ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಶಂಕಿತ ಉಗ್ರರ ಸಂಚು?; ಎನ್‌ಐಎ ತನಿಖೆಯಿಂದ ಬಯಲಾಯ್ತು ಆಘಾತಕಾರಿ ಮಾಹಿತಿ

ಬಂಧಿತ ಶಂಕಿತ ಉಗ್ರರು ಕರ್ನಾಟಕ, ತಮಿಳುನಾಡು ಹಾಗೂ ದಕ್ಷಿಣ ಭಾರತದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದರು. ಪ್ರಮುಖ ಆರೋಪಿ ತಮಿಳುನಾಡಿನ ಕಡಲೂರಿನ ಖ್ವಾಜಾ ಮೊಹೀನುದ್ದೀನ್ ಸೂಚನೆಯಂತೆ ನಗರದಲ್ಲಿ ಮೆಹಬೂಬ್ ಪಾಷ ವಿಧ್ವಂಸಕ ಕೃತ್ಯ ಎಸಗಲು ತಯಾರಿ ನಡೆಸಿದ್ದ ಎಂದು ಎನ್ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ 17 ಜನ ಶಂಕಿತ ಉಗ್ರರ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ತನಿಖೆ ವೇಳೆ ಶಂಕಿತ ಉಗ್ರರು ನಿಷೇಧಿತ ಐಸಿಸ್ ಜೊತೆ ನಂಟು ಹೊಂದಿದ್ದರು, ನಗರದಲ್ಲಿ ಲಘು ಸ್ಪೋಟಕಗಳನ್ನ ತಯಾರಿಸಿ ರಾಜ್ಯದಲ್ಲಿ ಸ್ಪೋಟ ನಡೆಸಲು ತಯಾರಿ ನಡೆಸಿದ್ದರು ಎಂದು ಎನ್ಐಎ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇದೇ ವರ್ಷದ ಜನವರಿಯಲ್ಲಿ ಎನ್ಐಎ, ತಮಿಳುನಾಡಿನ ಕ್ಯೂ ಬ್ರಾಂಚ್ ಪೊಲೀಸರು, ರಾಜ್ಯದ ಐಎಸ್ ಡಿ ಆಧಿಕಾರಿಗಳು ಬೆಂಗಳೂರಿನ ಗುರಪ್ಪನಪಾಳ್ಯದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಈ ದಾಳಿ ವೇಳೆ ಗುರಪ್ಪನಪಾಳ್ಯ ನಿವಾಸಿ ಮೆಹಬೂಬ್ ಪಾಷ ಎಂಬಾತನ ಮನೆಯಲ್ಲಿ ಉಗ್ರ ಚಟುವಟಿಕೆಗಳನ್ನ ನಡೆಸುತ್ತಿರುವುದು ಪತ್ರೆಯಾಗಿತ್ತು. ಬಳಿಕ ಪ್ರಕರಣದ ಕೈಗೆತ್ತಿಕೊಂಡ ಎನ್ಐಎ ತೀವ್ರ ತನಿಖೆ ನಡೆಸಿದ್ದು ಈ ವೇಳೆ ಕೆಲವು ಸ್ಪೋಟಕ ಮಾಹಿತಿಗಳನ್ನ ಹೊರ ಹಾಕಿದೆ.

ಬಂಧಿತ ಶಂಕಿತ ಉಗ್ರರು ಕರ್ನಾಟಕ, ತಮಿಳುನಾಡು ಹಾಗೂ ದಕ್ಷಿಣ ಭಾರತದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದರು. ಪ್ರಮುಖ ಆರೋಪಿ ತಮಿಳುನಾಡಿನ ಕಡಲೂರಿನ ಖ್ವಾಜಾ ಮೊಹೀನುದ್ದೀನ್ ಸೂಚನೆಯಂತೆ ನಗರದಲ್ಲಿ ಮೆಹಬೂಬ್ ಪಾಷ ವಿಧ್ವಂಸಕ ಕೃತ್ಯ ಎಸಗಲು ತಯಾರಿ ನಡೆಸಿದ್ದ ಎಂದು ಎನ್ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಮೆಹಬೂಬ್ ಪಾಷ ಮನೆಯಲ್ಲಿ ಕೆಲವು ಕಚ್ಚಾವಸ್ತುಗಳು ಪತ್ತೆ ಹಚ್ಚಿದ ಎನ್ಐಎ ಅವುಗಳ ಮೂಲಕ ಲಘು LED ತಯಾರಿಸುತ್ತಿದ್ದರು. ಬಂಧಿತ ಶಂಕಿತ ಉಗ್ರರಿಗೆ ಶಿವನಸಮುದ್ರ ಹಾಗೂ ಗುಂಡ್ಲುಪೇಟೆಯ ಅರಣ್ಯ ಪ್ರದೇಶದಲ್ಲಿ ತರಬೇತಿ ನೀಡಿದ್ದರು ಶಂಕಿತ ಉಗ್ರರ ಸಂಚಿನ ಬಗ್ಗೆ ಎನ್ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿದೆ. ಡಾರ್ಕ್ ವೆಬ್ ಮೂಲಕ ಕೆಲವು ವಿದೇಶಿ ಐಸಿಸ್ ಗಳ ಸಂಪರ್ಕ ಹೊಂದಿದ್ದ ಶಂಕಿತರು ಅವರ ಮಾರ್ಗ ಸೂಚನೆಯಂತೆ ಭಾರತದಲ್ಲಿ ಐಸಿಸ್ ಸಂಘಟನೆ ವಿಸ್ತರಿಸಲು ಮುಂದಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ : LockDown: ಲಾಕ್‌ಡೌನ್‌ ಜಾರಿಯಾಗಿರುವ ಜಿಲ್ಲೆಗಳಲ್ಲಿ ಮದ್ಯ ಮಾರಾಟ ನಿಷೇಧ; ಅಬಕಾರಿ ಸಚಿವ ಹೆಚ್‌. ನಾಗೇಶ್ಈಗಾಗಲೇ ಎನ್ಐಎ ಬೆಂಗಳೂರಿನ ಮೆಹಬೂಬ್ ಪಾಷ, ತಮಿಳುನಾಡಿನ ಖ್ವಾಜಾ ಮೊಹೀನುದ್ದೀನ್, ಮಂಡ್ಯದ ಇಮ್ರಾನ್ ಖಾನ್,ಮಹಮ್ಮದ್ ಹನೀಪ್, ಮಹಮ್ಮದ್ ಮನ್ಸೂರ್ ಅಲಿಖಾನ್, ಕೋಲಾರದ ಸಲೀಂ ಖಾನ್, ಹುಸೇನ್ ಷರೀಫ್ ಸೇರಿ 17 ಜನರನ್ನ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ 120b, 17,18,18b,19,20,38,39, UAPA ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
Published by:MAshok Kumar
First published: