ಬಾಬರಿಯಂತೆ ಜಾಮಿಯಾ ಮಸೀದಿ ಮೇಲೆ ದಾಳಿ ಸಂಚು ಆರೋಪ; ಶ್ರೀರಂಗಪಟ್ಟಣದಲ್ಲಿ ಕಟ್ಟೆಚ್ಚರ

Srirangapatna Jamia Masjid: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಾಳೆ ಹಿಂದೂ ಜಾಗರಣ ವೇದಿಕೆಯಿಂದ ನಡೆಯುವ ಸಂಕೀರ್ತನಾ ಯಾತ್ರೆ ವೇಳೆ ಐತಿಹಾಸಿಕ ಜಾಮಿಯಾ ಮಸೀದಿಯನ್ನ ಧ್ವಂಸಗೊಳಿಸಲಾಗುತ್ತದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಜಾಮಿಯಾ ಮಸೀದಿ

ಜಾಮಿಯಾ ಮಸೀದಿ

 • Share this:
  ಮಂಡ್ಯ, ಡಿ. 15: ಬಾಬರಿ ಮಸೀದಿಯಂತೆ ಶ್ರೀರಂಗಪಟ್ಟಣದ ಐತಿಹಾಸಿಕ ಜಾಮೀಯ ಮಸೀದಿಯನ್ನ (Jamia Masjid in Sriranga Patna) ಧ್ವಂಸ ಮಾಡಲಾಗತ್ತೆ ಅಂತ ಸಾಮಾಜಿಕ ಜಾಲತಾಣದ ಮೂಲಕ ಕೆಲ ಕಿಡಿಗೇಡಿಗಳಿಂದ ಪೋಸ್ಟ್ ಮಾಡಿದ್ದಾರೆ. ಅದರಂತೆ ನಾಳೆ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ (Hindu Jagarana Vedike) ವತಿಯಿಂದ ಸಂಕೀರ್ತನಾ ಯಾತ್ರೆ (Sankeerthana Yatra) ಕೂಡ ಹಮ್ಮಿಕೊಳ್ಳಲಾಗಿದೆ. ಹಿಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.

  ಸಕ್ಕರೆ ನಾಡು ಮಂಡ್ಯ ಶಾಂತಿ, ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಪ್ರತಿ ವರ್ಷದಂತೆ ಈ ಬಾರಿಯು ಡಿ.16 ರಂದು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಬೃಹತ್ ಸಂಕೀರ್ತನಾ ಯಾತ್ರೆಯನ್ನ ವಿಜೃಂಭಣೆಯಿಂದ ಆಚರಣೆ ಮಾಡಲು ನಿರ್ಧರಿಸಿದ್ದಾರೆ. ಆದ್ರೆ ಈ ಯಾತ್ರೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಹಲವು ಶತಮಾನಗಳ ಇತಿಹಾಸವುಳ್ಳ ಜಾಮಿಯಾ ಮಸೀದಿಯನ್ನ ಸಂಕೀರ್ತನಾ ಯಾತ್ರೆ ವೇಳೆ ಮಸೀದಿ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ಕರಪತ್ರ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಮಸೀದಿ ಧ್ವಂಸಗೊಳಿಸುವುದರ ಬಗ್ಗೆ ಆರೋಪ ಕೇಳಿ ಬರ್ತಿದೆ.

  ಯಾತ್ರೆ ವೇಳೆ ಮಸೀದಿ ಧ್ವಂಸಗೊಳಿಸಲು ಹುನ್ನಾರದ ಆರೋಪ...

  ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿರುವ ಈ ಕರಪತ್ರದ ವಿಚಾರಕ್ಕೆ ಆತಂಕಕ್ಕೆ ಒಳಗಾಗಿರುವ ಜಿಲ್ಲೆಯ ಮುಸ್ಲಿಂ ಮುಖಂಡರು ಈ ಐತಿಹಾಸಿಕ ಮಸೀದಿಯನ್ನ ಉಳಿಸುವ ಕೆಲಸಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕೂಡಲೇ ಕ್ರಮ ವಹಿಸಬೇಕು. ಅಲ್ಲದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

  ಇದನ್ನೂ ಓದಿ: BMTC ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ಮತ್ತು ಪಾಸ್ ದರಗಳಲ್ಲಿ ಭಾರೀ ಕಡಿತ, ಹೊಸಾ ದರಗಳು ಹೀಗಿವೆ...

  ಈ ಹಿನ್ನೆಲೆಯಲ್ಲಿ ನಾಳೆ ಯಾವುದೇ ಅಹಿತಕರ ಘಟನೆ, ಕೋಮುಗಲಭೆ ಸೃಷ್ಟಿಯಾಗದಂತೆ ಇಂದಿನಿಂದಲೇ ಶ್ರೀರಂಗಪಟ್ಟಣದಾದ್ಯಂತ ಖಾಕಿ ಹೈ ಅಲರ್ಟ್ ಆಗಿದೆ. ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಸುತ್ತ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು, ನಗರಾದಾದ್ಯಂತ ಎಎಸ್​ಪಿ, ಡಿವೈಎಸ್ಪಿ, ಇನ್ಸ್​ಪೆಕ್ಟರ್ ಸೇರಿದಂತೆ ನೂರಾರು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದ ನಾಳೆ ಮಧ್ಯರಾತ್ರಿವರೆಗೂ ಶ್ರೀರಂಗಪಟ್ಟಣ, ಗಂಜಾಂನಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ.

  ಜಿಲ್ಲಾ ಪೊಲೀಸರಿಂದ ಹೈ ಅಲರ್ಟ್, ಶ್ರೀರಂಗಪಟ್ಟಣದಲ್ಲಿ ಪೊಲೀಸ್ ಕಣ್ಗಾವಲು:

  ಇನ್ನು ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯದ ಮೈದಾನದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ನಾಳೆ ನಡೆಯುವ ಸಂಕೀರ್ತನಾ ಯಾತ್ರೆಯಲ್ಲಿ ಸಾವಿರಾರು ಮಂದಿ ಹನುಮ ಮಾಲಧಾರಿಗಳು ಭಾಗವಹಿಸಲಿದ್ದಾರೆ. ಆ ಹಿನ್ನೆಲೆ ಈಗಾಗಲೇ ಶ್ರೀರಂಗಪಟ್ಟಣದಾದ್ಯಂತ ಹಿಂದೂ ಜಾಗರಣಾ ಕಾರ್ಯಕರ್ತರು, ಹನುಮ ಭಕ್ತರು ಪಟ್ಟಣವನ್ನ ಹನುಮ, ಕೇಸರಿ ಬಾವುಟಗಳಿಂದ ಅಲಕೃಂತಗೊಳಿಸಿದ್ದಾರೆ.

  ಇದನ್ನೂ ಓದಿ: ಪಕ್ಷ ಎದಿರುಹಾಕಿಕೊಂಡು ಬೆಳಗಾವಿಯಲ್ಲಿ ಶಕ್ತಿಪ್ರದರ್ಶನ ಮಾಡಿ ಗೆದ್ದ ಜಾರಕಿಹೊಳಿ ಬ್ರದರ್ಸ್

  ಬೆಳಿಗ್ಗೆಯಿಂದಲೇ ರಾಮನ ಭಜನೆ, ರಾಮ, ಹನುಮನ ಉತ್ಸವ ನಡೆಯಲಿದ್ದು, ನಿಮಿಷಾಂಭ ದೇಗುಲದಿಂದ ರಂಗನಾಥಸ್ವಾಮಿ ದೇವಾಲಯದ ವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬಳಿಕ ದೇವಾಲಯದ ಆವರಣದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಸಾಮೂಹಿಕ ಹನುಮಾನ್ ಚಾಲೀಸ ಪಾಯಣ ಮುಗಿಸಿ ನಂತರ ಮೂಡಲ ಹನುಮ ದೇವಾಲಯದಲ್ಲಿ ಮಾಲೆ ವಿಸರ್ಜನೆ ಮಾಡಲಾಗುತ್ತೆ. ಕಾರ್ಯಕ್ರಮದಲ್ಲಿ ಹಲವು ಪ್ರಮುಖ ಹಿಂದೂ ಮುಖಂಡರು ಭಾಗವಹಿಸಲಿದ್ದಾರೆ.

  ಒಟ್ಟಾರೆ ಸಾಮಾಜಿಕ ಜಾಲತಾಣದ ಮೂಲಕ ಕೆಲ ಕಿಡಿಗೇಡಿಗಳು ಸಕ್ಕರೆ ನಾಡಿನಲ್ಲಿ ಆತಂಕ ಸೃಷ್ಟಿ ಮಾಡಿದ್ದು, ಇದನ್ನ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಪಡೆ ಶ್ರೀರಂಗಪಟ್ಟಣದಾದ್ಯಂತ ಕಟ್ಟೆಚ್ಚರ ವಹಿಸಿರುವುದು ಜನರಲ್ಲಿ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಂತಾಗಿದೆ.

  ವರದಿ: ಸುನೀಲ್ ಗೌಡ
  Published by:Vijayasarthy SN
  First published: