2020ರ SSLC ಮೌಲ್ಯಮಾಪನ ವೇಳೆ ಶಿಕ್ಷಕರಿಂದ ದೋಷ: 51 ಲಕ್ಷ ದಂಡದಲ್ಲಿ 10 ಲಕ್ಷ ಮಾತ್ರ ಪಾವತಿಸಿದ ಶಿಕ್ಷಕರು

ಈ ವಿಷಯ ವಿಧಾನ ಪರಿಷತ್ತಿನಲ್ಲಿ ಚರ್ಚೆಗೆ ಬಂದಿತ್ತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಕ್ರಮವಲ್ಲದ ಮೌಲ್ಯಮಾಪನಕ್ಕೆ ಶಿಕ್ಷಕರು ತಪ್ಪಿತಸ್ಥರು ಎಂದು ಪರಿಗಣಿಸಿ 51.5 ಲಕ್ಷ ರೂ. ದಂಡ ವಿಧಿಸಲಾಗಿದೆ. ಆದರೆ ಸರ್ಕಾರ ಈವರೆಗೆ ಕೇವಲ 10 ಲಕ್ಷ ರೂ. ಮಾತ್ರ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
2020ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ (SSLC Students) ಉತ್ತರ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಶಿಕ್ಷಕರು (Teachers) ಮಾಡಿದ ದೋಷಗಳಿಗಾಗಿ ಸರ್ಕಾರ 51.5 ಲಕ್ಷ ರೂ ದಂಡ ವಿಧಿಸಿದೆ. 51.5 ಲಕ್ಷ ರೂ ದಂಡದಲ್ಲಿ ಈವರೆಗೆ ಕೇವಲ 10 ಲಕ್ಷ ವಸೂಲಿಯಾಗಿದ್ದು, ಶಿಕ್ಷಕರು ಇನ್ನೂ 41 ಲಕ್ಷ ರೂ. ದಂಡವನ್ನು ಪಾವತಿಸಬೇಕಾಗಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ (Minister BC Nagesh) ತಿಳಿಸಿದ್ದಾರೆ. ಜುಲೈ 2020ರ ಎಸ್ಎಸ್ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಸಂದರ್ಭದಲ್ಲಿ 4,317 ಶಿಕ್ಷಕರು ತಪ್ಪುಗಳನ್ನು ಮಾಡಿದ್ದು, ಇದು ಮರು ಮೌಲ್ಯಮಾಪನಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮರುಮೌಲ್ಯಮಾಪನ (Revaluation) ಬಯಸುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಕನಿಷ್ಠ 6 ಅಂಕಗಳ (Marks) ವ್ಯತ್ಯಾಸವನ್ನು ಕಂಡು ಕೊಂಡಿದ್ದಾರೆ. ಮರುಮೌಲ್ಯಮಾಪನದ ನಂತರ ಗರಿಷ್ಠ 20 ಅಂಕಗಳವರೆಗೆ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಎಡವಿದ ಶಿಕ್ಷಕರ ತಪ್ಪಿಗೆ ಒಂದು ತಿಂಗಳ ಸಂಬಳ ಕಡಿತಗೊಳಿಸಬೇಕು ಎಂದು ಸಿ.ಎನ್ ರವಿಕುಮಾರ್ ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲತೆ ಕಾರಣದಿಂದಾಗಿ ಅಂತಹ ಶಿಕ್ಷಕರ ಸಂಬಳ ಕಡಿತಗೊಳಿಸಿ, ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನಕ್ಕೆ ಅಂತಹ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗದು ಎಂದು ಸಿ.ಎನ್ ರವಿಕುಮಾರ್ ಹೇಳಿದರು.

ಕೆಲವರ ನಿಷ್ಠುರತೆಯಿಂದಾಗಿ ದೋಷಗಳು ಸಂಭವಿಸಿವೆ ಎಂದು ಸಚಿವರಾದ ನಾಗೇಶ್ ಹೇಳಿದರು. ಇಲಾಖೆ ಏನು ಮಾಡಬಹುದು ಎಂದು ಚಿಂತನೆ ನಡೆಸಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:  Free Laptop Scheme: ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌: ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ

ಮರು ಮೌಲ್ಯಮಾಪನದಲ್ಲಿ 6ಕ್ಕಿಂತ ಹೆಚ್ಚು ಅಂಕಗಳು

ಸಾಂಕ್ರಾಮಿಕ ರೋಗದಿಂದ ಕಾರಣ 2019-20ರ SSLC ಪರೀಕ್ಷೆಗಳು ವಿಳಂಬವಾಗಿದ್ದವು. ಒಟ್ಟು 19,826 ಅರ್ಜಿಗಳು ಮರುಮೌಲ್ಯಮಾಪನಕ್ಕೆ ಬಂದಿವೆ ಮತ್ತು ಅವುಗಳಲ್ಲಿ 15,591 ಅರ್ಜಿಗಳಲ್ಲಿ ಮರುಮೌಲ್ಯಮಾಪನದ ನಂತರ ಆರಕ್ಕಿಂತ ಕಡಿಮೆ ಅಂಕಗಳ ವ್ಯತ್ಯಾಸ ಕಂಡುಬಂದಿದೆ. ಆದರೂ, 4,235 ಅರ್ಜಿಗಳ ರಿವ್ಯಾಲ್ಯುವೇಷನ್‌ನಲ್ಲಿ ಆರಕ್ಕಿಂತ ಹೆಚ್ಚು ಅಂಕಗಳ ವ್ಯತ್ಯಾಸ ಕಂಡುಬಂದಿದೆ. ಇದಕ್ಕೆ ಶಿಕ್ಷಕರು ನೇರವಾಗಿ ಜವಾಬ್ದಾರರು ಮತ್ತು ಈ ದೋಷಕ್ಕೆ ಅವರು ದಂಡವನ್ನು ಪಾವತಿಸಬೇಕಾಗಿದೆ.

ಅಂಕಗಳ ವ್ಯತ್ಯಾಸವು ಆರಕ್ಕಿಂತ ಹೆಚ್ಚಾದಾಗ, ಸರ್ಕಾರವು ಮರುಮೌಲ್ಯಮಾಪನ ಮೊತ್ತವವನ್ನು ಪ್ರತಿ ಪೇಪರ್ ಗೆ 805 ರೂ. ನಂತೆ ಅರ್ಜಿದಾರರಿಗೆ ಮರುಪಾವತಿಸಿದೆ. 2020ರಲ್ಲಿ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗಳನ್ನು ಮುಚ್ಚಿದ್ದರಿಂದ, ಶಿಕ್ಷಕರಿಂದ ಪೆನಾಲ್ಟಿ ಸಂಗ್ರಹ ಕಡಿಮೆಯಾಗಿತ್ತು. ಹೀಗಾಗಿ ಶಾಲಾ ಅಧಿಕಾರಿಗಳು ಶಿಕ್ಷಕರಿಂದ ದಂಡ ವಸೂಲಿ ಮಾಡಿ ಕೊಡುವಂತೆ ಸರ್ಕಾರ ಸೂಚನೆ ನೀಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು. ಜಿಲ್ಲೆಗಳಲ್ಲಿ ಉಪ ನಿರ್ದೇಶಕರು ಶಿಕ್ಷಕರಿಂದ ದಂಡವನ್ನು ಸ್ವೀಕರಿಸಲು ಸೂಚಿಸಲಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿ ವರ್ಷ ಈ ರೀತಿಯ ಅವಾಂತರಗಳು 

ಇನ್ನು ಎಸ್ಎಸ್ಎಲ್‌ಸಿ ಇರಲಿ, ಪಿಯುಸಿ ಇರಲಿ, ಉತ್ತರಪತ್ರಿಕೆಗಳ ಮೌಲ್ಯಮಾಪನದಲ್ಲಿ ಈ ಅವಾಂತರಗಳು ಪ್ರತಿವರ್ಷವೂ ಮರುಕಳಿಸುತ್ತಲೇ ಇವೆ. ಇದರಿಂದಾಗಿ ವಿದ್ಯಾರ್ಥಿಗಳು ಸಹ ತೊಂದರೆ ಅನುಭವಿಸುತ್ತಾರೆ. ಇಂತಿಷ್ಟು ಮಾರ್ಕ್ಸ್‌ ಪಡೆಯಬಹುದೆಂಬ ನಿರೀಕ್ಷೆ ಹೊಂದಿದ ವಿದ್ಯಾರ್ಥಿಗಳಿಗೆ ಶಿಕ್ಷಕರ ಈ ಮೌಲ್ಯಮಾಪನ ದೋಷ ಮತ್ತಷ್ಟು ಸಂಕಷ್ಟ ತರುತ್ತದೆ.

ಇದನ್ನೂ ಓದಿ:  Menstrual leave: ಬದಲಾಗುತ್ತಿದೆ ಕರ್ನಾಟಕ.. ಈ ಕಾಲೇಜಿನ ಮಹಿಳಾ ಸಿಬ್ಬಂದಿಗೆ ಇನ್ಮುಂದೆ ಮುಟ್ಟಿನ ರಜೆ

ಹೀಗಾಗಿ ಮೌಲ್ಯಮಾಪನ ಸಂದರ್ಭದಲ್ಲಿ ಇಂತಹ ತಪ್ಪುಗಳು ನಡೆಯದಂತೆ ನೋಡಿಕೊಳ್ಳಲು ಸರ್ಕಾರ ದಂಡ ಪಾವತಿಯನ್ನು ಮಾನದಂಡವನ್ನಾಗಿ ಪ್ರಯೋಗಿಸುತ್ತಿದೆ. ಶಿಕ್ಷಕರ ಈ ಪ್ರಕ್ರಿಯೆ ಮಕ್ಕಳ ಭವಿಷ್ಯವನ್ನೂ ನಿರ್ಧರಿಸುವುದರಿಂದ ಶಿಕ್ಷಕರು ಎಚ್ಚರಿಕೆಯಿಂದ ಇರಬೇಕು. ಮತ್ತು ಅಂತವರ ವಿರುದ್ಧ ಬಿಗಿ ಕ್ರಮಗಳಿದ್ದರೆ ಒಳ್ಳೆಯದು.
Published by:Mahmadrafik K
First published: