Teachers Recruitment: ಶಿಕ್ಷಕರ ನೇಮಕಾತಿ ಪರೀಕ್ಷೆಯ ಮೇಲೆ ಹದ್ದಿನ ಕಣ್ಣು! ಗೃಹ ಇಲಾಖೆಯ ಜೊತೆ ಸಭೆ

ಶಿಕ್ಷಕರ ನೇಮಕಾತಿ ಪರೀಕ್ಷೆಗಳ ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಹಿಂದೆಂದೂ ಆಗದಂತೆ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಅಷ್ಟಕ್ಕೂ ಆ ರೂಲ್ಸ್ ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಮೇ.11): ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವಾದ ಮೇಲೆ ರಾಜ್ಯ ಸರ್ಕಾರ (Government) ಎಚ್ಚೆತ್ತಿದೆ. ಇದೀಗ ಶಿಕ್ಷಕರ ನೇಮಕಾತಿ (Teachers Recruitment) ಪರೀಕ್ಷೆಗಳ ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆ (Police Department) ಹದ್ದಿನ ಕಣ್ಣು ಇಟ್ಟಿದೆ. ಹಿಂದೆಂದೂ ಆಗದಂತೆ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಅಷ್ಟಕ್ಕೂ ಆ ರೂಲ್ಸ್ ಏನು? ಈ ಸ್ಟೋರಿ ಓದಿ. ಪಿಎಸ್‌ಐ (PSI) ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆ ಅಕ್ರಮದಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಶಿಕ್ಷಣ ಇಲಾಖೆ (Education Department) ಫುಲ್ ಅಲರ್ಟ್ ಆಗಿದೆ. ಮುಂದಿನ ವಾರ ಪ್ರಾಥಮಿಕ ಶಾಲಾ ಶಿಕ್ಷಕರ (Primary Teachers) ಪರೀಕ್ಷೆ ನಡೆಯಲ್ಲಿದ್ದು, ಶಿಕ್ಷಣ ಇಲಾಖೆ ಪ್ರಶ್ನಪತ್ರಿಕೆ ಗೌಪ್ಯತೆ ಹಾಗೂ ಎರಡು ದಿನಗಳ ನಡೆಯುವ ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ತಗೆದುಕೊಳ್ಳಲು ಮುಂದಾಗಿದೆ.

ಪರೀಕ್ಷೆಗೆ ಶಿಕ್ಷಣ ಇಲಾಖೆ ಕೈಗೊಂಡ ಟಫ್ ರೂಲ್ಸ್ಒಂದು ಕೊಠಡಿಯಲ್ಲಿ 20 ಮಂದಿ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಪರೀಕ್ಷಾ ಕೇಂದ್ರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆಮೂರು ದಿನ ಮೊದಲೇ ಪರೀಕ್ಷಾ ಕೇಂದ್ರ ವಶಕ್ಕೆ3 ಕಮಿಟಿ ರಚಿಸಿ ಪರೀಕ್ಷಾ ಕೇಂದ್ರದ ಮೇಲೆ ಹದ್ದಿನ ಕಣ್ಣುಮೊಬೈಲ್, ವಾಚ್, ಬ್ಲೂಟೂತ್ ಬಳಕೆ ನಿಷೇಧಪರೀಕ್ಷಾ ಕೊಠಡಿಯಲ್ಲಿ ವಾಲ್ ಕ್ಲಾಕ್ ಅಳವಡಿಕೆಪರೀಕ್ಷೆ ಆರಂಭಕ್ಕೂ ಮುನ್ನ ಪರೀಕ್ಷಾ ಹಾಲ್ ತಪಾಸಣೆಪ್ರತಿ ಕೊಠಡಿಗೂ ಸಿಸಿಟಿವಿ ಅಳವಡಿಕೆಸಿಸಿಟಿವಿ ಪರಿಶೀಲಿಸಲು ಸಿಬ್ಬಂದಿಯ ವ್ಯವಸ್ಥೆಪರೀಕ್ಷಾ ಕೇಂದ್ರದ ಕೊಠಡಿಯ ಬಗ್ಗೆ ಅಭ್ಯರ್ಥಿಗೆ ಮಾಹಿತಿ ಇರುವುದಿಲ್ಲ, ಪರೀಕ್ಷಾ ಕೇಂದ್ರದ ಮಾಹಿತಿ ಮಾತ್ರ ಇರುತ್ತೆ.

ಇದನ್ನೂ ಓದಿ:Morning Digest: ಜೂನಿಯರ್ ರವಿಚಂದ್ರನ್ ಸಾವು, ಇಲ್ಲಿನ ಯುವಕರಿಗೆ ಹೆಣ್ಣು ಕೊಡಲ್ಲ, ಅಗ್ಗವಾದ ಚಿನ್ನ: ಬೆಳಗಿನ ಟಾಪ್ ನ್ಯೂಸ್ ಗಳು

ಪರೀಕ್ಷಾ ಅಕ್ರಮಕ್ಕೆ ಕಡಿವಾಣ

15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಮೇ 21 ಮತ್ತು 22ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದೆ. 1.06 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ಇಂದು‌ ಶಿಕ್ಷ ಸಚಿವರು ಗೃಹ ಇಲಾಖೆ ಜೊತೆ ಸಭೆ ನಡೆಸಿದ್ರು. ಇ‌ನ್ನೂ ಸಭೆಯಲ್ಲಿ ಹಲವಾರು ವಿಚಾರಗಳು ಚರ್ಚೆ ನಡೆದಿವೆ.

ಟೆಕ್ನಾಲಜಿ ಬಳಸಿ ಪರೀಕ್ಷೆ ಅಕ್ರಮ‌ ಕಡಿವಾಣಕ್ಕೆ ಪರೀಕ್ಷೆಯಲ್ಲಿ ವಾಚ್ ಕಟ್ಟುವಂತಿಲ್ಲ. ವಾಚ್ ಮೂಲಕ ಅಕ್ರಮ ಸಾಧ್ಯತೆ ಹೆಚ್ಚಳ ಹಿನ್ನೆಲೆ. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ವಾಲ್ ಕ್ಲಾಕ್ ಇರಲಿದೆ. ಪರೀಕ್ಷಾ ಕೊಠಡಿ ಸುತ್ತಲೂ ಬ್ಲ್ಯೂ ಟೂತ್ ನೀಷೇದ ಇರಲಿದೆ. ಡಿಜಿಟಲ್ ತಂತ್ರಜ್ಞಾನದ ವಸ್ತುಗಳು  ಸೇರಿದಂತೆ ಯವುದಕ್ಕೂ ಪರೀಕ್ಷಾ ಕೇಂದ್ರದೊಳಗೆ ಅವಕಾಶ ನೀಡದಿರಲು ಮುಂದಾಗಿದೆ.

ಇದನ್ನೂ ಓದಿ: PSI Scam ನಂತರ ಹೆಚ್ಚಿನ ಭದ್ರತೆ, ಶಿಕ್ಷಕರ ಹುದ್ದೆ ಪರೀಕ್ಷೆಗೆ ಬಿಗಿ ಬಂದೋಬಸ್ತ್

ಒಟ್ಟಿನಲ್ಲಿ ಪಿಎಸ್‌ಐ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ನಕಲು ಮಾಡಿರುವ ಹಗರಣದ ಬಳಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಜಾಗೃತವಾಗಿದ್ದು ಶಿಕ್ಷಕರ ನೇಮಕಾತಿ ಪರೀಕ್ಷೆಯ ಮೇಲೆ ಕಟ್ಟೆಚ್ಚರ ವಹಿಸಿದ್ದು ನೀಟ್‌ ಮಾದರಿಯಲ್ಲಿಯೇ ಎಕ್ಸಾಂ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ಇತ್ತೀಚೆಗೆ ರಾಜ್ಯದಲ್ಲಿ ನಡೆದಿದ್ದ ಪಿಎಸ್​ಐ ಸ್ಕ್ಯಾಮ್ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸುದ್ದಿಯಾಗಿತ್ತು. ಇದು ಭಾರೀ ಟೀಕೆಗೆ ಕಾರಣವಾಗಿದ್ದಲ್ಲದೆ ಈ ಸಂಬಂಧಪಟ್ಟ ಅಧಿಕಾರಿಗಳು ತೀವ್ರ ಮುಖಭಂಗ ಎದುರಿಸಿದ್ದರು.
Published by:Divya D
First published: