ಕುತೂಹಲ ಮೂಡಿಸಿದ ಉಮೇಶ್ ಕತ್ತಿ ನಡೆ, ಬಿಎಸ್​ವೈಗೆ ಟೆನ್ಷನ್​; ಬಂಡಾಯದ ಬಾವುಟ ಹಾರಿಸ್ತಾರಾ ಬಿಜೆಪಿ ಹಿರಿಯ ನಾಯಕ?

ಕೇವಲ ವಲಸಿಗ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಿರುವ ಬಿಎಸ್​ವೈ ಮೂಲ ಬಿಜೆಪಿ ನಾಯಕರನ್ನು ಕಡೆಗಣಿಸಿದ್ದಾರೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ. ಬಿಎಸ್​ವೈ ನಡೆಯಿಂದ ಸಂಪೂರ್ಣ ಬೇಸತ್ತಿರುವ ಉಮೇಶ್ ಕತ್ತಿ ಇದೀಗ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗುತ್ತಿದೆ.

MAshok Kumar | news18-kannada
Updated:February 6, 2020, 8:49 AM IST
ಕುತೂಹಲ ಮೂಡಿಸಿದ ಉಮೇಶ್ ಕತ್ತಿ ನಡೆ, ಬಿಎಸ್​ವೈಗೆ ಟೆನ್ಷನ್​; ಬಂಡಾಯದ ಬಾವುಟ ಹಾರಿಸ್ತಾರಾ ಬಿಜೆಪಿ ಹಿರಿಯ ನಾಯಕ?
ಉಮೇಶ್​ ಕತ್ತಿ ಮತ್ತು ಬಿಎಸ್ ಯಡಿಯೂರಪ್ಪ
  • Share this:
ಬೆಂಗಳೂರು: ಬಹು ನಿರೀಕ್ಷಿತ ರಾಜ್ಯ ಸಂಪುಟ ವಿಸ್ತರಣೆಗೆ ಕೊನೆಗೂ ತೆರೆ ಎಳೆದಂತಾಗಿದ್ದು, ಇಂದು ಬೆಳಗ್ಗೆ 10.30ರ ವೇಳೆಗೆ 10 ಜನ ಅರ್ಹ/ವಲಸಿಗ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಬಹುದಿನಗಳಿಂದ ಗೊಂದಲದ ಗೂಡಾಗಿದ್ದ ಸಂಪುಟ ವಿಸ್ತರಣೆ ಒಂದು ಹಂತಕ್ಕೆ ಬಂದು ನಿಂತಂತಾಗಿದೆ. ಆದರೆ, ಮೂಲ ಬಿಜೆಪಿ ನಾಯಕರಿಗೆ ಮಣೆ ಹಾಕದೆ ಕೇವಲ ವಲಸಿಗರಿಗೆ ಮಾತ್ರ ಸಚಿವ ಸ್ಥಾನ ನೀಡಿರುವ ಸಿಎಂ ನಡೆ ಇದೀಗ ಮೂಲ ಬಿಜೆಪಿ ನಾಯಕರನ್ನು ಕೆರಳಿಸಿದೆ.

ಕಳೆದ ಒಂದು ವಾರದಿಂದ 10+3 ಸೂತ್ರದಂತೆ ವಲಸಿಗರ ಜೊತೆಗೆ 3 ಜನ ಬಿಜೆಪಿ ಶಾಸಕರಿಗೂ ಸಚಿವ ಸ್ಥಾನ ನೀಡುವ ಕುರಿತು ಬಿಎಸ್​ವೈ ಹೇಳಿಕೆ ನೀಡಿದ್ದರು. ಈ ಪಟ್ಟಿಯಲ್ಲಿ ಉತ್ತರ ಕರ್ನಾಟಕದ ಕಮಲ ಪಾಳಯದ ಹಿರಿಯ ನಾಯಕ ಉಮೇಶ್ ಕತ್ತಿ ಹೆಸರು ಪ್ರಮುಖವಾಗಿತ್ತು. ಉಮೇಶ್ ಕತ್ತಿ ಸಹ ಪ್ರತಿನಿತ್ಯ ಸಚಿವ ಸ್ಥಾನಕ್ಕಾಗಿ ಸಿಎಂ ಮನೆಗೆ ಎಡತಾಕುತ್ತಿದ್ದರು. ಹೀಗಾಗಿ ವಲಸಿಗ ಶಾಸಕರ ಜೊತೆಗೆ ಇಂದು ಉಮೇಶ್ ಕತ್ತಿ ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ಬಿಎಸ್​ವೈ ಈ ಎಲ್ಲಾ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ.

ಬಂಡಾಯದ ಬಾವುಟ ಹಿಡಿಯುತ್ತಾರಾ ಉಮೇಶ್ ಕತ್ತಿ?;

ಕೇವಲ ವಲಸಿಗ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಿರುವ ಬಿಎಸ್​ವೈ ಮೂಲ ಬಿಜೆಪಿ ನಾಯಕರನ್ನು ಕಡೆಗಣಿಸಿದ್ದಾರೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ. ಬಿಎಸ್​ವೈ ನಡೆಯಿಂದ ಸಂಪೂರ್ಣ ಬೇಸತ್ತಿರುವ ಉಮೇಶ್ ಕತ್ತಿ ಇದೀಗ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗುತ್ತಿದೆ.

ಸ್ವತಃ ಯಡಿಯೂರಪ್ಪ ಸೇರಿದಂತೆ ಅನೇಕ ಅನೇಕ ಬಿಜೆಪಿ ನಾಯಕರು ಕತ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಕತ್ತಿ ಮಾತ್ರ ನಿನ್ನೆ ರಾತ್ರಿಯಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಕೊಠಡಿಗೂ ಬೀಗ ಹಾಕಲಾಗಿದೆ.

ಉಮೇಶ್ ಕತ್ತಿ ಈ ಹಿಂದೆಯೇ ಪ್ರತ್ಯೇಕ ಉತ್ತರ ಕರ್ನಾಟಕಕ್ಕಾಗಿ ಒತ್ತಾಯಿಸಿ ಹೋರಾಟಕ್ಕೆ ಮುಂದಾದ ನಾಯಕ. ಅಲ್ಲದೆ, ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ಸಮಾಜದ ನಾಯಕ. ಹೀಗಾಗಿ ಉಮೇಶ್ ಕತ್ತಿ ನಡೆ ಇದೀಗ ಬಿಎಸ್​ವೈ ಟೆನ್ಷನ್​ಗೆ ಕಾರಣವಾಗಿದೆ. ಭವಿಷ್ಯದಲ್ಲಿ ಉಮೇಶ್ ಕತ್ತಿ ಪಕ್ಷದ ವಿರುದ್ಧ ಬಂಡಾಯ ಎದ್ದರೆ ತಮ್ಮ ಗತಿ ಏನು? ಎಂಬುದು ಯಡಿಯೂರಪ್ಪ ಚಿಂತೆಗೆ ಕಾರಣ ಎನ್ನಲಾಗುತ್ತಿದೆ.

ಇಂದು ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಉಮೇಶ್ ಕತ್ತಿ ನಡೆ ಕುತೂಹಲ ಮೂಡಿಸಿದ್ದು, ಮುಂದಿನ ದಿನದಲ್ಲಿ ಬಿಜೆಪಿ ಪಕ್ಷದ ಈ ಹಿರಿಯ ನಾಯಕನ ನಡೆ ಏನು? ಎಂಬುದು ಇದೀಗ ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.ಇದನ್ನೂ ಓದಿ; ವಲಸಿಗರ ಪ್ರಮಾಣವಚನ, ಮೂಲ ಬಿಜೆಪಿಗರ ಅಸಮಾಧಾನ; ಕಮಲ ಪಾಳಯದಲ್ಲಿ ಬಂಡಾಯದ ವಾಸನೆ?

 
First published: February 6, 2020, 8:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading