ಉಮೇಶ್ ಕತ್ತಿಗಿಲ್ಲ ಸಚಿವ ಸ್ಥಾನ, ನಾಳೆ 10 ಮಂದಿಯಷ್ಟೇ ಪ್ರಮಾಣವಚನ ಸ್ವೀಕಾರ; ಸಿಎಂ ಬಿಎಸ್​ವೈ ಸ್ಪಷ್ಟನೆ

ಮಹೇಶ್ ಕುಮಟಳ್ಳಿ ಅವರಿಗೂ ಸಚಿವ ಸ್ಥಾನ ನೀಡುವುದು ಕಷ್ಟವಾಗುತ್ತಿದೆ. ಅವರನ್ನು ಕರೆಸಿ, ಮಾತುಕತೆ ಮಾಡಿ ಅವರಿಗೆ ಬೇರೆ ಸ್ಥಾನಮಾನ ನೀಡಲಾಗುವುದು ಎಂದು ಸಿಎಂ ಬಿಎಸ್​ವೈ ಹೇಳಿದರು

ಉಮೇಶ್​ ಕತ್ತಿ ಮತ್ತು ಬಿಎಸ್ ಯಡಿಯೂರಪ್ಪ

ಉಮೇಶ್​ ಕತ್ತಿ ಮತ್ತು ಬಿಎಸ್ ಯಡಿಯೂರಪ್ಪ

 • Share this:
  ಬೆಂಗಳೂರು: ನಾಳೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಆದರೆ, ನಿರೀಕ್ಷೆಯಂತೆ ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡಲಾಗಿಲ್ಲ. ಅಲ್ಲದೇ, ಈ ಸಂಪುಟ ವಿಸ್ತರಣೆಯಲ್ಲಿ ಕೇವಲ ಹತ್ತು ಮಂದಿಯಷ್ಟೇ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ.

  ಈ ವಿಚಾರವಾಗಿ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಈಗಷ್ಟೇ ದೆಹಲಿಯ ನಾಯಕರು ಹಾಗೂ ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಮಾತನಾಡಲಾಗಿದೆ. ಅವರ ಸೂಚನೆಯಂತೆ ನಾಳೆ ಹತ್ತು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಉಳಿದ ವಿಚಾರವನ್ನು ಮಾತನಾಡಲು ದೆಹಲಿಗೆ ಕರೆದಿದ್ದಾರೆ. ನೂರಕ್ಕೆ ನೂರು ನಾವು ಉಮೇಶ್ ಕತ್ತಿ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ. ಈ ಭರವಸೆಯನ್ನು ನಾವು ಅವರಿಗೂ ಕೊಟ್ಟಿದ್ದೇವೆ. ನಾಳೆಯೇ ಅವರು ಪ್ರಮಾಣವಚನ ಸ್ವೀಕಾರ ಮಾಡಬೇಕಿತ್ತು. ಆದರೆ, ರಾಜೀನಾಮೆ ಕೊಟ್ಟು ಬಂದಿರುವ ಶಾಸಕರನ್ನಷ್ಟೇ ಸಚಿವರನ್ನಾಗಿ ಮಾಡಿ, ಉಳಿದಂತೆ ಯಾರನ್ನು ಮಾಡುವುದು ಬೇಡ ಎಂದು ರಾಷ್ಟ್ರೀಯ ನಾಯಕರು ಹೇಳಿದ್ದಾರೆ ಎಂದು ತಿಳಿಸಿದರು.

  ಶೀಘ್ರದಲ್ಲೇ ನಾನು ದೆಹಲಿಗೆ ತೆರಳಿ ಉಳಿದ ನಾಯಕರನ್ನು ಸಚಿವರನ್ನಾಗಿ ಮಾಡುವ ಸಂಬಂಧ ಹೈಕಮಾಂಡ್​ ಜೊತೆಗೆ ಮಾತುಕತೆ ನಡೆಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಉಮೇಶ್ ಕತ್ತಿ ಅವರನ್ನು ಸಚಿವರನ್ನಾಗಿ ಮಾಡುವುದು ನೂರಕ್ಕೆ ನೂರು ನಿಶ್ಚಿತ ಎಂದರು. ಹಾಗೆಯೇ ಮಹೇಶ್ ಕುಮಟಳ್ಳಿ ಅವರಿಗೂ ಸಚಿವ ಸ್ಥಾನ ನೀಡುವುದು ಕಷ್ಟವಾಗುತ್ತಿದೆ. ಅವರನ್ನು ಕರೆಸಿ, ಮಾತುಕತೆ ಮಾಡಿ ಅವರಿಗೆ ಬೇರೆ ಸ್ಥಾನಮಾನ ನೀಡಲಾಗುವುದು ಎಂದು ಸಿಎಂ ಬಿಎಸ್​ವೈ ಹೇಳಿದರು.

  ಇದನ್ನು ಓದಿ: ಹಾರ-ತುರಾಯಿ ಬೇಡ, ಹೃದಯವಂತಿಕೆಯಿಂದ ಬಂದು ಶುಭಾಶಯ ಕೋರಲಿ; ಕಾಂಗ್ರೆಸ್ ನಾಯಕರಿಗೆ ಬಿ.ಸಿ.ಪಾಟೀಲ್ ತಿರುಗೇಟು

   
  First published: