• Home
 • »
 • News
 • »
 • state
 • »
 • Belagavi Dispute: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ; ಬೆಳಗಾವಿ, ಮಹಾರಾಷ್ಟ್ರ ನಡುವೆ ಬಸ್​ ಸಂಚಾರ ಬಂದ್​​!

Belagavi Dispute: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ; ಬೆಳಗಾವಿ, ಮಹಾರಾಷ್ಟ್ರ ನಡುವೆ ಬಸ್​ ಸಂಚಾರ ಬಂದ್​​!

ಎರಡು ರಾಜ್ಯಗಳ ಬಸ್ ಸಂಚಾರ ಸಂಪೂರ್ಣ ಸ್ಥಗಿತ

ಎರಡು ರಾಜ್ಯಗಳ ಬಸ್ ಸಂಚಾರ ಸಂಪೂರ್ಣ ಸ್ಥಗಿತ

ಮಹಾರಾಷ್ಟ್ರದಲ್ಲಿ ಬಸ್​ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡುತ್ತಿರುವ ಹಿನ್ನೆಲೆ ಎರಡು ರಾಜ್ಯಗಳ ನಡುವೆ ಸರ್ಕಾರಿ ಬಸ್​ಗಳ ಸಂಚಾರ ಬಂದ್​ ಮಾಡಲಾಗಿದೆ. 

 • News18 Kannada
 • 4-MIN READ
 • Last Updated :
 • Karnataka, India
 • Share this:

ಬೆಂಗಳೂರು (ಡಿ.06): ಬೆಳಗಾವಿ ಗಡಿ ವಿವಾದದ (Belagavi Boundary Dispute) ಕಿಚ್ಚು ದಿನೇ ದಿನೇ ಜೋರಾಗುತ್ತಿದೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ 2 ರಾಜ್ಯಗಳ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾರಿಗೆ ಇಲಾಖೆ (Department Of Transport) ಮುಂಜಾಗೃತಾ ಕ್ರಮವಾಗಿ ಬಸ್ ತಡೆ ಹಿಡಿದಿದ್ದಾರೆ. ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಕಾಗವಾಡದಿಂದ ಮಹಾರಾಷ್ಟ್ರಕ್ಕೆ (Maharashtra) ಹೋಗುವ ಬಸ್​ಗಳನ್ನು ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ. 


ಪರಿಸ್ಥಿತಿ ಸುಧಾರಿಸುವವರೆಗೂ ಬಸ್ ಸಂಚಾರ ಬಂದ್​


ಮಹಾರಾಷ್ಟ್ರದಲ್ಲಿ ಬಸ್​ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡುತ್ತಿರುವ ಹಿನ್ನೆಲೆ ಎರಡು ರಾಜ್ಯಗಳ ನಡುವೆ ಸರ್ಕಾರಿ ಬಸ್​ಗಳ ಸಂಚಾರ ಬಂದ್​ ಮಾಡಲಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೂ ಬಸ್ ಸಂಚಾರ ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಚಾಲ್ತಿಯಲ್ಲಿರಲಿದೆ.
ಎಂಇಎಸ್ ಕಾರ್ಯಕರ್ತರ ಪುಂಡಾಟ


ಎಂಇಎಸ್ ಪುಂಡರು ಮತ್ತೆ ಕನ್ನಡ ನೆಲದಲ್ಲಿ ನಾಡದ್ರೋಹಿ ಘೊಷಣೆ ಕೂಗಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ (District Collector Office) ಎದುರು ಎಂಇಎಸ್ ಕಾರ್ಯಕರ್ತರು (MES Activist) ಪ್ರತಿಭಟನೆ  ನಡೆಸಿದ್ರು.  ಈ ವೇಳೆ ಬೆಳಗಾವಿ, ಕಾರವಾರ ನಿಪ್ಪಾಣಿ ಬಾಲ್ಕಿ ಸಂಯಕ್ತ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದಾರೆ.


ಮಹಾರಾಷ್ಟ್ರದ ಸಚಿವರಿಗೆ ಕರ್ನಾಟಕ ಪ್ರವೇಶ ಅನುಮತಿ ನೀಡುವಂತೆ ಮನವಿ ಮಾಡಲು ಬೆಳಗಾವಿ ಜಿಲ್ಲಾಧಿಕಾರಿಗೆ ಎಂಇಎಸ್ ಮುಖಂಡರು ಆಗಮಿಸಿದ್ರು. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಭೇಟಿ ಮಾಡಿದ ಎಂಇಎಸ್ ಕಾರ್ಯಕರ್ತರು ಮನವಿ ಮಾಡಿದ್ರು. ಗಡಿ ವಿಚಾರವಾಗಿ ಮಹಾರಾಷ್ಟ್ರದ ಸಚಿವರೊಂದಿಗೆ ಚರ್ಚೆ ಮಾಡಲು ಅನುಮತಿ ನೀಡಲು ಕೋರಿದ್ದಾರೆ. ಮಾಜಿ ಶಾಸಕ ದಿಗಂಬರ್ ಪಾಟೀಲ್ ಪ್ರಕಾಶ್ ಮರಗಾಳೆ, ರಂಜೀತ್ ಚೌವ್ಹಾಣ ಪಾಟೀಲ್ ನೇತೃತ್ವದಲ್ಲಿ ಮನವಿ ಡಿಸಿಗೆ ಮನವಿ ಸಲ್ಲಿಸಿದ್ದಾರೆ.


ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

 ಬೆಳಗಾವಿ ಡಿಸಿಗೆ 5ಕ್ಕೂ ಹೆಚ್ಚು ಜನರು ಮನವಿ ಸಲ್ಲಿಸಲು ಬಂದ ಹಿನ್ನೆಲೆ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಮನವಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಎಂಇಎಸ್​​ ಮುಖಂಡರು ಡಿಸಿ ಕಚೇರಿ ಎದುರೇ ಪ್ರತಿಭಟನೆ ನಡೆಸಿದ್ರು. ಈ ವೇಳೆ ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಈ ವೇಳೆ ಬೆಳಗಾವಿ ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದಿದ್ದಾರೆ.


ಕರವೇ ಕಾರ್ಯಕರ್ತರ ಪ್ರತಿಭಟನೆಮಹಾರಾಷ್ಟ್ರ ನೋಂದಣಿ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕಲ್ಲು ತೂರಾಟ ನಡೆಸಿದ ಕಾರ್ಯಕರ್ತರು ಮತ್ತು ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಅವರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದರು


ಟೋಲ್ ನಾಕಾ ಬಳಿ ಕಾರ್ಯಕರ್ತರ ಆಕ್ರೋಶ


ನಾರಾಯಣ ಗೌಡ ನೇತೃತ್ವದಲ್ಲಿ ಬೆಳಗಾವಿ ನಗರದವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆ ಬೆಳಗಾವಿ ನಗರ ಪ್ರವೇಶಿಸುವ ಮೊದಲೇ ಟೋಲ್ ನಾಕಾ ಬಳಿ ಕಾರ್ಯಕರ್ತರನ್ನು ಪೊಲೀಸರು ತಡೆದರು.


ಇದನ್ನೂ ಓದಿ: CM Basavaraj Bommai: ರಾಜ್ಯದಲ್ಲಿ 2023ಕ್ಕೆ ನೂರಕ್ಕೆ ನೂರು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ- ಸಿಎಂ ಬೊಮ್ಮಾಯಿ


ಮಹಾರಾಷ್ಟ್ರದ ಲಾರಿಗಳಿಗೆ ಕಲ್ಲು ತೂರಾಟ


ಹಿರೇಬಾಗೆವಾಡಿ ಟೋಲ್ ನಾಕಾ ಬಳಿಯಲ್ಲಿ ಮಹಾರಾಷ್ಟ್ರ ನೊಂದಣಿ ಇರುವ ಲಾರಿಗಳಿಗೆ ಮಸಿ ಬಳಿದು ಗಾಜು ಒಡೆದರು. ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಲಾರಿಗಳನ್ನು ತಡೆದು ಮಹಾರಾಷ್ಟ್ರ ನೋಂದಣಿಯ ಹತ್ತಕ್ಕೂ ಅಧಿಕ ಲಾರಿಗಳ ನಂಬರ್ ಪ್ಲೇಟ್‌ ಕಿತ್ತು ಹಾಕಿ ಮಸಿ ಬಳಿಯಲಾಯಿತು. ಕೂಡಲೇ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು