• Home
  • »
  • News
  • »
  • state
  • »
  • Teppotsava: ಬಯಲು ಸೀಮೆಯಲ್ಲಿ ನಡೆಯಿತು ಅದ್ಧೂರಿ ತೆಪ್ಪೋತ್ಸವ!

Teppotsava: ಬಯಲು ಸೀಮೆಯಲ್ಲಿ ನಡೆಯಿತು ಅದ್ಧೂರಿ ತೆಪ್ಪೋತ್ಸವ!

ಅದ್ಧೂರಿ ತೆಪ್ಪೋತ್ಸವ

ಅದ್ಧೂರಿ ತೆಪ್ಪೋತ್ಸವ

12 ವರ್ಷಗಳ ಬಳಿಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೇಮಗಿರಿಯ ವಿಷ್ಣುಸಮುದ್ರ ಕೆರೆ ತುಂಬಿ ಕೋಡಿ ಬಿದ್ದಿದೆ. ತೆಪ್ಪೊತ್ಸವವನ್ನ ಸುತ್ತ ನಾಲ್ವತ್ತಕ್ಕೂ ಹೆಚ್ಚು ಹಳ್ಳಿಯ ಜನರು ಸೇರಿ ಅದ್ದೂರಿಯಾಗಿ ಆಚರಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಚಿಕ್ಕಮಗಳೂರು : ಹತ್ತಾರು ಹಳ್ಳಿಗಳನ್ನ (Villages) ಆಶ್ರಯಿಸಿರುವ ಅದೊಂದು ಕೆರೆಯಲ್ಲಿ (Lake) ಈ ವರ್ಷ ನಡೆದಿದ್ದು ಮಾತ್ರ ಪ್ರತಿಯೊಬ್ಬರು ಅಚ್ಚರಿ ಪಡುವಂತಹ ಬೆಳವಣಿಗೆ. ಆ ಕೆರೆ ತುಂಬದೇ 15 ವರ್ಷಗಳೇ ಕಳೆದಿತ್ತು. ತೆಪ್ಪೋತ್ಸವ (Teppotsava) ನಡೆಯದೇ ಬರೋಬ್ಬರಿ 66 ವರ್ಷಗಳ ಸಂದಿತ್ತು. ಆದ್ರೆ, ಈ ಬಾರಿ ಜಾದುವಿನಂತೆ ಡಬಲ್ ಧಮಾಕ (Double Dhamaka) ನಡೆದಿದ್ದು, ಕೆರೆಯೂ ತುಂಬಿದೆ. ಅದ್ಧೂರಿ ತೆಪ್ಪೋತ್ಸವವೂ ನಡೆದಿದೆ.


12 ವರ್ಷಗಳ ಕೆರೆ ಕೋಡಿ


12 ವರ್ಷಗಳ ಬಳಿಕ   ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹೇಮಗಿರಿಯ ವಿಷ್ಣುಸಮುದ್ರ ಕೆರೆ ತುಂಬಿ ಕೋಡಿ ಬಿದ್ದಿದೆ. ಹೇಳಿ ಕೇಳಿ ಶಾಶ್ವತ ಬರಪೀಡಿತ ಪ್ರದೇಶ ಅಂತಾನೇ ಹಣೆಪಟ್ಟಿ ಹೊತ್ತಿದ್ದ ಕಡೂರು ತಾಲೂಕಿನಲ್ಲಿ ಈ ಭಾರೀ ಕಂಡು ಕೇಳರಿಯದ ರೀತಿಯಲ್ಲಿ ಮಳೆಯಾಗಿದೆ. ಹೀಗಾಗಿ ಬರೋಬ್ಬರಿ 12 ವರ್ಷಗಳ ನಂತರ ಕೆರೆ ಕೋಡಿ ಬಿದ್ದಿದ್ದು, ತೆಪ್ಪೊತ್ಸವವನ್ನ ಸುತ್ತ ನಾಲ್ವತ್ತಕ್ಕೂ ಹೆಚ್ಚು ಹಳ್ಳಿಯ ಜನರು ಸೇರಿ ಅದ್ದೂರಿಯಾಗಿ ಆಚರಿಸಿದ್ದಾರೆ.




ಸಾಗರೋಪಾದಿಯಲ್ಲಿ ಭಕ್ತರ ಆಗಮನ


ಹಾಗಂತ ಕಡೂರು ತಾಲೂಕಿನ ಭಕ್ತರು ಮಾತ್ರ ಈ ದೇವರಿಗೆ ನಡೆದುಕೊಳ್ಳಲ್ಲ. ಇಂತಹ ಅಪರೂಪದ ಕ್ಷಣಗಳನ್ನ ನೋಡಲೆಂದೇ ಚಿಕ್ಕಮಗಳೂರು ಸೇರಿದಂತೆ ಹಾಸನ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಭಕ್ತರು ಸಾಗರೋಪಾದಿಯಲ್ಲಿ ಇಂದು ದೇವಾಲಯಕ್ಕೆ ಆಗಮಿಸಿ ತೆಪ್ಪೋತ್ಸವದ ವಿಶೇಷ ಸಂಭ್ರಮದಲ್ಲಿ ಮಿಂದೆದ್ರು.


teppotsava held amidst the crowd of devotees vctv pvn
ಅದ್ಧೂರಿ ತೆಪ್ಪೋತ್ಸವ


ಅದ್ದೂರಿ ತೆಪ್ಪೋತ್ಸವ


ಒಂದು ಲಕ್ಷಕ್ಕೂ ಅಧಿಕ ಜನರು ಕೀಲೋಮೀಟರ್ ದೂರ ಕೆರೆಯ ಸುತ್ತಲೂ ನಿಂತು ಅದ್ದೂರಿ ತೆಪ್ಪೋತ್ಸವವನ್ನ ಕಣ್ತುಂಬಿಸಿಕೊಂಡರು. ನೂರಾರು ವರ್ಷಗಳ ಇತಿಹಾಸ ಹೊಂದಿರೋ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ತನ್ನದೇ ಆದ ವಿಶೇಷ ಪರಂಪರೆಯಿದೆ.




ಶ್ರದ್ಧೆಯಿಂದ ಹರಕೆ ಕಟ್ಟಿದ್ರೆ ಸಮಸ್ಯೆಗೆ ಪರಿಹಾರ


ಹಿಂದಿನಿಂದಲೂ ಸುತ್ತಮುತ್ತಲ ಹಳ್ಳಿಯ ಜನರು ಸೇರಿದಂತೆ ಜಿಲ್ಲೆ, ಹೊರಜಿಲ್ಲೆಯ ಭಕ್ತರು ಏನೇ ಹೊಸ ವ್ಯವಹಾರ ಪ್ರಾರಂಭಿಸೋಕೆ, ಅನಾರೋಗ್ಯಕ್ಕೆ ಈಡಾದ್ರೆ, ಮಕ್ಕಳ ಫಲ ಬಯಸಿ ಇಲ್ಲಿ ಶ್ರದ್ಧೆಯಿಂದ ಹರಕೆ ಕಟ್ಟಿಕೊಂಡರೆ ಸಾಕು ಎಲ್ಲವೂ ನೆರವೇರುತ್ತೆ ಅನ್ನೋ ನಂಬಿಕೆ ಭಕ್ತರದ್ದು. ಕೆರೆ ತುಂಬಿದ ಖುಷಿಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ತೆಪ್ಪವನ್ನ ಸಿಂಗಾರಗೊಳಿಸುವ ಕೆಲಸವನ್ನ ಮಾಡಲಾಗ್ತಿತ್ತು.


ಇದನ್ನೂ ಓದಿ: Siddaramaiah: ನಿಮಗೆ ಧಮ್, ತಾಕತ್ತು ಇದ್ದರೆ ತನಿಖೆ ಮಾಡ್ಸಿ! ಬಿಜೆಪಿ ಸರ್ಕಾರಕ್ಕೆ ಸಿದ್ದು, ಡಿಕೆಶಿ ಸವಾಲ್​


ತೆಪ್ಪೋತ್ಸವ ಕಣ್ತುಂಬಿಕೊಂಡ ಭಕ್ತರು


ಮಂಗಳೂರಿನ ಕಮಲಾಕ್ಷ ಪೂಜಾರ್ ಮತ್ತು ತಂಡ ಎರಡು ದೋಣಿ ಬಳಸಿ ವಿಶೇಷ ತೆಪ್ಪ ನಿರ್ಮಿಸಿದ್ರು. ಹಾಗಾಗಿಯೇ 66  ವರ್ಷಗಳ ನಂತರ ನಡೀತಿರೋ ತೆಪ್ಪೊತ್ಸವ ನೋಡಲು ಜನಸಾಗರವೇ ಹರಿದು ಬಂದಿತ್ತು. ಮುಂದೆ ಯಾವಾಗ ಕೆರೆ ತುಂಬುತ್ತೋ..? ತೆಪ್ಪೋತ್ಸವವನ್ನ ನೋಡ್ತಿವೋ, ಇಲ್ವೋ..? ನೋಡೋದಾದ್ರೂ ಎಷ್ಟು ವರ್ಷ ಕಾಯಬೇಕೋ ಅನ್ನೋ ಪ್ರಶ್ನೆಗಳನ್ನ ಇಟ್ಕೊಂಡು ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಕೂಡ ತೆಪ್ಪೋತ್ಸವದ ಅಪರೂಪದ ಕ್ಷಣಗಳನ್ನ ಕಣ್ತುಂಬಿಸಿಕೊಂಡರು.


ಇದನ್ನೂ ಓದಿ: Mann Ki Baat: ಕನ್ನಡಿಗನಿಗೆ ನಮೋ ಎಂದ ಪ್ರಧಾನಿ, ಬೆಂಗಳೂರಿನ ಪರಿಸರ ಪ್ರೇಮಿ ಬಗ್ಗೆ ಮನ್ ಕಿ ಬಾತ್‌ನಲ್ಲಿ ಮೆಚ್ಚುಗೆ!


ಮಲ್ಲಿಕಾರ್ಜುನ ಸ್ವಾಮಿ ತೆಪ್ಪೋತ್ಸವ


ತನ್ನ ನೋಡಲೆಂದೇ ಕೆರೆಯ ಸುತ್ತಲೂ ನಿಂತು ತೆಪ್ಪೋತ್ಸವವನ್ನ ಕಣ್ತುಂಬಿಕೊಂಡ ಭಕ್ತರನ್ನ ನೋಡಿ ಮಲ್ಲಿಕಾರ್ಜುನ ಸ್ವಾಮಿಯೂ ಪ್ರಸನ್ನನಾದ. ಒಟ್ಟಿನಲ್ಲಿ ಕಾಫಿನಾಡಿನಲ್ಲಿ ಇಂದು ನಡೆದ ಈ ಅದ್ದೂರಿ ತೆಪ್ಪೋತ್ಸವ, ಇಡೀ ರಾಜ್ಯವೇ ತನ್ನತ್ತ ಗಮನವನ್ನ ಸೆಳೆಯುವಲ್ಲಿ ಮಾಡಿದ್ದಂತೂ ಸುಳ್ಳಲ್ಲ..

Published by:ಪಾವನ ಎಚ್ ಎಸ್
First published: