ಬೆಂಗಳೂರು: ರಸ್ತೇಲಿ ಹೋಗೋವಾಗ ಯಾರಾದ್ರು ಚುಡಾಯಿಸಿದ್ರೆ, ಅಥವಾ ಕಿರಿಕ್ ಮಾಡಿದ್ರೆ ಅವರ ವಿರುದ್ಧ ಪೊಲೀಸ್ ಕಂಪ್ಲೇಂಟ್ (Police Complaint) ಕೋಡೋದನ್ನು ಕೇಳಿದ್ದೀವಿ. ಸುಮ್ಮನೆ ನಿಂತಿದ್ದೋರನ್ನು ಕಂಡು ಗುರಾಯಿಸಿದವರ ವಿರುದ್ಧವೂ ದೂರು ದಾಖಲಿಸಿದ್ದನ್ನು ನೋಡಿದ್ದೀವಿ. ಆದರೆ ಇಲ್ಲೊಂದು ಕಡೆ ಮಾತ್ರ ಎಮ್ಮೆಗಳ ವಿರುದ್ಧವೇ ದೂರು ದಾಖಲಾಗಿದೆ. ಎಮ್ಮೆಗಳು (buffaloes) ಸರತಿ ಸಾಲಿನಲ್ಲಿ ಮಾರ್ಚ್ ಫಾಸ್ಟ್ (March Fast) ಮಾಡ್ತಾ ರಸ್ತೆಯಲ್ಲಿ ಹೋಗುತ್ತವೆ ಎಂದು ಬೆಂಗಳೂರಿನಲ್ಲಿ (Bengaluru) ಟ್ರಾಫಿಕ್ ಪೊಲೀಸರಿಗೆ (Traffic Police) ದೂರು ನೀಡಲಾಗಿದೆ. ಇದು ಅಚ್ಚರಿ ಎನಿಸಿದರೂ ಸತ್ಯ ವಿಚಾರ.
ಹೌದು.. ಬೆಂಗಳೂರಿನ ರಸ್ತೆಗಳಲ್ಲಿ ಪ್ರತಿ ನಿತ್ಯ ಎಮ್ಮೆಗಳು ಓಡಾಟ ನಡೆಸುತ್ತಿದ್ದು, ಬೆಳಗ್ಗಿನ ವೇಳೆ ಆಫೀಸ್ಗೆ ತೆರಳುವ ಸಮಯದಲ್ಲಿ ಎಮ್ಮೆಗಳು ರಸ್ತೆಯಲ್ಲಿ ಓಡಾಡುವುದರಿಂದ ದಿನ ನಿತ್ಯ ನಮಗೆ ತೊಂದರೆ ಉಂಟಾಗುತ್ತಿದೆ. ಇದರಿಂದ ಸುಮಾರು 45 ನಿಮಿಷಗಳ ಕಾಲ ಟ್ರಾಫಿಕ್ ಜಾಂ ಉಂಟಾಗಿ ಕಚೇರಿಗೆ ತಲುಪುವುದು ತಡವಾಗುತ್ತಿದೆ. ನಗರದ ಕಸವನಹಳ್ಳಿ ಕಡೆಯ ರಸ್ತೆಗಳಲ್ಲಿ ಎಮ್ಮೆಗಳ ಕಾಟ ಜೋರಾಗಿದ್ದು, ರಸ್ತೆಗಳಲ್ಲಿ ಓಡಾಡುವ ಎಮ್ಮೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಟೆಕ್ಕಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Koppala: ಕೋಳಿ ಹುಂಜಗಳನ್ನು ಬಂಧಿಸಿ ಜೈಲಿಗೆ ಹಾಕಿದ ಕೊಪ್ಪಳ ಪೊಲೀಸರು? ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಎಮ್ಮೆಗಳ ಕಾಟದ ವಿರುದ್ಧ ಎಂಎನ್ಸಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಗಳು ಟ್ವಿಟರ್ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದು, ತಮ್ಮ ದೂರಿನಲ್ಲಿ ರಾಜ್ಯ ಪಶು ಸಂಗೋಪನಾ ಇಲಾಖೆ, ಟ್ರಾಫಿಕ್ ಪೊಲೀಸ್ ಮತ್ತು ಬಿಬಿಎಂಪಿಗೆ ಟ್ಯಾಗ್ ಮಾಡಿ ಸಮಸ್ಯೆಯಿಂದ ಮುಕ್ತಿ ದೊರಕಿಸಿಕೊಡುವಂತೆ ವಿನಂತಿ ಮಾಡಿಕೊಂಡಿದ್ದಾರೆ.
ಎಮ್ಮೆಗಳ ವಿರುದ್ಧದ ದೂರಿಗೆ ಟೆಕ್ಕಿಗಳ ಸಹಮತ
ಸೇವ್ ಬೆಂಗಳೂರು ಎಂಬ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ರಸ್ತೆಯಲ್ಲಿ ಎಮ್ಮೆಗಳು ಓಡಾಡುತ್ತಿರುವ ಬಗ್ಗೆ ಟ್ವೀಟ್ ಮಾಡಲಾಗಿದ್ದು, ಇದಕ್ಕೆ ಹತ್ತಾರು ಮಂದಿ ಟೆಕ್ಕಿಗಳು ಧ್ವನಿಗೂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಕ್ಷಯ್ ಶರ್ಮಾ ಎಂಬುವವರು, ‘ಇದು ನಾನು ಯಾವುದೇ ಮೆಟ್ರೋ ಸಿಟಿಗಳಲ್ಲಿ ನೋಡಲಾರದಂತಹ ಅತ್ಯಂತ ಕೆಟ್ಟ ಸ್ಥಿತಿ. ಈ ಎಮ್ಮೆಗಳ ಮಾಲೀಕರೂ ಕೂಡ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕಸವನಹಳ್ಳಿ ದಿನೇ ದಿನೇ ಉಸಿರುಗಟ್ಟಿಸುತ್ತಿದೆ. ದಯವಿಟ್ಟು ಈ ಎಮ್ಮೆಗಳ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Bengaluru: ನಾಯಿ, ಕೋಳಿ ಆಯ್ತು, ಈಗ ಬೆಕ್ಕುಗಳ ವಿರುದ್ಧ ದೂರು ನೀಡಿದ ಬೆಂಗಳೂರಿನ ಜನರು
ಇನ್ನೊಬ್ಬರು ಗುರುಪ್ರಸಾದ್ ಅನ್ನೋರು ಟ್ವೀಟ್ಗೆ ರಿಪ್ಲೈ ಮಾಡಿ, ಎಮ್ಮೆಗಳು ಮನುಷ್ಯರಿಗೆ ಹೋಲಿಸಿದರೆ ಪರವಾಗಿಲ್ಲ, ಕನಿಷ್ಟ ಪಕ್ಷ ಅವುಗಳು ಸಿಂಗಲ್ ಲೈನ್ನಲ್ಲಿ ಹೋಗುತ್ತಿವೆ ಎಂದು ಹೇಳಿದರೆ, ಆಕಾಶ್ ಗುಪ್ತಾ ಅನ್ನೋರು ಕಾಮೆಂಟ್ ಮಾಡಿ, ಹದಗೆಟ್ಟ ಪರಿಸ್ಥಿತಿ ಇದು. ನಗರದ ಹಳ್ಳಿಯೊಂದು ಅನಾಥವಾಗಿ ಇರುವಂತೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.
ಕೋಳಿ ಕೂಗೋದರಿಂದ ನಿದ್ದೆ ಬರ್ತಿಲ್ಲ
ಈ ಹಿಂದೆ ಕೋಳಿಗಳ ವಿರುದ್ಧವೂ ದೂರು ದಾಖಲಾಗಿತ್ತು. ಕೋಳಿ ಕೂಗುವುದರಿಂದ ನಮ್ಮ ನಿದ್ದೆ ಹಾಳಾಗುತ್ತಿದೆ. ಕೋಳಿಯಿಂದ ನಮಗೆ ನಿದ್ದೆಯೇ ಬರ್ತಿಲ್ಲ ಅಂತ ಬೆಂಗಳೂರಿನ ಜೆಪಿ ನಗರದ 8ನೇ ಹಂತದ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ಜೆಪಿ ನಗರದ 8ನೇ ಹಂತದ ಆರ್ಯ ಹಂಸ ಗ್ರ್ಯಾಂಡ್ ಅಪಾರ್ಟ್ಮೆಂಟ್ ಪಕ್ಕ ಇರುವ ನಿವಾಸಿಯೊಬ್ಬರು ಕೋಳಿ ಹಾಗೂ ಬಾತುಕೋಳಿ ಸಾಕಾಣೆ ಮಾಡ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳು ಟ್ವಿಟರ್ ಮೂಲಕ ತಮಗೆ ಆಗುತ್ತಿರುವ ತೊಂದರೆಯನ್ನು ವಿವರಿಸಿ, ಸಾಮಾಜಿಕ ಜಾಲತಾಣದ ಮೂಲಕ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸ್ ಕಮಿಷನರ್ಗೆ ಮನವಿ
ಕೋಳಿ ಕೂಗುವುದರಿಂದ ನಿದ್ದೆಗೆ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಟ್ವಿಟರ್ನಲ್ಲಿ ನಗರ ಪೊಲೀಸ್ ಕಮಿಷನರ್, ದಕ್ಷಿಣ ವಿಭಾಗ ಡಿಸಿಪಿಗೆ ಟ್ಯಾಗ್ ಮಾಡಿ ದೂರು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದು ಭಾರೀ ಸುದ್ದಿಯಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ