ಬೆಂಗಳೂರು: ಇಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಅಪರಿಚಿತರ ಜೊತೆ ಚಾಟ್ ನಡೆಸೋದು ಕಾಮನ್. ಆದರೆ ಇದೇ ವಿಷಯಕ್ಕೆ ನೀವು ಮುಂದೊಂದು ದಿನ ದೊಡ್ಡ ಬೆಲೆ ತೆರಬೇಕಾಗುವ ಸಂದರ್ಭ ಎದುರಾಗಬಹುದು. ಸಾಮಾನ್ಯವಾಗಿ ಪದವಿ ಪಡೆದ ವಿದ್ಯಾರ್ಥಿಗಳು (Students) ಕೆಲಸಕ್ಕಾಗಿ ಅಂತರ್ಜಾಲದ (Jos Seeking) ಮೊರೆ ಹೋಗುತ್ತಾರೆ. ಅಲ್ಲಿ ಸಿಗುವ ಅಪರಿಚಿತ ಸಂಖ್ಯೆಗೆ ಕರೆ ಮಾಡಿ ಉದ್ಯೋಗದ ಮಾಹಿತಿ ಪಡೆದುಕೊಳ್ಳುತ್ತಾರೆ. ಅಧಿಕೃತವಲ್ಲದ ವೆಬ್ಸೈಟ್ಗೆ ಹೋಗಿ ನಮ್ಮ ಮಾಹಿತಿಯನ್ನು (Personal Details) ದಾಖಲಿಸುವ ಮುನ್ನ ನೂರು ಬಾರಿ ಯೋಚಿಸಬೇಕಿದೆ. ಇನ್ನು ಕೆಲವರು ಸೋಶಿಯಲ್ ಮೀಡಿಯಾ ಖಾತೆಗಳ (Social Media Account) ಮೂಲಕ ಮಹಿಳೆಯರನ್ನು (Women) ಸಂಪರ್ಕಿಸಿ ಕೆಲಸದ ಆಮಿಷವೊಡ್ಡಿ ಮೋಸ ಮಾಡುತ್ತಾರೆ. ಇದೀಗ ಇಂತಹವುದೇ ಒಂದು ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದ ಕಾಮುಕ ಟೆಕ್ಕಿಯೋರ್ವನನ್ನ ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 27 ವರ್ಷದ ದಿಲೀಪ್ ಪ್ರಸಾದ್ ಬಂಧಿತ ಟೆಕ್ಕಿ. ಈತ ನಗರದ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ವಿವಿಧ ಹೆಸರಿನಲ್ಲಿ ನಕಲಿ ಖಾತೆಗಳು
ಬಂಧಿತ ದಿಲೀಪ್ ಎರಡು ನಕಲಿ ಇನ್ಸ್ಟಾಗ್ರಾಂ ಖಾತೆಗಳನ್ನು ತೆರೆದಿದ್ದನು. ಮೊನಿಯಾ ಮತ್ತು ಮ್ಯಾನೇಜರ್ ಹೆಸರಿನಲ್ಲಿ ಖಾತೆ ತೆರೆದಿದ್ದ ದಿಲೀಪ್, ಈ ಮೂಲಕ ಯುವತಿಯರನ್ನು ಸಂಪರ್ಕಿಸುತ್ತಿದ್ದನು.
ಇನ್ಸ್ಟಾಗ್ರಾಂ ಖಾತೆ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ದಿಲೀಪ್, ಕೆಲಸ ಕೊಡಿಸೋದಾಗಿ ನಂಬಿಸುತ್ತಿದ್ದನು. ನಂತರ ವಿವಿಧ ಕಾರಣ ಹೇಳಿ ಯುವತಿಯರ ನಗ್ನ ಫೋಟೋಗಳನ್ನು ಪಡೆದುಕೊಳ್ಳುತಿದ್ದನು.
ವಿಡಿಯೋ ಮಾಡುತ್ತಿದ್ದ ಕಾಮುಕ
ಬಳಿಕ ಇದೇ ನಗ್ನ ಫೋಟೋಗಳನ್ನು ಬಳಸಿ ಬೆದರಿಸಿ ಬೇರೊಬ್ಬರ ಜೊತೆ ಲೈಂಗಿಕ ಕ್ರಿಯೆ ಮಾಡುವಂತೆ ಒತ್ತಡ ಹಾಕುತ್ತಿದ್ದನು. ಈ ಮಧ್ಯೆ ಹೋಟೆಲ್ನಲ್ಲಿ ಲೈಂಗಿಕ ಕ್ರಿಯೆ ವೇಳೆ ವಿಡಿಯೋ ದೃಶ್ಯವಳಿಗಳನ್ನು ಸೆರೆ ಹಿಡಿದುಕೊಳ್ಳುತಿದ್ದನು. ಈ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್ಮೇಲ್ ಮಾಡಲು ಆರಂಭಿಸುತ್ತಿದ್ದನು.
10ಕ್ಕೂ ಅಧಿಕ ಮಹಿಳೆಯರ ಫೋಟೋ ಪತ್ತೆ
ತನಿಖೆ ವೇಳೆ ಮೂರು ಯುವತಿಯರ ಜೊತೆ ಈ ರೀತಿ ಕೃತ್ಯ ಮಾಡಿರೋದು ಬೆಳಕಿಗೆ ಬಂದಿದೆ. ಪೊಲೀಸರ ತನಿಖೆ ವೇಳೆ ಮತ್ತಷ್ಟು ಕಾಮುಕ ಕೃತ್ಯದ ಸಂಗತಿಗಳು ಬೆಳಕಿಗೆ ಬಂದಿವೆ.
ಆರೋಪಿ ಹಲವು ನಕಲಿ ಇನ್ಸ್ಟಾಗ್ರಾಂ ಖಾತೆ ಹೊಂದಿದ್ದು, ಜೊತೆಗೆ 10ಕ್ಕೂ ಅಧಿಕ ಮಹಿಳೆಯರ ಫೋಟೋಗಳನ್ನು ಹೊಂದಿರೋದು ತಿಳಿದು ಬಂದಿದೆ.
ಎಚ್ಚರಿಕೆಯಿಂದಿರುವಂತೆ ಸಲಹೆ
ಯುವತಿಯರ ಜೊತೆ ಸಂಭೋಗದ ಜೊತೆ ಕೆಲವರಿಂದ ಬ್ಲ್ಯಾಕ್ ಮೇಲ್ ಮಾಡಿ ಹಣ ಪಡೆದಿರೊದು ಪತ್ತೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅಪರಿಚಿತರ ಬಳಿ ಸ್ನೇಹ ಬೆಳೆಸುವ ಮುನ್ನ ಎಚ್ಚರವಾಗಿರಿ ಎಂದು ಪೊಲೀಸ್ ಕಮಿಷನರ್ ಸಲಹೆ ನೀಡಿದ್ದಾರೆ.
ನೇಣಿಗೆ ಕೊರಳೊಡ್ಡಿದ ಯುವ ವೈದ್ಯೆ
ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಯುವ ವೈದ್ಯೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಪ್ರಿಯಾಂಶಿ ತ್ರಿಪಾಠಿ ಆತ್ಮಹತ್ಯೆಗೆ ಶರಣಾದ ವೈದ್ಯೆ. ತೀರ್ಥಂಕರ್ ಮಹಾವೀರ ಹಾಸ್ಪಿಟಲ್ ಮತ್ತು ಬಿಜಿಎಸ್ ಹಾಸ್ಪಿಟಲ್ನಲ್ಲಿ ಇಂಟರ್ಶಿಪ್ ಮಾಡಿದ್ದ ಪ್ರಿಯಾಂಶಿ ಆದೇ ಆಸ್ಪತ್ರೆಯಲ್ಲಿ ಕೆಲಸ ಆರಂಭಿಸಿದ್ರು.
ಇದನ್ನೂ ಓದಿ: Love Marriage: ನಮ್ಮನ್ನು ನಮ್ಮ ಪಾಡಿಗೆ ಬಿಟ್ ಬಿಡಿ; ಪ್ರೀತಿಸಿ ಮದ್ವೆಯಾದ ಜೋಡಿಯ ಮನವಿ
ಇದೇ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಸುಮೀತ್ ಎಂಬಾತ ಕಳೆದ ಒಂದು ವರ್ಷದಿಂದ ಪ್ರಿಯಾಂಶಿಗೆ ದೈಹಿಕವಾಗಿ ತೊಂದರೆ ಕೊಡುತ್ತಿದ್ದನು ಎಂದು ಪ್ರಿಯಾಂಶಿ ಪೋಷಕರು ಆರೋಪಿಸಿದ್ದಾರೆ.
ಹಣ ಕೊಡುವಂತೆ, ಸಿಗರೇಟ್ ಸೇದುವಂತೆ, ಮದ್ಯ ಸೇವನೆ ಮಾಡುವಂತೆ ಮತ್ತು ತನ್ನನ್ನು ಮದುವೆ ಆಗುವಂತೆ ಸಹ ಸುಮೀತ್ ಕಿರುಕುಳ ನೀಡುತ್ತಿದ್ದ ಎಂದು ಪ್ರಿಯಾಂಶಿ ತಂದೆ ಸುಶೀಲ್ ತ್ರಿಪಾಠಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ