Teacher’s Day: ಇಂದು ಶಿಕ್ಷಕರ ದಿನಾಚರಣೆ; ರಾಯಚೂರಿನ ಅತಿಥಿ ಶಿಕ್ಷಕರ ಗೋಳು ಕೇಳೋರೇ ಇಲ್ಲ!

ರಾಯಚೂರು ಜಿಲ್ಲೆಯೊಂದರಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ 2,321 ಶಿಕ್ಷಕರ ಕೊರತೆ ಇದ್ದು, ಅದಕ್ಕೆ 1,591 ಅತಿಥಿ‌ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಇನ್ನೂ ಪ್ರೌಢಶಾಲೆಯಲ್ಲಿ 452 ಶಿಕ್ಷಕರ ಕೊರತೆ ಇದ್ದು ಅದಕ್ಕೆ 199 ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ.

ರಾಯಚೂರಿನ ಅತಿಥಿ ಶಿಕ್ಷಕ

ರಾಯಚೂರಿನ ಅತಿಥಿ ಶಿಕ್ಷಕ

  • Share this:
ರಾಯಚೂರು: ಇತ್ತೀಚೆಗೆ ವಾಟ್ಸಾಪ್​ಗಳಲ್ಲಿ ಸೊರಬದ  ರಾಧಾ ಎಂಬ ಅತಿಥಿ ಶಿಕ್ಷಕಿಯೊಬ್ಬರು ಅಳಲು ತೋಡಿಕೊಂಡಿದ್ದು ವೈರಲ್ ಆಗಿದೆ. ಇದು ಕೇವಲ ರಾಧಾ ಅವರೊಬ್ಬರ ಅನಿಸಿಕೆ ಅಥವಾ ಗೋಳಲ್ಲ, ಬಹುತೇಕ ಅತಿಥಿ ಶಿಕ್ಷಕರ ಗೋಳಾಗಿದೆ. ಇಂದು  ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಶಿಕ್ಷಕರನ್ನು ಗೌರವಿಸಬೇಕು. ಶಿಕ್ಷಕರು ಸಹ ಗೌರವಯುತವಾದ ಜೀವನ ನಡೆಸಬೇಕು. ಆದರೆ, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಅತಿಥಿ ಶಿಕ್ಷಕರ ಸ್ಥಿತಿ ದುಸ್ಥಿತಿಗೆ ತಲುಪಿದೆ.  ಕಳೆದ ಮಾರ್ಚ್​ ನಂತರ ಅತಿಥಿ ಶಿಕ್ಷಕರಿಗೆ ಕೆಲಸವಿಲ್ಲ.  ಈಗಲೂ ಶಾಲೆ ಆರಂಭವಾಗದೆ ಇರುವುದರಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವುದು ಅನುಮಾನವಾಗಿದೆ.

ಕಳೆದ ಎಂಟು ವರ್ಷಗಳ ಹಿಂದಿನಿಂದ ರಾಜ್ಯ ಸರಕಾರ ಪ್ರತಿ ವರ್ಷ ಶೈಕ್ಷಣಿಕ ವರ್ಷದ ಆರಂಭದ ದಿನಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರತಿ ತಿಂಗಳು 7,500 ರೂ. ಪ್ರೌಢ ಶಾಲಾ ಶಿಕ್ಷಕರಿಗೆ ತಲಾ 8,000 ರೂ. ಗೌರವಧನ ನೀಡುತ್ತಿದ್ದರು. ಆದರೆ, ಈ ವರ್ಷ ಶಾಲೆಗಳು ಆರಂಭವಾಗದೆ ಇರುವುದರಿಂದ ಶಾಲೆಗೆ ಹೋಗಬೇಕಾದ ಶಿಕ್ಷಕರು ಈಗ ಕೂಲಿ ಮಾಡಿ ಬದುಕುವಂಥ ಸ್ಥಿತಿ ಬಂದಿದ್ದಾರೆ. ಅವರಿಗೆ ಸಮಾನ‌ ಕೆಲಸಕ್ಕೆ ಸಮಾನ ವೇತನ ಎಂಬ ಕಾನೂನು ಜಾರಿಯಾಗದಿದ್ದರೂ ಒಂದು ಕೆಲಸವಿದೆ ಮುಂದೆ ಎಂದಾದರೂ ಸರಕಾರ ನಮ್ಮನ್ನು ಖಾಯಂ ಶಿಕ್ಷಕರನ್ನಾಗಿ ಮಾಡಬಹುದು ಎಂದುಕೊಂಡಿದ್ದಾರೆ. ಆದರೆ, ಈಗ ಈ‌ ಭರವಸೆ ಉಳಿದಿಲ್ಲ.

Raichur Guest Lecturers and Teachers Suffering because of Lockdown.
ರಾಯಚೂರಿನ ಅತಿಥಿ ಶಿಕ್ಷಕ


ಇದನ್ನೂ ಓದಿ: Coronavirus India: 2021ರಲ್ಲೂ ಮುಂದುವರೆಯಲಿದೆ ಕೊರೋನಾ ಅಬ್ಬರ; ತಜ್ಞ ವೈದ್ಯರ ಆತಂಕಕಾರಿ ಮಾಹಿತಿ

ನೇಮಕಾತಿಯಲ್ಲಿ ಅವರಿಗೆ ಅತಿಥಿ ಶಿಕ್ಷಕರ ಕೃಪಾಂಕವನ್ನು ಪರಿಗಣಿಸಿಲ್ಲ. ರಾಯಚೂರು ಜಿಲ್ಲೆಯಲ್ಲಿ ಹಲವು ಶಿಕ್ಷಕರು ಕೂಲಿ ದುಡಿಯುತ್ತಿದ್ದು, ಅದರಲ್ಲಿ ಕೆಲವರ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದಕ್ಕೆ ಇಲ್ಲಿ ಉದಾಹರಣೆಗಳಿವೆ.  ಕಪಗಲ್​ನಲ್ಲಿ ಶಿಕ್ಷಕರಾಗಿದ್ದ ತ್ಯಾಗರಾಜ ಎಂಬುವವರ ಈಗ ಗೋಡೆಗೆ ಬಣ್ಣ ಹಚ್ಚುವ ಕೆಲಸಕ್ಕೆ ಹೋಗುವಂತಾಗಿದೆ. ಮೊಹಿನುದ್ದೀನ್ ಎಂಬ ಶಿಕ್ಷಕರು ಮಾಚನೂರಿನಲ್ಲಿ ಕೆಲಸ ಮಾಡುತ್ತಿದ್ದವರು ಈಗ ಹೊಲಗಳಿಗೆ ಔಷಧಿ ಸಿಂಪಡಣೆಗಾಗಿ ಕೂಲಿ‌‌ ಕೆಲಸಕ್ಕೆ ಹೋಗುತ್ತಿದ್ದಾರೆ.

ಮರಿಸ್ವಾಮಿ ಎಂಬ ವಿಕಲಚೇತನರು ಮಾನ್ವಿಯ ಕೋನಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದವರು ಈಗ ಕೆಲಸವಿಲ್ಲದೆ ಇರುವುದರಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇದು ಕೆಲವರ ಸ್ಥಿತಿ ಮಾತ್ರ. ಆದರೆ, ಬಹುತೇಕ ಅತಿಥಿ ಶಿಕ್ಷಕರ ಸ್ಥಿತಿ ಇದೇ ರೀತಿ ಇದೆ.  ರಾಜ್ಯದಲ್ಲಿ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಈ ಕೊರತೆ ತುಂಬುವ ಉದ್ದೇಶದಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ.

ರಾಯಚೂರು ಜಿಲ್ಲೆಯೊಂದರಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ 2,321 ಶಿಕ್ಷಕರ ಕೊರತೆ ಇದ್ದು, ಅದಕ್ಕೆ 1,591 ಅತಿಥಿ‌ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಇನ್ನೂ ಪ್ರೌಢಶಾಲೆಯಲ್ಲಿ 452 ಶಿಕ್ಷಕರ ಕೊರತೆ ಇದ್ದು ಅದಕ್ಕೆ 199 ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಈಗ ಶಾಲೆಗಳು ಆರಂಭವಾಗದೆ ಅತಿಥಿ ಶಿಕ್ಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರಕಾರ ಇವರತ್ತ ನೋಡಬೇಕಾಗಿದೆ.
Published by:Sushma Chakre
First published: