Teachers Day: ಶಿಕ್ಷಕರ ದಿನಾಚರಣೆ; ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸಿಎಂ ಸನ್ಮಾನ

ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ಅನೇಕ ಶಿಕ್ಷಕರು ಬಂದು ಶಿಕ್ಷಣ ಹೇಳಿ ಕೊಟ್ಟಿದ್ದಾರೆ. ಅನೇಕರು ಪ್ರಾಣ ಕಳೆದುಕೊಂಡರು. ಶಾಲೆ ಪ್ರಾರಂಭ ಮಾಡಬೇಕೋ ಬಿಡಬೇಕೋ ಎಂಬ ಗೊಂದಲ ಇತ್ತು. ಆದರೆ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಶಿಕ್ಷಕರು ನಿಂತರು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದರು.

ಶಿಕ್ಷಕರ ದಿನ

ಶಿಕ್ಷಕರ ದಿನ

 • Share this:
  ಬೆಂಗಳೂರು: ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ (Dr Sarvapalli Radhakrishanan Birthday) ಪ್ರಯುಕ್ತ ವಿಧಾನಸೌಧದಲ್ಲಿ ಶಿಕ್ಷಕರ ದಿನಾಚರಣೆ (Teachers Day) ಸಮಾರಂಭ ನಡೆಸಲಾಯಿತು. ಸಮಾರಂಭದಲ್ಲಿ ರಾಜ್ಯ ಪುರಸ್ಕೃತ ‌ಶಿಕ್ಷಕರಿಗೆ ಸಿಎಂ‌ ಬಸವರಾಜ ಬೊಮ್ಮಾಯಿ‌ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ (Education Minister BC Nagesh) ಹಾಗೂ ಶಾಸಕ ರಿಜ್ವಾನ್ ಅರ್ಷದ್ (MLA Rizwan Harshad) ಉಪಸ್ಥಿತರಿದ್ದರು. ಜ್ಯೋತಿ ಬೆಳಗುವ ಮೂಲಕ ಸಿಎಂ ಬೊಮ್ಮಾಯಿ ಅವರು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ (National And State Award Won Teachers) ಹಾಗೂ ಸನ್ಮಾನ ಮಾಡಲಾಯಿತು. ಶಿಕ್ಷಕರಿಗೆ 10 ಸಾವಿರ ಬಹುಮಾನ ಹಾಗೂ ಶಾಲಾ ಅಭಿವೃದ್ಧಿಗೆ 50 ಸವಿರ ನಗದು ನೀಡಲಾಯಿತು.

  ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಇಂದು ವಿಶೇಷವಾದ ದಿನ. ನಮ್ಮ ಕರ್ತವ್ಯ ನೆನಪಿಸುವ ದಿನ. ಶಿಕ್ಷಣ ತಜ್ಞ ಹೇಗೆ ಎಲ್ಲರಿಗೂ ಆದರ್ಶವಾದರೂ ಎಂಬುದನ್ನು ನೆನಪಿಸುವ ದಿನ. ರಾಧಾಕೃಷ್ಣ ಅವರ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು. ತತ್ವಜ್ಞಾನ ಆರಿಸಿಕೊಂಡ ನಂತರ ಹೇಗೆ ಮೈ ಗೂಡಿಸಿಕೊಂಡರು ಅನ್ನೋದನ್ನು ಬಿಟ್ಟು ಹೋಗಿದ್ದಾರೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು. ಉಪ ರಾಷ್ಟ್ರಪತಿ ಸ್ಥಾನ ಬಂದಾಗ ಆ ಸ್ಥಾನಕ್ಕೆ ಮೆರಗು ತಂದು ಕೊಟ್ಟವರು. ಕೋಲ್ಡ್ ವಾರ್ ಸಮಯದಲ್ಲಿ ತತ್ವಜ್ಞಾನದ ಮೂಲಕ ಜನರ ಮನಸ್ಸು ಪರಿವರ್ತನೆ ಮಾಡಿದ್ದರು. ಎಲ್ಲರೂ ಸುಜ್ಞಾನದ ಕಡೆ ಹೋಗಬೇಕು ಎಂಬುದನ್ನು ರಾಧಾಕೃಷ್ಣ ಅವರು ತಿಳಿಸಿದ್ದರು ಎಂದು ಹೇಳಿದರು.

  ಇದನ್ನು ಓದಿ: Gauri Lankesh Murder Case: ಗೌರಿ ಲಂಕೇಶ್ ಕೊಲೆಯಾಗಿ 4 ವರ್ಷ; 10 ಸಾವಿರ ಪುಟಗಳ ಚಾರ್ಜ್​ಶೀಟ್ ಸಲ್ಲಿಕೆಯಾಗಿದ್ದರೂ ಆರಂಭವಾಗದ ವಿಚಾರಣೆ

  ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ಅನೇಕ ಶಿಕ್ಷಕರು ಬಂದು ಶಿಕ್ಷಣ ಹೇಳಿ ಕೊಟ್ಟಿದ್ದಾರೆ. ಅನೇಕರು ಪ್ರಾಣ ಕಳೆದುಕೊಂಡರು. ಶಾಲೆ ಪ್ರಾರಂಭ ಮಾಡಬೇಕೋ ಬಿಡಬೇಕೋ ಎಂಬ ಗೊಂದಲ ಇತ್ತು. ಆದರೆ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಶಿಕ್ಷಕರು ನಿಂತರು. ಎಸ್ ಎಸ್ ಎಲ್ ಸಿ ಎಕ್ಸಾಂ ಮಾಡುವುದು ಸುಮ್ಮನೆ ಮಾತಲ್ಲ. ಅಷ್ಟು ಧೈರ್ಯವಾಗಿ ಬಂದು ಕೆಲಸ ಮಾಡಿದರು. ಕೊರೋನಾ ಸಮಯದಲ್ಲೂ ಮಕ್ಕಳನ್ನು ತಯಾರು ಮಾಡಿದ್ದರು. ಅನೇಕ ಶಾಲೆಗಳಿಗೆ ಹೋಗುವ ಪ್ರಯತ್ನ ಮಾಡಿದೆ. ಅನೇಕ ಶಾಲೆಗಳಲ್ಲಿ ಶಿಕ್ಷಕರು ಮಾಡಿರುವ ಕೆಲಸ ನಿಜಕ್ಕೂ ಮೆಚ್ಚುವಂತಹದ್ದು. ಸಿಎಸ್​ಆರ್ ಫಂಡ್ ಮೂಲಕ ಶಾಲೆ ಅಭಿವೃದ್ಧಿ ಮಾಡಿದ್ದಾರೆ. ಕೊಟ್ಟಿದ್ದರಲ್ಲೇ ತೃಪ್ತಿ ಪಡೆದುಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಸಿಎಂ ಕ್ಷೇತ್ರದ ಶಾಲೆ ಒಂದಕ್ಕೆ ಹೋಗಿದ್ದೆ. ಅಲ್ಲಿ ನಾನು ಅವರನ್ನೆಲ್ಲಾ ಕೇಳಿದೆ. ಎಷ್ಟೊತ್ತಿಗೆ ಶಾಲೆಗೆ ಬರ್ತೀರಾ ಅಂತ. ಅದಕ್ಕೆ ಅವರು ಹೇಳಿದರು 10ಕ್ಕೆ ಶುರುವಾಗೋದು 9 ಕ್ಕೆ ಬರ್ತೀವಿ ಅಂತ. ಅಲ್ಲಿ ಶಾಲೆಯ ಎರಡು ಕೊಠಡಿಗಳನ್ನು ತಯಾರು ಮಾಡಿದ್ದು ನೋಡಿ ನನಗೆ ಆಶ್ಚರ್ಯ ಆಯ್ತು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: