• Home
  • »
  • News
  • »
  • state
  • »
  • Speech: ದೇಶದಲ್ಲಿ ಮುಸ್ಲಿಮರಿಂದ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ: ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಕಿಡಿ

Speech: ದೇಶದಲ್ಲಿ ಮುಸ್ಲಿಮರಿಂದ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ: ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಕಿಡಿ

ಡಾ.ಪ್ರಭಾಕರ್ ಭಟ್ ಕಲ್ಲಡ್ಕ

ಡಾ.ಪ್ರಭಾಕರ್ ಭಟ್ ಕಲ್ಲಡ್ಕ

ಎಡಪಂಥೀಯರು ದೇಶದಲ್ಲಿ ವಿಕೃತಿ ಮೆರೆಯುವ ಕೆಲಸ ಮಾಡ್ತಾ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿದರು.

ಮುಂದೆ ಓದಿ ...
  • News18 Kannada
  • Last Updated :
  • Chikkabanavara, India
  • Share this:

    ಚಿಕ್ಕಬಳ್ಳಾಪುರ: ದೇಶದಲ್ಲಿ (Country) ಕುಟುಂಬ (Family) ನಿಯಂತ್ರಣ ಯೋಜನೆಯನ್ನು (Plan) ಹಿಂದೂಗಳು (Hindu) ಮಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಮುಸ್ಲಿಮರು (Muslim) ದೇಶದಲ್ಲಿ (Country) ಭಯೋತ್ಪಾದಕ ಚಟುವಟಿಕೆಗಳನ್ನು (Terror Activities) ನಡೆಸುತ್ತಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಆರೋಪ ಮಾಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ  ಹೇಳಿಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಎಡಪಂಥೀಯರು ದೇಶದಲ್ಲಿ ವಿಕೃತಿ ಮೆರೆಯುವ ಕೆಲಸ ಮಾಡುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ಪ್ರಚಾರ ಮಾಡ್ತಾ ಇದ್ದಾರೆ ಎಂದು ಹರಿಹಾಯ್ದಿದ್ದಾರೆ. ಮುಸ್ಲಿಮರು ಪಾಕಿಸ್ತಾನದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.


    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ವಾಗ್ದಾಳಿ


    ಎಡಪಂಥೀಯರು ದೇಶದಲ್ಲಿ ವಿಕೃತಿ ಮೆರೆಯುವ ಕೆಲಸ ಮಾಡ್ತಾ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿದ ಅವರು, ನಟ ಚೇತನ್ ವಿರುದ್ಧ ಕಿಡಿಕಾರಿದ್ರು.


    ಕಾಂತಾರ ಸಿನಿಮಾ ವಿಚಾರದಲ್ಲಿ ನಟ ಚೇತನ್ ಚಕಾರ ಎತ್ತಿದ್ದರು. ಈ ಸಂಬಂಧ ನಟ ಚೇತನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಷಣ ಮಾಡಿದ ಕಲ್ಲಡ್ಕ ಭಟ್, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.


    ಇದನ್ನೂ ಓದಿ: ಈಗ ಮಣ್ಣಿನ ದೀಪ ಕೊಳ್ಳುವವರೇ ಇಲ್ಲ, ಹಣತೆ ತಯಾರಿಸುವ ಕುಂಬಾರನ ಬಾಳಲ್ಲಿ ಕತ್ತಲು!


    ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದಲ್ಲಿ ವಿಕೃತಿ ಪ್ರಚಾರ ಮಾಡುತ್ತಿದ್ದಾರೆ. ಮುಸ್ಲಿಮರು ಪಾಕಿಸ್ತಾನದ ಬಗ್ಗೆ ಯೋಚನೆ ಮಾಡುತ್ತಾರೆ. ಈಗ ಸಾಮಾನ್ಯ ಮುಸ್ಲಿಮರು ಕೂಡ ವಿಕೃತ ಮಾನಸಿಕತೆ ಬೆಳೆಯುತ್ತಿದೆ ಎಂದರು. ಮುಸ್ಲಿಮರಲ್ಲಿ ದೇಶ ಭಕ್ತ ಅಧಿಕಾರಿಗಳು, ನ್ಯಾಯವಾದಿಗಳು ಇದ್ದಾರೆ ಎಂದು ಹೇಳಿದ್ರು.


    ಮುಸ್ಲಿಮರು ಪಾಕಿಸ್ತಾನದ ಬಗ್ಗೆ ಯೋಚನೆ ಮಾಡುತ್ತಾರೆ.


    ಮುಸ್ಲಿಮರು ಪಾಕಿಸ್ತಾನದ ಬಗ್ಗೆ ಯೋಚನೆ ಮಾಡುತ್ತಾರೆ. ಆದರೆ ಸಾಮಾನ್ಯ ಮುಸ್ಲಿಮರಲ್ಲೂ ಸಹ ಆ ಮಾನಸಿಕತೆ ಬೆಳೆಯುತ್ತಿದೆ. ಮುಸ್ಲಿಮರಲ್ಲಿ ದೇಶ ಭಕ್ತ ಅಧಿಕಾರಿಗಳು, ನ್ಯಾಯವಾದಿಗಳು ಇದ್ದಾರೆ ಎಂದು ಹೇಳಿದರು. ಕೆಲವರು ಹಿಂದೂ ಸಂಘಟನೆಗಳನ್ನು ಕೋಮುವಾದಿ ಎಂದು ಆರೋಪ ಮಾಡುತ್ತಾರೆ.


    ಪ್ರಪಂಚದಲ್ಲಿ ಎಲ್ಲ ಧರ್ಮಗಳ ಜೊತೆ ಸಹಬಾಳ್ವೆ ನಡೆಸುತ್ತಿರುವವರು ಅಂದ್ರೆ ಅದು ಹಿಂದೂಗಳು ಮಾತ್ರ ಎಂದು ಹೇಳಿದರು. ಮತಾಂತರ ಎಂದರೆ ಅದೊಂದು ಗಂಡಾಂತರ. ನಮ್ಮಲ್ಲಿ ಜಾತಿ ಜಾತಿಗಳ ಮಧ್ಯೆ ಸಾಕಷ್ಟು ಗೊಂದಲಗಳಿವೆ.


    ಅಸ್ಪಶೃತೆ, ಪಾಪ ಮಾಡದೇ ಇರುವುದು. ದೇಶದಲ್ಲಿ ಯಾವುದೇ ಪಾಪವಿಲ್ಲ. ಈ ಹಿಂದೆ ಬಲತ್ಕಾರ, ಮೋಸ ವಂಚನೆಯಿಂದ ಮತಾಂತರ ಮಾಡುವ ಕೆಲಸ ನಡೆಯುತ್ತಿತ್ತು. ಆದರೆ ಈಗ ಮೊದಲಿನಂತೆ ಮಾಡುವಂತಿಲ್ಲ ಎಂದು ಹೇಳಿದರು.


    ಆದರೆ ಬೆಳೆಯುವ ಮಕ್ಕಳಲ್ಲಿ ವಿಷ ಬಿಜ ಬಿತ್ತುವ ಕೆಲಸ ಮಾಡಲಾಗ್ತಿದೆ


    ಹಿಜಾಬ್ ಧರಿಸಿ ಶಾಲೆಗೆ ಬಂದರೆ ಅದು ಶಾಲೆಯನ್ನು ಎರಡು ವಿಭಾಗ ಮಾಡಿದಂತೆ. ಶಾಲಾ ಮಕ್ಕಳು ಶಾಲೆಯ ನೀತಿ ಮತ್ತು ನಿಯಮಗಳ ಪಾಲನೆ ಮಾಡಬೇಕು. ಆದರೆ ಬೆಳೆಯುವ ಮಕ್ಕಳಲ್ಲಿ ವಿಷ ಬಿಜ ಬಿತ್ತುವ ಕೆಲಸ ಮಾಡಲಾಗ್ತಿದೆ. ಈಗ ಹಿಜಾಬ್ ಬೇಕು ಎನ್ನುವವರು ಮುಂದೆ ಪ್ರತ್ಯೇಕ ತರಗತಿಯ ಬಗ್ಗೆ ಬೇಡಿಕೆ ಇಡುತ್ತಾರೆ. ಅಲ್ಪಸಂಖ್ಯಾತರ ಉನ್ನತಿಗೆ ಬೇಕಾದ ಸೌಕರ್ಯ ನೀಡೋಣ.


    ಆದರೆ ಅಲ್ಪ ಸಂಖ್ಯಾತರನ್ನು ಹಿಂದೂಗಳ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ರು. ದೇಶದಲ್ಲಿ ಕುಟುಂಬ ನಿಯಂತ್ರಣ ಯೋಜನೆಯನ್ನು ಹಿಂದೂಗಳು ಮಾತ್ರ ನಿರ್ವಹಿಸುತ್ತಿದ್ದಾರೆ. ಆದರೆ ಮುಸ್ಲಿಮರಿಂದ ದೇಶದಲ್ಲಿ ಭಯೋತ್ಪಾಕ ಚಟುವಟಿಕೆಗಳು ನಡೆಯುತ್ತಾ ಇವೆ.


    ಇದನ್ನೂ ಓದಿ: ಎಸ್‌ಸಿ-ಎಸ್​ಟಿ ಸಮುದಾಯಕ್ಕೆ ದೀಪಾವಳಿ ಗಿಫ್ಟ್, ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ


    ಕೆಲವರು ಹಿಂದೂ ಸಂಘಟನೆಗಳನ್ನು ಕೋಮುವಾದಿ ಎಂದು ಆರೋಪ ಮಾಡುತ್ತಾರೆ. ಜಗತ್ತಿನಲ್ಲಿ ಎಲ್ಲಾ ಧರ್ಮಗಳ ಜೊತೆ ಸಹಬಾಳ್ವೆ ನಡೆಸಿಕೊಂಡು ಹೋಗುತ್ತಿರುವವರೆಂದರೆ ಅದು ಹಿಂದೂಗಳು ಮಾತ್ರ ಎಂದು ಹೇಳಿದರು. ಮತಾಂತರ ಎಂದರೆ ಅದೊಂದು ಗಂಡಾಂತರ ಎಂದರು.

    Published by:renukadariyannavar
    First published: