73ನೇ ಸ್ವಾತಂತ್ರ್ಯ ದಿನಕ್ಕೆ ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ; ತನ್ನ ಆಮೆ ಗತಿಯ ನೀತಿಯಿಂದ ಸಂಪ್ರದಾಯ ಮುರಿದ ಬಿಎಸ್​ವೈ!

ಪ್ರಸ್ತುತ ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದ್ದಾಗ್ಯೂ, 2019ರ ಆಗಸ್ಟ್ 15 ರಂದು ರಾಜ್ಯದ ಜಿಲ್ಲಾ ಕೇಂದ್ರದಲ್ಲಿ ಜನಪ್ರತಿನಿಧಿಗಳ ಬದಲಾಗಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಲಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದ್ದು, ಮೊದಲ ಬಾರಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಆಮೆಗತಿಯ ನೀತಿಯಿಂದಾಗಿ ರಾಜ್ಯದಲ್ಲಿ ಈವರೆಗೆ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ತಿಲಾಂಜಲಿ ಇಡಲು ಮುಂದಾಗಿದೆ.

MAshok Kumar | news18
Updated:August 14, 2019, 1:04 PM IST
73ನೇ ಸ್ವಾತಂತ್ರ್ಯ ದಿನಕ್ಕೆ ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ; ತನ್ನ ಆಮೆ ಗತಿಯ ನೀತಿಯಿಂದ ಸಂಪ್ರದಾಯ ಮುರಿದ ಬಿಎಸ್​ವೈ!
ಬಿ.ಎಸ್​. ಯಡಿಯೂರಪ್ಪ
  • News18
  • Last Updated: August 14, 2019, 1:04 PM IST
  • Share this:
ಸ್ವಾತಂತ್ರ್ಯ ದಿನ ಎಂಬುದು ದೇಶದ ರಾಷ್ಟ್ರೀಯ ಉತ್ಸವ. ಸಾಮಾನ್ಯವಾಗಿ ಈ ದಿನದಂದು ದೇಶದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ಧ್ವಜಾರೋಹಣ ನೆರವೇರಿಸಿ ನಂತರ ಎಲ್ಲರಿಗೂ ಸಿಹಿ ಹಂಚುವುದು ಈ ನೆಲದ ಸಂಪ್ರದಾಯ. ಕಳೆದ 73 ವರ್ಷಗಳಿಂದ ಈ ಆಚರಣೆಯನ್ನು ಒಂದು ಸಂಪ್ರದಾಯ ಎಂಬಂತೆಯೇ ಆಚರಿಕೊಂಡು ಬರಲಾಗುತ್ತಿದೆ .

ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವದ ದಿನ ಎಂಬುದು ಎಲ್ಲಾ ಭಾರತೀಯರ ಹಬ್ಬ. ಆದರೆ, ಈ ದಿನದಂದು ಎಲ್ಲರಿಗೂ ಧ್ವಜಾರೋಹಣ ನೆರವೇರಿಸುವ ಅವಕಾಶ ಇರುವುದಿಲ್ಲ. ಇದೇ ಕಾರಣಕ್ಕೆ ದೇಶದ ಎಲ್ಲಾ ಜನ ಸಾಮಾನ್ಯರ ಪ್ರತಿನಿಧಿಯಾಗಿ ಜನ ಪ್ರತಿನಿಧಿಗಳು ಧ್ವಜಾರೋಹಣ ಮಾಡುತ್ತಾರೆ. ಎಲ್ಲಾ ರಾಜ್ಯಗಳಂತೆ ಕರ್ನಾಟಕದಲ್ಲೂ ಈ ಸಂಪ್ರದಾಯವನ್ನೇ ಆಚರಿಸಿಕೊಂಡು ಬರಲಾಗುತ್ತಿತ್ತು.

ಆಯಾ ಕಾಲಕ್ಕೆ ತಕ್ಕಂತೆ ಪರಿಸ್ಥಿತಿ ಏನೇ ಇದ್ದರೂ, ಈ ಸಂಪ್ರದಾಯವನ್ನು ಈ ವರೆಗೆ ಮುರಿದಿಲ್ಲ. ಹೀಗೆ ಮುರಿಯುವ ಅಧಿಕಾರವೂ ಯಾರಿಗೂ ಇಲ್ಲ. (ಕೆಲವು ಅನಿವಾರ್ಯ ಹಾಗೂ ಸಂದಿಗ್ಧ ಕಾಲವನ್ನು ಹೊರತು ಪಡಿಸಿ). ಆದರೆ, ಪ್ರಸ್ತುತ ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದ್ದಾಗ್ಯೂ, 2019ರ ಆಗಸ್ಟ್ 15 ರಂದು ರಾಜ್ಯದ ಜಿಲ್ಲಾ ಕೇಂದ್ರದಲ್ಲಿ ಜನಪ್ರತಿನಿಧಿಗಳ ಬದಲಾಗಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಲಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದ್ದು, ಮೊದಲ ಬಾರಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಆಮೆಗತಿಯ ನೀತಿಯಿಂದ ರಾಜ್ಯದಲ್ಲಿ ಈವರೆಗೆ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ತಿಲಾಂಜಲಿ ಇಡಲು ಮುಂದಾಗಿದೆ.

ಆಮೆಗತಿಯ ಸರ್ಕಾರ ಸಂಪ್ರದಾಯ ಮುರಿದ ಬಿಎಸ್​ವೈ

ಕಾಂಗ್ರೆಸ್​-ಜೆಡಿಎಸ್​ ನೇತೃತ್ವದ ಸರ್ಕಾರಕ್ಕೆ ಬಹುಮತ ಇಲ್ಲ ಎಂಬ ಕಾರಣಕ್ಕೆ ಕಳೆದ ಜುಲೈ 26 ರಂದು ಸರ್ಕಾರವನ್ನು ಉರುಳಿಸಿದ್ದ ಬಿಜೆಪಿ ನಾಯಕರು ರಾಜ್ಯದಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿದ್ದರು. ಬಿ.ಎಸ್​. ಯಡಿಯೂರಪ್ಪ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಆದರೆ, ಸರ್ಕಾರ ರಚಿಸಿ 18 ದಿನಗಳಾಗಿದ್ದರೂ ಈ ವರೆಗೆ ಸಚಿವ ಸಂಪುಟ ರಚನೆ ಮಾಡಲಾಗಿಲ್ಲ. ರಾಜ್ಯದಲ್ಲಿ ಇಂದು ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಆದರೂ ಅದನ್ನು ನಿಭಾಯಿಸಲು ಒಬ್ಬೇ ಒಬ್ಬ ಸಮರ್ಥ ಸಚಿವನಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದ ಕಾರಣ ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯೇ ಧ್ವಜಾರೋಹಣ ನೆರವೇರಿಸಬೇಕು ಎಂದು ಸೂಚಿಸಿದೆ.

GOV
ಧ್ವಜಾರೋಹಣ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ.
ಹೀಗೆ ಸುತ್ತೋಲೆಯನ್ನು ಹೊರಡಿಸುವ ಮೂಲಕ ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಮೊದಲ ಬಾರಿಗೆ ಈವೆರೆಗೆ ನಡೆದುಕೊಂಡು ಬಂದ ಸಂಪ್ರದಾಯವನ್ನು ಅಧಿಕೃತವಾಗಿ ಮುರಿದಂತಾಗಿದೆ.

ಬಸವರಾಜ ಬೊಮ್ಮಾಯಿ ಕಾಲದಲ್ಲೂ ಈ ಸಂಪ್ರದಾಯ ಮುರಿಯಲಾಗಿತ್ತು;

ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ಆರಂಭವಾದ 1952 ರಿಂದ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರೇ ನಿಯಮದಂತೆ ಈವರೆಗೆ ಧ್ವಜಾರೋಹಣ ಮಾಡುತ್ತಾ ಬಂದಿದ್ದಾರೆ. ಬಸವರಾಜ್ ಬೊಮ್ಮಾಯಿ ಕಾಲದಲ್ಲಿ ಒಮ್ಮೆ ಮಾತ್ರ ನಾನಾ ಕಾರಣಗಳಿಂದಾಗಿ ಈ ಸಂಪ್ರದಾಯವನ್ನು ಮುರಿಯಲಾಗಿತ್ತು.

ಅದು 1988ರ ಆಗಸ್ಟ್.13 ಬಸವರಾಜ ಬೊಮ್ಮಾಯಿ ಈ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಜೊತೆಗೆ ಕೆಲವು ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಪಡೆದಿದ್ದರು. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 2 ದಿನಕ್ಕೆ ಸ್ವಾತಂತ್ರ್ಯ ದಿನಾಚರಣೆ ಎದುರಾಗಿತ್ತು. ಹೀಗಾಗಿ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಲವು ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿದರೆ, ಇನ್ನೂ ಕೆಲವು ಕಡೆಗಳಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಿದ್ದರು.

ಹೀಗೆ 1988 ಆಗಸ್ಟ್ 13 ರಂದು ಅಸ್ಥಿತ್ವಕ್ಕೆ ಬಂದ ಜನತಾ ಪಕ್ಷದ ಬೊಮ್ಮಾಯಿ ಸರ್ಕಾರ ಹೆಚ್ಚು ದಿನ ಉಳಿಯಲಿಲ್ಲ. ಬಹುಮತವಿಲ್ಲದೆ ಈ ಸರ್ಕಾರ 21ನೇ ಏಪ್ರಿಲ್ 1989ರಂದು ಪತನವಾಗಿತ್ತು. ಹೀಗಾಗಿ 21ನೇ ಏಪ್ರಿಲ್​ನಿಂದ 30ನೇ ನವೆಂಬರ್ 1989ರ ವರೆಗೆ ರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಹೀಗಾಗಿ ರಾಷ್ಟ್ರಪತಿಗಳ ಸೂಚನೆ ಮೇರೆ 1989ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಧ್ವಾಜಾರೋಹಣ ನೆರವೇರಿಸಿದ್ದರು.

ಸರಿಯಾಗಿ ಈ ಘಟನೆ ನಡೆದು 30 ವರ್ಷಗಳ ತರುವಾಯ ಮತ್ತೆ ಇಂತಹದ್ದೇ ಘಟನೆಗೆ ಪ್ರಸ್ತುತ ಯಡಿಯೂರಪ್ಪ ನೇತೃತ್ವದ ಸರ್ಕಾರ ಸಾಕ್ಷಿಯಾಗಿದೆ. ಆದರೆ, ಈ ಘಟನೆ ರಾಷ್ಟ್ರಪತಿ ಆಳ್ವಿಕೆಯಲ್ಲಿ ನಡೆಯುವುದಕ್ಕೂ ಇಂದು ಚುನಾಯಿತ ಸರ್ಕಾರದ ಅವಧಿಯಲ್ಲಿ ನಡೆಯುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎನ್ನುವುದು ಉಲ್ಲೇಖಾರ್ಹ.

 
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ