Football World Cup 2018

ಇಂದು ವಿಶ್ವ ಪ್ರೇಮಿಗಳು ದಿನಾಚರಣೆ: ರಾಮಲಿಂಗೇಶ್ವರ ದೇಗುಲಕ್ಕೆ ಭೇಟಿ ಕೊಟ್ರೆ ಲವ್ ಸಕ್ಸಸ್ ಅಂತೆ..!


Updated:February 14, 2018, 10:47 AM IST
ಇಂದು ವಿಶ್ವ ಪ್ರೇಮಿಗಳು ದಿನಾಚರಣೆ: ರಾಮಲಿಂಗೇಶ್ವರ ದೇಗುಲಕ್ಕೆ ಭೇಟಿ ಕೊಟ್ರೆ ಲವ್ ಸಕ್ಸಸ್ ಅಂತೆ..!

Updated: February 14, 2018, 10:47 AM IST
-ವಿನಾಯಕ ತೊಡರನಾಳ್, ನ್ಯೂಸ್ 18 ಕನ್ನಡ

ಚಿತ್ರದುರ್ಗ(ಫೆ.14): ವಿಶ್ವದಾದ್ಯಂತ ಇವತ್ತು ಪ್ರೇಮಿಗಳ ದಿನಾಚರಣೆನಾ ಆಚರಿಸುತ್ತಾರೆ. ಇಲ್ಲೊಂದು ದೇವಸ್ಥಾನವಿದೆ, ಇಲ್ಲಿಗೆ ಭೇಟಿ ಕೊಟ್ಟರೆ ಪ್ರೀತಿ ಸಕ್ಸಸ್ ಆಗುತ್ತದೆಯಂತೆ. ಅಷ್ಟಕ್ಕೂ ಆ ದೇವಸ್ಥಾನ ಯಾವುದು? ಇಲ್ಲಿದೆ ವಿವರ

ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೊಸಗುಡ್ಡದ ರಾಮಲಿಂಗೇಶ್ವರ ದೇವಾಲಯ. ಆದರೆ ಪ್ರೇಮಿಗಳ ದಿನದಂದು ಈ ದೇವಾಲಯ ಪ್ರೇಮಾಲಯವಾಗಿ ಬಿಡುತ್ತೆ.ಇಲ್ಲಿಗೆ ಬಂದ ಜೋಡಿ ಹಕ್ಕಿಗಳು ದೇವಾಲಯದ ಮುಂಭಾಗದ ಅರಳಿ ಮರಕ್ಕೆ ಕಲ್ಲನ್ನ ಕಟ್ಟುವ ಮೂಲಕ, ನಮ್ಮ ಪ್ರೇಮ ಶಾಶ್ವಾತವಾಗಿರಲಿ ಅಂತಾ ದೇವರಲ್ಲಿ ಪ್ರಾರ್ಥಿಸ್ತಾರೆ. ಹೀಗೆ ಮಾಡೋದ್ರಿಂದ ತನ್ನ ಲವ್ ಸಕ್ಸಸ್ ಆಗುತ್ತೆ ಎನ್ನುವುದು ಇವರ ನಂಬಿಕೆ. ದೇವಾಲಯದ ಮೇಲ್ಬಾಗದಲ್ಲಿ ಪ್ರೇಮಿಗಳು ಲಕ್ಷಾಂತರ ಕಲ್ಲಿನ ಗುಡಿಗಳನ್ನು ಕಟ್ಟಿದ್ದಾರೆ.

ಯುವ ಪ್ರೇಮಿಗಳ ಮೂಕ ವೇದನೆಗಳಿಗೆ ಈ ರಾಮಲಿಂಗೇಶ್ವರನೇ ಸಾಕ್ಷಿಯಾಗಿದ್ದಾನೆ. ಒಟ್ಟಾರೆ ದುರ್ಗದ ಪ್ರೇಮಿಗಳಿಗೆ ಇದೊಂದು ಪ್ರೇಮ ಮಂದಿರವಾಗಿರೋದಂತು ಸತ್ಯ.
First published:February 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ