Thaawarchand Gehlot: ಕರ್ನಾಟಕದ ನೂತನ ರಾಜ್ಯಪಾಲ ತಾವರ್​ಚಂದ್ ಗೆಹ್ಲೋತ್ ಯಾರು? ಮೊದಲು ಎಲ್ಲಿದ್ದರು? ರಾಜ್ಯದ ನಿರೀಕ್ಷೆಗಳೇನು?

Karnataka Governor Thaawarchand Gehlot: ಮಧ್ಯಪ್ರದೇಶದ ನಗ್ಡಾದ ರುಪೇಟ್ ಎಂಬಲ್ಲಿ ೧೯೪೮ ಮೇ ೧೮ ರಂದು ಜನಿಸಿದ ಗೆಹ್ಲೋಟರಿಗೆ ಪ್ರಸ್ತುತ ೭೩ ವರ್ಷ ವಯಸ್ಸು..ಉಜ್ಜಯಿನಿಯ ವಿಕ್ರಂ ವಿವಿಯಿಂದ ಬಿಎ ಪದವಿ ಪಡೆದಿದ್ದ ಅವರಿಗೆ ಅಂಬೇಡ್ಕರ್ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ತಾವರ್​ಚಂದ್ ಗೆಹ್ಲೋತ್

ತಾವರ್​ಚಂದ್ ಗೆಹ್ಲೋತ್

  • Share this:
Thaawarchand Gehlot: ರಾಜ್ಯಕ್ಕೆ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋತ್ ನೇಮಕವಾಗಿದ್ದಾರೆ. ವಜುಭಾಯಿ ವಾಲಾರ ನಿವೃತ್ತಿಯ ನಂತ್ರ ಗೆಹ್ಲೋಟ್ ನೇಮಕಗೊಂಡಿದ್ದಾರೆ..ದಲಿತ ಸಮುದಾಯದ ನಾಯಕರಾಗಿರುವ ತಾವರಚಂದ್ ಗೆಹ್ಲೋಟ್ ಮೇಲೆ ರಾಜ್ಯದ ಜನ ಹಲವು ನಿರೀಕ್ಷೆಗಳನ್ನ ಹೊಂದಿದ್ದಾರೆ..  ಪ್ರಸ್ತುತ ರಾಜ್ಯಪಾಲರಾಗಿದ್ದ ವಜುಬಾಯಿ ವಾಲಾರ ಅವಧಿ ಮುಗಿದಿತ್ತು..ಆದ್ರೂ ಕಳೆದ ಎರಡು ವರ್ಷಗಳಿಂದ ಕರ್ನಾಟಕದ ರಾಜ್ಯಪಾಲರನ್ನಾಗಿ ಮುಂದುವರಿಸಲಾಗಿತ್ತು..ವಾಲಾರ ಮುಂದುವರಿಕೆ ಹಲವು ಚರ್ಚೆಗೆ ಗುರಿಯಾಗಿತ್ತು..ಇದೀಗ ಅವರ ಜಾಗಕ್ಕೆ ನೂತನ ರಾಜ್ಯಪಾಲರನ್ನಾಗಿ ಬಿಜೆಪಿಯ ಹಿರಿಯ ನಾಯಕ, ದಲಿತ ಸಮುದಾಯಕ್ಕೆ ಸೇರಿದ ತಾವರ್ ಚಂದ್ ಗೆಹ್ಲೋಟ್ ರನ್ನ ನೇಮಕ ಮಾಡಲಾಗಿದೆ.. ಕೇಂದ್ರ  ಸಚಿವರಾಗಿದ್ದ ಗೆಹ್ಲೋಟ್ ಅವರನ್ನ ಇದೀಗ ರಾಜ್ಯಪಾಲರನ್ನಾಗಿ ಮಾಡಿದ್ದು ಹಲವು ಕುತೂಹಲಕ್ಕೆ ಕಾರಣವಾಗಿದೆ..

ನೂತನ ರಾಜ್ಯಪಾಲರಿಗೆ ಹಲವು ನಾಯಕರು ಶುಭಕೋರಿದ್ದಾರೆ.. ಮಧ್ಯಪ್ರದೇಶದ ನಗ್ಡಾದ ರುಪೇಟ್ ಎಂಬಲ್ಲಿ ೧೯೪೮ ಮೇ ೧೮ ರಂದು ಜನಿಸಿದ ಗೆಹ್ಲೋಟರಿಗೆ ಪ್ರಸ್ತುತ ೭೩ ವರ್ಷ ವಯಸ್ಸು..ಉಜ್ಜಯಿನಿಯ ವಿಕ್ರಂ ವಿವಿಯಿಂದ ಬಿಎ ಪದವಿ ಪಡೆದಿದ್ದ ಅವರಿಗೆ ಅಂಬೇಡ್ಕರ್ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು..೧೯೭೭ ರಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಇವರು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು..ನಂತ್ರ ೧೯೮೦,೯೦,೯೩ ರಲ್ಲಿ ಮೂರು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದರು..೮೬ ರಿಂದ ೯೭ ರವರೆಗೆ ಮಧ್ಯಪ್ರದೇಶದ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು..೧೯೯೬ ರಿಂದ ೨೦೦೯ ರವರೆಗೆ ಮಧ್ಯಪ್ರದೇಶ ಶಹಜಾನಪುರದಲ್ಲಿ ಲೋಕಸಭೆಯನ್ನ ಪ್ರತಿನಿಧಿಸಿದ್ದರು...ನಂತರ ರಾಜ್ಯಸಭೆ ಸದಸ್ಯರಾಗಿ,ಕೇಂದ್ರ ಸಾಮಾಜಿಕ‌ ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ರು..ಇದೀಗ ಅವರನ್ನ ರಾಜ್ಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ..

ಇದನ್ನೂ ಓದಿ: Modi New Cabinet: ಮೋದಿ ಸಂಪುಟ ಸೇರಲಿರುವ ಯುವ ಸಂಸದನ ಮೇಲೆ ಎಲ್ಲರ ಕಣ್ಣು; ಯಾರು ಆತ?

ಇನ್ನು ನೂತನ  ರಾಜ್ಯಪಾಲರ ನೇಮಕವನ್ನು ಸ್ವಾಗತ ಮಾಡಿರುವ ವಿಪಕ್ಷ ನಾಯಕ  ಸಿದ್ದರಾಮಯ್ಯ ಅವರು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ತಾವರ್ ಚಂದ್ ಗೆಹ್ಲೊಟ್ ಅವರಿಗೆ ರಾಜ್ಯದ ಜನತೆಯ ಪರವಾಗಿ ಶುಭಕೊರಿ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಪಕ್ಷಾತೀತವಾಗಿ , ಸಂವಿಧಾನಕ್ಕೆ  ಬದ್ಧವಾಗಿ ಕಾರ್ಯನಿರ್ವಹಿಸುವ ರಾಜ್ಯಪಾಲರ ಸ್ಥಾನಕ್ಕೆ ನಮ್ಮ ಪಕ್ಷ ಸದಾ ಸಹಕಾರ ನೀಡಲಿದೆ ಎಂದ ಸಿದ್ದರಾಮಯ್ಯ ತಿಳಿಸಿದ್ದಾರೆ.... ಇನ್ನು  ಗೇಹ್ಲೋಟ್ ಅವರು 1948ರಲ್ಲಿ ಮೇ 18ರಂದು ಜನಸಿ. ಸದ್ಯ ಎನ್​ಡಿಎ ನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸ್ತಾಯಿದ್ದಾರೆ,  ಸದ್ಯ ಪ್ರಸ್ತುತ ರಾಜ್ಯಸಭೆಯ ಸಭಾನಾಯಕನಾಗಿಯೂ ಕೆಲಸ ಮಾಡುತ್ತಿರುವ  ಗೆಹ್ಲೋಟ್ ಈ  ಹಿಂದೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಕೆಲಸ ಮಾಡಿದ್ದ ಗೆಹ್ಲೋಟ್ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು ಗೆಹ್ಲೋಟ್ ಸಂಘಪರಿವಾರದ ಥಾವರ್ ಚಂದ್ ಗೆಹ್ಲೋಟ್.

ಮಧ್ಯಪ್ರದೇಶ ಮೂಲದ ದಲಿತ ನಾಯಕ ಗೆಹ್ಲೋಟ್ ಆಗಿದ್ದಾರೆ... ಒಟ್ನಲ್ಲಿ ರಾಜ್ಯಪಾಲರಾಗಿದ್ದ ವಜುಬಾಯಿ ವಾಲಾರ ಜಾಗಕ್ಕೆ ಇದೀಗ ತಾವರ್ ಚಂದ್ ಗೆಹ್ಲೋಟ್ ನೇಮಕಗೊಂಡಿದ್ದಾರೆ..ವಾಲಾರ ಅವಧಿಯಲ್ಲಿ ರಾಜಭವನ ಗುಜರಾತ್ ಭವನವಾಗಿ ಮಾರ್ಪಟ್ಟಿತ್ತು ಎಂಬ ಆರೋಪಗಳಿದ್ದವು..ಆದ್ರೆ ಇಂತಹ ಆರೋಪಗಳಿಗೆ ಅವಕಾಶ ಕೊಡದೆ ನೂತನ ರಾಜ್ಯಪಾಲರು ರಾಜ್ಯದ ಜನರ ಸಮಸ್ಯೆಗಳ ಪರಿಹಾರಕ್ಕೆ,ರಾಜ್ಯದ ಶ್ರೇಯೋಭಿವೃದ್ಧಿಗೆ,ಸರ್ಕಾರದ ತಪ್ಪು ಒಪ್ಪುಗಳನ್ನ ತಿದ್ದಿ ಸರಿದಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡ್ಲಿ ಎಂದು ಆಶಿಸೋಣ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: