ಬೆಂಗಳೂರು: ಸಂಸದರಾದ ಬಳಿಕ ಮೊದಲ ಬಾರಿಗೆ ತೇಜಸ್ವಿ ಸೂರ್ಯ ಕೋರ್ಟ್ಗೆ ಅಗಮಿಸಿದರು. ಬಸವನಗುಡಿಯ ಗುರುರಾಘವೇಂದ್ರ ಕೋ ಅಪರೇಟಿವ್ ಬ್ಯಾಂಕ್ನ ಅವ್ಯವಹಾರ ಪ್ರಕರಣದಲ್ಲಿ ಠೇವಣಿದಾರರ ಪರವಾಗಿ ತೇಜಸ್ವಿ ಸೂರ್ಯ ವಕಾಲತ್ತು ವಹಿಸಿದ್ದು ಕೋರ್ಟ್ ಕಲಾಪದಲ್ಲಿ ಪಾಲ್ಗೊಂಡಿದ್ದರು.
ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ನ ಅವ್ಯವಹಾರ ಬೆಳಕಿಗೆ ಬಂದ ಬಳಿಕ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿತ್ತು. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿರೋದನ್ನ ಪ್ರಶ್ನಿಸಿ ಬ್ಯಾಂಕ್ನ ಆಡಳಿತ ಮಂಡಳಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಶುಕ್ರವಾರ ಈ ಅರ್ಜಿ ವಿಚಾರಣೆಗೆ ಬಂದ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ವಕಾಲತ್ತು ವಹಿಸಿ ಹೈಕೋರ್ಟ್ಗೆ ಬಂದಿದ್ದರು.
ಹೈಕೋರ್ಟ್ ಕಲಾಪದ ಬಳಿಕ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಸುಮಾರು 45 ಸಾವಿರ ಜನರು ಹಣ ಹೂಡಿಕೆ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಕೋ ಆಪರೇಟಿವ್ ಬ್ಯಾಂಕ್ಗಳು ಎಫ್ಡಿ ಇಟ್ಟಿವೆ. ಅದರೆ, ಈ ವೇಳೆ ಸುಮಾರು 700 ಕೋಟಿ ಅವ್ಯವಹಾರ ನಡೆಸಿರೋದು ಕಂಡು ಬಂದಿದೆ. ಅವ್ಯವಹಾರ ಬೆಳಕಿಗೆ ಬಂದ ಬಳಿಕ ಆರ್ಬಿಐ ಸಹ ಯಾವುದೇ ನಿರ್ಧಾರ, ವ್ಯವಹಾರ ನಡೆಸದಂತೆ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ಗೆ ತಾಕೀತು ಮಾಡಿತ್ತು. ಹಾಗೂ ಸರ್ಕಾರ ಠೇವಣಿದಾರರ ಹಿತ ಕಾಯುವ ಸಲುವಾಗಿ ಬ್ಯಾಂಕ್ಗೆ ಆಡಳಿತಾಧಿಕಾರಿ ನೇಮಕ ಮಾಡಿದ್ದು, ಬಳಿಕ ಬ್ಯಾಂಕ್ನ ಮ್ಯಾನೇಜ್ಮೆಂಟ್ ಸೂಪರ್ ಸೀಡ್ ಮಾಡಿದೆ. ಸರ್ಕಾರದ ನಿರ್ಧಾರ ಬಗ್ಗೆ ಆಡಳಿತ ಮಂಡಳಿ ಕೋರ್ಟ್ನಲ್ಲಿ ರಿಟ್ ಅರ್ಜಿ ಹಾಕಿತು.
ಇದನ್ನೂ ಓದಿ: ‘ನಿಮ್ಮ ಕೊನೆಯ ಗಿಫ್ಟ್ ಧರೆಗಿಳಿದಿದೆ; ಸ್ವರ್ಗದಿಂದ ಕಾಣುತ್ತಿದೆಯಾ?’: ಕರುಳು ಹಿಂಡಿದೆ ಚೀನೀ ಮಹಿಳೆ ಮಾತು
ಅಲ್ಲದೆ, ಬ್ಯಾಂಕ್ನಲ್ಲಿ ನನ್ನ ಕ್ಷೇತ್ರದ ಜನ ನೇರವಾಗಿ ಹಾಗೂ ಪರೋಕ್ಷವಾಗಿ ಹಣ ಹೂಡಿದ್ದಾರೆ. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿರುವುದು ಸರಿ ಇದೆ ಎಂದು ನ್ಯಾಯಾಲಯದ ಮುಂದೆ ಅಂತ ವಾದ ಮಂಡನೆ ಮಾಡಲಾಗಿದೆ. ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಠೇವಣಿದಾರರಿಂದ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಿದ್ದು, ಹೈಕೋರ್ಟ್ ಆ ಅರ್ಜಿಯನ್ನು ಮಾನ್ಯ ಮಾಡಿದೆ. ವಿಚಾರಣೆಯನ್ನ ಮುಂದಿನ ಶುಕ್ರವಾರ, ಅಂದರೆ ಜೂನ್ 19 ಕ್ಕೆ ಮುಂದೂಡಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ