• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karwara: ನಗರಸಭೆಯಲ್ಲಿ ಗೋಲ್ಮಾಲ್! ಕಾಮಗಾರಿ ಮುಗಿದ‌ ಮೇಲೆ ಟೆಂಡರ್ ಯಾಕೆ ಸ್ವಾಮಿ?

Karwara: ನಗರಸಭೆಯಲ್ಲಿ ಗೋಲ್ಮಾಲ್! ಕಾಮಗಾರಿ ಮುಗಿದ‌ ಮೇಲೆ ಟೆಂಡರ್ ಯಾಕೆ ಸ್ವಾಮಿ?

ಕಾಮಗಾರಿ ನಂತರ ಟೆಂಡರ್

ಕಾಮಗಾರಿ ನಂತರ ಟೆಂಡರ್

ಕಾರವಾರ ನಗರಸಭಾ ಕಾರ್ಯಾಲಯದಿಂದ ಏಪ್ರಿಲ್ 5ರಂದು ಮತ್ತು ಮೇ 9ರಂದು ಎರಡು ಟೆಂಡರ್ ಕರೆಯಲಾಗಿತ್ತು.  ಸುಮಾರು 171 ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆದಿದೆ. ಅಸಲಿಗೆ ಟೆಂಡರ್ ಕರೆದಿರುವ ಕಾಮಗಾರಿಗಳು ಈಗಾಗಲೇ ಮುಗಿದಿವೆ.  ಇದು ವಿವಾದಕ್ಕೆ ಕಾರಣವಾಗಿದೆ.

  • Share this:

ಕಾರವಾರ(ಜು.01): ಸರ್ಕಾರದ  ಕಾಮಗಾರಿ ಮಾಡೋದಾದ್ರೂ ಸಂಬಂಧಪಟ್ಟ ಇಲಾಖೆ ಮೊದಲು  ಅಗತ್ಯ ಟೆಂಡರ್ (Tender) ಕರೆಯಬೇಕು. ಆ ಬಳಿಕವೇ ಕಾಮಗಾರಿಯನ್ನ ಟೆಂಡರ್ನಲ್ಲಿ ಪಡೆದವರಿಗೆ ನೀಡ್ಬೇಕು. ಆದ್ರೆ ಉತ್ತರಕನ್ನಡ (Uttara Kannada) ಜಿಲ್ಲೆಯ ಕಾರವಾರ (Karawara) ನಗರಸಭೆ ಮೊದ್ಲೆ ಕಾಮಗಾರಿ ನಡೆಸಿ ಬಳಿಕ ಟೆಂಡರ್ ಕರೆದಿರೋದು ಅನುಮಾನಕ್ಕೆ ಕಾರಣವಾಗಿದೆ. ಇದೆ ವಿಚಾರವಾಗಿ ಇವತ್ತು ಕಾರವಾರ ಕ್ಷೇತ್ರ ಮಾಜಿ ಶಾಸಕ (MLA) ಸತೀಶ್ ಸೈಲ್ ಪೌರಾಯುಕ್ತರನ್ನ ಪ್ರಶ್ನಿಸಲು ತೆರಳಿದಾಗ ದೊಡ್ಡ ಗಲಾಟೆಯೇ ನಡೆಯಿತು. ಪೌರಾಯುಕ್ತ ಮತ್ತು ಮಾಜಿ ಶಾಸಕ (Former MLA) ಸತೀಶ್ ಸೈಲ್ ನಡುವೆ ಮಾತಿನ ಚಕಮಕಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುವ ಲಕ್ಷಣ ಕಂಡು ಬಂತು.


ಎನಿದು ಟೆಂಡರ್ ಪ್ರಕ್ರೀಯೆ? ಟೆಂಡರ್ ಮುಂಚೆ ಕಾಮಗಾರಿ ಮುಗಿಸಿದ್ದು ಯಾಕೆ?ಕ


ಉತ್ತರಕನ್ನಡ ಜಿಲ್ಲೆಯ  ಕಾರವಾರ ನಗರಸಭಾ ಕಾರ್ಯಾಲಯದಿಂದ ಏಪ್ರಿಲ್ 5ರಂದು ಮತ್ತು ಮೇ 9ರಂದು ಎರಡು ಟೆಂಡರ್ ಕರೆಯಲಾಗಿತ್ತು.  ಸುಮಾರು 171 ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆದಿದೆ. ಅಸಲಿಗೆ ಟೆಂಡರ್ ಕರೆದಿರುವ ಕಾಮಗಾರಿಗಳು ಈಗಾಗಲೇ ಮುಗಿದಿವೆ.  ಇದು ವಿವಾದಕ್ಕೆ ಕಾರಣವಾಗಿದೆ.


ನಿಯಮಬಾಹಿರವಾಗಿ ಕೆಲಸ


ನಗರಸಭೆ ಆಯುಕ್ತರು ನಿಯಮಬಾಹಿರವಾಗಿ ಕೆಲಸವನ್ನ ಮಾಡಿದ್ದಾರೆಂಬ ಆರೋಪ ವ್ಯಕ್ತವಾಗಿದೆ. ಮಾಜಿ ಶಾಸಕ ಸತೀಶ್ ಸೈಲ್ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನಗರಸಭೆ ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ಆಯುಕ್ತರು ಮತ್ತು ಮಾಜಿ ಶಾಸಕರ ನಡುವೆ ಜಟಾಪಟಿಯೇ ನಡೆದುಹೋಯ್ತು.  ಅಧಿಕಾರಿಗಳ ಕಾರುಬಾರು ಜಾಸ್ತಿಯಾಗಿದ್ದು, ಮನಸ್ಸಿಗೆ ಬಂದಂತೆ ನಗರಸಭೆಯಿಂದ ಕಾಮಗಾರಿಗಳನ್ನ ನಡೆಸಲಾಗುತ್ತಿದೆ. ಹೀಗಾಗಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


171 ಕಾಮಗಾರಿ ನಡೆದು ಟೆಂಡರ್ ಕರೆದರು


ಕಾರವಾರ ನಗರಸಭೆಯಿಂದ ಕಳೆದ ಕೆಲ ದಿನಗಳ ಹಿಂದೇಯೇ ಪುಟ್ಪಾತ್ ಕಾಮಗಾರಿ, ಗಾರ್ಡನ್ ಅಭಿವೃದ್ದಿ, ಮಕ್ಕಳ ಆಟಿಕೆ ಸಾಮಾನು ಜೋಡಿಸೋದು, ರಸ್ತೆ ಅಭಿವೃದ್ಧಿ ಹೀಗೆ  ನಗರಸಭೆ ವ್ಯಾಪ್ತಿಯ ಹಲವು ವಾರ್ಡುಗಳಲ್ಲಿ ಸುಮಾರು 171 ಕಾಮಗಾರಿ ನಡೆಸಲಾಗಿದೆ. ಆದ್ರೆ ಅದೇ ಕಾಮಗಾರಿಗೆ ಟೆಂಡರ್ ಕರೆದಿರೋದು ಮಾಜಿ ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.


ಇದನ್ನೂ ಒದಿ:Hubballi: ಬಂಧನದ ಭೀತಿಯಿಂದ ಪಾಲಿಕೆಯತ್ತ ಸುಳಿಯದ ಚೇತನ್ ಹಿರೇಕೆರೂರ


ಕಣ್ಣಿಗೆ ಮಣ್ಣೆರೆಚುವ ಹುನ್ನಾರ


ಕೇವಲ  ಕಾಟಚಾರಕ್ಕಾಗಿ ಟೆಂಡರ್ ಕರೆದು ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಹುನ್ನಾರ ಎಂದು ಆರೋಪಿಸಿದ್ದಾರೆ. ಅಲ್ಲದೇ ಟೆಂಡರ್ ಹಾಕಿದವರು ಕೂಡ ಈಗಾಗಲೇ ವಿವಿಧ ಕಾಮಗಾರಿ ನಡೆಸಿದವರೆ ಆಗಿದ್ದಾರೆ. ಹೀಗಾಗಿ ಟೆಂಡರ್ ಬಾಕ್ಸನ್ನ ಪರಿಶೀಲಿಸಬೇಕೆಂದು ಸತೀಶ್ ಸೈಲ್ ಒತ್ತಾಯಿಸಿದ್ದಾರೆ. ಅಲ್ಲದೇ ನಗರಸಭೆ ಆಯುಕ್ತರ ಚೆಂಬರನಲ್ಲಿ ಪ್ರತಿಭಟನೆ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಗರಸಭೆ ಆಯುಕ್ತರಾದ ಆರ್ ಪಿ ನಾಯ್ಕ,  ಟೆಂಡರನ್ನ ನಿಯಮದನುಸಾರವಾಗಿಯೇ ಮಾಡಿದ್ದೇವೆ. ಈಗಾಗಲೇ ಮಾಡಿದ ಕಾಮಗಾರಿಯ ಹೆಚ್ಚುವರಿ ಕಾಮಗಾರಿಗೆ ಟೆಂಡರ್  ಕರೆದಿದ್ದೇವೆ. ತಮ್ಮಿಂದ ಯಾವುದೇ ಲೋಪವಾಗಿಲ್ಲ. ಬೇಕಾದಲ್ಲಿ ಯಾವುದೇ ತನಿಖೆಗೂ ಸಿದ್ದ ಎಂದು ಹೇಳಿದ್ದಾರೆ.


ಇದನ್ನೂ ಓದಿ: DK Shivakumar ED Case: ಇಂದು ಇಡಿ ವಿಚಾರಣೆ, ಖುದ್ದು ಹಾಜರಾಗಲಿದ್ದಾರೆ ಡಿಕೆಶಿ


ಒಟ್ಟಿನಲ್ಲಿ ಕಾರವಾರ ನಗರಸಭೆ  ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಯಲ್ಲಿ ಲೋಪವಾಗಿದೆಯೆಂಬ ಆರೋಪ ವ್ಯಕ್ತವಾಗಿದೆ. ಆದ್ರೆ ಕಾಮಗಾರಿ ಮೊದಲೇ ಮಾಡಿಕೊಂಡು ಟೆಂಡರ್ ಕರೆದಿರೋದು ಅಧಿಕಾರಿಗಳ ಮೇಲಿನ ಸಂಶಯಕ್ಕೆ ಕಾರಣವಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕೆಂಬ ಒತ್ತಾಯ  ಕೇಳಿ ಬಂದಿದೆ.

First published: