ತನ್ನ ವಿರುದ್ಧದ ಪ್ರಕರಣ ಹೋರಾಡಲು ಎಂಜಿನಿಯರಿಂಗ್ ಹುದ್ದೆ ತೊರೆದು ಲಾಯರ್​ ಆದ; ಆದ್ರೂ ಸೋತ

news18
Updated:September 8, 2018, 7:56 PM IST
ತನ್ನ ವಿರುದ್ಧದ ಪ್ರಕರಣ ಹೋರಾಡಲು ಎಂಜಿನಿಯರಿಂಗ್ ಹುದ್ದೆ ತೊರೆದು ಲಾಯರ್​ ಆದ; ಆದ್ರೂ ಸೋತ
news18
Updated: September 8, 2018, 7:56 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.8): ಮಹಿಳೆಗೆ ಅಸಭ್ಯವಾಗಿ ಇಮೇಲ್​ ಮುಖಾಂತರ ಸಂದೇಶ ನೀಡಿದ ಸಾಫ್ಟ್​ವೇರ್​ ಎಂಜಿನಿಯರ್​ ಹುದ್ದೆ ತೊರೆದು ಲಾಯರ್​ ಆದ ವ್ಯಕ್ತಿಗೆ ಬೆಂಗಳೂರು ನ್ಯಾಯಾಲಯ​ 2 ವರ್ಷ ಸೆರೆವಾಸ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿದೆ.

ಬಾಗಲಕೋಟೆಯ ಶಿವಪ್ರಸಾದ್​ ಸಜ್ಜನ್​ ಶಿಕ್ಷೆಗೆ ಒಳಗಾದ ವ್ಯಕ್ತಿ. 10 ವರ್ಷದ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ತಮ್ಮ ಸಹೋದ್ಯೋಗಿ ಮಹಿಳೆಗೆ ಮೇಲ್​ ಮುಖಾಂತರ ಅಸಭ್ಯವಾಗಿ ಸಂದೇಶ ನೀಡಿದ್ದ. ಇದರ ಆರೋಪದ ಮೇಲೆ 2008ರಲ್ಲಿ ಈತನ ಮೇಲೆ ಮಹಿಳೆ ಸೈಬರ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಇದಾದ ಬಳಿಕ ಈತನನ್ನು ಪೊಲೀಸರು ಬಂದಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದ ಈತ ಎಂಜಿನಿಯರಿಂಗ್​ ಹುದ್ದೆ ತೊರೆದು ಕಾನೂನು ಅಭ್ಯಾಸ ನಡೆಸಿದ. ಬಳಿಕ ತನ್ನ ಪ್ರಕರಣವನ್ನು ತಾನೇ ವಿಚಾರಣೆ ನಡೆಸಿದ.

ಸೈಬರ್​ ಪೊಲೀಸರು ದಾಖಲು ಮಾಡಿದ್ದ ಪ್ರಕರಣದಲ್ಲಿನ ತಪ್ಪುಗಳನ್ನು ಹುಡುಕತ್ತಲೇ ಈತ 10 ವರ್ಷಗಳ ಕಾಲ ಪ್ರಕರಣವನ್ನು ಮುಂದುವರೆಸಿದ್ದ. ಬಳಿಕ ತನ್ನ ಪ್ರಕರಣದಲ್ಲಿ ತಾನೇ ಸೋಲನ್ನು ಅನುಭವಿಸಿದ್ದ. ಪ್ರಕರಣವನ್ನು ಎಷ್ಟು ದೀರ್ಘವಾಗಿ ಮುಂದುವರೆಸಲು ಸಾಧ್ಯವೋ ಆ ಮಟ್ಟಿಗೆ ಈತ ಆದನ್ನು ಮುಂದುವರೆಸಿದ್ದ ಎಂದು ಸೈಬರ್​ ಪೊಲೀಸರು ತಿಳಿಸಿದ್ದಾರೆ,
First published:September 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ