ಶಿಕ್ಷಕರು ವೇತನ ಇಲ್ಲದೆ ವೃತ್ತಿ ತೊರೆಯುತ್ತಿದ್ದಾರೆ - ಎ.ಪಿ ರಂಗನಾಥ್ ಆಕ್ರೋಶ
1 ಸಾವಿರದ 100 ಕೋಟಿ ಆರ್.ಟಿ.ಇ ಹಣ ಬಾಕಿ ಉಳಿದಿದ್ದು, ಶಿಕ್ಷಕರಿಗೆ ಸಂಬಳ ನೀಡಲಾಗದೆ ಶಾಲೆಗಳು ತತ್ತರಿಸಿವೆ. ಕನಿಷ್ಠ ಆರ್.ಟಿ.ಇ ಹಣ ಬಿಡುಗಡೆ ಮಾಡಿದರೆ ತೀರ ಸಂಕಷ್ಟದ ದಿನಗಳಲ್ಲಿ ಬದುಕು ದೂಡುತ್ತಿರುವ ಶಿಕ್ಷಕ ವರ್ಗಕ್ಕೆ ನೆರವಾಗುವ ಭರವಸೆ ನೀಡಿದರು ಎ.ಪಿ ರಂಗನಾಥ್.
news18-kannada Updated:September 30, 2020, 4:02 PM IST

ಎಪಿ ರಂಗನಾಥ್
- News18 Kannada
- Last Updated: September 30, 2020, 4:02 PM IST
ಬೆಂಗಳೂರು(ಸೆ.30): ಕೊವಿಡ್-19 ತಂದೊಡ್ಡಿರುವ ಸಂಕಷ್ಟದಿಂದ ಅನುದಾನರಹಿತ ಖಾಸಗಿ ಶಾಲೆಗಳ ಶಿಕ್ಷಕರು ವೇತನವಿಲ್ಲದೆ ತಮ್ಮ ವೃತ್ತಿಯನ್ನೇ ತೊರೆಯುತ್ತಿದ್ದಾರೆ. ಆದರೆ ಸರ್ಕಾರ ಇವರ ಸಂಕಷ್ಟ ಅರಿತು ನೆರವಿಗೆ ಬಾರದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಟೀಚರ್ಸ್ ಅಂಡ್ ಮ್ಯಾನೇಜ್ಮೆಂಟ್ ಫೋರಂ ಅಧ್ಯಕ್ಷ ಮತ್ತು ಎಂ.ಎಲ್.ಸಿ ಅಭ್ಯರ್ಥಿ ಎ.ಪಿ.ರಂಗನಾಥ್ ಆರೋಪಿಸಿದ್ದಾರೆ. ಟೀಚರ್ಸ್ ಅಂಡ್ ಮ್ಯಾನೇಜ್ಮೆಂಟ್ ಫೋರಂ, ಕರ್ನಾಟಕ ವತಿಯಿಂದ ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕಿನ ಬ್ಯಾಟರಾಯನಪುರದಲ್ಲಿ ಆಯೋಜಿಸಿದ್ದ "ಶಿಕ್ಷಕರ ಸ್ನೇಹಸಮ್ಮಿಲನ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್-19ನಿಂದ ಸಂಕಷ್ಟದಲ್ಲಿರುವ ಕೆಲ ವರ್ಗಗಳಿಗೆ ಆರ್ಥಿಕ ಪ್ಯಾಕೇಜ್ ನೀಡಲಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಶಿಕ್ಷಕ ಸಮುದಾಯವನ್ನು ನಿರ್ಲಕ್ಷಿಸಿರುವುದರಿಂದ ಅವರ ಬದುಕು ದುಸ್ತರವಾಗಿದೆ. ಈ ದಿಸೆಯಲ್ಲಿ ಎಲ್ಲ ವರ್ಗಗಳಿಗೆ ನೀಡಿದಂತೆ ಶಿಕ್ಷಕರಿಗೂ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕಳೆದ ವರ್ಷದ ಭೋದನಾ ಶುಲ್ಕ, ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶಾತಿ ವಿಳಂಬದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಿಕ್ಷಣಸಂಸ್ಥೆಗಳ ಆಡಳಿತ ಮಂಡಳಿಗೆ ಸರ್ಕಾರ ನೀಡಬೇಕಾಗಿರುವ ಆರ್.ಟಿ.ಇ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರಿಗೆ ಈಗಾಗಲೆ ಮನವಿ ಸಲ್ಲಿಸಲಾಗಿದೆ. ಹೀಗಾಗಿ ಕೂಡಲೆ ಸರ್ಕಾರ ಹಣಬಿಡುಗಡೆ ಮಾಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳ ನೆರವಿಗೆ ಧಾವಿಸಬೇಕೆಂದು ತಿಳಿಸಿದರು. 1 ಸಾವಿರದ 100 ಕೋಟಿ ಆರ್.ಟಿ.ಇ ಹಣ ಬಾಕಿ ಉಳಿದಿದ್ದು, ಶಿಕ್ಷಕರಿಗೆ ಸಂಬಳ ನೀಡಲಾಗದೆ ಶಾಲೆಗಳು ತತ್ತರಿಸಿವೆ. ಕನಿಷ್ಠ ಆರ್.ಟಿ.ಇ ಹಣ ಬಿಡುಗಡೆ ಮಾಡಿದರೆ ತೀರ ಸಂಕಷ್ಟದ ದಿನಗಳಲ್ಲಿ ಬದುಕು ದೂಡುತ್ತಿರುವ ಶಿಕ್ಷಕ ವರ್ಗಕ್ಕೆ ನೆರವಾಗುವ ಭರವಸೆ ನೀಡಿದರು ಎ.ಪಿ ರಂಗನಾಥ್.
ಇದನ್ನೂ ಓದಿ: ವಾಹನ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ
ಇದೇ ಸಂದರ್ಭದಲ್ಲಿ 13 ಮಂದಿ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಟೀಚರ್ಸ್ ಅಂಡ್ ಮ್ಯಾನೇಜ್ಮೆಂಟ್ ಫೋರಂನ ಪ್ರಧಾನ ಕಾರ್ಯದರ್ಶಿ ಸೂಡಿ ಸುರೇಶ್, ಜಂಟಿ ಕಾರ್ಯದರ್ಶಿ ನರಸೇಗೌಡ, ಬೆಂಗಳೂರು ಉತ್ತರಜಿಲ್ಲೆ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ವಿ.ಸುರೇಶ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಇತರರು ಇದ್ದರು.
ಕಳೆದ ವರ್ಷದ ಭೋದನಾ ಶುಲ್ಕ, ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರವೇಶಾತಿ ವಿಳಂಬದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಿಕ್ಷಣಸಂಸ್ಥೆಗಳ ಆಡಳಿತ ಮಂಡಳಿಗೆ ಸರ್ಕಾರ ನೀಡಬೇಕಾಗಿರುವ ಆರ್.ಟಿ.ಇ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರಿಗೆ ಈಗಾಗಲೆ ಮನವಿ ಸಲ್ಲಿಸಲಾಗಿದೆ. ಹೀಗಾಗಿ ಕೂಡಲೆ ಸರ್ಕಾರ ಹಣಬಿಡುಗಡೆ ಮಾಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳ ನೆರವಿಗೆ ಧಾವಿಸಬೇಕೆಂದು ತಿಳಿಸಿದರು.