• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hassan: ಹದಿಹರೆಯದ ಪ್ರೇಮಕ್ಕೆ ಅಪ್ರಾಪ್ತೆ ಬಲಿ; ವಿಷ ಸೇವಿಸಿ ಸಾವಿಗೆ ಶರಣಾದ ಬಾಲಕಿ, ಯುವಕ ಅರೆಸ್ಟ್

Hassan: ಹದಿಹರೆಯದ ಪ್ರೇಮಕ್ಕೆ ಅಪ್ರಾಪ್ತೆ ಬಲಿ; ವಿಷ ಸೇವಿಸಿ ಸಾವಿಗೆ ಶರಣಾದ ಬಾಲಕಿ, ಯುವಕ ಅರೆಸ್ಟ್

ಬಂಧಿತ ಯುವಕ ಲೋಕೇಶ್

ಬಂಧಿತ ಯುವಕ ಲೋಕೇಶ್

ನಿನ್ನನ್ನು ಪ್ರೀತಿ ಮಾಡ್ತಿದ್ದೀನಿ ಎಂದು ಹಿಂದೆ ಬಿದ್ದಿದ್ದ ಯುವಕ, ಅಪ್ರಾಪ್ತ ಬಾಲಕಿ ಬೇರೆ ಹುಡುಗನೊಂದಿಗೆ ಬೈಕ್​ನಲ್ಲಿ ಹೋಗಿದ್ದಕ್ಕೆ ಕೋಪಗೊಂಡು ಆಕೆಯೊಂದಿಗೆ ಜಗಳ ಮಾಡಿದ್ದನಂತೆ.

  • News18 Kannada
  • 4-MIN READ
  • Last Updated :
  • Hassan, India
  • Share this:

ಹಾಸನ: ನನ್ನ ಮಗ ಕೇಳುತ್ತಿಲ್ಲ. ನಮ್ಮ ಹುಡುಗಿ ಪ್ರೀತಿಯ (Teenage Love) ಬಲೆಯಲ್ಲಿ ಬಿದ್ದಿದ್ದಾಳೆ. ಪ್ರಶ್ನೆ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ. ಯಾವಾಗಲೂ ಚಾಟಿಂಗ್ (Mobile Chatting) ಮಾಡೋದರಲ್ಲಿ ಬ್ಯುಸಿ ಇರ್ತಾರೆ. ಕಾಲೇಜು ಬಿಟ್ಟು ಸ್ಮಾರ್ಟ್‌ಫೋನ್‌ನಲ್ಲಿ (Smartphone) ಆಟವಾಡುತ್ತಾ ಸಮಯವನ್ನು ಕಳೆಯುತ್ತಿದ್ದಾನೆ. ಇದೇ ರೀತಿ ಹಲವು ಪೋಷಕರು ತಮ್ಮ ಮಕ್ಕಳ ವರ್ತನೆ (Children and Parents) ಬಗ್ಗೆ ತಮ್ಮ ಸಂಕಟವನ್ನು ತೊಡಿಕೊಳ್ಳುತ್ತಿರುತ್ತಾರೆ. ಇದು ಕೇವಲ ಈಗ ಪೋಷಕರ ಸಮಸ್ಯೆಯಾಗಿ ಉಳಿದಿಲ್ಲ, ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹದ್ದೆ ಸಮಸ್ಯೆಗೆ ಸುಲುಕಿ ಅಪ್ರಾಪ್ತ ಬಾಲಕಿ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಮೃತ ಬಾಲಕಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದಾರೆ. ಬಾಲಕಿಯನ್ನು ಲೋಕೇಶ್​ ಎಂಬಾತ ಪುಸಲಾಯಿಸಿ ಪ್ರೀತಿಸುತ್ತಿದ್ದೇನೆ ಎಂದು ನಂಬಿಸಿ ಹಿಂದೆ ಬಿದಿದ್ದನಂತೆ. ಆದರೆ ಬಾಲಕಿ ಇತ್ತೀಚೆಗೆ ಮತ್ತೋರ್ವ ಅಪ್ರಾಪ್ತ ಸ್ನೇಹಿತನೊಂದಿಗೆ ಹೆಚ್ಚು ಓಡಾಡುತ್ತಿದ್ದಳಂತೆ. ಇದರಿಂದ ಲೋಕೇಶ್​ ಸಿಟ್ಟಾಗಿ, ಬಾಲಕಿ ಜೊತೆ ಜಗಳ ಮಾಡಿದ್ದನಂತೆ.


how do you balance one sided relationships
ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Crime News: ಪ್ರೀತಿಸಿ ಕೈ ಕೊಟ್ಟ ಯುವತಿ; ಹಾಸನ ಯುವಕ ಚೆನ್ನೈ ಲಾಡ್ಜ್​ನಲ್ಲಿ ನೇಣಿಗೆ ಶರಣು, ಅಸಲಿಗೆ ಆಗಿದ್ದೇನು?


ಅಪ್ರಾಪ್ತ ಬಾಲಕನೊಂದಿಗೆ ಸ್ನೇಹಿತೆ ಜೊತೆ ಜಾಲಿ ರೈಡ್​​ ಹೋಗಿದ್ದ ಬಾಲಕಿ


ಇದರ ಹೊರತಾಗಿಯೂ ಬಾಲಕಿ ಮಂಗಳವಾರ ತನ್ನ ಅಪ್ರಾಪ್ತೆ ಸ್ನೇಹಿತೆ ಹಾಗೂ ಅಪ್ರಾಪ್ತ ಬಾಲಕನೊಂದಿಗೆ ಬೈಕ್‌ನಲ್ಲಿ ಜಾಲಿ ರೈಡ್ ಹೋಗಿದ್ದಳಂತೆ. ಇದನ್ನು ಪ್ರಶ್ನಿಸಿದ್ದ ಲೋಕೇಶ್ ಬಾಲಕಿ ಜೊತೆ ಜಗಳ ಮಾಡಿ ಪದೇ ಪದೆ ಅನುಮಾನಗೊಂಡಿದ್ದನಂತೆ. ಇತ್ತ ಜಾಲಿ ರೈಡ್ ಹೋಗಿದ್ದಕ್ಕೆ ಅಪ್ರಾಪ್ತ ಬಾಲಕಿಗೆ ಪೋಷಕರು ಕೂಡ ಬುದ್ಧಿ ಮಾತು ಹೇಳಿದ್ದರಂತೆ.


ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ


ಇದರಿಂದ ಮನನೊಂದ ಯುವತಿ, ಬುಧವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳಂತೆ. ಕೂಡಲೇ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಸಾವನ್ನಪ್ಪಿದ್ದಾಳೆ. ಸದ್ಯ ಲೋಕೇಶ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಕೇಸ್ ದಾಖಲಿಸಿ ಲೋಕೇಶ್​ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಇದನ್ನೂ ಓದಿ: Facebook Love: ಪ್ರೇಮಿಗಾಗಿ ನದಿಯಲ್ಲಿ ಈಜಿಕೊಂಡು ಬಂದ ಪ್ರಿಯತಮೆ! ಇದು ಬಾಂಗ್ಲಾ-ಭಾರತದ ಫೇಸ್‌ಬುಕ್ ಲವ್‌ ಸ್ಟೋರಿ




ಟ್ರಾಫಿಕ್​ಗೆ ಬಲಿಯಾದ ಕಂದಮ್ಮ


ಬೆಂಗಳೂರಿನ ಟ್ರಾಫಿಕ್‌ನಿಂದಾಗಿ (Bengaluru Traffic) ಚಿಕಿತ್ಸೆ ಸಿಗದೆ ಒಂದೂವರೆ ವರ್ಷದ ಮಗು ಆಂಬ್ಯುಲೆನ್ಸ್‌ನಲ್ಲೇ (Ambulance) ಮೃತಪಟ್ಟ ಘಟನೆ ನೆಲಮಂಗಲದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ (Tumakuru) ಬುಲೇರೊ ಹಾಗು ಬೈಕ್ ನಡುವೆ ಅಪಘಾತ (Bolero, Bike Accident) ಸಂಭವಿಸಿದ್ದು, ಅಪಘಾತದಲ್ಲಿ ತಂದೆ ಅಹಮದ್, ತಾಯಿ ರುಕ್ಸಾನಾಗೆ ಗಂಭೀರ ಗಾಯಗಳಾಗಿತ್ತು.


ಮಗುವಿಗೂ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹಾಸನದ ಹಿಮ್ಸ್‌ಗೆ (Hassan Hims) ತಿಪಟೂರು ವೈದ್ಯರು ಕಳಿಸಿದ್ದರು. ಹಾಸನದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಬೆಂಗಳೂರಿಗೆ ಸ್ಥಳಾಂತರಿಸಲು ಯತ್ನಿಸಲಾಗಿತ್ತು. ಆದರೆ ನೆಲಮಂಗಲದಿಂದ ಟ್ರಾಫಿಕ್ (Nelamangala) ನಡುವೆ ಆಂಬ್ಯುಲೆನ್ಸ್‌ ಸಿಲುಕಿಕೊಂಡು, ಚಿಕಿತ್ಸೆ ಸಿಗದೇ ದಾರಿಮಧ್ಯೆಯೇ ಮಗು ಪ್ರಾಣ ಬಿಟ್ಟಿದೆ. ಮಗುವನ್ನು ಕಳೆದುಕೊಂಡು ಕುಟುಂಬ ನಡು ರಸ್ತೆಯಲ್ಲಿ ನಿಂತು ಕಣ್ಣೀರಿಟ್ಟಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು