• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BJP Politics: ಯಾದಗಿರಿ ಬಿಜೆಪಿಯಲ್ಲಿ ಭಿನ್ನಮತ! ಶಾಸಕನ ವಿರುದ್ಧವೇ ಪಕ್ಷದ ನಾಯಕ ಮಾತನಾಡಿದ ಆಡಿಯೋ ವೈರಲ್!

BJP Politics: ಯಾದಗಿರಿ ಬಿಜೆಪಿಯಲ್ಲಿ ಭಿನ್ನಮತ! ಶಾಸಕನ ವಿರುದ್ಧವೇ ಪಕ್ಷದ ನಾಯಕ ಮಾತನಾಡಿದ ಆಡಿಯೋ ವೈರಲ್!

ಯಾದಗಿರಿ ಬಿಜೆಪಿಯಲ್ಲಿ ಭಿನ್ನಮತ

ಯಾದಗಿರಿ ಬಿಜೆಪಿಯಲ್ಲಿ ಭಿನ್ನಮತ

ಯಾದಗಿರಿಯಲ್ಲಿ ಬಿಜೆಪಿ ನಾಯಕರ ಮಧ್ಯೆಯೇ ಪೊಲಿಟಿಕಲ್ ಫೈಟ್ ಶುರುವಾಗಿದೆ, ಬಿಜೆಪಿ ಶಾಸಕ ವೆಂಕಟ ರೆಡ್ಡಿ ಮುದ್ನಾಳ್ ಅವರ ವಿರುದ್ಧ ಬಿಜೆಪಿ ಹಿರಿಯ ಮುಖಂಡ ಡಾ.ಎ.ಬಿ. ಮಾಲಕ ರೆಡ್ಡಿ ಮಾತಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿದೆ.

  • Share this:

ಯಾದಗಿರಿ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ವಾಗ್ಯುದ್ಧಗಳು ನಡೆಯೋದು ಸಾಮಾನ್ಯ ಸಂಗತಿ. ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿ ರಾಜಕೀಯ ವಾಕ್ಸಮರಗಳನ್ನು ನಡೆಸುತ್ತಾರೆ. ಆದರೆ ಇಲ್ಲೊಂದು ಕಡೆ ನಡೆದ ಘಟನೆ ಮಾತ್ರ ಸ್ವಲ್ಪ ಭಿನ್ನ. ಯಾಕೆಂದರೆ ಇಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಮುಖಂಡರ ನಡುವೆ ರಾಜಕೀಯ ಟಾಕ್‌ ವಾರ್ ನಡೆದಿಲ್ಲ. ಬದಲಾಗಿ ಬಿಜೆಪಿ ನಾಯಕರ ಮಧ್ಯೆಯೇ ಕಿತ್ತಾಟ ನಡೆದಿದೆ.


ಹೌದು.. ಯಾದಗಿರಿಯಲ್ಲಿ ಬಿಜೆಪಿ ನಾಯಕರ ಮಧ್ಯೆಯೇ ಪೊಲಿಟಿಕಲ್ ಫೈಟ್ ಶುರುವಾಗಿದೆ, ಬಿಜೆಪಿ ಶಾಸಕ ವೆಂಕಟ ರೆಡ್ಡಿ ಮುದ್ನಾಳ್ ಅವರ ವಿರುದ್ಧ ಬಿಜೆಪಿ ಹಿರಿಯ ಮುಖಂಡ ಡಾ.ಎ.ಬಿ. ಮಾಲಕ ರೆಡ್ಡಿ ಮಾತಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಬಿಜೆಪಿ ಶಾಸಕ ವೆಂಕಟ ರೆಡ್ಡಿ ಮುದ್ನಾಳ್ ವಿರುದ್ಧ ಡಾ.ಎ.ಬಿ. ಮಾಲಕ ರೆಡ್ಡಿ ಆಕ್ರೋಶಭರಿತವಾಗಿ ಮಾತನಾಡಿದ್ದಾರೆ ಎಂದು ಹೇಳಲಾಗ್ತಿದೆ.


ಇದನ್ನೂ ಓದಿ: Siddaramaiah: ಯಾದಗಿರಿಯಿಂದ ಸ್ಪರ್ಧಿಸಲು ಸಿದ್ದರಾಮಯ್ಯಗೆ 1 ಕೋಟಿ ಆಫರ್! ಆಹ್ವಾನ ನೀಡಿದ​ ಬಿಜೆಪಿ ಮುಖಂಡ


ಆಡಿಯೋದಲ್ಲಿ ಏನಿದೆ?
ಶಾಸಕ ವೆಂಕಟ ರೆಡ್ಡಿ ಮುದ್ನಾಳ್ ವಿರುದ್ಧ ಡಾ.ಎ.ಬಿ. ಮಾಲಕ ರೆಡ್ಡಿ ಬಿಜೆಪಿ ಪಕ್ಷದ ಕಾರ್ಯಕರ್ತನ ಜೊತೆ ಆಕ್ರೋಶಭರಿತವಾಗಿ ಮಾತಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ, ‘ಹಯ್ಯಾಳ ಹುಡುಗನಿಗೆ ಕರೆದುಕೊಂಡು ಬಂದು ಹೊಡೆದಿದ್ದಾರೆ, ಊರೂರು ಓಡಾಡಿ ತಪ್ಪಾಗಿದೆ ಎಂದು ಕ್ಷಮೆ ಕೊರುತ್ತಿದ್ದಾರೆ. ನೂರಾರು ಕೋಟಿ ಕೆಲಸ ಮಾಡಿಕೊಂಡಿದ್ದಾರೆ. ರಾಚನಗೌಡ,ಹಣಮಂತರೆಡ್ಡಿ ಅವರು 200 ಕೋಟಿ ರೂಪಾಯಿ ಕೆಲಸ ಮಾಡಿ ಹಣ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.


ಅದೆ ರೀತಿಯಲ್ಲಿ ಎಐಸಿಸಿ ಅಧ್ಯಕ್ಷ, ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧವೂ ಆ ಆಡಿಯೋದಲ್ಲಿ ಮಾಲಕ ರೆಡ್ಡಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಆಡಿಯೋ ವೈರಲ್ ಆದ ಬೆನ್ನಲ್ಲೇ ಡಾ.ಎ.ಬಿ. ಮಾಲಕ ರೆಡ್ಡಿ ಸ್ಪಷ್ಟನೆ ನೀಡಿದ್ದು, ಅದು ನನ್ನ ಧ್ವನಿಯಲ್ಲಿ ಬೇರೆ ಯಾರೋ ಮಾತಾಡಿದ್ದಾರೆ. ಅದು ನಕಲಿ ಆಡಿಯೋ ಎಂದು ಹೇಳಿದ್ದಾರೆ.


ಇನ್ನೊಂದೆಡೆ ಈ ಆಡಿಯೋ ವೈರಲ್ ಆಗ್ತಿದ್ದಂತೆ ಡಾ.ಎ.ಬಿ. ಮಾಲಕ ರೆಡ್ಡಿ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದ್ದು, ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಡಾ.ವೀರ ಬಸವಂತ ರೆಡ್ಡಿ ಮುದ್ನಾಳ ಕಿಡಿಕಾರಿದ್ದಾರೆ. ಅಲ್ಲದೇ, ಮಾಲಕರೆಡ್ಡಿ ಅವರನ್ನು ಕೂಡಲೇ ಪಕ್ಷದಿಂದ ಹೊರಹಾಕುವಂತೆ ಆಗ್ರಹಿಸಿದ್ದಾರೆ.


ಇದನ್ನೂ ಓದಿ: Yadgir: ಯಾದಗಿರಿಗೆ ಮೋದಿ: ಜನವರಿ 19ರಂದು ಹುಣಸಗಿಯ ಶಾಲಾ-ಕಾಲೇಜುಗಳಿಗೆ ರಜೆ


'ತಾನೇ ಮಾತನಾಡಿದ್ದು ಅಂದರೆ ಮರ್ಯಾದೆ ಕೊಡುತ್ತೇವೆ'


ಬಿಜೆಪಿ ಪಕ್ಷದಲ್ಲಿದ್ದುಕೊಂಡು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಪ್ರಯತ್ನ ಪಡುತ್ತಿರುವ ಮಾಲಕರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಡಾ.ವೀರ ಬಸವಂತ ರೆಡ್ಡಿ ಮುದ್ನಾಳ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಎರಡು ಪಕ್ಷದಲ್ಲಿ ಟಿಕೆಟ್ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ, ವೈರಲ್ ಆಗಿರುವ ಅಡಿಯೋದಲ್ಲಿ ಮಾತನಾಡಿದ್ದು ತಾನು ಅಲ್ಲವೆಂದು ಸಾಬೀತು ಪಡಿಸಲಿ ಎಂದು ಸವಾಲೆಸಿದ್ದಾರೆ. ಅಲ್ಲದೇ ಆ ಆಡಿಯೋದಲ್ಲಿ ತಾನೇ ಮಾತನಾಡಿದ್ದು ಅಂದರೆ ಮರ್ಯಾದೆ ಕೊಡುತ್ತೇವೆ. ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಗೆ ಹುಚ್ಚ ಅನ್ನಬೇಡಿ, ನೀವು ಹುಚ್ಚುಚ್ಚು ಮಾತನಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.


ಮುಂದುವರಿದು ಮಾತನಾಡಿರುವ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಎರಡು ಕಡೆ ಕಾಲು ಇಡಬೇಡಿ, ಬಿಜೆಪಿಯಲ್ಲೇ ಇರಿ, ಇಲ್ಲದಿದ್ದರೆ ಕಾಂಗ್ರೆಸ್‌ಗೆ ಹೋಗಿ ಎಂದು ಮಾಲಕರೆಡ್ಡಿಗೆ ಡಾ.ವೀರಬಸವಂತರೆಡ್ಡಿ ಮುದ್ನಾಳ ಖಡಕ್ ಎಚ್ಚರಿಕೆ ನೀಡಿದ್ದಾರೆ.

Published by:Avinash K
First published: