ಧಾರವಾಡದಲ್ಲಿ ಟೆಂಪೋ-ಕಾರು ಮುಖಾಮುಖಿ ಡಿಕ್ಕಿ ನಾಲ್ವರ ಸಾವು

ಕಾರನಲ್ಲಿದ್ದ ನಾಲ್ವರು ದುರ್ಮರಣ ಹೊಂದಿದ್ದು,  ಮೃತರನ್ನು ಕೊಪ್ಪಳ ನಗರದ ಭಾಗ್ಯನಗರ ಬಡಾವಣೆ ನಿವಾಸಿಗಳಾದ ಮಂಜುನಾಥ (40), ರುದ್ರಪ್ಪ (66), ಈರಮ್ಮ (62), ಶಿವರಾಜ(2)  ಎಂದು ಗುರುತಿಸಲಾಗಿದೆ

G Hareeshkumar | news18-kannada
Updated:January 14, 2020, 3:42 PM IST
ಧಾರವಾಡದಲ್ಲಿ ಟೆಂಪೋ-ಕಾರು ಮುಖಾಮುಖಿ ಡಿಕ್ಕಿ ನಾಲ್ವರ ಸಾವು
ಸಾಂದರ್ಭಿಕ ಚಿತ್ರ
  • Share this:
ಧಾರವಾಡ(ಜ.14) : ಟೆಂಪೋ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಸಂಭವಿಸಿದೆ.

ಕಾರನಲ್ಲಿದ್ದ ನಾಲ್ವರು ದುರ್ಮರಣ ಹೊಂದಿದ್ದು,  ಮೃತರನ್ನು ಕೊಪ್ಪಳ ನಗರದ ಭಾಗ್ಯನಗರ ಬಡಾವಣೆ ನಿವಾಸಿಗಳಾದ ಮಂಜುನಾಥ (40), ರುದ್ರಪ್ಪ (66), ಈರಮ್ಮ (62), ಶಿವರಾಜ(2)  ಎಂದು ಗುರುತಿಸಲಾಗಿದೆ. ಮಮತಾ, ಸಾನ್ವಿ  ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ : ಬೇವಿನ ಮರದಲ್ಲಿ ಹಾಲು; ವಿಶೇಷ ಪೂಜೆ ಮಾಡುವುದಾಗಿ ಹೇಳಿ ರೈತನಿಗೆ 50 ಸಾವಿರ ವಂಚನೆ

ಕಾರಿನಲ್ಲಿದ್ದವರು ಕೊಪ್ಪಳದಿಂದ ರುದ್ರಪ್ಪ, ಈರಮ್ಮ ಎಂಬುವವರಿಗೆ ಚಿಕಿತ್ಸೆಗೆ ಬೆಳಗಾವಿಗೆ ಆಸ್ಪತ್ರೆ  ಹೊರಟಿದ್ದರು. ಟೆಂಪೋ ಬೆಳಗಾವಿಯುಂದ ಹುಬ್ಬಳ್ಳಿ ಕಡೆ ಬರುತ್ತಿತ್ತು. ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಕಾರು ಇದಾಗಿದ್ದು,  ಘಟನೆ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
First published: January 14, 2020, 1:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading