BC Nagesh: ಶಾಲೆ-ಕಾಲೇಜುಗಳಲ್ಲಿ ಈ ವರ್ಷದಿಂದಲೇ ಭಗವದ್ಗೀತೆ ಬೋಧನೆ

ಈ ವರ್ಷದಿಂದಲೇ ನೈತಿಕ ಶಿಕ್ಷಣ ವಿಭಾಗದಲ್ಲಿ ಭಗವದ್ಗೀತೆ ಬೋಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಬಿ.ಸಿ ನಾಗೇಶ್​ ಹೇಳಿದ್ದಾರೆ.

ಬಿ.ಸಿ.ನಾಗೇಶ್​

ಬಿ.ಸಿ.ನಾಗೇಶ್​

  • Share this:
ಬೆಂಗಳೂರು (ಸೆ.19): ವಿದ್ಯಾರ್ಥಿಗಳಿಗೆ ಭಗವದ್ಗೀತೆ ಭೋದನೆಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಚರ್ಚೆಯಾಗಿದ್ದು, ಇದೀಗ ಪರಿಷತ್​ನಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ (Bhagavad Gita) ಬೋಧನೆ ಆರಂಭಿಸುವ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ತಿಳಿಸಿದರು. ವಿಧಾನ ಪರಿಷತ್​ನಲ್ಲಿ ಈ ವಿಚಾರವನ್ನು ಸದಸ್ಯ ಎಂ.ಕೆ.ಪ್ರಾಣೇಶ್ (MK Pranesh) ಪ್ರಸ್ತಾಪಿಸಿದರು.

ಏನಾಯ್ತು ಭಗವದ್ಗೀತೆ ಬೋಧನೆ ವಿಚಾರ

ಪರಿಷತ್​ನಲ್ಲಿಈ ಬಗ್ಗೆ ಮಾತಾಡಿದ ಎಂ.ಕೆ ಪ್ರಾಣೇಶ್​, ಭಗವದ್ಗೀತೆ ಬೋಧನೆ ಪ್ರಸ್ತಾಪ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಈ ಹಿಂದೆ ಭಗವದ್ಗೀತೆ ಬೋಧನೆಗೆ ಸಮಿತಿ ರಚಿಸುವ ಬಗ್ಗೆ ಹೇಳಲಾಗಿತ್ತು. ಆದರೆ ಈಗ ಬೇರೆಯೇ ಹೇಳಿಕೆ ಹೊರಬಂದಿದೆ. ಭಗವದ್ಗೀತೆ ಬೋಧಿಸಲು ಸರ್ಕಾರಕ್ಕೆ ಮುಜುಗರವೇನಾದರೂ ಇದೆಯೇ? ಮೊದಲು ಇದ್ದ ಆಸಕ್ತಿ ಈಗ ಯಾಕೆ ಇಲ್ಲ ಎಂದು ಕೇಳಿದರು.

Small modifiable in school curriculum says minister BC Nagesh
ವಿದ್ಯಾರ್ಥಿಗಳಿಗೆ ಶೀಘ್ರವೇ ಭಗವದ್ಗೀತೆ ಭೋದನೆ


ಸಮಿತಿ ರಚನೆ ಮಾಡಿ ನಿರ್ಧಾರ ಮಾಡುತ್ತೇವೆ-ಬಿಸಿ ನಾಗೇಶ್​

ಎಂ.ಕೆ ಪ್ರಾಣೇಶ್​ ಅವರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಈ ವರ್ಷದಿಂದಲೇ ನೈತಿಕ ಶಿಕ್ಷಣ ವಿಭಾಗದಲ್ಲಿ ಭಗವದ್ಗೀತೆ ಬೋಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಬನಾರಸ್ ವಿವಿ ಮಾಡಲ್ ಫಾಲೋ ಮಾಡಲು ಚಿಂತನೆ

ಸರ್ಕಾರ ಈಗಾಗಲೇ ಭಗವದ್ಗೀತೆಯ ಭೋಧನೆಗೆ ಸಂಬಂಧ ಸಮಿತಿ ರಚನೆ ಮಾಡಿದೆ. ಶಿಕ್ಷಣ ಸಚಿವ ಬಿಸಿ ನಾಗೇಶ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು ಯಾವ ತರಗತಿಯಿಂದ ಯಾವ ತರಗತಿಗಳಿಗೆ ಯಾವ ಮಾದರಿಯಲ್ಲಿ ಭಗವದ್ಗೀತೆ ಭೋದನೆ ಮಾಡಬೇಕು? ಯಾವ ರೀತಿಯಲ್ಲಿ ನೈತಿಕ ಶಿಕ್ಷಣ ನೀಡಬೇಕು ಅಂತಾ ಸಮಿತಿ ಮಾಹಿತಿ ನೀಡಲಿದೆ. ಪ್ರತ್ಯೇಕವಾದ ಪಠ್ಯ ರಚನೆಯ ಮೂಲಕ ಮಕ್ಕಳಿಗೆ ಗೀತೆ ಭೋದನೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಗುಜರಾತ್ ಹಾಗೂ ಬನಾರಸ್ ವಿವಿ ಮಾಡಲ್ ಫಾಲೋ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಗುಜರಾತ್ ಸರ್ಕಾರ ಪಠ್ಯದಲ್ಲಿ ತಂದಿರುವ ಭಗ್ವತಗೀತಾ ಮಾದರಿಯಲ್ಲಿಯೇ rಆಜ್ಯದಲ್ಲೂ ಫಾಲೊ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ಈ ವರ್ಷದಿಂದಲೇ ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಭೋದನೆಗೆ ಶಿಕ್ಷಣ ಇಲಾಖೆ ಚಿಂತಿಸಿದ್ದು ಪ್ರಾಥಮಿಕ ಹಂತದಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ 6-12 ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಭೋದನೆಗೆ ಪ್ಲಾನ್ ಮಾಡಿದೆ. ಭಗವದ್ಗೀತೆ, ರಾಮಾಯಣ ಮಹಾಭಾರತದ ತತ್ವಗಳು ಮತ್ತು ಮೌಲ್ಯಗಳನ್ನು ಕಲಿಸಲು ಶಿಕ್ಷಣ ಇಲಾಖೆ ಯೋಜನೆ ರೂಪಿಸುತ್ತಿದೆ.

ಇದನ್ನೂ ಓದಿ: V Munirathna: 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ; ಕೆಂಪಣ್ಣ ಸೇರಿ 18 ಜನರಿಗೆ ಮುನಿರತ್ನ ಕೊಟ್ರು ವಾರ್ನಿಂಗ್​!

ವಿಧಾನಸಭೆಯಲ್ಲಿ ಕೆರೆ ಒತ್ತುವರಿ ಗಲಾಟೆ

ವಿಧಾನಸಭೆಯಲ್ಲಿ ಇಂದು (ಸೆ.19) ಆಡಳಿತ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಕೆರೆಗಳ ನಾಪತ್ತೆ, ಒತ್ತುವರಿ ಸಂಬಂಧ ಮಾತಿನ ವಾಗ್ದಾಳಿ ನಡೆದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಕೆರೆ ಒತ್ತುವರಿ, ರಾಜಕಾಲುವೆ ಹಾಗೂ ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಸಮಗ್ರ ತನಿಖೆ ಮಾಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು.

ಇದನ್ನೂ ಓದಿ: BBMP: ವಿಪ್ರೋ ಮುಂದೆ ಮಂಡಿಯೂರಿದ್ರಾ ಬಿಬಿಎಂಪಿ, ಕಂದಾಯ ಇಲಾಖೆ ಅಧಿಕಾರಿಗಳು?

ತನಿಖೆ ನಡೆಸುವುದಾಗಿ ಸಿಎಂ ಘೋಷಣೆ

ಮಳೆ ಅತಿವೃಷ್ಠಿಗೆ ಸಂಬಂಧಿಸಿದಂತೆ ಸದನದಲ್ಲಿ ನಡೆದ ಚರ್ಚೆಗೆ ಕಂದಾಯ ಸಚಿವ ಆರ್. ಅಶೋಕ್ ಉತ್ತರ ನೀಡುತ್ತಿದ್ದ ವೇಳೆ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿಗಳು, ಬೆಂಗಳೂರಿನಲ್ಲಿ ಕೆರೆಗಳು ಕಬಳಿಕೆಯಾಗಿರುವುದು ಸತ್ಯ. ಯಾವ ಕಾಲದಲ್ಲಿ ಯಾರ್ಯಾರು ಈ ಕಬಳಿಕೆ ನಡೆಸಿದ್ದಾರೆ. ಯಾವ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದರು.
Published by:ಪಾವನ ಎಚ್ ಎಸ್
First published: