Mantralaya: ಗುರುರಾಯರ 351ನೇ ಆರಾಧನಾ ಮಹೋತ್ಸವ, ಮಂತ್ರಾಲಯದಲ್ಲಿ ಕಳೆಗಟ್ಟಿದ ಭಕ್ತರ ಸಂಭ್ರಮ

ಮಂತ್ರಾಲಯದಲ್ಲಿ ‌ರಾಯರ 351ನೇ ಆರಾಧನಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. ನಿನ್ನೆಯಿಂದ ಶ್ರೀಮಠದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಆ. 12ರಂದು ರಾಯರ ಪೂರ್ವಾರಾಧನೆ, ಆ. 13ರಂದು ಮಧ್ಯಾರಾಧನೆ ಹಾಗೂ ಆ.14 ರಂದು ರಾಯರ ಉತ್ತರಾಧನೆ ನಡೆಯಲಿದೆ.

ಶ್ರೀ ರಾಘವೇಂದ್ರ ಸ್ವಾಮಿಗಳು

ಶ್ರೀ ರಾಘವೇಂದ್ರ ಸ್ವಾಮಿಗಳು

  • Share this:
ಮಂತ್ರಾಲಯ: ಆಂಧ್ರ ಪ್ರದೇಶ (Andhra Pradesh) ಹಾಗೂ ಕರ್ನಾಟಕ ಗಡಿಯಲ್ಲಿ (Karnataka Border) ಇರುವ, ರಾಯಚೂರಿನಿಂದ (Raichur) ಕೂಗಳತೆ ದೂರದಲ್ಲಿ ನೆಲೆಯಾಗಿರುವ, ಕಲಿಯುಗದ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ (Guru Raghavendra Swamy) ಪುಣ್ಯಭೂಮಿ ಮಂತ್ರಾಲಯದಲ್ಲಿ (Mantralaya) ನಿನ್ನೆಯಿಂದಲೇ ಸಂಭ್ರಮ ಮನೆಮಾಡಿದೆ. ಮಂತ್ರಾಲಯದಲ್ಲಿ ನಿನ್ನೆಯಿಂದ ಗುರು ರಾಯರ (Guru Raya) 351ನೇ ಆರಾಧನಾ ಮಹೋತ್ಸವ (Aradhana Mahotsav) ನಡೆಯುತ್ತಿದೆ. ಆಗಸ್ಟ್ 16ರವರೆಗೆ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾಧನೆ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು (Sri Subudhendra Teertha) ಧ್ವಜಾರೋಹಣ ನೆರವೇರಿಸಿ ಆರಾಧನೆಗೆ ಚಾಲನೆ ಕೊಟ್ಟರು. ಗೋ, ಅಶ್ವ, ಧಾನ್ಯ ಪೂಜೆಗಳನ್ನೂ ಶ್ರೀಗಳು ನೆರವೇರಿಸಿ, ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಮಂತ್ರಾಲಯದಲ್ಲಿ ಗುರುರಾಯರ ಆರಾಧನೆ

ಮಂತ್ರಾಲಯದಲ್ಲಿ ‌ರಾಯರ 351ನೇ ಆರಾಧನಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. ನಿನ್ನೆಯಿಂದ ಶ್ರೀಮಠದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಆ. 12ರಂದು ರಾಯರ ಪೂರ್ವಾರಾಧನೆ, ಆ. 13ರಂದು ಮಧ್ಯಾರಾಧನೆ ಹಾಗೂ ಆ.14 ರಂದು ರಾಯರ ಉತ್ತರಾಧನೆ ನಡೆಯಲಿದೆ. ನಿತ್ಯವೂ ಶ್ರೀಮಠದಲ್ಲಿ ಬೆಳಗ್ಗೆ ‌ನಿರ್ಮಲ ವಿಸರ್ಜನೆ, ಮೂಲ ರಾಮದೇವರ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.ನಿನ್ನೆ ಶ್ರೀಗಳಿಂದ ಮಹೋತ್ಸವಕ್ಕೆ ಚಾಲನೆ

ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಧ್ವಜಾರೋಹಣ ನೆರವೇರಿಸಿ ಆರಾಧನೆಗೆ ಚಾಲನೆ ಕೊಟ್ಟರು. ಗೋ, ಅಶ್ವ, ಧಾನ್ಯ ಪೂಜೆಗಳನ್ನೂ ಶ್ರೀಗಳು ನೆರವೇರಿಸಿದರು. ಇದಾದ ಬಳಿಕ ಶ್ರೀಮಠದ ಮುಂಭಾಗದಲ್ಲಿ ನಿರ್ಮಿಸಿರುವ ಮಧ್ವ ದ್ವಾರವನ್ನು ಲೋಕಾರ್ಪಣೆ ಮಾಡಲಾಯಿತು. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ವಿಶೇಷ ಹೂವಿನ ಅಲಂಕಾರ, ಝಗಮಗಿಸುವ ವಿದ್ಯುದ್ದೀಪ ಮಾಡಲಾಗಿತ್ತು.

ಇದನ್ನೂ ಓದಿ: Fake Website: ಮಂತ್ರಾಲಯದಲ್ಲಿ ರಾಯರ ಹೆಸರಲ್ಲಿ ವಂಚನೆ, ಗಾಣಗಾಪುರದಲ್ಲಿ 20 ಕೋಟಿ ದೋಖಾ!

ಯಾವ ಯಾವ ಕಾರ್ಯಕ್ರಮಗಳು ಜರುಗಲಿವೆ?

ನಾಳೆ ಅಂದರೆ ಆ.12 ರಂದು ರಾಯರ ಪೂರ್ವಾರಾಧನೆ ನಿಮಿತ್ತ ಪ್ರತಿವರ್ಷದಂತೆ ತಿರುಮಲ, ತಿರುಪತಿ ದೇವಸ್ಥಾನದಿಂದ ಬರುವ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಶ್ರೀರಾಘವೇಂದ್ರ ಸ್ವಾಮಿಗಳ ಅನುಗ್ರಹ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಆ.13 ರಂದು ರಾಯರ ಮಧ್ಯಾರಾಧನೆ ಹಿನ್ನೆಲೆಯಲ್ಲಿ ಚಿನ್ನದ ರೋಥ್ಸವ ಆ.14 ರಂದು ಉತ್ತರಾರಾಧನೆಯ ಭಾಗವಾಗಿ ಮಹಾರಥೋತ್ಸವ ನಡೆಯಲಿದೆ.

ನಾಳೆ ಪೂರ್ವಾರಾಧನೆ ಕಾರ್ಯಕ್ರಮ

ಆಗಸ್ಟ್ 12 ರಂದು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಮೊದಲ ದಿನ. ಅದು ಪೂರ್ವಾರಾಧನೆ. ಅಂದು ರಾಯರ ಉತ್ಸವ ಮೂರ್ತಿಯ ರಜತ ಸಿಂಹ ವಾಹನೋತ್ಸವ ಜರುಗಲಿದೆ. ಆಗಸ್ಟ್ 13 ಮಧ್ಯರಾಧನೆಯಂದು ತಿರುಪತಿಯ ವೆಂಕಟೇಶ ದೇವರ ಶೇಷವಸ್ತ್ರ ಸಮರ್ಪಣೆ ನಡೆಯಲಿದೆ. ನಂತರ ರಾಯರ ಮೂಲ ಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ, ಪ್ರಾಕಾರದಲ್ಲಿ ಸ್ವರ್ಣ ರಥೋತ್ಸವ ನಡೆಯಲಿದೆ.

ಆಗಸ್ಟ್ 14ರಂದು ಉತ್ತರಾಧನೆ ಮಹೋತ್ಸವ

ಆಗಸ್ಟ್ 14 ಉತ್ತರಾಧನೆ ದಿನದಂದು ರಾಯರ ವಸಂತೋತ್ಸವ ಹಾಗೂ ಮಹಾ ರಥೋತ್ಸವ ಜರುಗಲಿದೆ. ವಸಂತೋತ್ಸವದ ದಿನ ಮೊದಲು ರಾಯರ ಬೃಂದಾವನಕ್ಕೆ ಬಣ್ಣಗಳನ್ನ ಅರ್ಪಿಸುತ್ತಾರೆ. ಬಳಿಕ ಸ್ವಾಮಿಗಳು ಒಬ್ಬರಿಗೊಬ್ಬರ ಬಣ್ಣಗಳನ್ನ ಎರಚಿ ಸಂಭ್ರಮಿಸುತ್ತಾರೆ. ನಂತರ ಭಕ್ತರಿಗೂ ಆ ಬಣ್ಣಗಳನ್ನ ಎರಚಿ ತಮ್ಮ ಧಾರ್ಮಿಕ ವಿಧಿವಿಧಾನಗಳಂತೆ ಆಚರಣೆ ನಡೆಸಲಾಗುತ್ತೆ. ಅದೇ ದಿನ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥರು ಹೇಲಿಕಾಪ್ಟರ್ನಲ್ಲಿ ತೆರಳಿ ಅದರ ಮೂಲಕ ಮೇಲಿನಿಂದ ರಥೋತ್ಸವಕ್ಕೆ ಪುಷ್ಪ ನಮನ ಸಲ್ಲಿಸುತ್ತಾರೆ.

ಇದನ್ನೂ ಓದಿ: Raksha Bandhan: ರಾಶಿ ರಾಶಿ ಕಲರ್​ಫುಲ್ ರಾಖಿ! ಅಬ್ಬಾ, ರಕ್ಷಾಬಂಧನದ ಸಡಗರವೇ!

ಬಿಎಸ್‌ವೈ ಕುಟುಂಬದಿಂದ ರಾಯರ ದರ್ಶನ

ಇನ್ನು ಮಾಜಿ ಸಿಎಂ ಬಿಎಸ್‌ವೈ, ಪುತ್ರ ವಿಜಯೇಂದ್ರ ಸೇರಿದಂತೆ ಬಿಎಸ್‌ವೈ ಕುಟುಂಬಸ್ಥರು ಇಂದು ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಆರಾಧನಾ ಮಹೋತ್ಸವದಲ್ಲಿ ಭಾಗಿಯಾಗಿ, ರಾಯರ ದರ್ಶನ ಪಡೆದರು.
Published by:Annappa Achari
First published: