HOME » NEWS » State » TEMPLES ARE NOT OPEN TILL NOW AT BELAGAVI DISTRICT AND NO INCOME CSB LG

ಬೆಳಗಾವಿಯಲ್ಲಿ ಭಕ್ತರ ಪ್ರವೇಶಕ್ಕೆ ಮುಕ್ತವಾಗದ ದೇವಾಲಯಗಳು; ಕುಸಿತ ಕಂಡ ಆದಾಯ..!

ಸವದತ್ತಿ ಯಲ್ಲಮ್ಮ ಜಾತ್ರೆ ಅಷ್ಟೇ ಅಲ್ಲದೇ ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ಜಾತ್ರೆ, ಕೊಕಟನೂರ ಯಲ್ಲಮ್ಮ ಜಾತ್ರೆ, ಮುಗಳಖೋಡ ಮಠದ ಜಾತ್ರೆ ಸರಳ ಆಚರಣೆ ನಡೆಯುತ್ತಿದೆ. ಇದರಿಂದ ದೇವಾಲಯಕ್ಕೆ ಬರುತ್ತಿದ್ದ ಆದಾಯದಲ್ಲಿ ಭಾರೀ ಹೊಡೆತ ಬಿದ್ದಿದೆ.  ಜನತೆ‌ ಜಾತ್ರೆ ಸಂದರ್ಭದಲ್ಲಿ ವ್ಯಾಪಾರ ನಂಬಿಕೊಂಡು ಜೀವನ ಮಾಡುತ್ತಿದ್ದ ಕುಟುಂಬಗಳ ಬದುಕು ಸಹ ಕಷ್ಟಕರವಾಗಿದೆ.

news18-kannada
Updated:January 20, 2021, 5:31 PM IST
ಬೆಳಗಾವಿಯಲ್ಲಿ ಭಕ್ತರ ಪ್ರವೇಶಕ್ಕೆ ಮುಕ್ತವಾಗದ ದೇವಾಲಯಗಳು; ಕುಸಿತ ಕಂಡ ಆದಾಯ..!
ಸವದತ್ತಿ ಯಲ್ಲಮ್ಮ ದೇವಾಲಯ
  • Share this:
ಬೆಳಗಾವಿ(ಜ.20): ದೇಶದಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ ಈಗಾಗಲೇ ಲಸಿಕೆ ವಿತರಣೆ ಆರಂಭವಾಗಿದೆ. ಸೋಂಕಿನ ಭಯದಿಂದ ಮುಚ್ಚಿದ ದೇವಸ್ಥಾನದ ಬಾಗಿಲು ಮಾತ್ರ ಇನ್ನೂ ತೆಗೆದಿಲ್ಲ.‌ ರಾಜಕೀಯ ಸಮಾವೇಶ, ಚುನಾವಣೆ ಹೀಗೆ ಅನೇಕ ಕಡೆ ನೂರಾರು ಜನ ಒಂದೆಡೆ ಸೇರುತ್ತಿದ್ದಾರೆ. ಆದರೆ ದೇವಾಲಯ ಬಾಗಿಲು ತೆಗೆಯಲು, ಜಾತ್ರೆ ನಡೆಸಲು ಮಾತ್ರ ಕೋವಿಡ್ ಮಾರ್ಗಸೂಚಿ ಅಡ್ಡಿಯಾಕೆ ಎಂದು ಭಕ್ತರು ಪ್ರಶ್ನೆ ಮಾಡುತ್ತಿದ್ದಾರೆ.

ಜ್ಬೆಞಳಗಾವಿ ಜಿಲ್ಲೆಯ ಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಾಲಯ 2020ರ ಮಾರ್ಚ್ 22 ರಂದು ಬಂದ್ ಮಾಡಿದರು. ನಾಲ್ಕು ತಿಂಗಳ ಬಳಿಕ ರಾಜ್ಯದ ಎಲ್ಲಾ ಪ್ರಮುಖ ದೇವಾಲಯ ಬಾಗಿಲು ಒಪನ್ ಆಗಿದ್ದರು. ಸವದತ್ತಿ ಯಲ್ಲಮ್ಮ ದೇವಾಲಯ ಇನ್ನೂ ಒಪನ್ ಆಗಿಲ್ಲ. ಇದು ಯಲ್ಲಮ್ಮ ಭಕ್ತರ ಬೇಸರಕ್ಕೆ ಕಾರಣವಾಗಿದೆ. ಮನೆಯಲ್ಲಿ ಮದುವೆ ಇತರೆ ಶುಭ ಕಾರ್ಯ ನಡೆದ ಸಂದರ್ಭದಲ್ಲಿ ಯಲ್ಲಮ್ಮ ದರ್ಶನ ಪಡೆಯುವುದು ಭಕ್ತರ ಬಯಕೆ. ಆದರೆ 10 ತಿಂಗಳಿಂದ ದೇವರ ದರ್ಶನಕ್ಕೆ ಭಕ್ತರಿಗೆ ಬೆಳಗಾವಿ ಜಿಲ್ಲಾಡಳಿತ ದರ್ಶನ ನೀಡುತ್ತಿಲ್ಲ.

ರಾಜಭವನ ಮುತ್ತಿಗೆಗೆ ಯತ್ನ; ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನನ್ನು ವಶಕ್ಕೆ ಪಡೆದ ಪೊಲೀಸರು

ಇದೇ ತಿಂಗಳ 28 ರಂದು ಬನದ ಹುಣ್ಣಿಮೆಯ ಜಾತ್ರೆ ಇದ್ದು, ಇದಕ್ಕೂ ಬೆಳಗಾವಿ ಜಿಲ್ಲಾಢಳಿತ ನಿಷೇಧ ಹೇರಿದೆ. ಜಾತ್ರೆ ಸಂದರ್ಭದಲ್ಲಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಸಾವಿರಾರು ಭಕ್ತರು ಒಂದೆಡೆ ಸೆರುತ್ತಾರೆ. ಇದರಿಂದ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯದ ನಿಯಮ ಪಾಲನೆ ಆಗಲ್ಲ. ಈ ಕಾರಣ ನೀಡಿ ಜಿಲ್ಲಾಡಳಿತ ಜ. 31ರವರೆಗೆ ಯಲ್ಲಮ್ಮ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಿಲ್ಲ.

ಸವದತ್ತಿ ಯಲ್ಲಮ್ಮ ಜಾತ್ರೆ ಅಷ್ಟೇ ಅಲ್ಲದೇ ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ಜಾತ್ರೆ, ಕೊಕಟನೂರ ಯಲ್ಲಮ್ಮ ಜಾತ್ರೆ, ಮುಗಳಖೋಡ ಮಠದ ಜಾತ್ರೆ ಸರಳ ಆಚರಣೆ ನಡೆಯುತ್ತಿದೆ. ಇದರಿಂದ ದೇವಾಲಯಕ್ಕೆ ಬರುತ್ತಿದ್ದ ಆದಾಯದಲ್ಲಿ ಭಾರೀ ಹೊಡೆತ ಬಿದ್ದಿದೆ.  ಜನತೆ‌ ಜಾತ್ರೆ ಸಂದರ್ಭದಲ್ಲಿ ವ್ಯಾಪಾರ ನಂಬಿಕೊಂಡು ಜೀವನ ಮಾಡುತ್ತಿದ್ದ ಕುಟುಂಬಗಳ ಬದುಕು ಸಹ ಕಷ್ಟಕರವಾಗಿದೆ.

ಅದ್ಧೂರಿ ಮದುವೆ, ಚುನಾವಣೆ ಹಾಗೂ ರಾಜಕೀಯ ಸಮಾವೇಶಕ್ಕೆ ಅನುಮತಿ ನೀಡುವ ಸರ್ಕಾರ ದೇವಾಲಯ ತೆಗೆಯಲು ಯಾಕೆ ನಿಷೇಧ ಹೇರಿದೆ ಎಂಬುದು ಭಕ್ತರ ಪ್ರಶ್ನೆ. ದೇವಾಲಯ ಆದಾಯದ ಜತೆಗೆ ಜಾತ್ರೆ ನಂಬಿಕೊಂಡು ಜೀವನ ನಡೆಸುವ ಕುಟುಂಬಗಳಿಗೆ ಬೀದಿಗೆ ಬರುವಂತೆ ಆಗಿದೆ.
Published by: Latha CG
First published: January 20, 2021, 5:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories