ನಿನಗೆ ಏನು ಬೇಕು ಹೇಳು, ಎಲ್ಲಾ ಮಾಡಿಕೊಡುತ್ತೇನೆ; ಮಾಜಿ ಸಚಿವ ಎಚ್.ಡಿ.ರೇವಣ್ಣ‌ಗೆ ಸಿಎಂ ಬಿಎಸ್​ವೈ ಅಭಯ

ಇತ್ತೀಚೆಗೆ ಗೃಹ ಕಚೇರಿ ಕೃಪ್ಣಾ ಹಾಗೂ ವಿಧಾನಸೌಧದಲ್ಲಿ ಸಿಎಂ ಭೇಟಿಯಾಗಿದ್ದ ಎಚ್​.ಡಿ.ಕುಮಾರಸ್ವಾಮಿ ಅವರು  ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಮನವಿ ಮಾಡಿದ್ದರು. ಅದಾದ ಬಳಿಕ ಇಂದು ಎಚ್.ಡಿ.ರೇವಣ್ಣ ಅವರು ಸಹ ಸಿಎಂ ಬಿಎಸ್​ವೈ ಭೇಟಿಯಾಗಿ ಅಭಿವೃದ್ಧಿ ವಿಚಾರವಾಗಿ ಮನವಿ ಮಾಡಿದಾಗ ಸಿಎಂ ಈ ಭರವಸೆ ನೀಡಿದ್ದಾರೆ.

ಎಚ್​.ಡಿ.ರೇವಣ್ಣ ಮತ್ತು ಸಿಎಂ ಬಿಎಸ್ ಯಡಿಯೂರಪ್ಪ

ಎಚ್​.ಡಿ.ರೇವಣ್ಣ ಮತ್ತು ಸಿಎಂ ಬಿಎಸ್ ಯಡಿಯೂರಪ್ಪ

 • Share this:
  ಬೆಂಗಳೂರು; ನಿನಗೆ ಏನು ಬೇಕು ಹೇಳು, ಎಲ್ಲಾ ಕೆಲಸ ಮಾಡಿಕೊಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಹೇಳಿದ್ದಾರೆ.  ಕ್ಷೇತ್ರದ ಕಾಮಗಾರಿಗಳ ಬಗ್ಗೆ ಸಿಎಂ ಬಿಎಸ್​ವೈಗೆ ರೇವಣ್ಣ ಅವರು ಮನವಿ ಮಾಡಿದ ಬೆನ್ನಲ್ಲೇ ಸಿಎಂ ಈ ಅಭಯ ನೀಡಿದ್ದಾರೆ.

  ವಿಧಾನಸೌಧದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿಯಾದ ಎಚ್​.ಡಿ.ರೇವಣ್ಣ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮನವಿ ಮಾಡಿದರು. ಈ ವೇಳೆ ನಿನಗೇ ಏನು ಮಾಡಿಕೊಡಬೇಕು ಹೇಳು..? ಅದೆಲ್ಲವನ್ನು ಮಾಡಿಕೊಡುವೆ ಎಂದು ಸಿಎಂ ಬಿಎಸ್​ವೈ ಹೇಳಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಬೆನ್ನೆಲ್ಲೇ ಅವರ ಸಹೋದರನಿಗೂ ಸಿಎಂ ಅಭಯ ನೀಡಿದ್ದಾರೆ.

  ಇದನ್ನು ಓದಿ: Bharath Bandh: ನಮ್ಮದು ರೈತಪರ ಸರ್ಕಾರ; ಭಾರತ್ ಬಂದ್ ಯಶಸ್ವಿಯಾಗಲ್ಲ; ಸಿಎಂ ಬಿಎಸ್ ಯಡಿಯೂರಪ್ಪ

  ಇತ್ತೀಚೆಗೆ ಗೃಹ ಕಚೇರಿ ಕೃಪ್ಣಾ ಹಾಗೂ ವಿಧಾನಸೌಧದಲ್ಲಿ ಸಿಎಂ ಭೇಟಿಯಾಗಿದ್ದ ಎಚ್​.ಡಿ.ಕುಮಾರಸ್ವಾಮಿ ಅವರು  ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಮನವಿ ಮಾಡಿದ್ದರು. ಅದಾದ ಬಳಿಕ ಇಂದು ಎಚ್.ಡಿ.ರೇವಣ್ಣ ಅವರು ಸಹ ಸಿಎಂ ಬಿಎಸ್​ವೈ ಭೇಟಿಯಾಗಿ ಅಭಿವೃದ್ಧಿ ವಿಚಾರವಾಗಿ ಮನವಿ ಮಾಡಿದಾಗ ಸಿಎಂ ಈ ಭರವಸೆ ನೀಡಿದ್ದಾರೆ.
  Published by:HR Ramesh
  First published: