TG Halli: ಆಮೆ ಗತಿಯಲ್ಲಿ ಸಾಗುತ್ತಿರುವ ಟಿ.ಜಿ ಹಳ್ಳಿಯ ವಾಟರ್ ಪ್ರಾಜೆಕ್ಟ್! ಪೂರ್ಣಗೊಳ್ಳುವುದು ಯಾವಾಗ?

ಬಹು ನಿರೀಕ್ಷಿತ ಟಿ.ಜಿ ಹಳ್ಳಿಯ ರಿಸರ್ವೈರ್ ನಿಂದ ನೀರು ಪಡೆಯಲು ಬೆಂಗಳೂರಿಗರು ಮುಂದಿನ ವರ್ಷದ ತನಕ ಕಾಯಬೇಕಾಗುತ್ತದೆ. ಬೆಂಗಳೂರು ನೀರು ಸರಬರಾಜು ಅಧಿಕಾರಿಗಳು ಹಾಗು ಸಿವರೇಜ್ ಬೋರ್ಡ್ ಪ್ರಕಾರ ಈ ಟಿ.ಜಿ ಹಳ್ಳಿ ವಾಟರ್ ಪ್ರಾಜೆಕ್ಟ್ ಇನ್ನಷ್ಟು ಮುಂದೆ ಹೋಗಬಹುದು ಹಾಗು ಇದು ಈ ವರ್ಷದ ಕೊನೆಯವರೆಗೂ ಪೂರ್ಣವಾಗಬಹುದು ಎನ್ನಲಾಗುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬಹು ನಿರೀಕ್ಷಿತ ಟಿ.ಜಿ ಹಳ್ಳಿಯ (TG Halli) ರಿಸರ್ವೈರ್ ನಿಂದ ನೀರು ಪಡೆಯಲು ಬೆಂಗಳೂರಿಗರು ಮುಂದಿನ ವರ್ಷದ ತನಕ ಕಾಯಬೇಕಾಗುತ್ತದೆ. ಬೆಂಗಳೂರು ನೀರು ಸರಬರಾಜು ಅಧಿಕಾರಿಗಳು (Water Supply Officer) ಹಾಗು ಸಿವರೇಜ್ ಬೋರ್ಡ್ ಪ್ರಕಾರ ಈ ಟಿ.ಜಿ ಹಳ್ಳಿ ವಾಟರ್ ಪ್ರಾಜೆಕ್ಟ್ ಇನ್ನಷ್ಟು ಮುಂದೆ ಹೋಗಬಹುದು ಹಾಗು ಇದು ಈ ವರ್ಷದ ಕೊನೆಯವರೆಗೂ ಪೂರ್ಣವಾಗಬಹುದು ಎನ್ನಲಾಗುತ್ತಿದೆ. ಈ ಹಿಂದೆ ಸಿವರೇಜ್ ಬೋರ್ಡ್ (Sewerage Board), ಟಿ.ಜಿ ಹಳ್ಳಿ ವಾಟರ್ ಪ್ರಾಜೆಕ್ಟ್ ಸಂಪೂರ್ಣ ಮಾಡಲು 2022 ರ ಮಾರ್ಚ್ ಅನ್ನು ಕಡೆಯ ದಿನಾಂಕ ಎಂದು ತಿಳಿಸಿತ್ತು ಆದರೆ ಆ ಸಮಯ ಈಗಾಗಲೇ ಮುಕ್ತಾಯವಾಗಿದ್ದು ಇದು ಸಪ್ಟೆಂಬರ್ 2022ರ ವರೆಗೂ ಮುಂದುವರಿಯಲಿದೆ ಎನ್ನಲಾಗುತ್ತಿದೆ.

ಪ್ರಾಜೆಕ್ಟ್ ಬಗ್ಗೆ ಮುಖ್ಯ ಇಂಜಿನಿಯರ್ ಎಸ್.ವಿ.ರಮೇಶ್ ಹೇಳಿದ್ದೇನು 
ಈ ಕುರಿತು ಮಾತನಾಡಿರುವ ಮುಖ್ಯ ಇಂಜಿನಿಯರ್ ಆದ ಎಸ್.ವಿ.ರಮೇಶ್ ಅವರು "ಕೆಲಸವು ಈಗಾಗಲೇ ಶೇಕಡಾ 85 ರಷ್ಟು ಪೂರ್ಣವಾಗಿದೆ, ಸಿವೇಜ್ ಟ್ರೀಟ್ಮೆಂಟ್ ಪ್ಲಾಂಟ್ ಮುಗಿಯುವ ಹಂತದಲ್ಲಿದೆ ಹಾಗೂ ವಾಟರ್ ಟ್ರೀಟ್ಮೆಂಟ್ ಪ್ಲಾಂಟ್ ಮುಂದಿನ ನಾಲ್ಕು ಅಥವಾ ಐದು ತಿಂಗಳಲ್ಲಿ ಸಂಪೂರ್ಣ ಆಗಲಿದೆ. ಈ ನಡುವೆ ಎಕ್ವಿಪಿಮೆಂಟ್ಸ್ ಬರುವುದು ನಿಧಾನ ಆಗಿರುವುದನ್ನು ಹೊರತು ಪಡಿಸಿದರೆ ಕೆಲಸಗಾರರಿಂದ ಒಂದಷ್ಟು ಪ್ರಮಾದಗಳಾಗಿದ್ದು ಅವರು ಕೆಲಸ ಮಾಡುವ ವಿಧಾನಗಳಿಂದ ಇದು ಸ್ವಲ್ಪ ನಿಧಾನ ಆಗಿದೆ" ಎಂದು ಹೇಳಿದ್ದಾರೆ.

ಯೋಜನೆ ತಡವಾಗಲು ಕಾರಣವೇನು ?
ಇನ್ನು ಯೋಜನೆಯ ಅಧಿಕಾರಿಗಳ ಪ್ರಕಾರ, ಸಿವರೇಜ್ ಬೋರ್ಡ್ ಅವಶ್ಯಕ ಎಕ್ವಿಪ್ಮೆಂಟ್ಸ್ ಗಳಿಗಾಗಿ ಜರ್ಮನಿ, ಇಟಲಿ ಹಾಗು ಸ್ವೀಡನ್ ದೇಶಗಳಿಗೆ ಆರ್ಡರ್ ನೀಡಿತ್ತು. ಇಟಲಿ ಹಾಗು ಸ್ವೀಡನ್ ದೇಶಗಳಿಂದ ಸರಿಯಾದ ಸಮಯಕ್ಕೆ ಸಾಮಗ್ರಿಗಳು ಬಂದವು ಆದರೆ ಜರ್ಮನ್ ದೇಶದಿಂದ ಬರಬೇಕಾದ ಸಾಮಗ್ರಿಗಳಿಗಾಗಿ ಕಾಯಬೇಕಾಯಿತು, ಏಕೆಂದರೆ ಆ ಸಾಮಗ್ರಿಯೇ ಮುಖ್ಯವಾಗಿ ನೀರನ್ನು ಶುದ್ಧಗೊಳಿಸಲು ಬಳಸಲಾಗುತ್ತಿದೆ.

ಇದನ್ನೂ ಓದಿ: Hebbal Traffic: ಹೆಬ್ಬಾಳ ಫ್ಲೈ ಓವರ್ ಟ್ರಾಫಿಕ್ ಕಡಿಮೆ ಮಾಡಲು ಹೊಸ ಪ್ಲ್ಯಾನ್​, ಯಾವ್ಯಾವ ರೂಟ್​ ಚೇಂಚ್​? ಇಲ್ಲಿದೆ ಫುಲ್ ಡೀಟೇಲ್ಸ್

ಉತ್ತಮ ಗುಣಮಟ್ಟದಲ್ಲಿ ನೀರನ್ನು ಶುದ್ಧಗೊಳಿಸಲು ಓಝೋನೇಷನ್ ಪ್ರಕ್ರಿಯೆ ಮಾಡಲಾಗುತ್ತಿದ್ದು ಇದು ಸಾಮಾನ್ಯವಾಗಿ ನೀರನ್ನು ಶುದ್ಧಗೊಳಿಸಲು ಮಾಡಲಾಗುವ ಕ್ಲೋರೊನೇಷನ್ ಪ್ರಕ್ರಿಯೆಗಿಂತ ಮೇಲಿನ ಹಂತದ ಶುದ್ಧೀಕರಣವಾಗಿದೆ. ಈ ತಂತ್ರಜ್ಞಾನವನ್ನೇ ಪ್ರಸ್ತುತ ಟಿ.ಜಿ ಹಳ್ಳಿಯಲ್ಲಿ ಬಳಸಲಾಗುತ್ತಿದೆ.

ಈ ಕುರಿತು ಅಧಿಕಾರಿಗಳು ಹೇಳಿದ್ದು ಹೀಗೆ 
ಇನ್ನು, ಈ ಜಲಾಶಯದ ಕೆಲಸ ಈ ವರ್ಷದ ಕೊನೆಯಲ್ಲಿ ತಯಾರಾದರೂ ಸಹ, ಅದು ಅದರ ಒಟ್ಟು ಸಾಮರ್ಥ್ಯದ ಕೇವಲ 50% ರಷ್ಟು ಮಾತ್ರವಷ್ಟೆ ಕಾರ್ಯಾಚರಣೆ ಮಾಡಬಹುದೆನ್ನಲಾಗುತ್ತಿದ್ದು ಇದಕ್ಕೆ ಪ್ರಮುಖ ಕಾರಣ ಎತ್ತಿನಹೊಳೆ ಜಲಾಶಯದ ಕೆಲಸ ಇನ್ನು ನಡೆಯುತ್ತಿರುವುದೇ ಆಗಿದೆ. ಏಕೆಂದರೆ ಶೇಕಡ 50% ರಷ್ಟು ನೀರಿನ ಪ್ರಮಾಣ ಈ ಟಿ.ಜಿ ಹಳ್ಳಿ ಜಲಾಶಯಕ್ಕೆ ಎತ್ತಿನಹೊಳೆ ಜಲಾಶಯದಿಂದಲೇ ಪಡೆಯುವ ನೀರಿಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನವೆಂಬರ್ ಅಥವಾ ಡಿಸೇಂಬರ್ ಒಳಗೆ ಪ್ಲಾಂಟ್ ಕಾರ್ಯ ಆರಂಭ ಮಾಡಲಾಗುವುದಾದರೂ ನೀರು ಪೂರೈಕೆಯು ಎತ್ತಿನಹೊಳೆ ಜಲಾಶಯದ ಕೆಲಸದ ಸ್ಥಿತಿಯ ಮೇಲೆ ಅವಲಂಬಿಸಿದೆ. ಟಿ.ಜಿ ಹಳ್ಳಿಯ ಸಂಪೂರ್ಣ ಕೆಪಾಸಿಟಿ 110 MLD ಆಗಿದೆ. ಆದ್ದರಿಂದ ಶೇಕಡ 50% ರಷ್ಟು ನೀರು ಎತ್ತಿನಹೊಳೆ ಜಲಾಶಯದಿಂದ ಬರಲಿದೆ. ವರ್ಷದ ಕೊನೆಯೊಳಗೆ ಈ ಜಲಾಶಯ ಸಂಪೂರ್ಣ ಆಗದಿದ್ದರೆ ನಾವು 50% ರಂತೆ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಸಂಬಂಧ ಪಟ್ಟ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:  Bank Fraud: ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ! ದೋಖಾ ದುಡ್ಡಲ್ಲಿ ಈತ ಮಾಡಿರೋ ಶೋಕಿ ಒಂದಾ? ಎರಡಾ? ನೀವೇ ನೋಡಿ

BWSSB, ಜಲಾಶಯ ಕೆಲಸವನ್ನು ಸಂಪೂರ್ಣ ಮಾಡಲು ಡಿಸೇಂಬರ್ 2021 ಕಡೆಯ ತಿಂಗಳೆಂದು ಹೇಳಿತ್ತು. ಆದರೆ ಕೋವಿಡ್ ಪ್ಯಾಂಡಮಿಕ್ ನಿಂದಾಗಿ ಅದು ನಿಧಾನವಾಯಿತು. ಅದಲ್ಲದೆ ಕಡೆಯ ವರ್ಷದ ಅತಿಯಾದ ಮಳೆಯೂ ಸಹ ಅಂದುಕೊಂಡ ಸಮಯದಲ್ಲಿ ಕೆಲಸ ಮುಗಿಸಲು ತಡೆಯೊಡ್ಡಿತು. ಆದ್ದರಿಂದ ಡಿಸೇಂಬರ್ 2021 ರಲ್ಲಿ ಮುಗಿಯಬೇಕಾಗಿದ್ದ ಜಲಾಶಯದ ಕೆಲಸ ಮಾರ್ಚ್ 2022 ಕ್ಕೆ ಮುಂದೂಡಿಕೆ ಆಯಿತು. ಬೋರ್ಡ್ ಪುನರುಜ್ಜೀವನದ ಕೆಲಸವನ್ನು 2019 ರಲ್ಲಿ 286 ಕೋಟಿಯ ಹಣದೊಂದಿಗೆ ಶುರು ಮಾಡಿದ್ದು ಇಲ್ಲಿಯವರೆಗೂ ಸುಮಾರು 170 ಕೋಟಿ ರೂ. ಹಣವನ್ನು ಇದಕ್ಕಾಗಿ ಉಪಯೋಗಿಸಲಾಗಿದೆ ಎಂದು ತಿಳಿದುಬಂದಿದೆ.
Published by:Ashwini Prabhu
First published: