• Home
  • »
  • News
  • »
  • state
  • »
  • KCR ಪ್ರಧಾನಿಯಾಗಲಿ ಎಂದು ಉಚಿತ ಮದ್ಯ, ಕೋಳಿ ವಿತರಿಸಿದ ಟಿಆರ್‌ಎಸ್‌ ನಾಯಕ!

KCR ಪ್ರಧಾನಿಯಾಗಲಿ ಎಂದು ಉಚಿತ ಮದ್ಯ, ಕೋಳಿ ವಿತರಿಸಿದ ಟಿಆರ್‌ಎಸ್‌ ನಾಯಕ!

ಕೋಳಿ ಹಂಚಿದ TRS ನಾಯಕ

ಕೋಳಿ ಹಂಚಿದ TRS ನಾಯಕ

ರಾಷ್ಟ್ರೀಯ ಪಕ್ಷದ ಘೋಷಣೆಗೂ ಮುನ್ನವೇ ಟಿಆರ್‌‌ಎಸ್ ನಾಯಕ ರಾಜನಾಳ ಶ್ರೀಹರಿ ಅವರು ವಾರಂಗಲ್‌ನಲ್ಲಿ ಸ್ಥಳೀಯರಿಗೆ ಮದ್ಯದ ಬಾಟಲಿಗಳು ಮತ್ತು ಕೋಳಿಗಳನ್ನು ವಿತರಿಸಿದ್ದಾರೆ.

  • Share this:

ಹೈದರಾಬಾದ್ (ಅ.05): ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ (K. Chandrasekhara) ರಾವ್ ಅವರು ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸಿದ್ದಾರೆ. ಅದರಂತೆ ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ಹೆಸರನ್ನು ಭಾರತ ರಾಷ್ಟ್ರ ಸಮಿತಿ (BRS) ಎಂದು ಘೋಷಿಸಲಾಗಿದೆ. ರಾಷ್ಟ್ರೀಯ ಪಕ್ಷದ ಘೋಷಣೆಗೂ ಮುನ್ನವೇ ಟಿಆರ್‌‌ಎಸ್ ನಾಯಕ (TCR Leaders) ರಾಜನಾಳ ಶ್ರೀಹರಿ ಅವರು ವಾರಂಗಲ್‌ನಲ್ಲಿ ಸ್ಥಳೀಯರಿಗೆ ಮದ್ಯದ ಬಾಟಲಿಗಳು ಮತ್ತು ಕೋಳಿಗಳನ್ನು ವಿತರಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ‌ವಾಗಿದೆ.


ಕೋಳಿ, ಮದ್ಯ ವಿತರಿಸಿದ ಟಿಆರ್​ಎಸ್​ ಲೀಡರ್


ರಾಜನಾಳ ಶ್ರೀಹರಿ ಅವರು ಸುಮಾರು 200 ಬಾಟಲಿ ಮದ್ಯ ಹಾಗೂ 200 ಕೋಳಿಗಳನ್ನು ವಿತರಿಸಿದ್ದಾರೆ ಎಂದು ವರದಿಯಾಗಿದೆ. ಶ್ರೀಹರಿ ಕಾರ್ಯವೈಖರಿ ಪ್ರಶ್ನಿಸಿದ ಬಿಜೆಪಿ ವಕ್ತಾರ ಎನ್‌ ವಿ ಸುಭಾಷ್, ‘ಮದ್ಯ ಮತ್ತು ಕೋಳಿ ಹಂಚುವ ಕೃತ್ಯವು ಜನರ ಸೇವೆ ಮಾಡುವ ಟಿಆರ್‌ಎಸ್‌ನ ವಿಶ್ವಾಸಾರ್ಹತೆಯ ಮೇಲೆ ಅನುಮಾನ ಮೂಡಿಸುತ್ತದೆ ಎಂದು ಟೀಕಿದ್ದಾರೆ.ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟ ಕೆಸಿಆರ್


ತೆಲಂಗಾಣ ಭವನದಲ್ಲಿ ಇಂದು ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಪಕ್ಷದ ಮರುನಾಮಕರಣದ ನಿರ್ಣಯವನ್ನು ಅಂಗೀಕರಿಸಲಾಗಿದೆ. ಟಿಆರ್‌ಎಸ್ ಇನ್ನು ಮುಂದೆ ಬಿಆರ್‌ಎಸ್ ಪಕ್ಷವಾಗಿ ಗುರುತಿಸಿಕೊಳ್ಳಲಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ. 'ರಾಷ್ಟ್ರೀಯ ನಾಯಕ ಕೆಸಿಆರ್ ಜಿಂದಾಬಾದ್' ಇತ್ಯಾದಿ ಜಯಘೋಷವನ್ನು ಬೆಂಬಲಿಗರು ಕೂಗಿದರು. ರಾಷ್ಟ್ರೀಯ ಪಕ್ಷ ಘೋಷಣೆಯೊಂದಿಗೆ ಕೆಸಿಆರ್ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ.


ಇದನ್ನೂ ಓದಿ: PSI ಹಗರಣದಲ್ಲಿ ಮಾಜಿ ಸಿಎಂ ಮಗನ ಕೈವಾಡವಿದೆ; ನ್ಯಾಯಾಂಗ ತನಿಖೆಗೆ ದಿನೇಶ್​ ಗುಂಡೂರಾವ್ ಆಗ್ರಹ


ಟಿಆರ್​ಎಸ್​ ಪಕ್ಷವನ್ನೇ ಬಿಆರ್​ಎಸ್​ ಎಂದು ಮರುನಾಮಕರಣ


ತೆಲಂಗಾಣದ ಮುಖ್ಯಮಂತ್ರಿ ರಾಷ್ಟ್ರೀಯ ಪಕ್ಷದ ಘೋಷಣೆ ಮಾಡಿದ್ದು, ತಮ್ಮ ಪಕ್ಷಕ್ಕೆ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​) ಎಂದು ಹೆಸರಿಟ್ಟಿದ್ದಾರೆ. ತಮ್ಮ ಟಿಆರ್​ಎಸ್​ ಪಕ್ಷವನ್ನೇ ಬಿಆರ್​ಎಸ್​ ಎಂದು ಮರುನಾಮಕರಣ ಮಾಡಿದ್ದಾರೆ. ತೆಲಂಗಾಣ ಭವನದಲ್ಲಿ ಕೆಸಿಆರ್ ತಮ್ಮ ಹೊಸ ಪಕ್ಷ ಬಿಆರ್‌ಎಸ್ ಘೋಷಣೆ ಮಾಡಿದ್ದಾರೆ. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ 280ಕ್ಕೂ ಹೆಚ್ಚು ಟಿಆರ್​ಎಸ್​ ಪಕ್ಷದ ಕಾರ್ಯಕಾರಿ ಸದಸ್ಯರು, ಶಾಸಕರು ಮತ್ತು ಸಂಸದರು ಟಿಆರ್‌ಎಸ್ ಅನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ನೊಂದಿಗೆ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಈ ವೇಳೆ ಜೆಡಿಎಸ್​ ನಾಯಕ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಚುನಾವಣೆಗೆ ಮುನ್ನ ರಾಷ್ಟ್ರೀಯ ಪಕ್ಷ ಘೋಷಣೆ


ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ 2024ರ ಚುನಾವಣೆಗೆ ಮುಂಚಿತವಾಗಿ ರಾಷ್ಟ್ರೀಯ ಪಕ್ಷವನ್ನು ಘೋಷಿಸಿದ್ದಾರೆ. ತಮ್ಮ ಪಕ್ಷದ ಹೊಸ ಆವೃತ್ತಿಯಾದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅನ್ನು ಇಂದು ಮಧ್ಯಾಹ್ನ ಘೋಷಣೆ ಮಾಡಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಈಗ ಬಿಆರ್‌ಎಸ್ ಆಗಿದೆ ಎಂದು ಕೆಸಿಆರ್​ ಘೋಷಿಸಿದ್ದಾರೆ.


ಇದನ್ನೂ ಓದಿ: Sonia Gandhi: ರಿಲ್ಯಾಕ್ಸ್ ಮೂಡ್​ನಲ್ಲಿ ಸೋನಿಯಾ ಗಾಂಧಿ; ಭೀಮನಕೊಲ್ಲಿಯ ಮಾದೇಶ್ವರ ದೇವಾಲಯಕ್ಕೆ ಭೇಟಿ


ಶುಭ ಮುಹೂರ್ತದಲ್ಲಿ ಹೊಸ ಪಕ್ಷಕ್ಕೆ ಚಾಲನೆ


ವಿಜಯದಶಮಿಯ ದಿನವಾದ ಇಂದು ಶುಭ ಮುಹೂರ್ತದಲ್ಲಿ ತಮ್ಮ ಹೊಸ ಪಕ್ಷಕ್ಕೆ ಚಾಲನೆ ಮಾಡಿದ್ದಾರೆ. 2024 ರಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಉದ್ದೇಶಿಸಿರುವುದಾಗಿ ಕೆಸಿಆರ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಮಿಷನ್‌ನಲ್ಲಿ ತನ್ನೊಂದಿಗೆ ಸೇರಲು ಹಲವಾರು ವಿರೋಧ ಪಕ್ಷಗಳನ್ನು ಆಹ್ವಾನಿಸಿದ್ದಾರೆ.

Published by:ಪಾವನ ಎಚ್ ಎಸ್
First published: