೆ ಈಶ್ವರಪ್ಪಗೆ BJP ಹೈಕಮಾಂಡ್​ ಸೂಚನೆ ಸಾಧ್ಯತೆ

ಈ ಸಂಬಂಧ ಚರ್ಚೆ ನಡೆಸಿ ಇನ್ನೆರಡು ದಿನದಲ್ಲಿ ಸಚಿವ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ ಎಂದು ಮೂಲ ತಿಳಿಸಿದೆ.

ಈಶ್ವರಪ್ಪ

ಈಶ್ವರಪ್ಪ

 • Share this:
  ಗುತ್ತಿಗೆದಾರ ಸಂತೋಷ್​ ಪಾಟೀಲ್​ (Santosh Patil) ಆತ್ಮಹತ್ಯೆ ಪ್ರಕರಣ ಸಚಿವ ಕೆಎಸ್​ ಈಶ್ವರಪ್ಪ (KS Eshwarappa) ತಲೆದಂಡಕ್ಕೆ ಕಾರಣವಾಗಲಿದೆ. ಈಗಾಗಲೇ ಈಶ್ವರಪ್ಪ ರಾಜೀನಾಮೆ ಹಾಗೂ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್​ (Congress) ಪ್ರತಿಭಟನೆ ಜೋರು ಮಾಡಿದೆ. ಘಟನೆ ನಡೆದು ಎರಡು ದಿನ ಕಳೆದರೂ ಸರ್ಕಾರ ಸಚಿವರ ಮೇಲೆ ಕ್ರಮ ಕೈಗೊಳ್ಳದ ಹಿನ್ನಲೆ ಸಿಎಂ ಮನೆಗೆ ಮುತ್ತಿಗೆ ಹಾಕಿ ಕಾಂಗ್ರೆಸ್​ ಪ್ರತಿಭಟನೆ ನಡೆಸಿದೆ. ರಾಜ್ಯ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಸಂತೋಷ್​ ಪಾಟೀಲ್​ ಪ್ರಕರಣ ಬಿಜೆಪಿಗೆ (BJP) ಮುಜುಗರ ತಂದಿದೆ. ಭ್ರಷ್ಟಾಚಾರದ ಆರೋಪದಿಂದ ವಿಪಕ್ಷಗಳು ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಈ ಹಿನ್ನಲೆ ಬಿಜೆಪಿ ಹೈ ಕಮಾಂಡ್​ ಈಶ್ವರಪ್ಪ ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಲಿದೆ ಎಂಬ ಮಾಹಿತಿ ನ್ಯೂಸ್​ 18ಕ್ಕೆ ಲಭ್ಯವಾಗಿದೆ.

  ಚುನಾವಣೆಗೆ ರಾಜಕೀಯ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್​​
  ಮೃತ ಸಂತೋಷ್​ ಪಾಟೀಲ್​ ಆರೋಪ ನಿರಾಧಾರ. ತಾವು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್​ ಕೂಡ ಪ್ರತಿಭಟನೆ ತೀವ್ರಗೊಳಿಸಿದೆ. ಅಮಿತ್​ ಶಾ ಮನೆ ಮುಂದೆ ಕೂಡ ಯೂಥ್​ ಕಾಂಗ್ರೆಸ್​ ಪ್ರತಿಭಟನೆ ನಡೆಸಿದ್ದು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪ್ರಕರಣವನ್ನು ಕಾಂಗ್ರೆಸ್​ ಪ್ರಬಲ ಅಸ್ತ್ರವಾಗಿ ಬಳಕೆ ಮಾಡಲು ಸಜ್ಜಾಗಿದೆ.

  ಇನ್ನೆರಡು ದಿನದಲ್ಲಿ ರಾಜೀನಾಮೆ ಸಾಧ್ಯತೆ

  ಈ ಎಲ್ಲಾ ಬೆಳವಣಿಗೆಗಳಿಂದ ಎಚ್ಚೆತ್ತ ಬಿಜೆಪಿ ಚುನಾವಣೆ ಹೊಸ್ತಿಲನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗದಂತೆ ನೋಡಿಕೊಳ್ಳಲು ಸಚಿವರಿಂದ ರಾಜೀನಾಮೆ ಪಡೆಯಲು ಮುಂದಾಗಿದೆ. ಈ ಸಂಬಂಧ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಬಿಎಲ್​ ಸಂತೋಷ್​ ವರದಿ ನೀಡಿದ್ದಾರೆ. ಈ ಸಂಬಂಧ ಚರ್ಚೆ ನಡೆಸಿ ಇನ್ನೆರಡು ದಿನದಲ್ಲಿ ಸಚಿವ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ ಎಂದು ಮೂಲ ತಿಳಿಸಿದೆ.

  ಇದನ್ನು ಓದಿ: ತಮ್ಮ ಕಾಲದಲ್ಲಿ ಕೊಲೆ ಮಾಡಿದವರ ಕೇಸ್​ ವಾಪಸ್​ ಪಡೆದು ಈಗ ಪ್ರತಿಭಟನೆ ಮಾಡ್ತಾರೆ - ಕಾಂಗ್ರೆಸ್​ಗೆ ಸಿಎಂ ತಿರುಗೇಟು

  ಬಿಜೆಪಿ ಕಾರ್ಯಕಾರಿಣಿಗೆ ರಾಜ್ಯಕ್ಕೆ ನಡ್ಡಾ
  ಈ ನಡುವೆ ಏ. 16, 17ರಂದು ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದ್ದು, ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮಿಸಲಿದ್ದಾರೆ. ಈ ವೇಳೆ ಮತ್ತಷ್ಟು ಕಾಂಗ್ರೆಸ್​ ಪ್ರತಿಭಟನೆ ತೀವ್ರಗೊಳಿಸಲು ಈಗಾಗಲೇ ತಯಾರಿ ನಡೆಸಿದೆ. ಈ ಹಿನ್ನಲೆ ನಡ್ಡಾ ರಾಜ್ಯ ಭೇಟಿಗೂ ಮುನ್ನವೇ ಈಶ್ವರಪ್ಪಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಲು ಮುಂದಾಗಿದೆ ಎನ್ನಲಾಗಿದೆ.

  ರಾಜೀನಾಮೆ ಪಡೆಯಲ್ಲ ಎಂದ ಸಿಎಂ

  ಪ್ರಕರಣ ಸಂಬಂಧ ಮಾತನಾಡಿರುವ ಸಿಎಂ ಹೈ ಕಮಾಂಡ್​ ಘಟನೆ ಸಂಬಂಧ ಕೇವಲ ಮಾಹಿತಿ ಪಡೆದಿದೆ. ಇದರಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಪ್ರಾಥಮಿಕ ತನಿಖೆ ಮುಗಿಯುವವರೆಗೂ ರಾಜೀನಾಮೆ ಪಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

  ಇದನ್ನು ಓದಿ: Santosh Patil ಆತ್ಮಹತ್ಯೆ ವಿಚಾರದಲ್ಲಿ ರಾಜಕೀಯ ಬಣ್ಣ; ಎಚ್​ಡಿಕೆ ಹೇಳಿಕೆ ಪುನರುಚ್ಚರಿಸಿದ ದೇವೇಗೌಡ 

  ಅಲ್ಲದೇ ಕಾಂಗ್ರೆಸ್​ ಪ್ರತಿಭಟನೆ ಕುರಿತು ತಿರುಗೇಟು ನೀಡಿದ ಅವರು,  ಕಾಂಗ್ರೆಸ್ ನವರ ಕಾಲದಲ್ಲಿ ಹಲವು ಕಾಲದಲ್ಲಿ ಕೊಲೆಗಳು ಆಗಿ, ಆ ಕೊಲೆ ಮಾಡಿದವರ ಕೇಸ್ ವಾಪಸ್ಸು ಪಡೆದಿದ್ದಾರೆ. ಇವತ್ತು ಅವರಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದಕ್ಕೆ ಅವರನ್ನು ಜನರು ತಿರಸ್ಕಾರ ಮಾಡಿದ್ದಾರೆ. ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಹೊರ ಬರಲಿದೆ ಎಂದರು

  ಲಾಭ ಪಡೆಯಲಿರುವ ಕಾಂಗ್ರೆಸ್​

  ಮುಂಬರುವ ಚುನಾವಣೆಗೆ ಪ್ರಕರಣವನ್ನು ಪ್ರಬಲ ಅಸ್ತ್ರ ಮಾಡಿಕೊಂಡಿರುವ ಕಾಂಗ್ರೆಸ್​ ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ನೀಡದೇ ವಿಳಂಬ ಮಾಡಿದರೆ, ಅದು ಕಾಂಗ್ರೆಸ್​​ಗೆ ಹೆಚ್ಚಿನ ಲಾಭವಾಗುವ ಹಿನ್ನಲೆ ಹೈ ಕಮಾಂಡ್​​ ಖುದ್ದು ರಾಜೀನಾಮೆಗೆ ಸೂಚಿಸಬಹುದು ಎನ್ನಲಾಗಿದೆ.
  Published by:Seema R
  First published: