ರಾಷ್ಟ್ರಕವಿಗೆ ಗೂಗಲ್ ಡೂಡಲ್ ಗೌರವ: ಕುವೆಂಪು ಡೂಡಲ್ ಹಿಂದಿನ ಕಲಾವಿದ ಯಾರು ಗೊತ್ತಾ?


Updated:December 29, 2017, 10:53 PM IST
ರಾಷ್ಟ್ರಕವಿಗೆ ಗೂಗಲ್ ಡೂಡಲ್ ಗೌರವ: ಕುವೆಂಪು ಡೂಡಲ್ ಹಿಂದಿನ ಕಲಾವಿದ ಯಾರು ಗೊತ್ತಾ?
ಕುವೆಂಪು ಡೂಡಲ್ ರಚಿಸಿದ ಕಲಾವಿದ ಉಪಮನ್ಯು ಭಟ್ಟಚಾರ್ಯ ಹಾಗೂ ಕನ್ನಡ ಅಕ್ಷರಗಳನ್ನು ಬರೆಯಲು ಸಹಾಯ ಮಾಡಿದ ಸ್ವಾತಿ ಶೇಲಾರ್

Updated: December 29, 2017, 10:53 PM IST
ರಾಷ್ಟ್ರಕವಿ ಕುವೆಂಪುರವರ 113 ನೇ ಜನ್ಮದಿನಗ ಅಂಗವಾಗಿ ಗೂಗಲ್ ಸೃಷ್ಟಿಸಿದ್ದ ಡೂಡಲ್ ಕನ್ನಡಿಗರ ಮನ ಗೆಲ್ಲುವುದರೊಂದಿಗೆ ಸಾಮಾಜಿಕ ಜಾಲಾತಾಣಗಳಲ್ಲೂ ಬಹಳಷ್ಟು ವೈರಲ್ ಆಗಿತ್ತು. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದ ಈ ಮಲೆನಾಡಿನ ಕವಿಗೆ ಗೂಗಲ್ ನೀಡಿದ್ದ ವಿಶೇಷ ಗೌರವ ದೇಶ ಹಾಗೂ ವಿಶ್ವದಾದ್ಯಂತ ಗಮನಸೆಳೆದಿದೆ. ಕುವೆಂಪು ಡೂಡಲ್ ಅಪ್ಲೋಡ್ ಮಾಡಿದ ಬಳಿಕ ಅವರ ಕುರಿತಾಗಿ ಇಂದು ಬಹುತೇಕರು ಗೂಗಲ್​ನಲ್ಲಿ ಕುವೆಂಪು ಯಾರು? ಎಂಬುವುದರ ಜೊತೆ ಅವರ ಸಾಹಿತ್ಯದ ಕುರಿತಾಗಿ ಗೂಗಲ್ ಸರ್ಚ್ ಇಂಜಿನ್​ನಲ್ಲಿ ಹುಡುಕಾಟ ನಡೆಸಿರುವುದು 'ಗೂಗಲ್ ಟ್ರೆಂಡ್ಸ್'ನಲ್ಲಿ ತಿಳಿದು ಬಂದಿದೆ.

ಅಷ್ಟಕ್ಕೂ ಜನರ ಮನಗೆದ್ದ ಹಾಗೂ ಕುವೆಂಪುರವರ ಸಾಹಿತ್ಯ ಪ್ರೇಮ ಬಿಂಬಿಸುವ ಈ ಅದ್ಭುತ ಡೂಡಲ್ ಹಿಂದಿನ ಶಿಲ್ಪಿ ಯಾರು? ಎಂಬ ಪ್ರಶ್ನೆ ಅತ್ಯಂತ ಕುತೂಹಲ ಕೆರಳಿಸುವಂತಹುದ್ದು. ಈ ಪ್ರಶ್ನೆಯ ಹುಡುಕಾಟದಲ್ಲಿದ್ದಾಗ ಲಭ್ಯವಾದ ಮಾಹಿತಿ ಹೀಗಿದೆ.

ಬಿಳಿ ಪಂಚೆ ಹಾಗೂ ಜುಬ್ಬ ಧರಿಸಿ, ಮಲೆನಾಡಿನ ಹಸಿರು ಪರಿಸರ, ಕಾಡು, ಕವಿಶೈಲದ ಬಂಡೆ ಕಲ್ಲಿನ ಮೇಲೆ ಕುಳಿತು ಬರೆಯುವುದರಲ್ಲಿ ತಲ್ಲೀನರಾಗಿರುವ ಕುವೆಂಪು ಚಿತ್ರವನ್ನು ಗ್ರಾಫಿಕ್ಸ್ ರೂಪಿಸಿದ ಕಲಾವಿದ ಕೊಲ್ಕತ್ತಾ ಮೂಲದ ಉಪಮನ್ಯು ಭಟ್ಟಚಾರ್ಯ. ಈ ಕುರಿತಾಗಿ ಖುದ್ದು ಉಪಮನ್ಯು ತಮ್ಮ ಸೋಷಲ್ ಮೀಡಿಯಾ ಪೇಜ್(ಫೇಸ್​ಬುಕ್ ಹಾಗೂ ಇನ್ಸ್ಟಾ ಗ್ರಾಂ)ನಲ್ಲಿ ಬರೆದುಕೊಂಡಿದ್ದಾರೆ.

'ಕನ್ನಡದ ಮಹಾನ್ ಸಾಹಿತಿ ಕುವೆಂಪುರವರ ಜನ್ಮದಿನದ ಅಂಗವಾಗಿ, ಅಫೀಶಿಯಲ್ ಡೂಡಲ್ ರಚಿಸಿ ಕೊಡುವಂತೆ ಗೂಗಲ್ ನನ್ನ ಬಲಿ ಕೇಳಿಕೊಂಡಿದ್ದು ಈಗಲೂ ನನಗೆ ನಂಬಲಾಗುತ್ತಿಲ್ಲ. ಇದರಲ್ಲಿರುವ ಕನ್ನಡ ಅಕ್ಷರಗಳನ್ನು ಬರೆಯಲು ಸಹಾಯ ಮಾಡಿದ ಸ್ವಾತಿ ಶೇಲಾರ್ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಈ ಚಿತ್ರದಲ್ಲಿ 'ಗೂಗಲ್(Google)' ಎಂಬ ಪದ ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಇದೆ'20 ವರ್ಷದ ಈ ಬಾಲಕ ಓರ್ವ ಉತ್ಸಾಹಿ ಚಿತ್ರ ಕಲಾವಿದ. ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಡಿಸೈನ್​ನಲ್ಲಿ ಅನಿಮೇಶನ್ ಪದವಿ ಪಡೆದಿರುವ ಉಪಮನ್ಯು ಮದ್ರಾಸ್ ಟಾಕೀಸ್​ನಲ್ಲಿ ಕಾನ್ಸೆಪ್ಟ್ ಆರ್ಟಿಸ್ಟ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಗೂಗಲ್​ನಲ್ಲಿರುವ ಈ ಡೂಡಲ್ ಮಾಡುವುದಕ್ಕೂ ಮೊದಲು ಇದನ್ನು ರಚಿಸಲು ಮಾಡಿದ ಕೆಲವು ಪ್ರಯತ್ನಗಳ ಚಿತ್ರಗಳು ಇಲ್ಲಿವೆ.


Loading...

ವರನಟ ರಾಜ್‌ಕುಮಾರ್ ನಂತರ ಡೂಡಲ್ ಮೂಲಕ ಗೂಗಲ್ ಗೌರವ ಸೂಚಿಸಿದ ಎರಡನೇ ಕನ್ನಡಿಗ ಎಂಬ ಖ್ಯಾತಿ ಕುವೆಂಪು ಪಾಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಮಟ್ಟದ ಮಾಧ್ಯಮಗಳೂ ವರದಿ ಮಾಡಿವೆ.

ಇದನ್ನೂ ಓದಿ: ಗೂಗಲ್​ನ ಡೂಡಲ್​ನಲ್ಲಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ: ರಾಷ್ಟ್ರಕವಿಗೆ ಗೂಗಲ್​ ವಿಶೇಷ ಗೌರವ
First published:December 29, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...