ಪಟಾಕಿ ಸಿಡಿದು ರಾಜಧಾನಿಯಲ್ಲಿ 10 ಜನರಿಗೆ ಗಾಯ; ಸಿಡಿಯದ ಪಟಾಕಿ ನೋಡಲು ಹೋಗಿ ಕಣ್ಣಿಗೆ ಪೆಟ್ಟು ಮಾಡಿಕೊಂಡ ಬಾಲಕ
ಕಳೆದ ಐದು ವರುಷಗಳಿಗೆ ಹೋಲಿಸಿದರೆ ಈ ವರುಷ ದೀಪಾವಳಿ ಹಬ್ಬ ಗಾಯಾಳುಗಳ ಸಂಖ್ಯೆ ಕಡಿಮೆ. ಹಬ್ಬಕ್ಕೆ ಇನ್ನೊಂದು ದಿನ ಬಾಕಿಯಿದ್ದು, ಮಕ್ಕಳು ಉಳಿದ ಪಟಾಕಿ ಹಚ್ಚಲು ಉತ್ಸುಕರಾಗಿರುತ್ತಾರೆ. ಆದರೆ ಗುಣಮಟ್ಟದ ಪಟಾಕಿ ಹಾಗೂ ಪೋಷಕರ ನಿರ್ಲಕ್ಷ್ಯದಿಂದ ಮಕ್ಕಳು ಬಾಳು ಅಂಧಕಾರಕ್ಕೆ ಹೋಗದಂತೆ ನೋಡಿಕೊಳ್ಳಬೇಕಿದೆ.
news18-kannada Updated:November 15, 2020, 7:59 PM IST

ಪಟಾಕಿ ಸಿಡಿದು ಕಣ್ಣಿಗೆ ಗಾಯ ಮಾಡಿಕೊಂಡಿರುವ ಬಾಲಕ.
- News18 Kannada
- Last Updated: November 15, 2020, 7:59 PM IST
ಬೆಂಗಳೂರು; ದೀಪಗಳ ಹಬ್ಬ ದೀಪಾವಳಿಗೆ ಪಟಾಕಿ ಹಚ್ಚದೇ ಹೋದರೆ ಮಕ್ಕಳಿಗೆ ಹೇಗೆ ಹಬ್ಬ ಆಗುತ್ತೆ ಹೇಳಿ? ಕೊರೋನಾ ಸಂಕಷ್ಟದಲ್ಲಿ ಈ ಬಾರಿ ಹಸಿರು ಪಟಾಕಿ ಹೊಡೆಯಲು ಅವಕಾಶ ನೀಡಲಾಗಿದೆ. ಆದರೂ ಲೋಕಲ್ ಬ್ರಾಂಡ್ ಪಟಾಕಿ ಸದ್ದು ಮಾಡಿದೆ. ಇದರ ಪರಿಣಾಮ ರಾಜಧಾನಿ ಬೆಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಸಿಡಿಯದ ಫ್ಲವರ್ ಪಾಟ್ ನೋಡಲು ಹೋಗಿ ಅಮಾಯಕ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಪಟಾಕಿ ತರಲು ಶಕ್ತನಿರದ ಕುಟುಂಬ ಯಾರೋ ಮಾಡಿದ ತಪ್ಪಿಗೆ ಬೆಳಕಿನಿಂದ ಕತ್ತಲೆಗೆ ನೂಕಿದೆ.
ಹಿಂದೂಗಳ ಅತಿ ದೊಡ್ಡ ಹಬ್ಬ ದೀಪಾವಳಿ ಈ ಬಾರಿ ಕೊರೋನಾ ಸಂದಿಗ್ಥತೆಯಲ್ಲಿ ಆಚರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಪಟಾಕಿ ಹಚ್ಚಿದರೇನೇ ಹಬ್ಬ. ಇದಕ್ಕಾಗಿ ಸರ್ಕಾರ ಹಲವು ಸೂಚನೆಗಳ ಮೇರೆಗೆ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ಇದು ಕೇವಲ ಹೆಸರಿಗೆ ಮಾತ್ರವಿದ್ದು, ಪ್ರತಿ ವರುಷದಂತೆ ಈ ವರುಷ ಪರಿಸರ ಮಾಲಿನ್ಯ ಹೆಚ್ಚು ಮಾಡುವ ಮಾಮೂಲಿ ಹಾಗೂ ಲೋಕಲ್ ಬ್ರಾಂಡ್ ಪಟಾಕಿ ಮಾರಾಟವಾಗಿದೆ. ಇದರ ಪರಿಣಾಮ ಕಳೆದ ವರುಷಕ್ಕೆ ಹೋಲಿಸಿದರೆ ಕಡಿಮೆಯಾದ್ರೂ ಈ ವರುಷ ಬೆಂಗಳೂರಿನ 10 ಜನ ಪಟಾಕಿ ಸಿಡಿದು ಗಾಯಗಳಾಗಿವೆ. ಇದರಲ್ಲಿ ನಿನ್ನೆ ರಾತ್ರಿ ವಿಜಯನಗರದ ನಿವಾಸಿ ಆಟೋ ಡ್ರೈವರ್ ಮಗ ಪಕ್ಕದ ಮನೆಯ ಹುಡುಗ ಫ್ಲವರ್ ಪಾಟ್ ಪಟಾಕಿ ಹಚ್ಚಿದ್ದಾನೆ. ಆದರೆ ಅದು ಸಿಡಿಯಲಿಲ್ಲ. ಆಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಆಟೋ ಡ್ರೈವರ್ 12 ವರ್ಷದ ಬಾಲಕ ಏನಾಯಿತು ಎಂದು ಇಣುಕಿ ನೋಡುತ್ತಿದ್ದಂತೆ ಫ್ಲವರ್ ಪಾಟ್ ಸಿಡಿದಿದೆ. ಇದರ ಪರಿಣಾಮ ಗಂಭೀರ ಗಾಯಗಳಾಗಿ ಮಿಂಟೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಟಾಕಿ ತರಲು ದುಡ್ಡಿಲ್ಲ, ಇನ್ನೆಲ್ಲಿ ಪಟಾಕಿ ಹಚ್ಚೋದು ಸರ್? ಆಟೋ ಡ್ರೈವರ್ ಆಗಿ ಕೆಲಸ ಮಾಡ್ತೇನೆ, ಮಗನಿಗೆ ಇಂಥ ಪರಿಸ್ಥಿತಿಯಾಗಿದೆ ಎಂದು ಗಾಯಗೊಂಡ ಬಾಲಕನ ಪೋಷಕ ಆಟೋ ಡ್ರೈವರ್ ಅಳಲು ತೋಡಿಕೊಂಡಿದ್ದಾರೆ. ತಾನು ಮಾಡದ ತಪ್ಪಿಗೆ 12 ಹರೆಯದ ಬಾಲಕನ ಎರಡು ಕಣ್ಣು ತೀವ್ರವಾಗಿ ಗಾಯಗೊಂಡಿದ್ದು, ಬಲಗಣ್ಣು ಸಂಪೂರ್ಣ ಮುಚ್ಚಿದೆ. ಎಡಗಣ್ಣು ಮೇಲ್ಪದರ ಗಾಯಗಳಾಗಿವೆ. ಇದರ ಜೊತೆಗೆ ಮುಖದ ಚರ್ಮವೂ ಸುಟ್ಟಿದೆ. ಎರಡು ಕಣ್ಣಿಗೂ ಗಾಯವಾಗಿದೆ. ಮುಖದ ಚರ್ಮ ಸುಟ್ಟಿದೆ. ಪ್ರತ್ಯೇಕ ಚಿಕಿತ್ಸೆಗೆ ಫೇಶಿಯಲ್ ಸರ್ಜರಿ ವಿಭಾಗಕ್ಕೆ ಕಳುಹಿಸಲಾಗುವುದು.
ಬೆಂಗಳೂರಿನಲ್ಲಿ ಪಟಾಕಿ ಸಿಡಿಸಲು ಹೋಗಿ 10 ಜನರಿಗೆ ಗಾಯಗಳಾಗಿವೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. 4 ಜನ ನಾರಾಯಣ ನೇತ್ರಾಲಯ ಹಾಗೂ ಮೂವರು ನೇತ್ರಧಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟಾಕಿ ಹಚ್ಚುವ ಮಕ್ಕಳ ಜೊತೆ ಪೋಷಕರು ಇರಬೇಕು. ಸುತ್ತಮುತ್ತಲ ಪರಿಸರ ಗಮನ ಹರಿಸಬೇಕು ಎಂದು ಮಿಂಟೋ ಆಸ್ಪತ್ರೆ ನೇತ್ರವೈದ್ಯ ಡಾ ಹರೀಶ್ ಸಲಹೆ ನೀಡುತ್ತಾರೆ.
ಇದನ್ನು ಓದಿ: ಕೊರೋನಾತಂಕದ ನಡುವೆ ರಾಜಧಾನಿಯ ಮಾರುಕಟ್ಟೆಗಳಲ್ಲಿ ಜನಜಾತ್ರೆ; ದೇವಸ್ಥಾನಗಳಲ್ಲಿಯೂ ಭಕ್ತರ ದಂಡು!
ಕಳೆದೈದು ವರುಷ ಪಟಾಕಿ ಗಾಯಗೊಂಡ ಸಂಖ್ಯೆ ನೋಡಿದರೆ, 2016 ರಲ್ಲಿ ಒಟ್ಟು 33 ಪ್ರಕರಣಗಳ ಪೈಕಿ 18 ಮಕ್ಕಳಿಗೆ ಕಣ್ಣು ಡ್ಯಾಮೇಜ್ ಆಗಿದೆ. 2017 ರಲ್ಲಿ ಒಟ್ಟು 45 ಜನರ ಪೈಕಿ 24 ಮಕ್ಕಳಿಗೆ ಐ ಇಂಜ್ಯುರಿಯಾಗಿದೆ. 2018 ರಲ್ಲಿ ಒಟ್ಟು 46 ಪ್ರಕರಣಗಳ ಪೈಕಿ 20 ಮಕ್ಕಳ ಕಣ್ಣಿಗೆ ಕುತ್ತು ತಂದಿತ್ತು. 2019 ರಲ್ಲಿ 48 ಪ್ರಕರಣಗಳ ಪೈಕಿ 18 ಮಕ್ಕಳಿಗೆ ಪಟಾಕಿ ಸಿಡಿತದಿಂದ ಹಾನಿಯಾಗಿತ್ತು. 2020ರಲ್ಲಿ 10 ಪ್ರಕರಣಗಳ ಪೈಕಿ ಮಿಂಟೋ ಅಸ್ಪತ್ರೆಯಲ್ಲಿ ಓರ್ವ ಬಾಲಕನಿಗೆ ಗಾಯವಾಗಿದ್ದು, ಉಳಿದಂತೆ 9 ಮಂದಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಐದು ವರುಷಗಳಿಗೆ ಹೋಲಿಸಿದರೆ ಈ ವರುಷ ದೀಪಾವಳಿ ಹಬ್ಬ ಗಾಯಾಳುಗಳ ಸಂಖ್ಯೆ ಕಡಿಮೆ. ಹಬ್ಬಕ್ಕೆ ಇನ್ನೊಂದು ದಿನ ಬಾಕಿಯಿದ್ದು, ಮಕ್ಕಳು ಉಳಿದ ಪಟಾಕಿ ಹಚ್ಚಲು ಉತ್ಸುಕರಾಗಿರುತ್ತಾರೆ. ಆದರೆ ಗುಣಮಟ್ಟದ ಪಟಾಕಿ ಹಾಗೂ ಪೋಷಕರ ನಿರ್ಲಕ್ಷ್ಯದಿಂದ ಮಕ್ಕಳು ಬಾಳು ಅಂಧಕಾರಕ್ಕೆ ಹೋಗದಂತೆ ನೋಡಿಕೊಳ್ಳಬೇಕಿದೆ.
ಹಿಂದೂಗಳ ಅತಿ ದೊಡ್ಡ ಹಬ್ಬ ದೀಪಾವಳಿ ಈ ಬಾರಿ ಕೊರೋನಾ ಸಂದಿಗ್ಥತೆಯಲ್ಲಿ ಆಚರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಪಟಾಕಿ ಹಚ್ಚಿದರೇನೇ ಹಬ್ಬ. ಇದಕ್ಕಾಗಿ ಸರ್ಕಾರ ಹಲವು ಸೂಚನೆಗಳ ಮೇರೆಗೆ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ಇದು ಕೇವಲ ಹೆಸರಿಗೆ ಮಾತ್ರವಿದ್ದು, ಪ್ರತಿ ವರುಷದಂತೆ ಈ ವರುಷ ಪರಿಸರ ಮಾಲಿನ್ಯ ಹೆಚ್ಚು ಮಾಡುವ ಮಾಮೂಲಿ ಹಾಗೂ ಲೋಕಲ್ ಬ್ರಾಂಡ್ ಪಟಾಕಿ ಮಾರಾಟವಾಗಿದೆ. ಇದರ ಪರಿಣಾಮ ಕಳೆದ ವರುಷಕ್ಕೆ ಹೋಲಿಸಿದರೆ ಕಡಿಮೆಯಾದ್ರೂ ಈ ವರುಷ ಬೆಂಗಳೂರಿನ 10 ಜನ ಪಟಾಕಿ ಸಿಡಿದು ಗಾಯಗಳಾಗಿವೆ.