ಡಿ. 25 ರಂದು ವೈಕುಂಠ ಏಕಾದಶಿ ಹಿನ್ನೆಲೆ; ಕೋಲಾರದ ಚಿಕ್ಕತಿರುಪತಿ, ಬಂಗಾರು ತಿರುಪತಿ ದೇಗುಲದಲ್ಲಿ ಭಕ್ತರಿಗೆ ಅವಕಾಶ

ಇನ್ನು ಪ್ರಮುಖವಾಗಿ 65 ವರ್ಷ ಮೆಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವನ್ನ ನಿಷೇಧಿಸಿದೆ. ಮಾರ್ಗಸೂಚಿಗಳನ್ನ ಪಾಲಿಸುವಂತೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಆದೇಶ ಮಾಡಿದ್ದಾರೆ.

ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ

ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ

  • Share this:
ಕೋಲಾರ(ಡಿ.23): ಪ್ರತಿ ವರ್ಷದಂತೆ ಈ ವರ್ಷ ಕೂಡ ಜನರು ವೈಕುಂಠ ಏಕಾದಶಿ ದಿನದಂದು ಪ್ರಸಿದ್ದ ಯಾತ್ರಾಸ್ಥಳಗಳಲ್ಲಿ ದೇವರ ದರ್ಶನ ಮಾಡಿಕೊಳ್ಳಲು ಜಿಲ್ಲಾಡಳಿತ ಸಮ್ಮತಿ ನೀಡಿದೆ. ವೈಕುಂಠ ಏಕಾದಶಿ ದಿನದಂದು, ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಪ್ರಸನ್ನ ವೆಂಕಟೇಶ್ವರ ದೇಗುಲ ಹಾಗು ಕೆಜಿಎಫ್​ ತಾಲೂಕಿನ ಗುಟ್ಟಹಳ್ಳಿ ಗ್ರಾಮದ ಬಂಗಾರು ತಿರುಪತಿ ದೇಗುಲವನ್ನ ತೆರೆಯಲು ಜಿಲ್ಲಾಧಿಕಾರಿ ಸಿ ಸತ್ಯಭಾಮ ಅನುಮತಿ ನೀಡಿದ್ದಾರೆ. ಭಕ್ತರ ಧಾರ್ಮಿಕ ಭಾವನೆಗಳ ಹಿತದೃಷ್ಟಿಯಿಂದ ನಿರ್ಧಾರ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಚಿಕ್ಕ ತಿರುಪತಿ ದೇಗುಲ ಮತ್ತು ಬಂಗಾರು ತಿರುಪತಿ ದೇಗುಲ ನೆರೆಯ ಆಂಧ್ರ, ತಮಿಳುನಾಡು ರಾಜ್ಯಗಳ ಗಡಿಯಲ್ಲೇ ಇರುವುದರಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಇನ್ನು ಜನವರಿ 1 ರಂದು ಎರಡೂ ದೇಗುಲಗಳನ್ನ ತೆರೆಯಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ.

ದೇಗುಲವನ್ನ ತೆರೆಯಲು ಅನುಮತಿ ನೀಡಿರುವ ಜೊತೆಗೆ, ಕಡ್ಡಾಯವಾಗಿ ಕೋವಿಡ್ 19 ನಿಯಮಗಳನ್ನ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಬಳಕೆ, ಕೈ ಕಾಲುಗಳನ್ನ ಶುಚಿಗೊಳಿಸಲು ವ್ಯವಸ್ಥೆ, ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇರುತ್ತದೆ. ಕೋವಿಡ್ 19 ಹಿನ್ನಲೆ ವಿಶೇಷ ಪೂಜೆ, ಪ್ರಸಾದ ವಿನಿಯೋಗ ವನ್ನು ರದ್ದು ಮಾಡಲಾಗಿದೆ.

ಇನ್ನು ಪ್ರಮುಖವಾಗಿ 65 ವರ್ಷ ಮೆಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವನ್ನ ನಿಷೇಧಿಸಿದೆ. ಮಾರ್ಗಸೂಚಿಗಳನ್ನ ಪಾಲಿಸುವಂತೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರು ಆದೇಶ ಮಾಡಿದ್ದಾರೆ.

ಡಿ. 25ರಿಂದ 30ರವರೆಗೆ ಕಾಫಿನಾಡಿನ ಪ್ರವಾಸಿ ತಾಣಗಳಿಗಿಲ್ಲ ಅವಕಾಶ; ದತ್ತ ಜಯಂತಿ ಹಿನ್ನಲೆ ಆರು ದಿನಗಳ ಕಾಲ ನಿರ್ಬಂಧ

ಸಾರ್ವಜನಿಕ ಆರೋಗ್ಯದ ದೃಷ್ಠಿಯಿಂದ ಕ್ರಿಸ್‍ಮಸ್ ಹಬ್ಬ ಹಾಗೂ ಹೊಸವರ್ಷದ ಹಬ್ಬದ ಸಂಭ್ರಮಾಚರಣೆಯನ್ನು ಸರಳವಾಗಿ ಆಚರಿಸಬೇಕೆಂದು ಜಿಲ್ಲಾಡಳಿತ ಆದೇಶಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜಮಾಯಿಸಿ ಆಚರಣೆ ಮಾಡುವುದನ್ನು ಸಂರ್ಪೂಣವಾಗಿ ನಿಷೇಧ ಮಾಡಿರುವುದಾಗಿ ಕೋಲಾರ ಜಿಲ್ಲಾಧಿಕಾರಿಯಾದ ಸಿ.ಸತ್ಯಭಾಮ ಅವರು ಆದೇಶ ಹೊರಡಿಸಿದ್ದಾರೆ.

ಕ್ರೈಸ್ತ ಧರ್ಮದ ಚರ್ಚ್‍ಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸೂಚನೆ ನೀಡಿದ್ದಾರೆ. ಜನರು ಸೇರುವ ಸ್ಥಳದಲ್ಲಿ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧ ಮಾಡಲಾಗಿದೆ. ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಗಳಲ್ಲಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಯಾರಾದರೂ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51 ರಿಂದ 60ರ ಜೊತೆಗೆ ಭಾರತೀಯ ದಂಡ ಸಂಹಿತೆಯ ಕಲಂ 188 ಮತ್ತು 270 ರ ರೀತ್ಯಾ ಕಾನೂನು ಕ್ರಮ ಕೈಗೊಳ್ಳಲಾಗವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೋವಿಡ್ 19 ಸೋಂಕು ಹೊಸ ರೂಪಾಂತರದಲ್ಲಿ ಕಂಡುಬರುತ್ತಿದೆ ಎಂಬ ವಿಚಾರಗಳು ಚರ್ಚೆಯಲ್ಲಿರುವಾಗ, ಜಿಲ್ಲೆಯಲ್ಲಿನ ದೇಗುಲಗಳಲ್ಲಿ ಪ್ರಮುಖ ದಿನದಂದು ದರ್ಶನಕ್ಕೆ ವ್ಯವಸ್ತೆ ಕಲ್ಪಿಸಲಾಗಿದೆ,
Published by:Latha CG
First published: