• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ಬಿಕ್ಕಟ್ಟು​: ಆತಂಕದಲ್ಲಿ ಠೇವಣಿದಾರ, ತೇಜಸ್ವಿ ಸೂರ್ಯ ಹಿತ ಕಾಪಾಡುವ ಅಭಯ

ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ಬಿಕ್ಕಟ್ಟು​: ಆತಂಕದಲ್ಲಿ ಠೇವಣಿದಾರ, ತೇಜಸ್ವಿ ಸೂರ್ಯ ಹಿತ ಕಾಪಾಡುವ ಅಭಯ

ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ ಮುಂದೆ ಠೇವಣಿದಾರರಿಂದ ಪ್ರತಿಭಟನೆ

ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ ಮುಂದೆ ಠೇವಣಿದಾರರಿಂದ ಪ್ರತಿಭಟನೆ

ಕೇಂದ್ರ ಸರ್ಕಾರ ಠೇವಣಿದಾರರ ಹಿತವನ್ನು ಕಾಪಾಡಲಿದೆ ಎಂಬ ಭರವಸೆ ನೀಡಿದ್ದಾರೆ. ಠೇವಣಿದಾರು ಯಾರೂ ಭಯ ಪಡಬೇಡಿ, ಕೇಂದ್ರ ಸರ್ಕಾರ ನಿಮ್ಮ ಜೊತೆಗಿದೆ. ನಿಮ್ಮ ಹಣ ಏನೂ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

  • Share this:

    ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದ ಶೋಚನೀಯ ಸ್ಥಿತಿಗೆ ಕೈಗನ್ನಡಿಯಂತೆ ಮತ್ತೊಂದು ಬ್ಯಾಂಕು ನಷ್ಟದಲ್ಲಿ ಮುಳುಗಿಹೋಗುತ್ತಿದೆ. ನಗರದ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಮುಖ್ಯ ಕಚೇರಿ ಇರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದಷ್ಟು ವಸೂಲಾತಿಯಾಗದ ಸಾಲ (ಎನ್​ಪಿಎ) ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕು ಈ ಸಹಕಾರಿ ಬ್ಯಾಂಕಿಗೆ ಅಂಕುಶ ಹಾಕಿದ್ದು ಆರು ತಿಂಗಳವರೆಗೆ ವಿವಿಧ ನಿರ್ಬಂಧಗಳನ್ನು ಹೇರಿದೆ. ಒಬ್ಬ ಗ್ರಾಹಕರು ಆರು ತಿಂಗಳಲ್ಲಿ 35 ಸಾವಿರ ರೂಗಿಂತ ಹೆಚ್ಚು ಹಣ ವಿತ್​ಡ್ರಾ ಮಾಡುವಂತಿಲ್ಲ ಎಂದೂ ಸೂಚಿಸಿದೆ. ಇದು ಆ ಬ್ಯಾಂಕ್​ನ ಗ್ರಾಹಕರಿಗೆ ಚಿಂತೆಗೀಡು ಮಾಡಿದೆ.


    ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಸಂಸ್ಥೆಯು ನಗರದ ವಿವಿಧೆಡೆ 12 ಬ್ರ್ಯಾಂಚ್​ಗಳನ್ನ ಹೊಂದಿದೆ. ಆಕರ್ಷಕ ಬಡ್ಡಿ ದರ ಆಫರ್ ಕೊಟ್ಟಿರುವ ಹಿನ್ನೆಲೆಯಲ್ಲಿ ಬ್ಯಾಂಕ್​ನಲ್ಲಿ ಗ್ರಾಹಕರು ಇಟ್ಟಿರುವ ಠೇವಣಿ ಮೊತ್ತ ಬರೋಬ್ಬರಿ 2,400 ಕೋಟಿ ರೂ ಇದೆ. ಈ ಪೈಕಿ 1,700 ಕೋಟಿಯಷ್ಟು ಹಣವನ್ನು ಬ್ಯಾಂಕು ಸಾಲವಾಗಿ ನೀಡಿದೆ. ಆದರೆ, 600 ಕೋಟಿಗೂ ಹೆಚ್ಚು ಮೊತ್ತದ ಹಣವು ಎನ್​ಪಿಎ ಆಗಿ ನಿಂತುಹೋಗಿದೆ. ಈಗ ಮಧ್ಯಪ್ರವೇಶಿಸಿರುವ ಆರ್​ಬಿಐ, ಬ್ಯಾಂಕ್ ಚೇತರಿಸಿಕೊಳ್ಳುವವರೆಗೂ ತಾನು ನಿರ್ದಿಷ್ಟಪಡಿಸಿದ ನಿರ್ಬಂಧಗಳೊಂದಿಗೆ ಮಾತ್ರ ವ್ಯವಹಾರ ನಡೆಸಬೇಕೆಂದು ಸೂಚಿಸಿದೆ.


    ಆರ್​ಬಿಐ ನೂತನ ಆದೇಶದ ಅನ್ವಯ ಗ್ರಾಹಕರು ರೂ. 35 ಸಾವಿರ ಮಾತ್ರ ಡ್ರಾ ಮಾಡಬಹುದು. ಈ ಹಿಂದೆ ಮಹಾರಾಷ್ಟ್ರದ ಪಿಎಂಸಿ ಬ್ಯಾಂಕ್​ ಮೇಲೆಯೂ ಇದೇ ರೀತಿಯ ನಿರ್ಬಂಧವನ್ನು ಆರ್​ಬಿಐ ಹೇರಿತ್ತು. ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ ಸುಮಾರು ರೂ. 600 ಕೋಟಿಗೂ ಅಧಿಕ ಎನ್​ಪಿಎ (ನಾನ್​ ಪರ್ಫಾರ್ಮಿಂಗ್​ ಅಸ್ಸೆಟ್​) ಆಗಿರುವ ಹಿನ್ನೆಲೆಯಲ್ಲಿ ಆರ್​ಬಿಐ ಈ ಆದೇಶ ಹೊರಡಿಸಿದೆ.


    ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸರ್ಕಾರ ಠೇವಣಿದಾರರ ಹಿತವನ್ನು ಕಾಪಾಡಲಿದೆ ಎಂಬ ಭರವಸೆ ನೀಡಿದ್ದಾರೆ. ಠೇವಣಿದಾರು ಯಾರೂ ಭಯ ಪಡಬೇಡಿ, ಕೇಂದ್ರ ಸರ್ಕಾರ ನಿಮ್ಮ ಜೊತೆಗಿದೆ. ನಿಮ್ಮ ಹಣ ಏನೂ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.


    I want to assure all depositors of Sri Guru Raghavendra Co-operative Bank to not panic.



    ಟ್ವಿಟ್ಟರ್​ನಲ್ಲಿ ಗುರು ರಾಘವೇಂದ್ರ ಬ್ಯಾಂಕ್​ ಠೇವಣಿದಾರರಿಗೆ ಭರವಸೆ ನೀಡಿರುವ ಸಂಸದ ಸೂರ್ಯ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರೇ ಖುದ್ದಾಗಿ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಯಾರೂ ಆತಂಕ ಪಡಬೇಡಿ ಎಂದಿದ್ದಾರೆ.


    ಇದನ್ನೂ ಓದಿ: ರಾಜ್ಯಕ್ಕೆ ಅಮಿತ್​ ಶಾ ಆಗಮಿಸಿದಾಗಲೇ ಸಂಪುಟ ವಿಸ್ತರಣೆ ಕುರಿತು ಚರ್ಚೆ; ಸಿಎಂ ಯಡಿಯೂರಪ್ಪ


    ಆರ್​ಬಿಐ ಆದೇಶ ಬಂದ ಬೆನ್ನಲ್ಲೇ ಠೇವಣಿದಾರರು ಸಾವಿರಾರು ಸಂಖ್ಯೆಯಲ್ಲಿ ಬಸವನಗುಡಿಯಲ್ಲಿರುವ ಬ್ಯಾಂಕ್​ ಮುಂದೆ ಜಮಾಯಿಸಿದ್ದಾರೆ. ಬಿಗಿ ಪೊಲೀಸ್​ ಭದ್ರತೆ ಕೂಡ ಒದಗಿಸಲಾಗಿದ್ದು, ಪಿಎಂಸಿ ಬ್ಯಾಂಕ್​ಗೆ ಆರ್​ಬಿಐ ನಿರ್ಬಂಧ ಹೇರಿದಾಗ ಉಂಟಾದ ಪರಿಣಾಮವೇ ಇಲ್ಲೂ ತಲೆದೋರುವ ಸಾಧ್ಯತೆಯಿದೆ.


    ಇದನ್ನೂ ಓದಿ: ಬೆಂಗಳೂರಿನ ಗುರು ರಾಘವೇಂದ್ರ ಬ್ಯಾಂಕ್​ನಲ್ಲಿ 600 ಕೋಟಿಗೂ ಹೆಚ್ಚು ಎನ್​ಪಿಎ; ಆರ್​ಬಿಐನಿಂದ ನಿರ್ಬಂಧ; ಆತಂಕದಲ್ಲಿ ಗ್ರಾಹಕರು


    ಆರ್​ಬಿಐ ಆದೇಶವೇನು?:


    • ಗರಿಷ್ಠ 35 ಸಾವಿರ ರೂಪಾಯಿಗಳನ್ನು ಠೇವಣಿದಾರರು ಪಡೆಯಬಹುದು.

    • ಎಲ್ಲಾ ಶಾಖೆಗಳಲ್ಲೂ ವ್ಯವಹಾರ ಸ್ಥಗಿತಗೊಳಿಸಬೇಕು.

    • ಹೊಸ ಠೇವಣಿದಾರರನ್ನು ಸ್ವೀಕರಿಸುವಂತಿಲ್ಲ.

    • ಯಾವುದೇ ಹೊಸ ವ್ಯಾಪಾರ, ವಹಿವಾಟನ್ನು ಬ್ಯಾಂಕ್ ಮಾಡುವಂತಿಲ್ಲ.

    • ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನ ಎಲ್ಲಾ ಹಣಕಾಸು ವ್ಯವಹಾರಗಳಿಗೂ ನಿರ್ಬಂಧ.

    Published by:Sharath Sharma Kalagaru
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು