Primary School Reopen: ಶಾಲೆ ಪ್ರಾರಂಭವಾಗುತ್ತಿದ್ದಂತೆ ಸರ್ಕಾರಕ್ಕೆ ಶುರುವಾಯ್ತು ತಲೆನೋವು

ನಾಳೆಯಿಂದ ಪ್ರಾಥಮಿಕ ಶಾಲೆಗಳು (Primary School Reopen) ಆರಂಭಗೊಳ್ಳುತ್ತಿದ್ದು, ಇತ್ತ ಸರ್ಕಾರಿ ಶಾಲಾ ಶಿಕ್ಷಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆಯಿಂದ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಲಿದ್ದಾರೆ. ಒಂದು ವೇಳೆ ಸರ್ಕಾರ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸದಿದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಶಾಲೆ

ಶಾಲೆ

  • Share this:
ಬೆಂಗಳೂರು: ನಾಳೆಯಿಂದ ಪ್ರಾಥಮಿಕ ಶಾಲೆಗಳು (Primary School Reopen) ಆರಂಭಗೊಳ್ಳುತ್ತಿದ್ದು, ಇತ್ತ ಸರ್ಕಾರಿ ಶಾಲಾ ಶಿಕ್ಷಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆಯಿಂದ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಲಿದ್ದಾರೆ. ಒಂದು ವೇಳೆ ಸರ್ಕಾರ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸದಿದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಪ್ರತಿಭಟನೆ ಜೊತೆ ಶಾಲಾ ತರಗತಿಗಳನ್ನು ಸಹ ಬಹಿಷ್ಕಾರ ಮಾಡಲಾಗುವುದು ಎಂದು ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ ಮಾಹಿತಿ ನೀಡಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳೇನು?

ಪದವೀಧರ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಬೇಕು. ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಆಗಬೇಕು. ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಮಾಡುವುದು. ಮುಖ್ಯ ಗುರುಗಳಿಗೆ 15, 20, 25 ವರ್ಷಗಳ ವೇತನ ಬಡ್ತಿ ನೀಡುವುದು. ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು. ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ನೀಗಿಸುವುದು ಮತ್ತು ದೈಹಿಕ ಶಿಕ್ಷಕರ ಹಾಗೂ ಹಿಂದಿ ಶಿಕ್ಷಕರ ಸಮಸ್ಯೆಗಳನ್ನ ಸರ್ಕಾರ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Vaccine for Children: ದೇಶದಲ್ಲಿ ಮಕ್ಕಳಿಗೆ ನವೆಂಬರ್‌ನಿಂದ ಕೋವ್ಯಾಕ್ಸಿನ್‌ ಲಸಿಕೆ: ಎನ್‌.ಕೆ. ಅರೋರಾ

ಶಾಲೆ ಆರಂಭ, ಪೋಷಕರಿಗೆ ಮಕ್ಕಳ ಸುರಕ್ಷತೆಯ ಆತಂಕ

ರಾಜ್ಯದಲ್ಲಿ ಕೊರೋನಾ(Coronavirus) ಹಾವಳಿ ಕಡಿಮೆಯಾಗುತ್ತಿದ್ದು, ಹೊಸ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿದೆ. ಈಗಾಗಲೇ ಕರ್ನಾಟಕ(Karnataka)ದಲ್ಲಿ 6ನೇ ತರಗತಿಯಿಂದ ವಿದ್ಯಾರ್ಥಿ(School Students)ಗಳಿಗೆ ಶಾಲೆ ಪುನಾರಂಭ(Schools Reopen) ಮಾಡಲಾಗಿತ್ತು. ಈಗ ಅಕ್ಟೋಬರ್ 25ರಿಂದ 1 ರಿಂದ 5 ನೇ ತರಗತಿಗಳಿಗೆ ಶಾಲೆಗಳನ್ನು ಪುನಃ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ, ಪೋಷಕರಿ(Parents)ಗೆ ಈಗಲೂ ಕೂಡ ತಮ್ಮ ಮಕ್ಕಳನ್ನು ಶಾಲೆ(School)ಗೆ ಕಳಿಸುವ ಬಗ್ಗೆ ಆತಂಕವಿದ್ದು, ಮಕ್ಕಳ ವೈದ್ಯರಿಗೆ(Doctors) ಕರೆ ಮಾಡುವ ಪೋಷಕರು ಶಾಲೆಯಲ್ಲಿ ಮಕ್ಕಳ ಸುರಕ್ಷತೆ(Children Safety )ಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಕ್ಕಳ ಸುರಕ್ಷತೆಗೆ ಏನು ಮಾಡಬೇಕು?

“ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವ ಪ್ರಯೋಜನಗಳ ಬಗ್ಗೆ ನಮಗೆ ಭರವಸೆ ನೀಡಬೇಕು. ವೈರಲ್ ಸೋಂಕು ಮುಖವನ್ನು ಸ್ಪರ್ಶಿಸುವುದರಿಂದ ಮತ್ತು ಪರಸ್ಪರ ಹತ್ತಿರವಿರುವ ಆಹಾರ ತಿನ್ನುವುದರಿಂದ ಹರಡುತ್ತದೆ. ಅನೇಕ ಶಾಲೆಗಳು ಮಕ್ಕಳಿಗೆ ಮನೆಯಲ್ಲಿ ತಿನ್ನಲು ಅವಕಾಶ ನೀಡಿವೆ. ಮಕ್ಕಳು ಶಾಲೆಗಳಲ್ಲಿ ಊಟ ಮಾಡುತ್ತಿದ್ದರೆ ಎರಡು ಅಡಿ ಅಂತರ ಇರುವಂತೆ ಶಾಲೆಗಳು ಖಚಿತಪಡಿಸಿಕೊಳ್ಳಬೇಕು ಮತ್ತು ಅದು ತೆರೆದ, ಚೆನ್ನಾಗಿ ಗಾಳಿ ಇರುವ ಪ್ರದೇಶವಾಗಿರಬೇಕು. ಶಾಲೆಗಳು ಮತ್ತು ಮಕ್ಕಳು ಈ ಸುರಕ್ಷತಾ ನಿಯಮಗಳನ್ನು ನಿರ್ವಹಿಸಿದರೆ, ಮಕ್ಕಳು ಸುರಕ್ಷಿತವಾಗಿರುತ್ತಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ:  Primary Schools Reopen: ಕೋವಿಡ್​ ಭಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿರುವ ಪೋಷಕರು ಈ ಸುದ್ದಿ ಓದಿ..!

ನವೆಂಬರ್ಆರಂಭದಿಂದಲೇ ಲಸಿಕೆ:

CNN-News 18ಗೆ ನೀಡಿದ ಸಂದರ್ಶನದಲ್ಲಿ, ಕೇಂದ್ರವು ವಯಸ್ಕರಂತೆ ಇಲ್ಲೂ ಸಹ ಕೋಮಾರ್ಬಿಡೀಸ್‌ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ ಮತ್ತು ಪಟ್ಟಿಯಲ್ಲಿರುವ ಮಕ್ಕಳಿಗೆ ಲಸಿಕೆ ಡೋಸ್‌ ನೀಡಲು ಮೊದಲ ಆದ್ಯತೆ ನೀಡಲಾಗುವುದು ಎಂದು ಅರೋರಾ ಹೇಳಿದರು.

ಕೋಮಾರ್ಬಿಡಿಟಿ ಇರುವ ಮಕ್ಕಳಿಗೆ ಅಕ್ಟೋಬರ್‌ ಅಂತ್ಯ ಅಥವಾ ನವೆಂಬರ್‌ ಆರಂಭದಿಂದಲೇ ಲಸಿಕೀಕರಣ ಆರಂಭವಾಗಬಹುದು. 2022ರ ಮೊದಲ ತ್ರೈಮಾಸಿಕದಲ್ಲಿ ಆರೋಗ್ಯವಂತ ಮಕ್ಕಳಿಗೆ ಕೋವಿಡ್ - 19 ವಿರುದ್ಧದ ಲಸಿಕೆ ನೀಡಬಹುದು ಎಂದೂ ಡಾ. ಅರೋರಾ ಹೇಳಿದರು. 2 ವರ್ಷದಷ್ಟು ಕಿರಿಯ ಮಕ್ಕಳಿಗೆ ಯಾವ ದೇಶದಲ್ಲೂ ಕೋವಿಡ್ - 19 ವಿರುದ್ಧ ಹೋರಾಡುವ ಲಸಿಕೆ ನೀಡುತ್ತಿಲ್ಲ. ಈ ಹಿನ್ನೆಲೆ ಇಷ್ಟು ಕಿರಿಯ ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನು ಅಧಿಕೃತಗೊಳಿಸಿದ ಮೊದಲ ದೇಶ ಎನಿಸಿಕೊಳ್ಳಲಿದೆ ಭಾರತ.
Published by:Mahmadrafik K
First published: