Shivamogga: ಉಲ್ಟಾ ಹೊಡೆದ ಅನ್ಯಕೋಮಿನಿಂದ ಹಲ್ಲೆ ಆರೋಪ ಮಾಡಿದ್ದ ಆಟೋ ಚಾಲಕ

ಈಶ್ವರಪ್ಪ ಮುಂದೆ ಕಣ್ಣೀರು ಹಾಕಿದ್ದ ಆಟೋ ಚಾಲಕ

ಈಶ್ವರಪ್ಪ ಮುಂದೆ ಕಣ್ಣೀರು ಹಾಕಿದ್ದ ಆಟೋ ಚಾಲಕ

Auto Driver Allegation: ಗೆಳೆಯರ ಜೊತೆ ಮದ್ಯ ಕುಡಿಯುವಾಗ ಗಲಾಟೆಯಾಗಿತ್ತು. ಗಲಾಟೆಯಲ್ಲಿ ಆಟೋ ಕೂಡ ಜಖಂ ಆಗಿತ್ತು. ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಹೇಳು ಎಂದು ಗೆಳೆಯ ಪ್ರಚೋದನೆ ನೀಡಿದ್ದನು.

  • Share this:

ಶಿವಮೊಗ್ಗ: ಬಿಜೆಪಿಗೆ (BJP) ಮತ ಹಾಕಿದ್ದಕ್ಕೆ ಅನ್ಯಕೋಮಿನ ಮೂವರು ಹಲ್ಲೆ ನಡೆಸಿ, ಆಟೋ ಜಖಂಗೊಳಿಸಿದ್ದಾರೆ ಎಂದಿದ್ದ ಚಾಲಕ (Auto Driver) ಹರೀಶ್ ರಾವ್ ಉಲ್ಟಾ ಹೊಡೆದಿದ್ದಾನೆ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ (Shivamogga DC Office) ಬಳಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ (Former Minister KS Eshwarappa) ಬಳಿ ತನಗೆ ರಕ್ಷಣೆ ನೀಡಬೇಕು ಎಂದು ಹರೀಶ್ ರಾವ್ ಮನವಿ ಮಾಡಿಕೊಂಡಿದ್ದನು. ಈ ವೇಳೆ ಈಶ್ವರಪ್ಪ ಸೂಕ್ತ ನ್ಯಾಯ ಕೊಡಿಸುವ ಭರವಸೆ ನೀಡಿ 20 ಸಾವಿರ ರೂಪಾಯಿ ಹಣದ ಸಹಾಯ ಮಾಡಿದ್ದರು. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಬೆನ್ನಲ್ಲೇ ಆಟೋ ಚಾಲಕ ತನ್ನ ಹೇಳಿಕೆಯನ್ನು ಬದಲಿಸಿದ್ದಾನೆ.


ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದ್ದೇನು?


ಹರೀಶ್ ರಾವ್ ತನ್ನ ಜಖಂಗೊಂಡ ಆಟೋ ಜೊತೆಗೆ ತನ್ನ ಮೇಲಿನ ಹಲ್ಲೆ ಬಗ್ಗೆ ದೂರು ನೀಡಲು ಬಂದಿದ್ದನು. ಈ ವೇಳೆ ಎದುರಾದ ಈಶ್ವರಪ್ಪ ಅವರ ಕಾಲಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದನು. ಆಟೋ ಚಲಾಯಿಸಿಕೊಂಡು ಬರುತ್ತಿರುವ ವೇಳೆ ಮೂವರು ನನ್ನನ್ನು ಅಡ್ಡಗಟ್ಟಿದ್ದರು.
ನನ್ನನ್ನು ತಡೆದು ಯಾರಿಗೆ ವೋಟ್ ಹಾಕಿದ್ದೀಯಾ ಅಂತ ಕೇಳಿದರು. ಬಜೆಪಿಗೆ ಮತ ಹಾಕದ್ದೀನಿ ಎಂದಾಗ ಆಟೋ ಜಖಂಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದನು.


ಇಂದು ಹೇಳಿದ್ದೇನು?


ಗೆಳೆಯರ ಜೊತೆ ಮದ್ಯ ಕುಡಿಯುವಾಗ ಗಲಾಟೆಯಾಗಿತ್ತು. ಗಲಾಟೆಯಲ್ಲಿ ಆಟೋ ಕೂಡ ಜಖಂ ಆಗಿತ್ತು. ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಹೇಳು ಎಂದು ಗೆಳೆಯ ಪ್ರಚೋದನೆ ನೀಡಿದ್ದನು.


ಇದನ್ನೂ ಓದಿ:  Karnataka CM: ಹೈಕಮಾಂಡ್​​ಗೆ ‘ಡಿಕೆ’ ಕಂಡೀಷನ್ಸ್​; ಸಿದ್ದರಾಮಯ್ಯಗೆ ಸಾಥ್​ ಕೊಟ್ಟವರಿಗೆ ಶಾಕ್ ಕೊಡಲು ‘ಕನಕಪುರ ಬಂಡೆ’ ರಣತಂತ್ರ!


ಹಾಗಾಗಿ ಎಸ್​ಪಿ ಆಫಿಸ್ ಮುಂದೆ ಬಂದಿದ್ದೆ. ಕೆಎಸ್ ಈಶ್ವರಪ್ಪ ಅವರು ನೀಡಿರುವ ಹಣವನ್ನು ಯಾರೋ ತೆಗೆದುಕೊಂಡು ಹೋಗಿದ್ದಾರೆ ಎಂದು ಹರೀಶ್ ರಾವ್ ಹೇಳುತ್ತಿದ್ದಾನೆ.

top videos
    First published: